ಕೊರೋನಾ ಮಹಾಮಾರಿಯ ಕಾಟದಿಂದ ಇಂದು ಮಾಸ್ಕ್ ಧರಿಸದೆ ಹೊರಗೆಲ್ಲೂ ಹೋಗುವ ಹಾಗೇ ಇಲ್ಲ. ಮಾಸ್ಕ್ ಧರಿಸಿದ ಮಾತ್ರಕ್ಕೆ ಹೆಂಗಸರು ಮೇಕಪ್‌ ಮಾಡಿಕೊಳ್ಳುವುದನ್ನೇ ಬಿಟ್ಟಿಬಿಡಬೇಕೇ……? ಯಾರು ಹೀಗೆ ಮಾಡುತ್ತಿದ್ದೀರೋ ಅಂಥವರು ಚಿಂತೆ ಬಿಡಿ.

ಮೂಗು, ಬಾಯಿ ಕವರ್‌ ಆಗಿದ್ದರೇನಂತೆ…. ಕಂಗಳು ಇವೆಯಲ್ಲ? ಅದರ ಮೂಲಕ ಎಲ್ಲಾ ಭಾವನೆಗಳನ್ನೂ ವ್ಯಕ್ತಪಡಿಸಬಹುದು, ಮುಖ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ಅಚ್ಚುಕಟ್ಟಾಗಿ ಕಂಗಳ ಮೇಕಪ್‌ ಮಾಡಿಕೊಂಡು, ಬಾಯಿ ನುಡಿಯಲಾರದ್ದನ್ನು ಕಂಗಳೇ ಹೇಳುವಂತೆ ಮಾಡಿ.

ಇದಕ್ಕಾಗಿ ನಿಮ್ಮ ಕಣ್ಣಿನ ಮೇಕಪ್‌ ಕಡೆ ಹೆಚ್ಚಿನ ಗಮನ ಕೊಡಿ. ಆಗ ಮಾಸ್ಕ್ ಇದ್ದರೂ ನಿಮ್ಮ ಲುಕ್ಸ್ ಪರ್ಫೆಕ್ಟ್ ಎನಿಸುತ್ತವೆ.

ಶ್ಯಾಡೋದಿಂದ ಆಕರ್ಷಣೆ

 

ಐ ಶ್ಯಾಡೋ ಬಳಸುವ ಮೊದಲು ಐ ಲಿಡ್‌ ಮೇಲೆ ಪ್ರೈಮರ್‌ ಹಚ್ಚಿರಿ. ಇದು ನಿಮ್ಮ ಐ ಶ್ಯಾಡೋ ಬಹಳ ಹೊತ್ತು ಬಾಳಿಕೆ ಬರುವಂತೆ ಮಾಡಬಲ್ಲದು. ಇದಾದ ಮೇಲೆ ಕನ್ಸೀಲರ್‌ ಬಳಸಿರಿ. ಹಬ್ಬದ ನಿಮ್ಮ ಉಡುಗೆಗೆ ಮ್ಯಾಚ್‌ ಆಗುವಂಥ ಐ ಶ್ಯಾಡೋ ಬಳಸಿಕೊಳ್ಳಿ. ಐ ಬ್ರಶ್‌ ನಿಂದ ಇದನ್ನು ನೀಟಾಗಿ ಹರಡಿರಿ. ನಿಮ್ಮ ಐ ಲಿಡ್‌ ಪೂರ್ತಿ ಕವರ್‌ ಆಗುವಂತೆ, ಒಂದು ಸಿಂಗ್‌ ಕಲರ್ ಬಳಸುದು ಹೆಚ್ಚಿನ ಕ್ಲಾಸಿಕ್‌ ಲುಕ್‌ ನೀಡುತ್ತದೆ. ನೀವು ಐ ಶ್ಯಾಡೋಗೆ ಮಲ್ಟಿಪಲ್ ಕಲರ್ಸ್‌ ಬಳಸುವಿರಾದರೆ, ಅವನ್ನು ಸದಾ ಒಟ್ಟಾಗಿ ಬ್ಲೆಂಡ್‌ ಮಾಡಲು ಮರೆಯದಿರಿ. ಇತ್ತೀಚೆಗೆ ಗ್ಲಿಟರಿ, ಸ್ಮೋಕಿ, ಡಬಲ್ ಶೇಡ್‌ ಐ ಶ್ಯಾಡೋ ಲುಕ್‌ ಹೆಚ್ಚು ಟ್ರೆಂಡಿ ಎನಿಸುತ್ತದೆ.

ಲ್ಯಾಶೆಸ್

ನಿಮಗೆ ನಿಮ್ಮ ಐ ಲ್ಯಾಶೆಸ್‌ ಹೆಚ್ಚು ದಟ್ಟಾಗಿಲ್ಲ ಎನಿಸಿದರೆ, ನೀವು ರೆಡಿಮೇಡ್‌ ಸಿಗುವ ಕೃತಕ ಲ್ಯಾಶೆಸ್‌ ಬಳಸಬಹುದು. ಈ ಲ್ಯಾಶೆಸ್‌ನ್ನು ಉತ್ತಮ ರೀತಿಯಲ್ಲಿ ಸ್ಟಿಕ್‌ ಮಾಡಿ, ಆಗ ಮೇಕಪ್‌ ನಂತರ ಇವು ಕಳಚಿಕೊಳ್ಳುವುದಿಲ್ಲ.

