ಮದುವೆ ವಿಷಯ ಬಂತು ಅಂದ ಮೇಲೆ ರೇಷ್ಮೆ ವಸ್ತ್ರ, ಜರಿ, ಬೀಡ್ಸ್, ಮಿರರ್, ಸಿಲ್ವರ್, ಗೋಲ್ಡನ್ ವರ್ಕ್ ನಿಂದ ಸುಸಜ್ಜಿತಗೊಳಿಸಲಾದ ಹೆವಿ ವರ್ಕ್ ಲೆಹಂಗಾದ ವಧು ಎಲ್ಲರ ಗಮನಕ್ಕೆ ಬರುತ್ತಾಳೆ. ಜರ್ದೋಜಿಯಿಂದ ಕಸೂತಿಗೊಳಿಸಲಾದ ಉಡುಗೆ ನಿಮ್ಮ ರೂಪಲಾವಣ್ಯಗಳಿಗೆ ಕುಂದಣವಿಡುತ್ತದೆ. ಇದಕ್ಕಾಗಿ ಎಂಥ ಮೇಕಪ್ ಇರಬೇಕು? :
ಮೊದಲು ಇದಕ್ಕಾಗಿ ನಿಮಗೆ ನ್ಯಾಚುರಲ್ ಲುಕ್ಸ್ ಬೇಕೇ ಅಥವಾ ಹೆವಿ ಮೇಕಪ್ ಲುಕ್ಸ್…… ಇತ್ತೀಚಿನ ನವ ವಧುಗಳ ಟ್ರೆಂಡ್ ಎಂದರೆ ನ್ಯಾಚುರಲ್ ಬಯಸುತ್ತಾರೆ. ಇದಕ್ಕಾಗಿ ನಿಮಗೆ ಹೆವಿ ಮೇಕಪ್ ತರಹವೇ ಹಂತ ಹಂತವಾಗಿ ಮೇಕಪ್ ಮಾಡಿದರೂ, ಇಲ್ಲಿನ ಪ್ರಾಡಕ್ಟ್ಸ್ ಬಲು ವೈಟ್ ಆಗಿರುತ್ತವೆ. ಹೀಗಾಗಿ ಇಲ್ಲಿ ಸ್ಕಿನ್ ಶೇಡ್ ನ ಬೇಸ್ ಬಳಸುತ್ತಾರೆ. ಮುಂದಿನ ಹಂತದಲ್ಲಿ, ಮೇಕಪ್‌ತುಸು ಬಳಸಿ ಅದಕ್ಕೆ ಪೌಡರ್ ಸೇರಿಸಿ ಬ್ಲೆಂಡ್ ಮಾಡುತ್ತಾರೆ, ಆಗ ಸ್ಕಿನ್ ಈವೆನ್ ಆಗುತ್ತದೆ. ಇದಕ್ಕಾಗಿ ಬ್ಯೂಟಿ ಬ್ಲೆಂಡರ್ ನ್ನು ತುಸು ಒದ್ದೆ ಮಾಡಿಕೊಂಡು, ಅದನ್ನು ಹಿಂಡಿ, ಬೇಸ್ ಮೇಲೆ ಥಪಥಪ ತಟ್ಟಾಗುತ್ತದೆ. ಆಗ ಮೇಕಪ್ ಲೈಟ್ ಆಗುತ್ತದೆ.
ನ್ಯಾಚುರಲ್ ಮೇಕಪ್ ಇಂಥ ಲುಕ್ಸ್ ಗಾಗಿ ಐ ಶ್ಯಾಡೋ ಬ್ಲಶರ್, ಲಿಪ್ ಸ್ಟಿಕ್, ಹೈಲೈಟರ್ ಕಲರ್ಸ್ ಲೈಟ್ ಆಗಿರಬೇಕು. ಈ ಮೇಕಪ್ ನಲ್ಲಿ ವಿಂಗ್ಡ್ ಹೈ ಲೈನರ್ ಬಳಸುವುದಿಲ್ಲ. ಕೇವಲ ಕಂಗಳ ಔಟ್ ಲೈನಿಂಗ್ ಮಾಡುತ್ತಾರೆ. ಇದರ ಜೊತೆ ನೀವು ಚಿಕ್ಕ ಬಿಂದಿ ಇರಿಸಬಹುದು.
