ಪ್ರಕಾರ: ಚತುಶ್ರಯ ಮಂದಾನಿಲ ಲಯ ಚೌಪದಿ
ಉಸಿರನು ನೀಡುವ ಮರಗಳು ಶಿಶಿರದಿ
ಬಸವಳಿಯುತ ಬೋಳಾಗಿರಲು
ಹಸಿವೆಯ ನೀಗುವ ಹಸಿರೆಲೆಯೆಲ್ಲವು
ಕಸದೊಲು ನೆಲದೊಳಗುದುರಿರಲು ॥೧॥

ಮರಣದ ಭಯದಲಿ ವೃಕ್ಷಗಳೆಲ್ಲವು
ತರಣಿಯ ಬಳಿಯಲಿ ಕೇಳಿದವು
ಧರಣಿಯ ಮೇಗಡೆ ಬಿಸಿಲನೆ ಕಾಣೆವು
ಕರುಣೆಯ ತೋರುತ ಕಾಪಾಡು ॥೨॥

ಮರಗಳ ಮಾತನು ಕೇಳುತ ದಿನಪನು
ಭರವಸೆ ನೀಡುತಲರುಹಿದನು
ಬರುವೆನು ಬೇಗ ವಸಂತನ ಜೊತೆಯಲಿ
ತರುವೆನು ಸಂತಸವನು ನಾನು ॥೩॥

ಹುಡುಕುತ ಹೊರಟನು ಸರಿಯುತಲನುದಿನ
ಬಡಗಣದಿಕ್ಕಿಗೆ ಭಾಸ್ಕರನು
ಸಡಗರದಿಂದ ವಸಂತನ ಸಂಗಡ
ಪೊಡವಿಯಲೀದಿನ ಬಂದಿಹನು ॥೪॥

ತೊಡುತಲಿ ಹಸಿರಿನ ಕೆಂಪಿನ ಚಿಗುರೆಲೆ
ಪಡೆಯುತ ಜೀವನ ಹೊಸತಾಗಿ
ಗಿಡಮರಬಳ್ಳಿಗಳೆಲ್ಲವು ಮುದದಲಿ
ಪೊಡಮೊಟ್ಟವು ರವಿಯನು ಬಾಗಿ ॥೫॥

ಧರೆಯಲಿ ಕಾಣುವ ಪ್ರಕೃತಿಯ ಕೌತುಕ
ಗುರುತಿಸಿ ನಮ್ಮಯ ಪೂರ್ವಜರು
ವರುಷದ ಮೊದಲನೆ ಪರ್ವದ ಪದವಿಯ
ಬಿರುದು ಯುಗಾದಿಗೆ ನೀಡಿಹರು ॥೬॥
-ಮೃತ್ಯುಂಜಯ ತೇಜಸ್ವಿ
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





