ಒಂದು ಸಲ ಡಯಾಬಿಟೀಸ್‌ ಗೆ ಒಳಗಾದರೆ ಅವರು ಜೀವನ ಪರ್ಯಂತ ಮಧುಮೇಹಿಗಳಾಗಿರುತ್ತಾರೆ. ಏನಿದ್ದರೂ ಅದನ್ನು ನಿಯಂತ್ರಿಸುತ್ತಾ, ಪ್ರಭಾವ ತಗ್ಗಿಸಬೇಕಷ್ಟೆ. ಇದು ತೀವ್ರ ಉಲ್ಬಣಗೊಂಡಾಗ ಕಿಡ್ನಿ ಸಮಸ್ಯೆ, ಕಂಗಳ ಸಮಸ್ಯೆ, ನರಗಳ ದೌರ್ಬಲ್ಯ, ಹೃದ್ರೋಗಳಿಗೆ ದಾರಿ ಮಾಡುತ್ತದೆ.

ಮಧುಮೇಹ ಮಹಿಳೆಯರ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಹಿಳೆಯರು ಮುಟ್ಟಂತ್ಯ (ರಜೋನಿವೃತ್ತಿ)ಕ್ಕೆ ಮೊದಲು ಹೃದ್ರೋಗಗಳಿಂದ ಸುರಕ್ಷಿತರಾಗಿರುತ್ತಾರೆ. ಆದರೆ ಮಧುಮೇಹಿಗಳಾದವರಿಗೆ ಈ ಸುರಕ್ಷತೆ ಇಲ್ಲ. ಹೀಗಾಗಿ ಗಂಡಸರಿಗೆ ಇದರಿಂದ ಹೃದ್ರೋಗ ಬರುವ ಸಾಧ್ಯತೆ 3 ಪಟ್ಟು ಹೆಚ್ಚಿದರೆ ಹೆಂಗಸರಿಗೆ 5 ಪಟ್ಟು ಹೆಚ್ಚುತ್ತದೆ.

ಗರ್ಭಾವಸ್ಥೆ ಮತ್ತು ಡಯಾಬಿಟೀಸ್

ಇಷ್ಟು ಮಾತ್ರವಲ್ಲ, ಯಾವ ಮಹಿಳೆಗೆ ತಾನು ಹೃದ್ರೋಗಿ ಎಂದು ತಿಳಿಯುತ್ತದೋ, ಆಕಸ್ಮಿಕವಾಗಿ ಹಾರ್ಟ್‌ ಅಟ್ಯಾಕ್‌ ಆದಾಗ, ಅದು ಗಂಡಸರಿಗಿಂತ ಹೆಂಗಸರನ್ನೇ ಹೆಚ್ಚು ಬಾಧಿಸುತ್ತದೆ. ಈ ಮಾಹಿತಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಅಧ್ಯಯನದಿಂದ ತಿಳಿದು ಬಂದುದೆಂದರೆ, ಹೆಂಗಸರಿಗೆ ಕಾರ್ಡಿಯೋ ಪ್ರೊಟೆಕ್ಟಿವ್ ‌ಔಷಧಿಗಳನ್ನು ಗಂಡಸರಿಗಿಂತ ಅತಿ ಕಡಿಮೆ ಪ್ರಮಾಣದಲ್ಲಿ ಕೊಡಲಾಗತ್ತದೆ.

ಒಬ್ಬ ಹೆಣ್ಣಿಗೆ ಪ್ರೆಗ್ನೆನ್ಸಿ ಜೀವನದ ಒಂದು ಮಹತ್ವಪೂರ್ಣ ಘಟ್ಟ. ಮುಖ್ಯವಾಗಿ ಈ ಸಂದರ್ಭದಲ್ಲಿ ಮಧುಮೇಹಿ ಅಲ್ಲದ ಹೆಣ್ಣಿಗೂ ಮಧುಮೇಹ ತಗುಲಬಹುದು. ಈ ಸ್ಥಿತಿಯನ್ನೇ ಜೆಸ್ಟೇಶನ್‌ ಅಥವಾ ಟೆಂಪರರಿ ಡಯಾಬಿಟೀಸ್‌ ಎನ್ನುತ್ತಾರೆ. 30-40% ಗರ್ಭವತಿಯರು ಇದರಿಂದ ಪ್ರಭಾವಿತರಾಗುತ್ತಾರೆ. ಇದನ್ನು ಸರಿಯಾಗಿ ನಿಯಂತ್ರಿಸದಿದ್ದರೆ, ತಾಯಿ ಕಾರಣ ಮುಂದೆ ಮಗು ಸಹ ಮಧುಮೇಹಕ್ಕೆ ತುತ್ತಾಗಬಹುದು.

