ಯೌವನದ ಹುಚ್ಚು ಹೊಳೆಯಲ್ಲಿ ಬಡ ಹುಡುಗಿ ಮಲ್ಲಿಕಾ, ಶ್ರೀಮಂತ ದೀಪಕ್ಗೆ ಮರುಳಾಗಿ ಎಡವಿದಳು. ಇದರಿಂದ ಅವಳು ಭಯಪಟ್ಟಂತೆಯೇ ಅವಿವಾಹಿತ ತಾಯಿ ಎನಿಸಬೇಕಾಯಿತು. ಮುಂದೆ ಇವಳ ಬಾಳಿನ ಭವಿಷ್ಯವೇನು.......?

ಕನ್ನಿಕಾಗೆ ತೀವ್ರ ಜ್ವರ ಬಂದು ರೂಮಿನಲ್ಲಿ ಮುಸುಕೆಳೆದು ಮಲಗಿಬಿಟ್ಟಿದ್ದಳು. ಮಧ್ಯಾಹ್ನ ಡೈನಿಂಗ್‌ ಹಾಲ್ ನಲ್ಲೂ ಅವಳು ಕಾಣಿಸದ ಕಾರಣ ಮಲ್ಲಿಕಾ ಬಾಕಿ ಹುಡುಗಿಯರನ್ನು ವಿಚಾರಿಸಿದಳು. ಅವರು, ಅವಳಿಗೆ ಜ್ವರ ಬಂದು ರೂಮಿನಲ್ಲಿ ಮಲಗಿದ್ದಾಳೆ ಎಂದು ಹೇಳಿದಾಗ ಗಾಬರಿಯಿಂದ ಅವಳ ರೂಮಿನತ್ತ ಓಡು ನಡುಗೆಯಲ್ಲಿ ಬಂದಳು.

ಕನ್ನಿಕಾ ಮೈತುಂಬಾ ಹೊದಿಕೆ ಹೊದ್ದು ಎಚ್ಚರವಿಲ್ಲದೆ ಮಲಗಿಬಿಟ್ಟಿದ್ದಳು. ಅವಳು ಹೊದ್ದ ಮುಸುಕನ್ನು ಮಲ್ಲಿಕಾ ಮೆಲ್ಲನೆ ಸರಿಸಿ ಮೃದುವಾಗಿ ಅವಳ ಹಣೆಯನ್ನು ಮುಟ್ಟಿದಳು. ಒಮ್ಮೆಲೇ ಶಾಕ್‌ ಹೊಡೆದವಳಂತೆ ಕೈಯನ್ನು ಹಿಂದಕ್ಕೆ ಎಳೆದುಕೊಂಡಳು. ಕನ್ನಿಕಾಳ ಮೈ ಕೆಂಡದಂತೆ ಸುಡುತ್ತಿತ್ತು. ತಡಮಾಡದೆ ತಕ್ಷಣ ಆಶ್ರಮದ ಡಾಕ್ಟರ್‌ ಚಿದಾನಂದರಿಗೆ ಫೋನಾಯಿಸಿ ಕನ್ನಿಕಾಳಿಗೆ ಜ್ವರ ಬಂದ ವಿಷಯ ತಿಳಿಸಿ ಅರ್ಜೆಂಟ್‌ ಬನ್ನಿ ಎಂದು ಕರೆದಳು. ಡಾ. ಚಿದಾನಂದ್‌, ``ಹೆದರಬೇಡಿ, ನಾನು ಬರುವವರೆಗೆ ಅವಳ ಹಣೆಗೆ ತಣ್ಣೀರು ಪಟ್ಟಿ ಹಾಕುತ್ತಿರಿ. ನಾನು ತಕ್ಷಣ ಬರ್ತೀನಿ,'' ಎಂದು ಹೇಳಿದರು.

ಡಾಕ್ಟರ್‌ ಬಂದು ಕನ್ನಿಕಾಳನ್ನು ಪರೀಕ್ಷಿಸಿ, ``ಮಲ್ಲಿಕಾ ಮೇಡಂ, ಹೆದರುವ ಅವಶ್ಯಕತೆ ಇಲ್ಲ. ವೈರಲ್ ಫೀವರ್‌ ಅಷ್ಟೇ. ನಾನು ಮಾತ್ರೆಗಳನ್ನು ಕೊಡ್ತೀನಿ ಅದನ್ನು ಕೊಡಿ. ಒಂದೆರಡು ದಿನ ರೆಸ್ಟ್ ತಗೊಳ್ಳಲಿ. ಹಾಗೆ ಅವಳಿಗೆ ಖಾರ, ಎಣ್ಣೆ ಇಲ್ಲದ ಪಥ್ಯದ ಊಟ ಕೊಡಿ. ಎರಡು ದಿನದಲ್ಲಿ ಆರಾಮವಾಗ್ತಾಳೆ,'' ಎಂದು ಹೇಳಿ ತಮ್ಮ ಕಿಟ್‌ ಎತ್ತಿಕೊಂಡು ಹೊರಟುಹೋದರು.

