ಪಾಕ ಕಲೆಯಲ್ಲಿ ರುಚಿ, ಸುಗಂಧ, ಸಂಸ್ಕೃತಿಗೆ ಹೆಸರಾಗಿ ಇಂದಿನ ಮಾರುಕಟ್ಟೆಯನ್ನು ಆಳಲು ಬರುತ್ತಿದೆ `ಲಾಲ್ಜಿ ಗೋಧೂ ಅಂಡ್ ಕಂಪನಿ'ಯ ಇಂಗು. ಇದರ ಕಥೆ ಅತಿ ಪ್ರೇರಣಾದಾಯಕ.

ಅದು 1894ರ ಕಾಲ. ಲಾಲ್ಜಿ ಹಾಗೂ ಗೋಧೂ ಒಟ್ಟಾಗಿ ಬೆರೆತು ಇದನ್ನು ಸ್ಥಾಪಿಸಿದರು. ಅಲ್ಲಿಂದ ಶುರುವಾಯ್ತು ಸುಂದರ ಜರ್ನಿ. ಅದು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದಿದೆ. ಅದು ಯಶಸ್ವಿ ಮಾತ್ರವಲ್ಲ, ಅತಿ ರೋಚಕವಾಗಿದೆ. ಇದರ ಆರಂಭ `ಇಂಗಿ'ನ ಒಂದು ಉಂಡೆ ಆಗಿತ್ತು. ಇದಕ್ಕೆ ಸೂಕ್ತ ರುಚಿ, ಸುಗಂಧ ಒದಗಿಸುವ ಕೆಲಸವನ್ನು ಸಾವಿರಾರು ಜನರ ತಂಡ ವಹಿಸಿಕೊಂಡಿತು. ಮುಂಬೈನಲ್ಲಿ ಆರಂಭವಾದ ಈ ದಂಧೆ ನಮ್ಮ ದೇಶ ಮಾತ್ರವಲ್ಲದೆ, ಇಡೀ ವಿಶ್ವದಲ್ಲೆಲ್ಲ ಪ್ರಸಿದ್ಧಿ ಪಡೆದಿದೆ.

ಇಂದು LG ಇಂಗು ಪ್ರತಿ ಮನೆ ಮನೆಯನ್ನೂ ತಲುಪಿದೆ. ಯಾವ ವ್ಯಂಜನ ಇದರಿಂದ ಹೊರತಲ್ಲ. ಇದನ್ನು ವಿಶ್ವವಿಡೀ ತಲುಪಿಸಲು ಈ ಮರ್ಚೆಂಟ್‌ ಪರಿವಾರಕ್ಕೆ ಸುಲಭವಾಗಿತ್ತೇ? ಖಂಡಿತಾ ಅಲ್ಲ, ಆಗೆಲ್ಲ ಈಗಿನಂತೆ ಸೊಫೆಸ್ಟಿಕೇಟೆಡ್‌ ಯಂತ್ರಗಳೂ ಇರಲಿಲ್ಲ, ಟೆಕ್ನಿಕ್ಕೂ ಇರಲಿಲ್ಲ. ಪ್ರತಿ ಪ್ರಾಡಕ್ಟ್ ನ್ನೂ ಕೈಗಳಿಂದಲೇ ಕಲಸಿ, ನಾದಿ, ರುಚಿಕರ ಇಂಗಾಗಿ ರೂಪಿಸಲಾಯಿತು. ಬನ್ನಿ, ಈ ಮರ್ಚೆಂಟ್‌ ಪರಿವಾರವನ್ನು ಮುಂದೆ ಕೊಂಡೊಯ್ದ ತಾಯಿ ಹೀನಾ ಮರ್ಜೆಂಟ್‌ ಹಾಗೂ ಮಗಳು ರಿದ್ಧಿ ಮರ್ಚೆಂಟರ ಬಾಯಿಂದ ವಿವರವಾಗಿ ಕೇಳಿ ತಿಳಿಯೋಣ.

ಹೀನಾಜಿ, LG ಇಂಗಿನ ಸ್ಥಾಪನೆ ಹೇಗಾಯ್ತು? ಇದರ ಪ್ರೋಸೆಸ್ಬಗ್ಗೆ ಹೇಳಿ.

