ಏಕೆ ಧೈರ್ಯ ಕಳೆದುಕೊಳ್ಳಬೇಕು? : ಆಗಸ್ಟ್ 11ನ್ನು `ನೆವರ್ ಗಿವ್ ಅಪ್ ಡೇ' ಎಂದು ಆಚರಿಸಲಾಯಿತು. ಇದರ ಒಂದು ಅರ್ಥ ನಿಮ್ಮನ್ನು ನೀನು ಅಸಹಾಯಕರು, ದುರ್ಬಲರು ಎಂದು ತಿಳಿಯಬೇಡಿರಿ, ಪ್ರತಿ ಸವಾಲನ್ನೂ ಎದೆಗುಂದದೆ ಎದುರಿಸಿ ಅಂತ. ಗ್ಲೋಬಲ್ ಇನ್ ಫ್ಲೂಯೆನ್ಸರ್ ಕಾತ್ಯಾ ಸಹ ಈ ಚಳುವಳಿಯಲ್ಲಿ ತನ್ನ ಸೆಕ್ಸಿ ಹಾಗೂ ಯಂಗೀ ಇಮೇಜ್ ನೊಂದಿಗೆ ಭಾಗವಹಿಸಿದಳು. ಏನಾದರೂ ಆಗಿಹೋಗಲಿ, ಯಾರೂ ಎಂದೂ ಸೋಲು ಒಪ್ಪಿಕೊಳ್ಳಬೇಡಿ ಎಂದು ಈಕೆ ಆ ಮೂಲಕ ಎಲ್ಲರಿಗೂ ಮೆಸೇಜ್ ಕೊಟ್ಟಳು. ಟೆಕ್ನಾಲಜಿ ಹಾಗೂ ಮೆಡಿಸಿನ್ ವಯಸ್ಸನ್ನು ಎಷ್ಟೋ ತಗ್ಗಿಸಿದೆ, 50-60 ದಾಟಿದರೂ ಸ್ಮಾರ್ಟ್ ಆಗಿ ಮಿಂಚಬಹುದು. ಹೀಗಾಗಿ ಹೆಣ್ಣು ಗಂಡು ಯಾರೇ ಆಗಲಿ, ಧೈರ್ಯ ಕಳೆದುಕೊಳ್ಳದೇ ಮುನ್ನುಗ್ಗಿ ಎನ್ನುತ್ತಾಳೆ.

ಗತದ ಬಗ್ಗೆ ತಿಳಿದುಕೊಳ್ಳಿ : ಅಂದ್ರೆ ಕೃತಕ ಬುದ್ಧಿಮತ್ತೆ, ಕಾಮರ್ಸ್ ಇಂಡಸ್ಟ್ರಿಯಲ್ಲಿ ಹೆಚ್ಚು ಬಳಕೆಯಾಗುತ್ತದೆ. ಅದೇ ರೀತಿ ಮ್ಯೂಸಿಯಂನವರೂ ಇದನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಸ್ಪೆಷಲ್ ಗಾಗಲ್ಸ್ ಧರಿಸಿ, ಈ ಮ್ಯೂಸಿಯಂನಲ್ಲಿ ನೀವು ಎಲ್ಲಿ ಬೇಕಾದರೂ ನಿಂತು, ಈ ನಗರದ ಗತ ಜೀವನದ ಬಗ್ಗೆ ತಿಳಿಯಬಹುದು, ಬಹುತೇಕ ಭವಿಷ್ಯವನ್ನೂ ಸಹ! ಜಪಾನಿನ ಓಸಾಕಾದ ಈ ಹುಡುಗಿ 100 ವರ್ಷಗಳ ಪ್ರಾಚೀನ ನಗರದ ಮಜಾ ಪಡೆಯುತ್ತಿದ್ದಾಳೆ. ಈಕೆ ನೋಡುತ್ತಿರುವುದನ್ನು ನೀವು ಬ್ಲ್ಯಾಕ್ ಎಂಡ್ ನಲ್ಲಿ ಗಮನಿಸಬಹುದು. ಆ ಗತ ಕಾಲದಲ್ಲೂ ಒಸಾಕಾ ಎಷ್ಟು ಮುಂದುವರಿದಿತ್ತು ಎಂದು ಇದರಿಂದ ತಿಳಿಯಬಹುದಾಗಿದೆ. ನಮ್ಮ ಹಳೆಯ ಫೋಟೋಗಳೆಲ್ಲ ಹಂಚಿಹೋದ ನಗರಗಳದ್ದೇ ಆಗಿವೆ.