ಲೈನರ್ಬಳಸಿರಿ

eye-makeup

ಇದು ಸಾಧಾರಣ ಕಂಗಳನ್ನೂ ಆಕರ್ಷಕ ಮಾಡಬಲ್ಲದು. ಹೀಗಾಗಿ ಐ ಲೈನರ್‌ ಬಳಸುವಾಗ, ಮೇಲ್ಭಾಗದ ಐ ಲ್ಯಾಶಸ್ ಲೈನಿನ ಮಧ್ಯದಿಂದ ಲೈನರ್‌ ಎಳೆಯಲು ಆರಂಭಿಸಿ. ಎಷ್ಟು ಸಾಧ್ಯವೋ ಲೈನರ್‌ ಬ್ರಶ್ಶನ್ನು ನಿಮ್ಮ ಲ್ಯಾಶಸ್ ಲೈನ್‌ ಬಳಿಯೇ ಇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ಇದನ್ನು ಸಹ ಮೂಗಿನ ಮೂಲೆಯವರೆಗೂ ಸುಲಭವಾಗಿ ಎಳೆಯಬಹುದು. ಅಗತ್ಯವಾದಾಗ ನೀವು ವಾಟರ್‌ ಪ್ರೂಫ್‌ ಐ ಲೈನರ್‌ ಸಹ ಬಳಸಿಕೊಳ್ಳಿ.

ಲ್ಯಾಶೆಸ್ಕರ್ಲ್ ಮಾಡಿ

ಕಂಗಳನ್ನು ಮತ್ತಷ್ಟು ಆಕರ್ಷಗೊಳಿಸಲು, ನೀವು ನಿಮ್ಮ ಐ ಲ್ಯಾಶೆಸ್‌ ನ್ನು ಕರ್ಲ್ ಮಾಡಿ. ಆಗ ಅದರ ಸೌಂದರ್ಯ ಇಮ್ಮಡಿಸುತ್ತದೆ. ಸದಾ ಮಸ್ಕರಾ ಹಚ್ಚು ಮೊದಲು, ಅವನ್ನು ಬಾಚಿರಿ. ಇದರಿಂದ ಮಸ್ಕರಾ ನೀಟಾಗಿ ಅಪ್ಲೈ ಆಗುತ್ತದೆ. ಹಾಗೂ ಲ್ಯಾಶೆಸ್‌ ಹೆಚ್ಚು ದಟ್ಟವಾಗಿಯೂ ಕಾಣಿಸುತ್ತದೆ.

ಬ್ರೋಸಿಗೆ ನ್ಯೂ ಲುಕ್

ಐ ಬ್ರೋ ಲೈನ್‌ ನ್ನು ಪರ್ಫೆಕ್ಟ್ ಆಗಿ ತೋರಿಸಬೇಕೇ? ಇದಕ್ಕಾಗಿ ತುಸು ದಪ್ಪ ಗಾತ್ರದ ಐ ಬ್ರೋ ಪೆನ್ಸಿಲ್ ‌ಬಳಸಿರಿ. ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ, ಈ ಪೆನ್ಸಿಲ್ ‌ನ್ನು ಮೇಲ್ಭಾಗಕ್ಕೆ ಹೋಗುವಂತೆ ನಿಧಾನವಾಗಿ ಬಳಸಬೇಕೇ ಹೊರತು, ಉಲ್ಟಾ ಬಳಸಬೇಡಿ.

ಸ್ಮೋಕಿ ಮೇಕಪ್

ಇದಕ್ಕಾಗಿ ಮೊದಲು ಕಂಗಳಿಗೆ ಬ್ಲ್ಯಾಕ್‌ ಕಾಜಲ್ ತೀಡಿ, ಐ ಲೈನರ್‌ ಎಳೆಯಿರಿ. ಅದಾದ ಮೇಲೆ ಬ್ಲ್ಯಾಕ್‌ಬ್ರೌನ್‌ ಐ ಶ್ಯಾಡೋನ್ನು ಒಟ್ಟಿಗೆ ಕಣ್ಣಿನ ರೆಪ್ಪೆಗೆ ಹಚ್ಚಬೇಕು. ಕಾಪರ್‌ ಕಲರ್‌ ನಿಂದ ಹೈಲೈಟಿಂಗ್‌ ಮಾಡಿ. ಕೊನೆಯಲ್ಲಿ ಲ್ಯಾಶೆಸ್‌ ಗೆ ಮಸ್ಕರಾ ತೀಡಿರಿ.

ಇಂಥ ಸಲಹೆಗಳನ್ನು ಅನುಸರಿಸಿ ನೀವು, ಮುಖಕ್ಕೆ ಮಾಸ್ಕ್ ಧರಿಸಿಯೂ ಸಹ, ಆಕರ್ಷಕ ಎನಿಸುವಿರಿ. ಇನ್ನೇಕೆ ತಡ? ಇಂದಿನಿಂದಲೇ ಈ ವಿಧಾನ ಆರಂಭಿಸಿ.

ಜೆ. ಮಂಜುಳಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