ಪಾರಾಗುವುದು ಹೇಗೆ?

ಎಷ್ಟೋ ಹೆಂಗಸರಿಗೆ ಪ್ರೆಗ್ನೆನ್ಸಿಗೆ ಮೊದಲೇ ಮಧುಮೇಹ ತಗುಲಿರಬಹುದು. ಗಮನಿಸಬೇಕಾದ ಅಂಶವೆಂದರೆ ಮಧುಮೇಹಿ ಆಗಿಯೂ ಸಹ ಆಕೆ ಸುರಕ್ಷಿತ ರೀತಿಯಲ್ಲಿ ಯಶಸ್ವಿಯಾಗಿ ಪ್ರೆಗ್ನೆನ್ಸಿ ಪ್ಲಾನ್‌ ಮಾಡಬಹುದು. ಅವಿವಾಹಿತೆಗೆ ಮಧುಮೇಹ ಎಂದು ಗೊತ್ತಾದ ತಕ್ಷಣ, ಮದುವೆ ನಂತರ ಅವಳು ಗರ್ಭಿಣಿ ಆಗಲು ಸಾಧ್ಯವೋ ಇಲ್ಲವೋ ಎಂಬುದೇ ಹಿರಿಯರ ಚಿಂತೆ, ನಂತರ ಸುಸೂತ್ರ ಹೆರಿಗೆ ಕುರಿತಾದುದು. ಇದರ ಬದಲಿಗೆ ಅವಳು ಅವಿವಾಹಿತೆ ಆಗಿಯೇ ಉಳಿದರೂ ಮುಂದಿನ ಭವಿಷ್ಯ ಸುಖಕರ ಆಗುವುದೋ ಇಲ್ಲವೋ ಎಂದು ಚಿಂತಿಸಬೇಕು.

