ಯಾವುದೇ ಹಬ್ಬ ಅಥವಾ ಫಂಕ್ಷನ್ ಬರಲಿ, ಹೆಂಗಸರು ಎಲ್ಲರಿಗಿಂತ ತಮ್ಮನ್ನು ಭಿನ್ನವಾಗಿ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮನ್ನು ತಾವು ಸಿಂಗರಿಸಿಕೊಳ್ಳುವಲ್ಲಿ ಅವರು ಸಿದ್ಧಹಸ್ತರು ಎಂದು ಇದರಿಂದ ತಿಳಿಯುತ್ತದೆ. ಮದುವೆ ಮುಂತಾದ ದೊಡ್ಡ ಫಂಕ್ಷನ್‌ಗೆ ಹೋಗುವಾಗ, ಅವರ ಬಳಿ ಧಾರಾಳ ಸಮಯ ಇರುವುದರಿಂದ ಸರಿಯಾದ್ದನ್ನೇ ಆರಿಸಿ ನೀಟಾಗಿ ಡ್ರೆಸ್ ಮಾಡಿಕೊಂಡು ಹೋಗುತ್ತಾರೆ.
ಆದರೆ ಆಫೀಸಿಗೆ ಹೊರಡುವ ಧಾವಂತದಲ್ಲಿರುವ ಉದ್ಯೋಗಸ್ಥ ವನಿತೆಯರಿಗೆ ಇಷ್ಟು ಸಮಯಾವಕಾಶ, ಸಹನೆ ಎಲ್ಲಿಂದ ಬರಬೇಕು? ಮನೆ ಆಫೀಸ್ ಎರಡೂ ಸಂಭಾಳಿಸುವುದರಲ್ಲಿ ಅವರು ಎಷ್ಟು ಬಿಝಿ ಆಗುತ್ತಾರೆಂದರೆ, ತಮ್ಮ ಡ್ರೆಸ್ಸಿಂಗ್ ಕಡಿಮೆ ಹೆಚ್ಚಿನ ಗಮನ ಕೊಡಲು ಆಗುವುದಿಲ್ಲ. ಮತ್ತೊಂದು ಕಡೆ, ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ಸಿಂಗರಿಸಿಕೊಂಡು ಆಫೀಸಿಗೆ ಹೊರಡುವ ಮಹಿಳೆಯರೂ ಇದ್ದಾರೆ. ಹೆಂಗಸಿಗೆ ಫ್ಯಾಷನ್ನಿನ ಪರಿಜ್ಞಾನವಂತೂ ಇರುತ್ತದೆ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಕ್ಯಾರಿ ಮಾಡಬೇಕೆಂದು, ಅಧಿಕ ಮಹಿಳೆಯರು ತಿಳಿಯದೆ ಕನ್ ಫ್ಯೂಸ್ ಆಗುತ್ತಾರೆ. ಹೀಗಾಗಿ ಅನೇಕ ಮಹಿಳೆಯರು ಬಿಲ್‌ಕುಲ್ ಬಹಳ ಸಿಂಪಲ್ ಆಗಿ ಆಫೀಸಿಗೆ ಹೋಗಲು ಬಯಸುತ್ತಾರೆ, ಆದರೆ ಇನ್ನುಳಿದರು ಗಾಡಿ ಗಾಡಿಯಾದ ಸೀರೆ, ಡ್ರೆಸ್ ಧರಿಸಿ, ರಾಶಿ ಒಡವೆ, ಮೇಕಪ್ ಹೇರಿಕೊಂಡು ಹೋಗುತ್ತಾರೆ.