ಯಂಗ್ ಬಹಳಷ್ಟು ಸಾಧಿಸಬಲ್ಲರು : ಈ ಕೆಂಪು ಉಡುಗೆಯಳು ಪ್ಯಾಟಿ ವಿವಾ, ಈಕೆ ಅಮೆರಿಕಾದ ಲಾಸ್ ವೇಗಾಸ್ ನವಳು. ಅದಂತೂ ಪುರುಷಪ್ರಧಾನ ಕೇಂದ್ರ. ಕೆಲವು ಮೀಡಿಯಾ ಎಕ್ಸ್ ಪರ್ಚ್ಸ್ ತಮ್ಮದೇ ಖಾಸಗಿ ಬಿಸ್ ನೆಸ್ ನ್ನು ಇಲ್ಲಿ ಇಂಪ್ರೂವ್ ಮಾಡಿಕೊಂಡಿದ್ದಾರೆ. ಪ್ಯಾಟಿ ಇಲ್ಲಿ ಕೇವಲ ತನ್ನ ಮೀಡಿಯಾ ರಿಲೇಶನ್ ಕಂಪನಿ ನಡೆಸುತ್ತಿಲ್ಲ, ಆಕೆ ಎಷ್ಟೋ ಪ್ರೊಫೆಶನ್ ಬಾಡೀಸ್ ನಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ, ಅದೂ ಇಂಥ ಯಂಗ್ ಏಜ್ ನಲ್ಲಿ! ಹೀಗಾಗಿಯೇ ಯಂಗ್ ಬಹಳಷ್ಟು ಸಾಧಿಸಬಲ್ಲರು ಎಂಬುದಕ್ಕೆ ಈಕೆ ಪ್ರತ್ಯಕ್ಷ ಸಾಕ್ಷಿ, ಬೇಕಾಗಿರುವುದೆಲ್ಲ ನಿಷ್ಠೆ, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನಗಳಷ್ಟೆ.

ಚಿಟ್ಟೆಯಂತೆ ಹಾರಿ ಹೋಗಬೇಕೇ? : `ಚಿಟ್ಟೆಯಂತೆ ಹಾರಿ ಹೋಗಿ ನಿಮ್ಮ ಸಮಸ್ಯೆಗಳನ್ನೆಲ್ಲ ಮರೆತುಬಿಡಿ!' ಎಂದು ಹೇಳುವುದೇನೋ ಸುಲಭ, ಹಾಗೆ ಮಾಡಿ ತೋರಿಸುವುದು ಬಲು ಕಷ್ಟ. ಆದರೂ ಒಂದು ನಾನ್ ಪ್ರಾಫಿಟ್ ಟ್ರಸ್ಟ್. ಇಂಥ ಇವೆಂಟ್ಸ್ ನಡೆಸುತ್ತಿರುತ್ತದೆ. ಇದರಲ್ಲಿ ಬಣ್ಣ ಬಣ್ಣದ ಚಿಟ್ಟೆ ತರಹ ಡ್ರೆಸ್ ಧರಿಸಿ, ಹಾರಲು ಯತ್ನಿಸಿ. ಹಾರಲಾಗದಿದ್ದರೂ ಈ ಬಣ್ಣಗಳನ್ನಾದರೂ ಎಂಜಾಯ್ ಮಾಡಬಹುದು. ಇಂದಿನ ಮೆಕ್ಯಾನಿಕ್ ಡಿಜಿಟಲ್ ಎರಾದಲ್ಲಿ ಈ ಬಣ್ಣಗಳಿಗೆ ಬಹಳ ಮಹತ್ವವಿದೆ, ಇದನ್ನು ಎಷ್ಟು ಹತ್ತಿರ ಇರಿಸಿಕೊಂಡರೆ ಅಷ್ಟು ಒಳ್ಳೆಯದು. ಟ್ರೂನೆಸ್ ಪ್ರಾಜೆಕ್ಟ್ ಇದೇ ಕೆಲಸ ಮಾಡುತ್ತಿದೆ ಹಾಗೂ ಪ್ರತಿ ವರ್ಷ ವಿಶ್ವದೆಲ್ಲೆಡೆ ಇಂಥ ಬಟರ್ ಫ್ಲೈ ಇವೆಂಟ್ಸ್ ನಡೆಸುತ್ತಿರುತ್ತದೆ, ಇದರಲ್ಲಿ ಹಾಡು ಡ್ಯಾನ್ಸ್ ಪಾರ್ಟಿಯ ಮೋಜು ಮಸ್ತಿ ತುಂಬಿರುತ್ತದೆ.