ಸಾಮಾನ್ಯಾಗಿ ಹೆಣ್ಣುಮಕ್ಕಳು ಟೈಪ್‌ 1 ಡಯಾಬಿಟೀಸ್‌ ನಿಂದ ಪ್ರಭಾವಿತರಾಗುತ್ತಾರೆ, ಇದು ಜೀವನಶೈಲಿಗೆ ಸಂಬಂಧಿಸಿದ ರೋಗವಲ್ಲ, ಬದಲಿಗೆ ಒಂದು ಆಟೋ ಇಮ್ಯೂನ್‌ ಮಿಸ್ಟೇಕ್‌ ಎನಿಸಿದೆ. ಇದರಲ್ಲಿ ಇನ್‌ ಸ್ಯುಲಿನ್‌ ಸೂಜಿ ಚುಚ್ಚುವಿಕೆ ಅನಿವಾರ್ಯ. ಮಧುಮೇಹ 2 ರೀತಿಯದು : ಟೈಪ್‌ 2 ಡಯಾಬಿಟೀಸ್‌ ಎಲ್ಲೆಲ್ಲೂ ಕಂಡುಬರುವ ಸಾಮಾನ್ಯ ರೀತಿಯದು. ಯಾವ ಕುಟುಂಬಗಳಲ್ಲಿ ಡಯಾಬಿಟೀಸ್‌, ಸ್ಥೂಲತೆ, ಸದಾ ಸುಖವಾಗಿ ತಿಂದುಂಡು ಕಾಲ ಕಳೆಯುವರೋ ಅಂಥವರಿಗೆ ಇದು ಕಟ್ಟಿಟ್ಟ ಬುತ್ತಿ. ಜೊತೆಗೆ ಹೆಂಗಸರಲ್ಲಿ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್ ಇದ್ದರೆ ಅವರು ತಕ್ಷಣ ಟೈಪ್‌ 2 ಡಯಾಬಿಟೀಸ್‌ ಗೆ ಬಲಿಯಾಗುತ್ತಾರೆ. ಈ ರೋಗ ಯಾರಿಗೆ ಯಾವಾಗ ಬೇಕಾದರೂ ತಗುಲಬಹುದು. ಸಾಮಾನ್ಯವಾಗಿ ಇದು 35ರ ನಂತರ ಶುರುವಾಗುತ್ತದೆ. ಇಲ್ಲಿ ಮೂಲಸಮಸ್ಯೆ ಇನ್‌ ಸ್ಯುಲಿನ್‌ ಉತ್ಪತ್ತಿ ಆಗದೆ ಇರುವುದು. ಇದರಿಂದ ದೇಹ ಇನ್‌ ಸುಲಿನ್‌ ನ ಕೆಲಸಗಳಿಗೆ ಅಡ್ಡಿಪಡಿಸುತ್ತದೆ. ಆರಂಭದ ಸ್ಥಿತಿಯಲ್ಲಿ ಪ್ಯಾಂಕ್ರಿಯಾಸ್‌ ಈ ಸ್ಥಿತಿ ಎದುರಿಸಲು ಹೆಚ್ಚುವರಿ ಇನ್‌ ಸ್ಯುಲಿನ್‌ ಸ್ರವಿಸಲು ಯತ್ನಿಸುತ್ತದೆ. ಈ ಕಾರಣ ಬಹಳ ದಣಿಯುವ ಇದು, ಮುಂದೆ ವಯಸ್ಸಾದಂತೆ  ಇನ್‌ ಸ್ಯುಲಿನ್‌ ಪೂರೈಸಲು ಆಗದೆ, ರಕ್ತದಲ್ಲಿ ಕ್ರಮೇಣ ಹೆಚ್ಚುವರಿ ಶುಗರ್‌ ಏರುತ್ತದೆ. ಹೀಗಾಗಿ ಇದನ್ನು ಸಕ್ಕರೆ ಕಾಯಿಲೆ ಎನ್ನುತ್ತಾರೆ.

ಟೈಪ್‌ 1 ಡಯಾಬಿಟೀಸ್‌ ಪ್ರಕರಣಗಳು ಬಹಳ ಕಡಿಮೆ ಎಂದೇ ಹೇಳಬೇಕು. 100ರಲ್ಲಿ 99 ರೋಗಿಗಳು ಟೈಪ್‌ ಆದರೆ, ಉಳಿದ ಒಬ್ಬರು ಟೈಪ್‌ ಆಗುತ್ತಾರೆ.   ಇದೊಂದು ಆಟೋ ಇಮ್ಯೂನ್‌ ಸ್ಥಿತಿಯಾಗಿದ್ದು, ಇದರಲ್ಲಿ ದೇಹದ ರೆಸಿಸ್ಟೆನ್ಸ್ ವ್ಯವಸ್ಥೆ ತನ್ನದೇ ಇನ್ ಸ್ಯುಲಿನ್‌ ಮೇಲೆ ತಿರುಗಿಬಿದ್ದು, ಪ್ಯಾಂಕ್ರಿಯಾಸ್‌ ನ್ನು ನಿಷ್ಕ್ರಿಯಗೊಳಿಸುತ್ತದೆ. ಹೀಗಾಗಿ ರೋಗಿಗೆ ಇನ್‌ ಸ್ಯುಲಿನ್‌ ಕೊರತೆ ಹೆಚ್ಚುತ್ತದೆ. ಅಂಥವರು ದಿನಕ್ಕೆ 3-4 ಸಲ ಇನ್‌ ಸ್ಯುಲಿನ್‌ ಇಂಜೆಕ್ಷನ್‌ ಚುಚ್ಚಿಕೊಳ್ಳಬೇಕು. ತಮ್ಮ ಆಹಾರದ ಮೇಲಂತೂ 4 ಪಟ್ಟು ನಿಗಾ ವಹಿಸಬೇಕು. ಇದು ಅವರ ಆಹಾರ ಕ್ರಮ, ಚಟುವಟಿಕೆ, ಮೂಡ್‌, ಸಮಯಗಳನ್ನು ಅವಲಂಬಿಸಿದೆ. ಇದನ್ನು ಸರಿಯಾಗಿ ಕಂಟ್ರೋಲ್ ಮಾಡದಿದ್ದರೆ, ರೋಗಿಯ ರಕ್ತದಲ್ಲಿ ಸಕ್ಕರೆ ಅಂಶ ಒಮ್ಮೆ ಹೆಚ್ಚು, ಒಮ್ಮೆ ಕಡಿಮೆ ಆಗಿ, ಅಪಾಯಕಾರಿ ಎನಿಸುತ್ತದೆ.

