ಮದುವೆ ವಿಷಯ ಬಂತು ಅಂದ ಮೇಲೆ ರೇಷ್ಮೆ ವಸ್ತ್ರ, ಜರಿ, ಬೀಡ್ಸ್, ಮಿರರ್‌, ಸಿಲ್ವರ್‌, ಗೋಲ್ಡನ್‌ ವರ್ಕ್‌ ನಿಂದ ಸುಸಜ್ಜಿತಗೊಳಿಸಲಾದ ಹೆವಿ ವರ್ಕ್‌ ಲೆಹಂಗಾದ ವಧು ಎಲ್ಲರ ಗಮನಕ್ಕೆ ಬರುತ್ತಾಳೆ. ಜರ್ದೋಜಿಯಿಂದ ಕಸೂತಿಗೊಳಿಸಲಾದ ಉಡುಗೆ ನಿಮ್ಮ ರೂಪಲಾವಣ್ಯಗಳಿಗೆ ಕುಂದಣವಿಡುತ್ತದೆ. ಇದಕ್ಕಾಗಿ ಎಂಥ ಮೇಕಪ್‌ ಇರಬೇಕು? :

ಮೊದಲು ಇದಕ್ಕಾಗಿ ನಿಮಗೆ ನ್ಯಾಚುರಲ್ ಲುಕ್ಸ್ ಬೇಕೇ ಅಥವಾ ಹೆವಿ ಮೇಕಪ್‌ ಲುಕ್ಸ್...... ಇತ್ತೀಚಿನ ನವ ವಧುಗಳ ಟ್ರೆಂಡ್ ಎಂದರೆ ನ್ಯಾಚುರಲ್ ಬಯಸುತ್ತಾರೆ. ಇದಕ್ಕಾಗಿ ನಿಮಗೆ ಹೆವಿ ಮೇಕಪ್‌ ತರಹವೇ ಹಂತ ಹಂತವಾಗಿ ಮೇಕಪ್‌ ಮಾಡಿದರೂ, ಇಲ್ಲಿನ ಪ್ರಾಡಕ್ಟ್ಸ್ ಬಲು ವೈಟ್‌ ಆಗಿರುತ್ತವೆ. ಹೀಗಾಗಿ ಇಲ್ಲಿ ಸ್ಕಿನ್‌ ಶೇಡ್‌ ನ ಬೇಸ್‌ ಬಳಸುತ್ತಾರೆ. ಮುಂದಿನ ಹಂತದಲ್ಲಿ, ಮೇಕಪ್‌ತುಸು ಬಳಸಿ ಅದಕ್ಕೆ ಪೌಡರ್‌ ಸೇರಿಸಿ ಬ್ಲೆಂಡ್‌ ಮಾಡುತ್ತಾರೆ, ಆಗ ಸ್ಕಿನ್‌ ಈವೆನ್‌ ಆಗುತ್ತದೆ. ಇದಕ್ಕಾಗಿ ಬ್ಯೂಟಿ ಬ್ಲೆಂಡರ್‌ ನ್ನು ತುಸು ಒದ್ದೆ ಮಾಡಿಕೊಂಡು, ಅದನ್ನು ಹಿಂಡಿ, ಬೇಸ್‌ ಮೇಲೆ ಥಪಥಪ ತಟ್ಟಾಗುತ್ತದೆ. ಆಗ ಮೇಕಪ್‌ ಲೈಟ್‌ ಆಗುತ್ತದೆ.

ನ್ಯಾಚುರಲ್ ಮೇಕಪ್‌ ಇಂಥ ಲುಕ್ಸ್ ಗಾಗಿ ಐ ಶ್ಯಾಡೋ ಬ್ಲಶರ್‌, ಲಿಪ್‌ ಸ್ಟಿಕ್‌, ಹೈಲೈಟರ್‌ ಕಲರ್ಸ್‌ ಲೈಟ್‌ ಆಗಿರಬೇಕು. ಈ ಮೇಕಪ್‌ ನಲ್ಲಿ ವಿಂಗ್ಡ್ ಹೈ ಲೈನರ್‌ ಬಳಸುವುದಿಲ್ಲ. ಕೇವಲ ಕಂಗಳ ಔಟ್‌ ಲೈನಿಂಗ್‌ ಮಾಡುತ್ತಾರೆ. ಇದರ ಜೊತೆ ನೀವು ಚಿಕ್ಕ ಬಿಂದಿ ಇರಿಸಬಹುದು.

