ಯಾವುದೇ ಹಬ್ಬ ಅಥವಾ ಫಂಕ್ಷನ್ ಬರಲಿ, ಹೆಂಗಸರು ಎಲ್ಲರಿಗಿಂತ ತಮ್ಮನ್ನು ಭಿನ್ನವಾಗಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮನ್ನು ತಾವು ಸಿಂಗರಿಸಿಕೊಳ್ಳುವಲ್ಲಿ ಅವರು ಸಿದ್ಧಹಸ್ತರು ಎಂದು ಇದರಿಂದ ತಿಳಿಯುತ್ತದೆ. ಮದುವೆ ಮುಂತಾದ ದೊಡ್ಡ ಫಂಕ್ಷನ್‌ಗೆ ಹೋಗುವಾಗ, ಅವರ ಬಳಿ ಧಾರಾಳ ಸಮಯ ಇರುವುದರಿಂದ ಸರಿಯಾದ್ದನ್ನೇ ಆರಿಸಿ ನೀಟಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಾರೆ.
ಆದರೆ ಆಫೀಸಿಗೆ ಹೊರಡುವ ಧಾವಂತದಲ್ಲಿರುವ ಉದ್ಯೋಗಸ್ಥ ವನಿತೆಯರಿಗೆ ಇಷ್ಟು ಸಮಯಾವಕಾಶ, ಸಹನೆ ಎಲ್ಲಿಂದ ಬರಬೇಕು? ಮನೆ ಆಫೀಸ್ ಎರಡೂ ಸಂಭಾಳಿಸುವುದರಲ್ಲಿ ಅವರು ಎಷ್ಟು ಬಿಝಿ ಆಗುತ್ತಾರೆಂದರೆ, ತಮ್ಮ ಡ್ರೆಸ್ಸಿಂಗ್ ಕಡಿಮೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ. ಮತ್ತೊಂದು ಕಡೆ, ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ಸಿಂಗರಿಸಿಕೊಂಡು ಆಫೀಸಿಗೆ ಹೊರಡುವ ಮಹಿಳೆಯರೂ ಇದ್ದಾರೆ. ಹೆಂಗಸಿಗೆ ಫ್ಯಾಷನ್ನಿನ ಪರಿಜ್ಞಾನವಂತೂ ಇರುತ್ತದೆ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಕ್ಯಾರಿ ಮಾಡಬೇಕೆಂದು, ಅಧಿಕ ಮಹಿಳೆಯರು ತಿಳಿಯದೆ ಕನ್ ಫ್ಯೂಸ್ ಆಗುತ್ತಾರೆ. ಹೀಗಾಗಿ ಅನೇಕ ಮಹಿಳೆಯರು ಬಿಲ್‌ಕುಲ್ ಬಹಳ ಸಿಂಪಲ್ ಆಗಿ ಆಫೀಸಿಗೆ ಹೋಗಲು ಬಯಸುತ್ತಾರೆ, ಆದರೆ ಇನ್ನುಳಿದರು ಗಾಡಿ ಗಾಡಿಯಾದ ಸೀರೆ, ಡ್ರೆಸ್ ಧರಿಸಿ, ರಾಶಿ ಒಡವೆ, ಮೇಕಪ್ ಹೇರಿಕೊಂಡು ಹೋಗುತ್ತಾರೆ.