ಹೆವಿ ಮೇಕಪ್
ಬ್ರೈಡಲ್ ಮೇಕಪ್ ಹಲವು ಗಂಟೆಗಳ ಕಾಲ ಉಳಿಯಬೇಕೆಂದರೆ, ನೀವು ವಾಟರ್ ಪ್ರೂಫ್ ಮೇಕಪ್ ಬಳಸಿರಿ. ಇದರ ಜೊತೆಗೆ ಮದುವೆ ಮನೆಯ ಫಳಫಳ ರಂಗಿನಲ್ಲಿ ವಧುವಿನ ಕೆನ್ನೆಯ ಕೆಂಪು ಹಿಂದೆ ಉಳಿಯಬಾರದು ಎಂದರೆ, ಇದಕ್ಕಾಗಿ ಮುಖಕ್ಕೆ ಹೈಲೈಟಿಂಗ್ ಮಾಡಲು ಶಿಮರ್ ಮತ್ತು ಕೆನ್ನೆಗಳಿಗೆ ಡಾರ್ಕ್ ಕ್ರೀಮೀ ಬ್ಲಶ್ ಆನ್ ಬಳಸಿರಿ.
ಬ್ಲಶರ್‌ನ ರೈಟ್ ಟ್ರಿಕ್ಸ್ ಅರಿಯಲು, ಎಲ್ಲಕ್ಕೂ ಮೊದಲು ಕನ್ನಡಿಯ ಎದುರು ಮುಗುಳ್ನಗುವ ಪ್ರಾಕ್ಟೀಸ್ ಮಾಡಿ. ಇದನ್ನು ಚೀಕ್ ಬೋನ್ ನಿಂದ ಶುರು ಮಾಡಿ ಕೆನ್ನೆಯ ಅಂಚಿಗೆ ಕೊಂಡೊಯ್ಯಿರಿ.
ಕಂಗಳು, ತುಟಿಗಳ ಎರಡರ ಮೇಕಪ್ ನ್ನೂ ಲೌಡ್ ಆಗಿಡುವುದು ಹಳೆಯ ಟ್ರಿಕ್ಸ್. ಈಗ ಲಿಪ್ ಸ್ಟಿಕ್ ಲೈಟ್ ಶೇಡ್ ಆಗಿರಬೇಕು ಅಥವಾ ಐ ಮೇಕಪ್. ಒಂದು ಪಕ್ಷ ಐ ಮೇಕಪ್ ಲೈಟ್ ಆಗಿದ್ದರೆ, ಲಿಪ್ ಸ್ಟಿಕ್ ಬೋಲ್ಡ್ ಆಗಿರಲಿ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ, ಮೇಕಪ್ ನಿಮ್ಮ ಧಾರೆಯ ಉಡುಗೆಗೆ ಮ್ಯಾಚ್ ಆಗುವಂತಿರಬೇಕು.
ಇತ್ತೀಚೆಗೆ ಗ್ಲಿಟರ್ಸ್ ಟ್ರೆಂಡ್ ಎನಿಸಿದೆ. ಹೀಗಾಗಿ ಕಂಗಳಿಗೆ ಮೆಟಾಲಿಕ್ ಬೇಸ್ಡ್ ಕಾಪರ್, ಸಿಲ್ವರ್, ಗೋಲ್ಡನ್ ಶೇಡ್ ಹಚ್ಚಿರಿ ಹಾಗೂ ಡಾರ್ಕ್ ಬ್ರೌನ್ ಶೇಡ್ ನಿಂದ ಡೀಪಾಗಿ ಸೆಟ್ ಮಾಡಿ, ಆಗ ಕಂಗಳು ಹೆಚ್ಚು ಹಿಗ್ಗಿರುವಂತೆ ಕಾಣುತ್ತದೆ. ಐ ಬ್ರೋಸ್ ಕೆಳಗೆ ಹೈಲೈಟಿಂಗ್ ಗಾಗಿ ಡ್ರೆಸ್‌ಗೆ ತಕ್ಕಂತೆ ಗೋಲ್ಡನ್, ಸಿಲ್ವರ್ ಯಾ ಲೈಟ್ ಗೋಲ್ಡ್ ಶೇಡ್ ಬಳಸಿರಿ.
ಕಂಗಳಿಗೆ ಕಂಪ್ಲೀಟ್ ಸೆನ್ ಶುಯಲ್ ಲುಕ್ಸ್ ನೀಡುವುದಕ್ಕಾಗಿ ಕಣ್ಣೆವೆಗಳಿಗೆ ಆರ್ಟಿಫಿಶಿಯಲ್ ಲ್ಯಾಶೆಸ್ ಅಳವಡಿಸಿ. ಇವನ್ನು ಐ ಲ್ಯಾಶ್ ಕಲರ್ ನಿಂದ ವರ್ಕ್ ಮಾಡಿ, ಮಸ್ಕರಾದ ಕೋಟ್ ಹಚ್ಚಿರಿ. ಆಗ ಅದು ನ್ಯಾಚುರಲ್ ಲ್ಯಾಶೆಸ್ ಜೊತೆ ಪರ್ಫೆಕ್ಟ್ ಆಗಿ ಮರ್ಜ್ ಆಗುತ್ತದೆ. ನೀವು ಬಯಸಿದರೆ ಮದುವೆಗೆ 2 ದಿನ ಮೊದಲೇ ಪರ್ಮನೆಂಟ್ ಐ ಲ್ಯಾಶೆಸ್ ಸಹ ಅಳಡಿಸಿಕೊಳ್ಳಬಹುದು.