ಹೆವಿ ಮೇಕಪ್

ಬ್ರೈಡಲ್ ಮೇಕಪ್‌ ಹಲವು ಗಂಟೆಗಳ ಕಾಲ ಉಳಿಯಬೇಕೆಂದರೆ, ನೀವು ವಾಟರ್‌ ಪ್ರೂಫ್‌ ಮೇಕಪ್‌ ಬಳಸಿರಿ. ಇದರ ಜೊತೆಗೆ ಮದುವೆ ಮನೆಯ ಫಳಫಳ ರಂಗಿನಲ್ಲಿ ವಧುವಿನ ಕೆನ್ನೆಯ ಕೆಂಪು ಹಿಂದೆ ಉಳಿಯಬಾರದು ಎಂದರೆ, ಇದಕ್ಕಾಗಿ ಮುಖಕ್ಕೆ ಹೈಲೈಟಿಂಗ್‌ ಮಾಡಲು ಶಿಮರ್‌ ಮತ್ತು ಕೆನ್ನೆಗಳಿಗೆ ಡಾರ್ಕ್‌ ಕ್ರೀಮೀ ಬ್ಲಶ್‌ ಆನ್‌ ಬಳಸಿರಿ.

ಬ್ಲಶರ್‌ನ ರೈಟ್‌  ಟ್ರಿಕ್ಸ್ ಅರಿಯಲು, ಎಲ್ಲಕ್ಕೂ ಮೊದಲು ಕನ್ನಡಿಯ ಎದುರು ಮುಗುಳ್ನಗುವ ಪ್ರಾಕ್ಟೀಸ್‌ ಮಾಡಿ. ಇದನ್ನು ಚೀಕ್  ಬೋನ್‌ ನಿಂದ ಶುರು ಮಾಡಿ ಕೆನ್ನೆಯ ಅಂಚಿಗೆ ಕೊಂಡೊಯ್ಯಿರಿ.

ಕಂಗಳು, ತುಟಿಗಳ ಎರಡರ ಮೇಕಪ್‌ ನ್ನೂ ಲೌಡ್‌ ಆಗಿಡುವುದು ಹಳೆಯ ಟ್ರಿಕ್ಸ್. ಈಗ ಲಿಪ್‌ ಸ್ಟಿಕ್‌ ಲೈಟ್‌ ಶೇಡ್‌ ಆಗಿರಬೇಕು ಅಥವಾ ಐ ಮೇಕಪ್‌. ಒಂದು ಪಕ್ಷ ಐ ಮೇಕಪ್‌ ಲೈಟ್‌ ಆಗಿದ್ದರೆ, ಲಿಪ್‌ ಸ್ಟಿಕ್‌ ಬೋಲ್ಡ್ ಆಗಿರಲಿ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ, ಮೇಕಪ್‌ ನಿಮ್ಮ ಧಾರೆಯ ಉಡುಗೆಗೆ ಮ್ಯಾಚ್‌ ಆಗುವಂತಿರಬೇಕು.

ಇತ್ತೀಚೆಗೆ ಗ್ಲಿಟರ್ಸ್‌ ಟ್ರೆಂಡ್‌ ಎನಿಸಿದೆ. ಹೀಗಾಗಿ ಕಂಗಳಿಗೆ ಮೆಟಾಲಿಕ್‌ ಬೇಸ್ಡ್ ಕಾಪರ್‌, ಸಿಲ್ವರ್‌, ಗೋಲ್ಡನ್‌ ಶೇಡ್‌ ಹಚ್ಚಿರಿ ಹಾಗೂ ಡಾರ್ಕ್‌ ಬ್ರೌನ್‌ ಶೇಡ್‌ ನಿಂದ ಡೀಪಾಗಿ ಸೆಟ್‌ ಮಾಡಿ, ಆಗ ಕಂಗಳು ಹೆಚ್ಚು ಹಿಗ್ಗಿರುವಂತೆ ಕಾಣುತ್ತದೆ. ಐ ಬ್ರೋಸ್‌ ಕೆಳಗೆ ಹೈಲೈಟಿಂಗ್‌ ಗಾಗಿ ಡ್ರೆಸ್‌ಗೆ ತಕ್ಕಂತೆ ಗೋಲ್ಡನ್‌, ಸಿಲ್ವರ್‌ ಯಾ ಲೈಟ್‌ ಗೋಲ್ಡ್ ಶೇಡ್‌ ಬಳಸಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