ಉದ್ಯೋಗಸ್ಥ ವನಿತೆಯರಿಗೆ ಅವರ ಡ್ರೆಸ್ಸಿಂಗ್ ಸೆನ್ಸ್ ಬಹಳ ಮುಖ್ಯ. ಇಂಥ ಹೆಣ್ಣಿಗೆ ಅವಳ ಡ್ರೆಸ್ಸಿಂಗ್ ನಿಂದ, ಅತ್ತ ಕೆಲಸದಲ್ಲಿ ತೊಂದರೆ ಆಗಬಾರದು, ಇತ್ತ ಆಫೀಸಿನವರ ದೃಷ್ಟಿಯಲ್ಲಿ ಗೂಶ್ಲು ಎನಿಸುವಂತೆಯೂ ಇರಬಾರದು, ಡೀಸೆಂಟ್ ಲುಕ್ಸ್ ಹೊಂದಿರಬೇಕು. ಇದಕ್ಕಾಗಿ ಕೆಲವು ಸಲಹೆಗಳು :
ಕೆಲಸಕ್ಕೆ ತಕ್ಕಂತೆ ಡ್ರೆಸ್ಸಿಂಗ್ : ನೀವು ನಿಮ್ಮ ಕೆರಿಯರ್ ಕುರಿತಾಗಿ ಗಂಭೀರ ಆಗಿದ್ದರೆ, ನೀವು ಫ್ಯಾಷನೆಬಲ್ ಬದಲು ಪ್ರೊಫೆಶನ್ ಆಗಿ ಕಾಣಿಸಲು ಯತ್ನಿಸಿ. ಇಂದು ಜನ ಕೇವಲ ನಿಮ್ಮ ಕೆಲಸ ಒಂದೇ ಅಲ್ಲ…. ನಿಮ್ಮ ಡ್ರೆಸ್, ಅದನ್ನು ಉಟ್ಟು/ತೊಟ್ಟಿರುವ ವಿಧಾನ, ಕುಳಿತೇಳುವ ನಡಿಗೆಯಶೈಲಿ, ಮಾತನಾಡುವ ವೈಖರಿ….. ಎಲ್ಲಾ ಗಮನಿಸುತ್ತಾರೆ. ಹೀಗಾಗಿ ಉದ್ಯೋಗಸ್ಥ ವನಿತೆಯರು ಆಫೀಸಿನಲ್ಲಿ ತಮ್ಮನ್ನು ತಾವು ಪ್ರೊಫೆಶನಲ್ ಆಗಿ ತೋರ್ಪಡಿಸಿಕೊಳ್ಳುವುದು ಮುಖ್ಯ.
ಆಫೀಸಿಗೆ ಹೊರಡುವಾಗ ಅಗತ್ಯವಾಗಿ ನಿಮ್ಮ ಉಡುಗೆಯತ್ತ ಒಮ್ಮೆ ಗಮನಹರಿಸಿ. ಅತಿ ಡಾರ್ಕ್ ಗಾಡಿ ಕಲರ್ಸ್, ಹೆಚ್ಚು ಒಡವೆ/ಮೇಕಪ್, ಅತಿ ಹೊಳೆಯುವ ಡ್ರೆಸ್ ನಿಮ್ಮ ಆಫೀಸಿಗೆ ಸೂಟ್ ಆಗಲ್ಲ. ನಿಮ್ಮ ಡ್ರೆಸ್ ಡೀಸೆಂಟ್‌ಕಂಫರ್ಟೆಬಲ್ ಆಗಿರಬೇಕು, ಅದು ನಿಮ್ಮ ಕೆಲಸದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಸವರಿ ಇಲ್ಲದಿದ್ದರೆ, ಸಹೋದ್ಯೋಗಗಳು ನಿಮ್ಮ ಉಡುಗೆ ಬಗ್ಗೆ ಕಮೆಂಟ್ ಮಾಡಿದರೆ, ನಿಮಗೆ ಮನಸ್ಸಿಟ್ಟು ಕೆಲಸ ಮಾಡಲು ಆಗದು. ಹಿಂದೆಲ್ಲ ಹೆಂಗಸರು ಕೇವಲ ಸೀರೆ, ಸಲ್ವಾರ್ ಸೂಟ್, ಪಂಜಾಬಿ ಡ್ರೆಸ್ ಧರಿಸಿ ಕೆಲಸ ಮುಗಿಸುತ್ತಿದ್ದರು. ಆದರೆ ಈಗ ಆಧುನಿಕ ತರುಣಿಯರು ಹೆಚ್ಚು ಸ್ಮಾರ್ಟ್ ಆಗಿ ಮಿಂಚಲು ಪ್ಯಾಂಟ್ ಶರ್ಟ್, ಟ್ರೌಸರ್ಸ್, ಕೋಟ್, ವೆಸ್ಟರ್ನ್ ಡ್ರೆಸ್ ಗಳಲ್ಲಿ ಟಿಪ್ ಟಾಪ್‌ಆಗಿರುತ್ತಾರೆ. ಹೀಗಾಗಿ ಇಂದಿನ ಯುವತಿಯರ ವಾರ್ಡ್ ರೋಬಿನಲ್ಲಿ ಇವೇ ಹೆಚ್ಚು ತುಂಬಿರುತ್ತವೆ.
