ಗೋಧಿ ನುಚ್ಚಿನ ಪೊಂಗಲ್

ಸಾಮಗ್ರಿ : ಅರ್ಧ ಕಪ್‌ ಗೋಧಿ ನುಚ್ಚು, ಕಾಲ್ ‌ಕಪ್‌ ಹೆಸರುಬೇಳೆ, 1 ಕಪ್‌ ಪುಡಿದ ಮಾಡಿದ ಬೆಲ್ಲ, 1 ಹೋಳು ಕೊಬ್ಬರಿ, ಅರ್ಧ ಕಪ್‌ ತುಪ್ಪ, ಒಂದಿಷ್ಟು ದ್ರಾಕ್ಷಿ, ಬಾದಾಮಿ, ಗೋಡಂಬಿ, ಪಿಸ್ತಾ ಚೂರು, ಚಿಟಕಿ ಪಚ್ಚ ಕರ್ಪೂರ, ಏಲಕ್ಕಿ, 2-3 ಲವಂಗ.

ವಿಧಾನ : ಗೋಧಿ ನುಚ್ಚನ್ನು ಸ್ವಲ್ಪ ಬಿಸಿಯಾಗುವವರೆಗೆ ಹುರಿದಿಡಿ. ನಂತರ ಹೆಸರು ಬೇಳೆಯನ್ನು ಹೊಂಬಣ್ಣ ಬರುವಂತೆ ಹುರಿದುಕೊಳ್ಳಿ. ಪಾತ್ರೆಗೆ 3 ಕಪ್‌ ನೀರು ಹಾಕಿ, ಅದಕ್ಕೆ ಹೆಸರುಬೇಳೆ, ಗೋಧಿ ತರಿ ಹಾಕಿ ಬೇಯಿಸಿಟ್ಟುಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಲವಂಗ ಎಲ್ಲವನ್ನು ಹುರಿದುಕೊಳ್ಳಿ. ನಂತರ ಬೆಲ್ಲಕ್ಕೆ ಒಂದು ಕಪ್‌ ನೀರು ಹಾಕಿ ಕುದಿಸಿ, ಸ್ವಲ್ಪ ಗಟ್ಟಿ ಪಾಕ ಮಾಡಿಕೊಂಡು ಅದಕ್ಕೆ ಬೆಂದ ಗೋಧಿ ತರಿ, ಹೆಸರುಬೇಳೆ, ತುರಿದ ಕೊಬ್ಬರಿ, ಏಲಕ್ಕಿ, ಪಚ್ಚ ಕರ್ಪೂರದ ಪುಡಿ, ಹುರಿದ ದ್ರಾಕ್ಷಿ. ಗೋಡಂಬಿ, ಬಾದಾಮಿ, ಲವಂಗ ಎಲ್ಲವನ್ನೂ ಹಾಕಿ ಮೇಲೆ ತುಪ್ಪ ಸುರಿದು ಚೆನ್ನಾಗಿ ಕಲಸಿ. ಐದು ನಿಮಿಷ ಸಣ್ಣ ಉರಿಯಲ್ಲಿ ಇಟ್ಟು, ಕೆಳಗಿಳಿಸಿ. ಆರಿದ ನಂತರ ಸವಿಯಲು ಕೊಡಿ.

PDVD_172

ಎಳ್ಳಿನ ಚಿತ್ರಾನ್ನ

ಸಾಮಗ್ರಿ : 1-2 ಕಪ್‌ ಉದುರುದುರಾದ ಅನ್ನ, ಅರ್ಧ ಕಪ್‌ ಎಳ್ಳು, 2-2 ಚಮಚ ಉದ್ದಿನ ಬೇಳೆ, ಕಡಲೆ ಬೇಳೆ, 4-6 ಚಮಚ ಶೇಂಗಾಬೀಜ, 2-4 ಒಣಮೆಣಸಿನಕಾಯಿ, ಅರ್ಧ ಚಮಚ ಕರಿಮೆಣಸು, ಅರ್ಧ ಹೋಳು ಕೊಬ್ಬರಿ, ಒಗ್ಗರಣೆಗೆ 5-6 ಚಮಚ ಎಣ್ಣೆ, ಸಾಸುವೆ, ಜೀರಿಗೆ, ಇಂಗು, ಕರಿಬೇವು, ಕೊ.ಸೊಪ್ಪು. ರುಚಿಗೆ ತಕ್ಕಷ್ಟು ಉಪ್ಪು, 1 ನಿಂಬೆಹಣ್ಣು.

ವಿಧಾನ : ಮೊದಲು ಕಾದ ಬಾಣಲೆಗೆ ಎಳ್ಳು ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ, ನಂತರ ಅದೇ ಬಾಣಲೆಗೆ ಸ್ವಲ್ಪ ಉದ್ದಿನ ಬೇಳೆ, ಕಡಲೆಬೇಳೆ, ಕರಿಮೆಣಸು, ಒಣಮೆಣಸಿನ ಕಾಯಿ ಹಾಕಿ ಎಣ್ಣೆ ಹಾಕದೆ ಚೆನ್ನಾಗಿ ಹುರಿಯಿರಿ. ಆರಿದ ನಂತರ ಎಳ್ಳಿನೊಂದಿಗೆ ಎಲ್ಲವನ್ನೂ ಸೇರಿಸಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಅದು ಕಾದ ನಂತರ ಸಾಸುವೆ, ಜೀರಿಗೆ, ಉಳಿದ ಉದ್ದಿನ ಬೇಳೆ, ಕಡಲೆಬೇಳೆ, ಶೇಂಗಾ, ಕರಿಬೇವು ಹಾಕಿ ಚೆನ್ನಾಗಿ ಹುರಿದು ಕೆಳಗಿಳಿಸಿ ಅದಕ್ಕೆ ಪುಡಿ ಮಾಡಿದ ಎಳ್ಳಿನ ಮಿಶ್ರಣ, ಕೊಬ್ಬರಿ ತುರಿ ಹಾಕಿ ಕೈಯಾಡಿಸಿ. ನಂತರ ಅದಕ್ಕೆ ಅನ್ನ, ಉಪ್ಪು, ನಿಂಬೆರಸ ಹಾಕಿ ಚೆನ್ನಾಗಿ ಕಲಸಿ, ಮೇಲೆ ಕೊ.ಸೊಪ್ಪು ಉದುರಿಸಿದರೆ ಎಳ್ಳಿನ ಚಿತ್ರಾನ್ನ ತಿನ್ನಲು ರುಚಿ.

DSCN2877

ಮಿಶ್ರ ಲಡ್ಡು

ಸಾಮಗ್ರಿ : 1 ಕಪ್‌ ಅಕ್ಕಿಹಿಟ್ಟು, 1-1 ಕಪ್‌ ಕಡಲೆ ಬೀಜ, ಹುರಿಗಡಲೆ, ಅರ್ಧ ಕಪ್‌ ಬಿಳಿ ಎಳ್ಳು, 4 ಅಚ್ಚು  ಬೆಲ್ಲ, 2 ಗಿಟುಕು ಕೊಬ್ಬರಿ, 4 ಏಲಕ್ಕಿ, 1-1 ಚಮಚ ಒಣಶುಂಠಿ, ಜಾಯಿಕಾಯಿ ಪುಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