ಸ್ಕಿನ್‌ ಕೇರ್‌ ರೊಟೀನ್‌

ತುಪ್ಪ : ಹಸುವಿನ ಹಾಲು ಕಾಯಿಸಿದ ತುಪ್ಪ ಎಲ್ಲಾ ಬಗೆಯ ಚರ್ಮಕ್ಕೂ ಚಮತ್ಕಾರಿ ಪರಿಣಾಮ ತೋರಿಸಬಲ್ಲದು. ನೀವು ಬೆಳಗ್ಗೆ ಟಿಫನ್‌ ತಯಾರಿಸುವಾಗ, ಈ ತಪ್ಪದ 2-3 ಹನಿ ಬೆರಳಲ್ಲಿ ಮಸೆದು, ನಿಮ್ಮ ಕಂಗಳ ಡಾರ್ಕ್‌ ಸರ್ಕ್ಸಲ್ಸ್ ಸುತ್ತಲೂ ಹಚ್ಚಿಕೊಳ್ಳಿ. ಇದರಿಂದ ಕಂಗಳ ಸುತ್ತಾ ಕಪ್ಪು ವೃತ್ತ ತಗ್ಗುತ್ತದೆ.

ನಿಂಬೆ ಸಿಪ್ಪೆ : ಬೆಳಗ್ಗೆ ಎದ್ದ ತಕ್ಷಣ ಬರಿ ಹೊಟ್ಟೆಯಲ್ಲಿ 1 ದೊಡ್ಡ ಗ್ಲಾಸ್‌ ನೀರಿಗೆ 1 ಹೋಳು ನಿಂಬೆಹಣ್ಣು ಹಿಂಡಿಕೊಂಡು ಸೇವಿಸಿ. ಆ ಸಿಪ್ಪೆಯನ್ನು ಎಸೆಯುವ ಬದಲು, ಅದರ ಒಳಭಾಗದಿಂದ ಮೊಣಕೈ ಭಾಗ, ಉಗುರಿನ ಸುತ್ತಲೂ ಮಸಾಜ್‌ ಮಾಡಿ. ಇದು ನೈಸರ್ಗಿಕ ಬ್ಲೀಚಿಂಗ್‌ ಏಜೆಂಟ್‌ ಆಗಿದ್ದು, ಮೊಣಕೈ ಹಾಗೂ ಚರ್ಮದ ಇತರ ಭಾಗ ಕಪ್ಪಾಗುವುದನ್ನು ತಪ್ಪಿಸುತ್ತದೆ.

ವರ್ಜಿನ್‌ ಕೋಕೋನಟ್‌ ಆಯಿಲ್ ‌: ನಿಮ್ಮ ಅಡುಗೆಮನೆಯಲ್ಲಿ ಬಳಸುವ ಅಡುಗೆಯ ವರ್ಜಿನ್‌ ಕೋಕೋನಟ್‌ ಆಯಿಲ್‌ನ್ನು ಪ್ರತಿ ದಿನ 2 ಚಮಚ ಸೇವಿಸಿ. ಇದು ಆ್ಯಂಟಿ ಆಕ್ಸಿಡೆಂಟ್ಸ್ ಹೊಂದಿದ್ದು ಇದರಿಂದ ಸುಕ್ಕು, ನೆರಿಗೆ, ಬ್ರೇಕ್‌ ಔಟ್ಸ್ ಪಿಗ್ಮೆಂಟೇಶನ್‌ಇತ್ಯಾದಿಗಳನ್ನು ನಿಯಂತ್ರಿಸಿ ಚರ್ಮಕ್ಕೆ ಗ್ಲೋ ನೀಡಿ ಅತಿ ಮೃದುಗೊಳಿಸುತ್ತದೆ.

ಕಡಲೆಹಿಟ್ಟಿನ ಪ್ಯಾಕ್‌ : ಜರಡಿಯಾಡಿದ ಕಡಲೆಹಿಟ್ಟಿಗೆ ತುಸು ಅರಿಶಿನ, ಚಂದನದ ಪುಡಿ, ಹಸಿ ಹಾಲು ಬೆರೆಸಿಕೊಂಡು, ಆ ಪೇಸ್ಟ್ ನ್ನು ಮುಖ ಮತ್ತು ದೇಹದ ಇತರ ಭಾಗಗಳಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ. ಬೇಸಿಗೆಯಲ್ಲಿ ಇದಕ್ಕೆ ಅಗತ್ಯ 1 ನಿಂಬೆಹಣ್ಣು ಹಿಂಡಿಕೊಳ್ಳಿ ಹಾಗೂ ಚಳಿ/ಮಳೆಗಾಲದಲ್ಲಿ 1 ದೊಡ್ಡ ಚಮಚ ಹಾಲಿನ ಗಟ್ಟಿ ಕೆನೆ ಬೆರೆಸಿರಿ. ಇದರಿಂದ ಡೆಡ್ ಸ್ಕಿನ್‌ ತೊಲಗಿ ನೀವು ತಾಜಾ ಆಗುವಿರಿ.