ಮಲ್ಲಿಕಾ ಘಳಿಗೆಗೊಮ್ಮೆ ತಣ್ಣೀರು ಪಟ್ಟಿ ಬದಲಿಸುತ್ತಾ ಅವಳ ಬಳಿಯೇ ಕುಳಿತು ಅವಳನ್ನು ಉಪಚರಿಸತೊಡಗಿದಳು. ಬೆಳಗ್ಗೆ ಎದ್ದಾಗಿನಿಂದ ಸ್ವಲ್ಪ ಸುಸ್ತು ಎನಿಸಿದ ಕನ್ನಿಕಾಳಿಗೆ ಹೊತ್ತು ಏರಿದಂತೆ ಮೈಬಿಸಿಯೂ ಏರುತ್ತಾ ಕೊನೆಗೆ ಕೆಂಡದಂತೆ ಮೈ ಬಿಸಿಯಾಗಿತ್ತು. ಜ್ವರದ ತಾಪ ತಾಳಲಾಗದೆ ರೂಮಿಗೆ ಬಂದು ಮುಸುಕೆಳೆದು ಮಲಗಿಬಿಟ್ಟಿದ್ದಳು.

ಕನ್ನಿಕಾಳ ಎದುರು ಕುಳಿತ ಮಲ್ಲಿಕಾ, ಕ್ಷಣ ಹೊತ್ತು ಅವಳ ಮುಖವನ್ನೇ ದಿಟ್ಟಿಸಿದಳು. ಅವಳ ಮುಖದೊಳಗೆ ಮತ್ತೇನೋ ಕಂಡಂತಾಗಿ ಗಲಿಬಿಲಿಗೊಂಡಳು. ಹೃದಯ ಕಂಪಿಸಿತು. ಏನನ್ನೋ ನೆನೆದು ಕಣ್ತುಂಬಿ ಬಂದಿತು. ಆದರೆ ಹೀಗೆ ತಾನು ಕಣ್ಣೀರು ಹಾಕುವುದನ್ನು ಮತ್ತೆ ಯಾರಾದರೂ ನೋಡಿದರೆ, ಎಂಬ ಭೀತಿ ಮೂಡಿ, ಗಡಬಡಿಸಿ ಬಂದ ಕಣ್ಣೀರ ಕೋಡಿಗೆ ರೆಪ್ಪೆಯ ತಡೆಯೊಡ್ಡಿ ಹಿಡಿದಿಟ್ಟು ನಿಲ್ಲಿಸಿದಳು. ಮುಖದಲ್ಲಿ ಸಹಜತೆಯ ಸೋಗು ಧರಿಸಿದಳು.

ಅವಳಿಗೆ ಒಮ್ಮೆ ಕನ್ನಿಕಾಳನ್ನು ಅಪ್ಪಿ ಮುದ್ದಾಡಬೇಕು ಎಂಬ ಆಸೆಯಾಯ್ತು. ಆದರೂ ಆಕೆ ಹಾಗೆ ಮಾಡುವಂತಿರಲಿಲ್ಲ. ತನ್ನ ಮನಸ್ಸಿನ ಆಸೆಯನ್ನು ಬಲವಂತದಿಂದ ಅದುಮಿಟ್ಟುಕೊಂಡು ಆ ಕ್ಷಣಕ್ಕೆ ಅಲ್ಲಿನ ತನ್ನ ಸ್ಥಾನಮಾನವನ್ನು ಗಮನದಲ್ಲಿ ತಂದುಕೊಂಡು ಗಂಭೀರವಾಗಿ ಕುಳಿತಳು.

ಇಂಜೆಕ್ಷನ್‌ ತನ್ನ ಪ್ರಭಾವ ಬೀರಿದ್ದರಿಂದ ಕನ್ನಿಕಾಳ ಮೈ ಬೆವರಿ ಜ್ವರದ ತಾಪ ತುಸು ಇಳಿಮುಖವಾಗಿತ್ತು. ಒಮ್ಮೆ ಕಣ್ಣು ಬಿಟ್ಟು ಮಲ್ಲಿಕಾಳೆಡೆಗೆ ನೋಡಿದ ಕನ್ನಿಕಾ ಮತ್ತೆ ಸುಸ್ತಿನಿಂದ ಕಣ್ಮುಚ್ಚಿ ಮಲಗಿದಳು. ಅವಳ ಜ್ವರ ಸ್ವಲ್ಪ ಇಳಿದಿದ್ದು ಮಲ್ಲಿಕಾಳ ಮನಸ್ಸಿಗೆ ಸಮಾಧಾನ ತಂದಿತ್ತು. ಒಂದೇ ದಿನದಲ್ಲಿ ಅವಳ ಮುಖ ಬಾಡಿದ ಮಲ್ಲಿಗೆ ಹೂವಿನಂತಾಗಿತ್ತು. ತುಟಿಗಳು ಒಣಗಿ ಅರೆಬಿರಿದಿದ್ದವು. ಕನ್ನಿಕಾಳ ಮುಖದ ಮೇಲೆ ಮೆಲ್ಲನೆ ಕೈಯಿಂದ ನೇವರಿಸಿದಳು. ಅವಳ ಸ್ಪರ್ಶ ಹಿತವೆನಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