ಮೀಟಿಂಗ್ ಇದ್ದಾಗ : ಆಫೀಸಿನಲ್ಲಿ ಮೀಟಿಂಗ್, ಪ್ರೆಸೆಂಟೇಶನ್ ಗಳಿದ್ದಾಗ ಸೀರೆ ಬದಲು ಟ್ರೌಸರ್ಸ್, ಫಾರ್ಮ್ ಶರ್ಟ್, ಟಾಪ್ ಇತ್ಯಾದಿ ಧರಿಸಿರಿ. ಸೀರೆ ಆದರೆ ಆಗಾಗ ಸಂಭಾಳಿಸಿಕೊಳ್ಳುವುದರಲ್ಲಿ ಆಗಿಹೋಗುತ್ತದೆ. ಈ ಡ್ರೆಸ್ ಗಳಾದರೆ ಕೆಲಸದಲ್ಲಿ ನಿಮ್ಮ ಏಕಾಗ್ರತೆಗೆ ಹೆಚ್ಚು ಪೂರಕವಾಗಿರುತ್ತದೆ.
ಹೆಚ್ಚು ಕಂಫರ್ಟೆಬಲ್ ಡ್ರೆಸಸ್ : ಎಷ್ಟೋ ಸಲ ನೀವು ಆಫೀಸಿಗೆ ಧರಿಸುವ ಡ್ರೆಸ್ ನಮಗೆ ಸ್ವಲ್ಪ ಕಂಫರ್ಟೆಬಲ್ ಅಲ್ಲದಿದ್ದರೂ, ಎಲ್ಲರೂ ಮಾಡ್ ಡ್ರೆಸ್ ನೋಡಲಿ ಎಂದು ಟೈಟಾಗಿ ಮೈಗಂಟಿಸಿಕೊಂಡು, ಇಡೀ ದಿನ ಕಷ್ಟದಲ್ಲೇ ಕಳೆದುಬಿಡುತ್ತೇವೆ. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಟೈಟ್ ಡ್ರೆಸ್ ಖಂಡಿತಾ ಬೇಡ. ಇಂಥ ಬಿಗಿ ಉಡುಗೆಗಳಿದ್ದಾಗ, ಕೆಲಸಕ್ಕಿಂತ ಹೆಚ್ಚು ಅದನ್ನು ಸರಿಪಡಿಸಿಕೊಳ್ಳುವುದರಲ್ಲಿ ನಮ್ಮ ಗಮನ ಇರುತ್ತದೆ. ಅಧಿಕ ಫ್ಯಾಷನೆಬಲ್ ಡ್ರೆಸ್ ಸಹ ಬೇಡ. ಎಲ್ಲೆಲ್ಲಿಯೋ ಕಟ್ ಆಗಿರವಂಥ, ಅತಿ ಶಾರ್ಟ್ ಡ್ರೆಸ್ ಗಳೂ ಬೇಡ.
ಎಷ್ಟೋ ಖಾಸಗಿ ಆಫೀಸುಗಳಲ್ಲಿ ಇಂದಿಗೂ ಹೆಣ್ಣುಮಕ್ಕಳನ್ನು ಜೀನ್ಸ್ ಟೀಶರ್ಟ್ ಧರಿಸಿ ಬರಬಾರದೆಂದು ಹೇಳಲಾಗುತ್ತದೆ. ಅಂಥ ಕಡೆ ಉತ್ತಮ ಕುರ್ತಿ ಕಲೆಕ್ಷನ್ ಹೊಂದಿದ್ದರೆ, ಮಿಕ್ಸ್ ಮ್ಯಾಚ್ ಮಾಡಿ ಅವನ್ನು ಧರಿಸಬಹುದು.
ಆಫೀಸಿಗೆ ಸಾದಾ ಕುರ್ತಿ ಯಾ ಸೂಟ್ ಬಲು ಸಿಂಪಲ್ ಆಗಿರಲಿ. ಇದು ಹೆಚ್ಚು ಹೊಳೆ ಹೊಳೆಯುವಂಥದ್ದಾಗಿರಬಾರದು. ನೀವು ಕಪ್ಪು, ಬಿಳುಪಿನ ಕುರ್ತಿ ಜೊತೆ ಬಣ್ಣಬಣ್ಣದ ದುಪಟ್ಟಾ ಬಳಸಿಕೊಳ್ಳಿ. ನೀವು ಕುರ್ತಿಯನ್ನು ಬೊಟಿಕ್‌ನಲ್ಲಿ ಹೊಲಿಸುವಿರಾದರೆ, ಅತಿ ಡೀಪ್ ನೆಕ್ ಯಾ ಡೀಪ್ ಬ್ಯಾಕ್ ಬೇಡ. ಕುರ್ತಿಯ ಡಿಸೈನ್ ಎಷ್ಟು ಸಿಂಪಲ್ ಆಗಿರುತ್ತದೋ, ಆಫೀಸ್ ಲುಕ್ಸ್ ಗೆ ಅದು ಅಷ್ಟೇ ಚೆನ್ನಾಗಿರುತ್ತದೆ.