ಹೇರ್‌ ಕೇರ್‌ ರೊಟೀನ್‌ ಮೊಟ್ಟೆ : ಆಮ್ಲೆಟ್‌ಗೆ ನೀವು ಬಳಸುವ 1 ಮೊಟ್ಟೆ ತೆಗೆದುಕೊಂಡು (ವಾರಕ್ಕೊಮ್ಮೆ) ಒಡೆದು ಬಟ್ಟಲಿಗೆ ಹಾಕಿ ಚೆನ್ನಾಗಿ ಗೊಟಾಯಿಸಿ. ಇದನ್ನು ಕೂದಲಿಗೆ ಚೆನ್ನಾಗಿ ತೀಡಿ, ಅರ್ಧ ಗಂಟೆ ಕಾಲ ಹಾಗೇ ಬಿಡಿ. ಇದನ್ನು ಹಚ್ಚಿಕೊಂಡು ನಿಮ್ಮ ಅಡುಗೆ ಅಥವಾ ಇತರ ಮನೆಗೆಲಸ ಮುಂದುವರಿಸಿ. ನಂತರ ಬಿಸಿ ನೀರಲ್ಲಿ ಚೆನ್ನಾಗಿ ಮುಖಕ್ಕೆ  ತೊಳೆಯಿರಿ, ನಿಮಗೆ ದಟ್ಟ, ನೀಳ, ಸಾಫ್ಟ್ ಕೂದಲು ಸಿಗುತ್ತದೆ.

ವರ್ಜಿನ್‌ ಕೋಕೋನಟ್‌ ಆಯಿಲ್ ‌: ಇದು ಅತಿ ನೈಸರ್ಗಿಕ ಹಾಗೂ ಪ್ರಭಾವಶಾಲಿ ಹೇರ್‌ ಸೀರಮ್ ಎನಿಸಿದೆ. ಇದರಿಂದ ಪ್ರತಿದಿನ ನಿಮ್ಮ ಕೂದಲನ್ನು ಮಸಾಜ್‌ ಮಾಡಿ, ರಾತ್ರಿ ಮಲಗುವ ಮುನ್ನ ನೆತ್ತಿಗೆ ಚೆನ್ನಾಗಿ ಒತ್ತಿಕೊಳ್ಳಿ. ಬೆಳಗೆದ್ದು ಕೂದಲು ತೊಳೆಯಿರಿ. ಇದರಿಂದ ನಿಮ್ಮ ಕೂದಲು ಬಹಳ ಮೃದುವಾಗುತ್ತದೆ.

ಮೇಕಪ್‌ ಕೇರ್‌ ರೊಟೀನ್‌

ಮಲ್ಟಿ ಟಾಸ್ಕಿಂಗ್‌ ಪ್ರಾಡಕ್ಟ್ಸ್ ಕೊಂಡುಕೊಳ್ಳಿ : ನೀವು ಸದಾ ಮಲ್ಟಿ ಟಾಸ್ಕಿಂಗ್‌ ಪ್ರಾಡಕ್ಟ್ಸ್ ಬಳಸುವುದರಿಂದ ನಿಮ್ಮ ಹೆಚ್ಚಿನ ಸಮಯದ ಉಳಿತಾಯವಾಗುತ್ತದೆ. ಆದ್ದರಿಂದ ನೀವು ಇಂಥ ಉತ್ತಮ ಗುಣಮಟ್ಟದ ಉತ್ಪನ್ನ ಮಾತ್ರ ಖರೀದಿಸಬೇಕು. ಇದು ನಿಮ್ಮ ನಿತ್ಯ ಬಳಕೆ ಹಾಗೂ ಮಲ್ಟಿ ಪರ್ಪಸ್‌ ಯೂಸ್‌ಗೆ ಅನುಕೂಲಕರ ಆಗಿರಬೇಕು. ಮಲ್ಟಿ ಟಾಸ್ಕಿಂಗ್‌ ಬ್ಯೂಟಿ ಪ್ರಾಡಕ್ಟ್ಸ್ ಕ್ರೀಂ ಬಳಸಿರಿ. ಇದು ಸನ್‌ ಸ್ಕ್ರೀನ್‌, ಮಾಯಿಶ್ಚರೈಸರ್‌, ಫೌಂಡೇಶನ್‌ ರೂಪದಲ್ಲಿ ಯೂಸ್‌ ಆಗುತ್ತದೆ. ನೀವು ಮುಖ ತೊಳೆದು ಒರೆಸಿದ ನಂತರ ಕ್ರೀಂ ಹಚ್ಚಿಕೊಂಡು ಬ್ಲಶ್‌, ಐ ಲೈನರ್‌, ಲಿಪ್‌ ಗ್ಲಾಸ್‌, ಪೌಡರ್‌ಗಳನ್ನು ಬಳಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