ಕಂಗಳ ಶೇಪ್ ಡಿಫೈನ್ ಮಾಡಲು, ಕಾಂಟ್ರಾಸ್ಟ್ ಕಲರ್ಸ್‌ನ ಡ್ಯುಯೆಲ್ ಲೈನರ್ ತೀಡಿರಿ. ಅಂದ್ರೆ ಐ ಲಿಡ್‌ನ ಇನ್ನರ್ ಕಾರ್ನರ್ ಬಳಿ ಎಲೆಕ್ಟ್ರಿಕ್ ಬ್ಲೂ, ಔಟರ್ ಕಾರ್ನರ್ ಬಳಿ ಗ್ರೀನ್ ಶೇಡ್ ನಿಂದ ವಿಂಗ್ಡ್ ಲೈನರ್ ತೀಡಿರಿ. ಕಂಗಳ ಕೆಳಭಾಗದಲ್ಲೂ ಲೈಟ್ ಆಗಿ ಗ್ರೀನ್ ಶೇಡ್ ವಿಂಗ್ ನಿಂದ ಕನೆಕ್ಟ್ ಆಗುವಂತೆ ಎಳೆಯಿರಿ, ಜೊತೆಗೆ ವಾಟರ್ ಲೈನರ್ ಬಳಿ ಬೋಲ್ಡ್ ಜೆಲ್ ಕಾಜಲ್ ಹಚ್ಚಿರಿ.
ಇತ್ತೀಚೆಗೆ ಹಣೆಗಾಗಿ ದೊಡ್ಡ ಗಾತ್ರದ ಬೈತಲೆ ಬೊಟ್ಟು ಟ್ರೆಂಡ್ ಎನಿಸಿದೆ.
ಇದನ್ನು ಬಳಸಿ ನಿಮ್ಮ ಹಣೆ ಜಾಗ ಅರ್ಧದಷ್ಟು ಕವರ್ ಆಗಿಹೋದರೆ, ನಿಮ್ಮ ಹಣೆಗೆ ತಕ್ಕಂತೆ ಆಕಾರವುಳ್ಳ, ಲೆಹಂಗಾ ಮ್ಯಾಚಿಂಗ್ ಬಿಂದಿ ಇರಿಸಿಕೊಳ್ಳಿ. ಆದರೆ ಬೈತಲೆ ಬೊಟ್ಟು ಚಿಕ್ಕದಾಗಿದ್ದರೆ, ಹಣೆ ಮಧ್ಯ ಭಾಗದಲ್ಲಿ ದೊಡ್ಡ ಬಿಂದಿ ಇರಿಸುವುದೇ ಸರಿ.
ಇಂಥ ಸಂದರ್ಭದಲ್ಲಿ ನವ ವಧು ಮತ್ತೆ ಮತ್ತೆ ಮೇಕಪ್ ಗೆ ಟಚ್ ಅಪ್ ನೀಡಲಾಗದು. ಹೀಗಾಗಿ ತುಟಿಗಳಿಗೆ ಲೆಹಂಗಾ ಮ್ಯಾಚಿಂಗ್ ಯಾ ಕಾಂಪ್ಲಿಮೆಂಟಿಂಗ್ ಲಾಂಗ್ ಸ್ಟೇ ಲಿಪ್ ಸ್ಟಿಕ್ ತೀಡಿರಿ.
ಇಷ್ಟೆಲ್ಲ ಆದ ಮೇಲೆ ಹೇರ್ ಸ್ಟೈಲ್ ಗಮನಿಸಬೇಡವೇ? ಕೂದಲನ್ನು ಸ್ಟೋನ್ಸ್ ಸ್ಟಡ್ಸ್ ನಿಂದ ಸಿಂಗರಿಸಲು, ಇದಕ್ಕೆ ಡಿಸೈನರ್ ನೆಕ್ ಪೀಸ್, ಸ್ವರೋಸ್ಕಿ ಹುದುಗಿದ ಕೃತಕ ಜಡೆ, ಕುಂದಣ ಹುದುಗಿದ ಹಣೆಪಟ್ಟಿ, ಸ್ಟೋನ್ಸ್ ಹುದುಗಿದ ಕೃತಕ ಹೂಗಳನ್ನು ಬಳಸಿರಿ. ಕೊನೆಯಲ್ಲಿ ಧಾರಾಳ ಮಲ್ಲಿಗೆ, ಕನಕಾಂಬರ ಇತ್ಯಾದಿ ಹೂಮಾಲೆ ಮುಡಿಸಿರಿ.
– ಭಾರತಿ ಹೆಗ್ಗಡೆ