ನೀವು ನಿಮ್ಮ ಮುಟ್ಟಿನ ಬಗ್ಗೆ ಕೂಲಂಕಶವಾಗಿ ಗಮನಹರಿಸಿದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು.
ಮುಟ್ಟು ಅಂದರೇನು?
ನಮ್ಮ ದೇಹ ನೈಸರ್ಗಿಕ ನಿಯಮಗಳು ಹಾಗೂ ಅದರ ಕ್ರಿಯಾಕಲಾಪಗಳನ್ನು ಅನುಸರಿಸುತ್ತದೆ. ಪ್ರತಿಯೊಬ್ಬ ಹುಡುಗಿ ಅಥವಾ ಮಹಿಳೆಯ ಮುಟ್ಟು 21-35 ದಿನಗಳೊಳಗೆ ಮುಗಿಯುತ್ತದೆ. ಒಂದು ಕ್ಯಾಲೆಂಡರ್ ತಿಂಗಳಲ್ಲಿ 2 ಸಲ ಮುಟ್ಟು ಆಗಬಹುದು ಎನ್ನುವುದನ್ನು ಇದು ಬಿಂಬಿಸುತ್ತದೆ. ಪ್ರತಿಯೊಂದು ಚಕ್ರವನ್ನು ಎರಡು ಹಂತಗಳಲ್ಲಿ ವಿಂಗಡಿಸಬಹುದು. ಫಾಲಿಕ್ಯೂಲರ್ ಫೇಸ್ ಮತ್ತು ಲ್ಯೂಟಿಯಲ್ ಫೇಸ್. ನಿಮ್ಮ ಮುಟ್ಟಿನ ಮೊದಲ ದಿನ ಫಾಲಿಕ್ಯೂಲರ್ ಫೇಸ್‌ನ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಮೆದುಳಿನಲ್ಲಿ ಉತ್ತೇಜನ ಹಾರ್ಮೋನ್ ಎಫ್‌ಎಸ್‌ಎಚ್, ಇದು ಫೀಮೇಲ್ ಸೆಕ್ಸ್ ಹಾರ್ಮೋನ್ ಆಗಿದೆ. ಇದು ಮೆದುಳಿನಲ್ಲಿ ಉಗಮಗೊಂಡು ಅಂಡಾಣು ಬಿಡುಗಡೆಗೊಳ್ಳಲು ಉತ್ತೇಜಿಸುತ್ತದೆ. ಗರ್ಭಾಶಯದ ಮಟ್ಟನ್ನು ಉತ್ತೇಜಿತಗೊಳಿಸಲು ಈಸ್ಟ್ರೋಜನ್ ಬಿಡುಗಡೆಗೊಳಿಸಲು ಫಾಲಿಕ್ ನೆರವಾಗುತ್ತದೆ.
ಎರಡನೇ ಹಂತದ ಆರಂಭ ಅಂಡಾಣು ಬಿಡುಗಡೆಯ ಜೊತೆಗೆ ಆಗುತ್ತದೆ. ಅದು ನ್ಯೂಟ್ರಿಯಲ್ ಫೇಸ್ ನ ಆರಂಭವನ್ನು ಸೂಚಿಸುತ್ತದೆ. ಈ ಹಂತದಲ್ಲಿ ಅಂಡಕೋಶ ಗರ್ಭಕೋಶದ ಪದರವನ್ನು ಪರಿಪಕ್ವಗೊಳಿಸಲು ಪ್ರೊಜೆಸ್ಟ್ರಾನ್ ಹಾರ್ಮೋನ್ ನ್ನು ಬಿಡುಗಡೆಗೊಳಿಸುತ್ತದೆ. ಅದನ್ನು ಭ್ರೂಣದ ಬೆಳವಣಿಗೆ ಪ್ರಕ್ರಿಯೆಗೆ ಸಿದ್ಧಗೊಳಿಸುತ್ತದೆ. ಒಂದು ವೇಳೆ ಗರ್ಭ ಪ್ರಕ್ರಿಯೆ ನಿಲ್ಲದೆ ಹೋದರೆ, ಪ್ರೊಜೆಸ್ಟ್ರಾನ್ ಮಟ್ಟ ಕುಸಿಯುತ್ತದೆ ಹಾಗೂ ರಕ್ತಸ್ರಾವ 14 ದಿನಗಳೊಳಗೆ ಆಗುತ್ತದೆ ಹಾಗೂ ಲ್ಯೂಟಿಯಲ್ ಫೇಸ್ ಅಂತ್ಯಗೊಳ್ಳುತ್ತದೆ.