ಉದ್ಯೋಗಸ್ಥ ವನಿತೆಯರಿಗೆ ಅವರ ಡ್ರೆಸ್ಸಿಂಗ್ ಸೆನ್ಸ್ ಬಹಳ ಮುಖ್ಯ. ಇಂಥ ಹೆಣ್ಣಿಗೆ ಅವಳ ಡ್ರೆಸ್ಸಿಂಗ್ ನಿಂದ, ಅತ್ತ ಕೆಲಸದಲ್ಲಿ ತೊಂದರೆ ಆಗಬಾರದು, ಇತ್ತ ಆಫೀಸಿನವರ ದೃಷ್ಟಿಯಲ್ಲಿ ಗೂಶ್ಲು ಎನಿಸುವಂತೆಯೂ ಇರಬಾರದು, ಡೀಸೆಂಟ್ ಲುಕ್ಸ್ ಹೊಂದಿರಬೇಕು. ಇದಕ್ಕಾಗಿ ಕೆಲವು ಸಲಹೆಗಳು :
ಕೆಲಸಕ್ಕೆ ತಕ್ಕಂತೆ ಡ್ರೆಸ್ಸಿಂಗ್ : ನೀವು ನಿಮ್ಮ ಕೆರಿಯರ್ ಕುರಿತಾಗಿ ಗಂಭೀರ ಆಗಿದ್ದರೆ, ನೀವು ಫ್ಯಾಷನೆಬಲ್ ಬದಲು ಪ್ರೊಫೆಶನ್ ಆಗಿ ಕಾಣಿಸಲು ಯತ್ನಿಸಿ. ಇಂದು ಜನ ಕೇವಲ ನಿಮ್ಮ ಕೆಲಸ ಒಂದೇ ಅಲ್ಲ.... ನಿಮ್ಮ ಡ್ರೆಸ್, ಅದನ್ನು ಉಟ್ಟು/ತೊಟ್ಟಿರುವ ವಿಧಾನ, ಕುಳಿತೇಳುವ ನಡಿಗೆಯಶೈಲಿ, ಮಾತನಾಡುವ ವೈಖರಿ..... ಎಲ್ಲಾ ಗಮನಿಸುತ್ತಾರೆ. ಹೀಗಾಗಿ ಉದ್ಯೋಗಸ್ಥ ವನಿತೆಯರು ಆಫೀಸಿನಲ್ಲಿ ತಮ್ಮನ್ನು ತಾವು ಪ್ರೊಫೆಶನಲ್ ಆಗಿ ತೋರ್ಪಡಿಸಿಕೊಳ್ಳುವುದು ಮುಖ್ಯ.
ಆಫೀಸಿಗೆ ಹೊರಡುವಾಗ ಅಗತ್ಯವಾಗಿ ನಿಮ್ಮ ಉಡುಗೆಯತ್ತ ಒಮ್ಮೆ ಗಮನಹರಿಸಿ. ಅತಿ ಡಾರ್ಕ್ ಗಾಡಿ ಕಲರ್ಸ್, ಹೆಚ್ಚು ಒಡವೆ/ಮೇಕಪ್, ಅತಿ ಹೊಳೆಯುವ ಡ್ರೆಸ್ ನಿಮ್ಮ ಆಫೀಸಿಗೆ ಸೂಟ್ ಆಗಲ್ಲ. ನಿಮ್ಮ ಡ್ರೆಸ್ ಡೀಸೆಂಟ್‌ಕಂಫರ್ಟೆಬಲ್ ಆಗಿರಬೇಕು, ಅದು ನಿಮ್ಮ ಕೆಲಸದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಸವರಿ ಇಲ್ಲದಿದ್ದರೆ, ಸಹೋದ್ಯೋಗಗಳು ನಿಮ್ಮ ಉಡುಗೆ ಬಗ್ಗೆ ಕಮೆಂಟ್ ಮಾಡಿದರೆ, ನಿಮಗೆ ಮನಸ್ಸಿಟ್ಟು ಕೆಲಸ ಮಾಡಲು ಆಗದು. ಹಿಂದೆಲ್ಲ ಹೆಂಗಸರು ಕೇವಲ ಸೀರೆ, ಸಲ್ವಾರ್ ಸೂಟ್, ಪಂಜಾಬಿ ಡ್ರೆಸ್ ಧರಿಸಿ ಕೆಲಸ ಮುಗಿಸುತ್ತಿದ್ದರು. ಆದರೆ ಈಗ ಆಧುನಿಕ ತರುಣಿಯರು ಹೆಚ್ಚು ಸ್ಮಾರ್ಟ್ ಆಗಿ ಮಿಂಚಲು ಪ್ಯಾಂಟ್ ಶರ್ಟ್, ಟ್ರೌಸರ್ಸ್, ಕೋಟ್, ವೆಸ್ಟರ್ನ್ ಡ್ರೆಸ್ ಗಳಲ್ಲಿ ಟಿಪ್ ಟಾಪ್‌ಆಗಿರುತ್ತಾರೆ. ಹೀಗಾಗಿ ಇಂದಿನ ಯುವತಿಯರ ವಾರ್ಡ್ ರೋಬಿನಲ್ಲಿ ಇವೇ ಹೆಚ್ಚು ತುಂಬಿರುತ್ತವೆ.