- ರಾಘವೇಂದ್ರ ಅಡಿಗ ಎಚ್ಚೆನ್.
ಭಾರೀ ನಿರೀಕ್ಷೆ ಮೂಡಿಸಿರುವ ಧುರಂಧರ್ 2 ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದ್ದು, ಅದರ ಪೇಯ್ಡ್ ಪ್ರೀಮಿಯರ್ ಶೋಗಳು ಇಂದು ದೇಶದ ಹಲವು ನಗರಗಳಲ್ಲಿ ಆರಂಭವಾಗಲಿವೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಂಜೆ 5 ಗಂಟೆಯಿಂದ ಪ್ರದರ್ಶನ ಆರಂಭವಾಗಲಿದ್ದು, ಈಗಾಗಲೇ ಲಕ್ಷಾಂತರ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ.
ಈ ಹಿನ್ನೆಲೆದಲ್ಲಿ, ಚಿತ್ರದ ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಸಿನಿಮಾ ಮುಗಿದ ತಕ್ಷಣವೇ ಹೊರನಡೆಯದೆ, ಎಂಡ್ ಕ್ರೆಡಿಟ್ಸ್ ಮುಗಿಯುವವರೆಗೂ ಕುಳಿತುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕಾರಣ, ಚಿತ್ರದ ಕೊನೆಯಲ್ಲಿ ವಿಶೇಷ “ಪೋಸ್ಟ್-ಕ್ರೆಡಿಟ್ ಸೀನ್” ಅಡಗಿದ್ದು, ಅದು ಕಥೆಯ ಪ್ರಮುಖ ಅಂಶವನ್ನು ಬಹಿರಂಗಪಡಿಸುತ್ತದೆ ಎಂದು ಸುಳಿವು ನೀಡಿದ್ದಾರೆ.
ಇದೇ ವೇಳೆ, ಚಿತ್ರದಲ್ಲಿನ ಟ್ವಿಸ್ಟ್ ಹಾಗೂ ರಹಸ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿರುವ ಅವರು, “ಪ್ರತಿಯೊಬ್ಬರೂ ಅದೇ ಥ್ರಿಲ್ ಅನುಭವಿಸಬೇಕು” ಎಂದು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಸೈನಿಕನೊಬ್ಬ ಗೂಢಚಾರಿಯಾಗಿ ಶತ್ರು ರಾಷ್ಟ್ರ ಪ್ರವೇಶಿಸುವ ಕಥೆ ಹೊಂದಿದ್ದು, ಆಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳ ಸಂಯೋಜನೆಯಾಗಿದೆ.
ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಸೇರಿದಂತೆ ಪ್ರಮುಖ ನಟರು ಅಭಿನಯಿಸಿದ್ದಾರೆ.