ಪ್ರೆಗ್ನೆನ್ಸಿ ಕಾರಣ 30-40% ಮಹಿಳೆಯರು ಟೆಂಪರರಿ ಡಯಾಬಿಟೀಸ್‌ ಗೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ಅವರ ದೇಹದಲ್ಲಿ ಸ್ರವಿಸಲ್ಪಡುವ ಹಾರ್ಮೋನ್ಸ್ ಇನ್‌ ಸ್ಯುಲಿನ್‌ ವಿರುದ್ಧ ಕೆಲಸ ಮಾಡುತ್ತದೆ. ಯಾರಿಗೆ ಮೊದಲೇ ಟೈಪ್‌ ಡಯಾಬಿಟೀಸ್‌ ಆಗುವ ಅಪಾಯವಿರುತ್ತದೋ, ಅಂಥವರಿಗೆ ಪ್ರೆಗ್ನೆನ್ಸಿ ಕಾರಣ ಶುಗರ್‌ ಲೆವೆಲ್ ‌ಹೆಚ್ಚಾಗುತ್ತದೆ. ಇದನ್ನೇ ಟೆಂಪರರಿ ಡಯಾಬಿಟೀಸ್ ಎನ್ನುತ್ತಾರೆ. ಇದು ಟೈಪ್‌ ಡಯಾಬಿಟೀಸ್‌ ನಂತೆಯೇ ಸತಾಯಿಸುತ್ತದೆ.

ಅಷ್ಟು ಮಾತ್ರವಲ್ಲ, ಇಂಥ ಜೆಸ್ಟೇಶನ್‌ ಡಯಾಬಿಟೀಸ್‌ ಗೆ ಬಲಿಯಾಗುವ ತಾಯಂದಿರ ಮಕ್ಕಳಿಗೆ ಮುಂದೆ ಭವಿಷ್ಯದಲ್ಲಿ ಟೈಪ್ ಡಯಾಬಿಟೀಸ್‌ ತಪ್ಪಿದ್ದಲ್ಲ. ಅದರಲ್ಲೂ ಹುಟ್ಟಿದ ಮಗುವಿನ ತೂಕ ಹೆಚ್ಚಿದ್ದರೆ ಆತಂಕ ಇನ್ನೂ ಜಾಸ್ತಿ. ಅದೇ ರೀತಿ ಗರ್ಭವತಿ ಅಪೌಷ್ಟಿಕ ಆಹಾರ ಸೇವಿಸಿ, ಹುಟ್ಟಿದ ಮಗುವಿನ ತೂಕ ತೀರಾ ಕಡಿಮೆ ಇದ್ದರೂ ಈ ತೊಂದರೆ ತಪ್ಪಿದ್ದಲ್ಲ.

ಮನೆ ನಡೆಸುವ ಕೇಂದ್ರ ವ್ಯಕ್ತಿ ಗೃಹಿಣಿಯೇ ಆಗಿರುವುದರಿಂದ, ಡಯಾಬಿಟೀಸ್‌ ಕುರಿತು ಆಕೆ ಹೆಚ್ಚು ತಿಳಿದುಕೊಂಡಿರಬೇಕು. ಅವಳನ್ನು ಸುಶಿಕ್ಷಿತಳಾಗಿಸಿ, ಇಡೀ ರಾಷ್ಟ್ರವನ್ನು ಡಯಾಬಿಟೀಸ್‌ ಮುಕ್ತಗೊಳಿಸುವುದು ನಮ್ಮೆಲ್ಲರ ಕರ್ತವ್ಯ.

ಡಾ. ವೀಣಾ ಮೂರ್ತಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