ಈ ಬಿಸ್‌ ನೆಸ್‌ 6 ಪೀಳಿಗೆಯಿಂದ ಮುಂದುವರಿದಿದೆ. ಇದರ ಆರಂಭ ಬಲು ರೋಚಕ. ಇದರ ಸಂಸ್ಥಾಪಕರು ಗೋಧೂ ಮರ್ಚೆಂಟ್. ಏನಾದರೂ ಬಿಸ್‌ ನೆಸ್‌ ಆರಂಭಿಸಬೇಕು ಅನ್ನೋದು ಅವರ ಗುರಿ. ಒಂದು ದಿನ ಅವರಿಗೆ ಮುಂಬೈನ ಮಸ್ಜಿದ್ ಬಂದರ್‌ ನ ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬ ಪಠಾಣ್‌ ಸಿಕ್ಕರು. ಆತ ಬಗೆಬಗೆಯ ವಸ್ತು ಮಾರುತ್ತಿದ್ದ. ಇವರಿಗೆ ಅವನಿಂದ ಇಂಗು ಸಿಕ್ಕಿತು. ಆತನಿಂದ ಪಡೆದ ಇಂಗನ್ನು ಅಡುಗೆಗೆ ಬಳಸಿ, ಇದನ್ನು ಸ್ಥಳೀಯವಾಗಿ ಏಕೆ ಸಿದ್ಧಪಡಿಸಬಾರದು ಎಂದು ಯೋಚಿಸಿದರು. ಅವರು ಅದನ್ನು ಪ್ರೋಸೆಸ್‌ ಮಾಡಿದರು, ಸಣ್ಣ ಉಂಡೆಗಾಗಿಸಿ, ಪ್ಯಾಕೆಟ್‌ ಗಳನ್ನು ಮಂಕರಿಗಳಿಟ್ಟುಕೊಂಡು ಹೋಗಿ ಮಾರಾಟ ಮಾಡಿದರು. ಈ ರೀತಿ ಇಂಗಿನ ಜರ್ನಿ ಶುರುವಾಯ್ತು. ನಿಧಾನವಾಗಿ ಅದು ದಕ್ಷಿಣ ಭಾರತ ತಲುಪಿತು. ಏಕೆಂದರೆ ದಕ್ಷಿಣದವರು ಎಲ್ಲಾ ವ್ಯಂಜನಗಳಿಗೂ ಅನಾದಿ ಕಾಲದಿಂದ ಇಂಗು ಬಳಸುತ್ತಿದ್ದರು. ಇಲ್ಲಿ  LG ಇಂಗು ಹೆಚ್ಚು ಜನಪ್ರಿಯವಾಯ್ತು. ಇದಾದ ನಂತರ ಫ್ಯಾಕ್ಟರಿ ಶುರುವಾಯ್ತು. ಗೋಧೂ ಇದಕ್ಕೆ ಆಧುನಿಕ ಪುಡಿಯ ರೂಪ ನೀಡಿದರು. ಇದಾದ ಮೇಲೆ ಲಾಲ್ಜಿ ಬಂದರು. ಹೀಗಾಗಿ ಈ ಕಂಪನಿ ಉದಯವಾಯಿತು. ಇದಾದ ಮೇಲೆ ಖಮ್ಜಿ ಮರ್ಚೆಂಟ್‌, ಅಜಿತ್‌ ಮರ್ಚೆಂಟ್‌, ನಂತರ ನನ್ನ ಪತಿ ವಿಮಲ್ ಮರ್ಚೆಂಟ್‌, ನಾನೂ ಸೇರಿದಂತೆ, ನನ್ನ ಮಗಳು ರಿದ್ಧಿ ಮರ್ಚೆಂಟ್‌ ಇದನ್ನು ನಡೆಸುತ್ತಿದ್ದೇವೆ. ತಮಿಳುನಾಡಿನ ಕುಂಭಕೋಣಂನಲ್ಲಿ ಒಂದು ಸಣ್ಣ ಫ್ಯಾಕ್ಟರಿ ಶುರು ಮಾಡಿ ಇಂದು ಈ ಮಟ್ಟ ತಲುಪಿದ್ದೇವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