21-35 ದಿನಗಳ ಸಾಮಾನ್ಯ ಮುಟ್ಟು ಅಂಡಾಣು ಬಿಡುಗಡೆ ಪ್ರಕ್ರಿಯೆ ನೆರವೇರಿತು ಹಾಗೂ ಎಲ್ಲ ಲೈಂಗಿಕ ಹಾರ್ಮೋನುಗಳು ನೈಸರ್ಗಿಕವಾಗಿ ಗರ್ಭ ಧರಿಸಲು ಸಮತೋಲನ ಹೊಂದಿವೆ ಎಂಬುದನ್ನು ತೋರಿಸುತ್ತದೆ. 3-5 ದಿನಗಳು ಅಥವಾ ಅದಕ್ಕೂ ಹೆಚ್ಚಿನ ದಿನಗಳವರೆಗೆ ಮುಂದುವರಿದ ಮುಟ್ಟಿನಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಅದೇನೆಂದರೆ ಅಂಡಾಣು ಬಿಡುಗಡೆ ನಿಯಮಿತವಾಗಿಲ್ಲ ಅಥವಾ ಅಸ್ತಿತ್ವದಲ್ಲಿ ಇಲ್ಲ. ಇದು ಯಾವಾಗ ಆಗುತ್ತದೆಂದರೆ, ಒಂದು ಫಾಲಿಕ್ ಪರಿಪಕ್ವ ಆಗಿರುವುದಿಲ್ಲ ಹಾಗೂ ಅಂಡಾಕಾರ ಆಗಿರುವುದಿಲ್ಲ. ಪ್ರೊಜೆಸ್ಟ್ರಾನ್ ನ್ನು ಬಿಡುಗಡೆಗೊಳಿಸಲು ಅನುಮತಿ ನೀಡುವುದಿಲ್ಲ.
ಗರ್ಭಕೋಶದ ಪದರ ಈಸ್ಟ್ರೋಜನ್ ನ ಕಾರಣದಿಂದ ನಿರ್ಮಾಣ ಪ್ರಕ್ರಿಯೆಯನ್ನು ಮುಂದುವರಿಸಿರುತ್ತದೆ. ಆ ಪದರ ಎಷ್ಟೊಂದು ದಪ್ಪಗಾಗಿ ಬಿಡುತ್ತದೆ ಎಂದರೆ, ಅದೇ ಕಾರಣದಿಂದ ಅತಿ ರಕ್ತಸ್ರಾವ ಆಗುತ್ತದೆ.
ಒಂದು ಕಡಿಮೆ ಮುಟ್ಟಿನ ಅವಧಿ 21 ದಿನಗಳು ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. ಇದು ಅಂಡಾಣು ಬಿಡುಗಡೆ ಪ್ರಕ್ರಿಯೆ ಅಸ್ತಿತ್ವದಲ್ಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅದರ ಜೊತೆ ಜೊತೆಗೆ ನಿಮ್ಮ ಅಂಡಕೋಶದಲ್ಲಿ ಸಾಮಾನ್ಯಕ್ಕಿಂತ ಅತಿ ಕಡಿಮೆ ಸಂಖ್ಯೆಯಲ್ಲಿ ಅಂಡಾಣುಗಳು ಉತ್ಪತ್ತಿಯಾಗುತ್ತವೆ. ನಿಮ್ಮ ಮುಟ್ಟು ನಿಲ್ಲುವ ದಿನಗಳು ಸಮೀಪಿಸಿವೆ ಎನ್ನುವುದನ್ನು ಇದು ತೋರಿಸುತ್ತದೆ. ಅಂಡಕೋಶದಲ್ಲಿ ಅಂಡಾಣುಗಳು ಕುಗ್ಗುತ್ತಿರುವ ಸಂಖ್ಯೆಯ ಜೊತೆಗೆ ಮೆದುಳು ಒಂದು ಫಾಲಿಕ್ ಅಭಿವೃದ್ಧಿಗೊಳಿಸಲು ಅಂಡಕೋಶವನ್ನು ಉತ್ತೇಜಿತಗೊಳಿಸಲು ಹೆಚ್ಚು ಎಫ್‌ಎಸ್‌ಎಚ್ ನ್ನು ಬಿಡುಗಡೆಗೊಳಿಸುತ್ತದೆ. ಇದರ ಪರಿಣಾಮ ಎಂಬಂತೆ ಅವಧಿಗೆ ಮುನ್ನ ಫಾಲಿಕ್ ಮತ್ತು ಅಂಡಾಣು ಬೆಳವಣಿಗೆಯಾಗುತ್ತದೆ. ಒಮ್ಮೊಮ್ಮೆ ರಕ್ತ ಸ್ರಾವ ಆಗಲು ಇದೂ ಕಾರಣವಾಗಬಹುದು.
ನೀವು ಅತಿ ಕಡಿಮೆ ಕಾಲಾವಧಿಯ ಮುಟ್ಟಿನ ಕಾರಣದಿಂದ ಅಂಡಾಣು ಬಿಡುಗಡೆಯ ಸ್ಥಿತಿ ತಲುಪದೇ ಇರಬಹುದು.