ಕಂಫರ್ಟ್ ಇದೀಗ ಟ್ರೆಂಡ್ ಆಗಿದೆ : ಉದ್ಯೋಗಸ್ಥ ವನಿತೆಯರಿಗೆ ಕಂಫರ್ಟ್ ಇದೀಗ ಟ್ರೆಂಡ್ ಎನಿಸಿದೆ. ವರ್ಕಿಂಗ್ ವಿಮೆನ್‌ಫ್ಯಾಷನ್ನಿಗಿಂತ ಹೆಚ್ಚಾಗಿ ಕಂಫರ್ಟ್ ಕಡೆ ಗಮನ ಕೊಡಬೇಕು. ನೀವು ನಿಮ್ಮ ಹೊಸ ಡ್ರೆಸ್ಸಿನಲ್ಲಿ ಕಂಫರ್ಟ್ ಆಗಿದ್ದರೆ ನಿಮಗೇ ಬಹಳ ಹಿತಕರ, ಕೂಲ್ ಎನಿಸುತ್ತದೆ.
ಆಗ ನೀವು ಹೆಚ್ಚು ಏಕಾಗ್ರತೆಯಿಂದ ಕೆಲಸ ಮಾಡಬಹುದು. ಆಫೀಸಿಗೆ ಸದಾ ಫಾರ್ಮಲ್ ಲುಕ್ಸ್ ಇರಲಿ. ಬಯಸಿದರೆ ನೀವು ಡಾರ್ಕ್ ಬ್ಲೂ ಜೀನ್ಸಿಗೆ ಅಚ್ಚ ಲೈಟ್ ಶರ್ಟ್ ಧರಿಸಬಹುದು. ಬ್ರೌನ್ ಟ್ರೌಸರ್ಸ್ ಜೊತೆ ಸಹ ಲೈಟ್ ಹೊಂದುತ್ತದೆ.
ಫಿಟೆಡ್ ಪ್ಯಾಂಟ್ ಜೊತೆ ಟೀಶರ್ಟ್ ಧರಿಸಿರಿ. ಸ್ಟ್ರೇಟ್ ಸ್ಕರ್ಟ್ ಜೊತೆ ಸೆಮಿ ಫಾರ್ಮಲ್ ಟಾಪ್ ಇರಲಿ.
ಕಂಫರ್ಟ್ ಜೊತೆ ಸ್ಟೈಲೂ ಮುಖ್ಯ : ಉದ್ಯೋಗಸ್ಥ ವನಿತೆಯರು ಕಂಫರ್ಟ್ ಜೊತೆ ಜೊತೆಗೆ ಸ್ಟೈಲಿಗೂ ಕೂಡ ಅಷ್ಟೇ ಮಹತ್ವ ಕೊಡಬೇಕು. ಹೆಚ್ಚು ಎಕ್ಸ್ ಪೋಶರ್ ಇಲ್ಲದ ಅಥವಾ ಅತಿ ಟ್ರೆಡಿಶನಲ್ ಅಲ್ಲದ ಡ್ರೆಸ್‌ಗಳನ್ನೇ ಸದಾ ಧರಿಸಬೇಕು. ಪ್ರತಿದಿನದ ನಿಮ್ಮ ಡ್ರೆಸ್ ಗರಿಗರಿಯಾಗಿ ಐರನ್ ಆಗಿರಬೇಕು. ಎಲ್ಲೂ ಸುಕ್ಕುಗಿಕ್ಕು ಇರಬಾರದು. ಬಲವಂತವಾಗಿ ಏನೋ ಹೇರಿಕೊಂಡು ಬಂದಿದ್ದೀರಿ ಎನಿಸಬಾರದು. ಇಂಥ ಪರ್ಫೆಕ್ಟ್ ಡ್ರೆಸ್ ನಿಮ್ಮ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತದೆ. ಜ್ಯೂವೆಲರಿ ಇಷ್ಟ ಅಂದ್ರೆ, ಕಿವಿಗೆ ಲೋಲಾಕು, ರಿಂಗ್, ಕುತ್ತಿಗೆಯಲ್ಲಿ ಒಂದೆಳೆ ಸಿಂಪಲ್ ಚೇನ್, ಬಂಗಾರದ ಬಳೆ ಸಾಕು.
– ಎಂ. ಮೋನಿಕಾ