ಒಂದು ವೇಳೆ ನಿಮಗೆ 5-7ಕ್ಕಿಂತ ಹೆಚ್ಚು ದಿನಗಳ ಕಾಲ ರಕ್ತಸ್ರಾವ ಆಗುತ್ತಿದ್ದರೆ, ಅದರ ಪರಿಣಾಮ ಎಂಬಂತೆ ನಿಮಗೆ ಅಂಡಾಣು ಬಿಡುಗಡೆ ಆಗುವುದಿಲ್ಲ. ಅದಕ್ಕೂ ಹೆಚ್ಚಿನ ಅವಧಿಯತನಕ ಅಥವಾ ಮುಟ್ಟಿನ ನಡುವೆಯೇ ರಕ್ತಸ್ರಾವ ಉಂಟಾದರೆ, ಅದು ಗರ್ಭಕೋಶದ ಒಳಗಡೆಯ ಸಂಭಾವ್ಯ ಪಾಲಿಪ್ಸ್, ಫೈಬ್ರಾಯ್ಡ್, ಕ್ಯಾನ್ಸರ್ ಅಥವಾ ಸೋಂಕಿನ ಕಾರಣದಿಂದ ಆಗಬಹುದು. ಒಂದು ವೇಳೆ ಭ್ರೂಣ ಈ ಸಮಯದಲ್ಲಿ ಒಳಗೆ ಪ್ರವೇಶಿಸಿದರೆ ಗರ್ಭ ಧರಿಸಲು ಅಸಮರ್ಥ ಅಥವಾ ಗರ್ಭಪಾತದ ಸಾಧ್ಯತೆಯನ್ನು ನಿರಾಕರಿಸಲು ಆಗುವುದಿಲ್ಲ.
ಕಡಿಮೆ ಕಾಲಾವಧಿಯ ಮುಟ್ಟು
ಕಡಿಮೆ ಕಾಲಾವಧಿಯ ಮುಟ್ಟು ಈ ಕೆಳಕಂಡಗಳಲ್ಲಿ ಯಾವುದಾದರೂ ಒಂದನ್ನು ಸೂಚಿಸುತ್ತವೆ.
ಅಂಡಾಣುವಿನ ದುರ್ಬಲ ಗುಣಮಟ್ಟ : ಕಡಿಮೆ ಕಾಲಾವಧಿಯ ಮುಟ್ಟು ಇಳಿವಯಸ್ಸಿನ ಮಹಿಳೆಯರ ಅಂಡಕೋಶದ ದುರ್ಬಲ ಗುಣಮಟ್ಟದ ಬಗ್ಗೆ ಸೂಚಿಸುತ್ತದೆ. ನಿಮ್ಮ ವಯಸ್ಸು ಹೆಚ್ಚುತ್ತಾ ಹೋದಂತೆ ಮುಟ್ಟಿನ ಅವಧಿ ತಗ್ಗುತ್ತಾ ಹೋಗುತ್ತದೆ. ಅದರಲ್ಲೂ ವಿಶೇಷವಾಗಿ ಮೊದಲ ಹಂತದಲ್ಲಿ ಅಂಡಾಣು ಪಕ್ವಗೊಂಡು ಅಂಡೋತ್ಪತಿಗೆ ಸಿದ್ಧವಾಗುತ್ತದೆ. ಆದರೆ ಬೆಳವಣಿಗೆಯಾಗದ ಅಂಡಾಣು ಪರಿಪೂರ್ಣ ಪಕ್ವವಾಗಿರುವುದಿಲ್ಲ. ಈ ಕಾರಣದಿಂದ ಗರ್ಭಧಾರಣೆಯ ಸ್ಥಿತಿ ದುರ್ಬಲಗೊಳ್ಳುತ್ತದೆ.
ಗರ್ಭಪಾತದ ಅಪಾಯ : ಕಡಿಮೆ ಕಾಲಾವಧಿಯ ಮುಟ್ಟು ಇರುವ ಮಹಿಳೆಯರಿಗೆ ಹೋಲಿಸಿದಲ್ಲಿ 30-31 ದಿನಗಳ ದೀರ್ಘ ಕಾಲಾವಧಿಯ ಮುಟ್ಟು ಹೊಂದಿರುವ ಮಹಿಳೆಯರಿಗೆ ಗರ್ಭ ಧರಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಯಾವ ಮಹಿಳೆಯರಿಗೆ ಮುಟ್ಟಿನ ಕಾಲಾವಧಿಯು ಕಡಿಮೆ ಇರುತ್ತದೋ, ಅವರು ಗರ್ಭವನ್ನೇನೊ ಧರಿಸುತ್ತಾರೆ. ಆದರೆ ಅವರಲ್ಲಿ ಗರ್ಭಾವಸ್ಥೆಯಲ್ಲಿ ಹಾನಿ ಅಥವಾ ಗರ್ಭಪಾತ ಉಂಟಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
– ಡಾ. ಸ್ಮಿತಾ