ಸಾಮಾನ್ಯವಾಗಿ ಗೌರವರ್ಣದವರೇ ಎಲ್ಲೆಡೆ ಸೌಂದರ್ಯವತಿ, ಬ್ಯೂಟಿ ಎಂದು ಖ್ಯಾತಿ ಪಡೆಯುತ್ತಾರೆ. ಆದರೆ ಇಂದಿನ ಆಧುನಿಕ ಕಾಲದಲ್ಲಿ ಬಣ್ಣಕ್ಕಿಂತಲೂ ಮುಖ್ಯವಾದುದು ಫ್ಯಾಷನ್‌ ಸೆನ್ಸ್, ಸ್ಮಾರ್ಟ್‌ ನೆಸ್‌, ಕಾನ್ಛಿಡೆನ್ಸ್ ಹಾಗೂ ಮೇಕಪ್‌ ಸ್ಟೈಲ್‌. ನಿಮ್ಮದು ಡಸ್ಕಿ ಸ್ಕಿನ್‌ ಆಗಿದ್ದರೆ, ನಿಮ್ಮಲ್ಲಿನ ಇತರ ವಿಶೇಷ ಟ್ಯಾಲೆಂಟ್ಸ್ ಕಡೆ ಗಮನಹರಿಸಿ. ಇದೀಗ ವ್ಯಾಲೆಂಟೈನ್‌ ಬಂದಿದೆ, ನಿಮ್ಮದು ಡಸ್ಕಿ ಸ್ಕಿನ್‌ ಎಂದು ಬೇಸರಿಸಿಕೊಳ್ಳದೆ ಈ ಪಾರ್ಟಿಯನ್ನು ಸಂಭ್ರಮಿಸಲು ಹೀಗೆ ಸಿದ್ಧರಾಗಿ.

ಸ್ಮಾರ್ಟ್ಕಾನ್ಛಿಡೆಂಟ್ಬೋಲ್ಡ್ ಆಗಿರಿ : ನಿಮ್ಮ ವ್ಯಕ್ತಿತ್ವದಲ್ಲಿ ಬೋಲ್ಡ್ ನೆಸ್‌ಸ್ಮಾರ್ಟ್‌ ನೆಸ್‌ ಬರುವಂತೆ ಮಾಡಿ. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿ ಮುನ್ನುಗ್ಗಲು ಹಿಂಜರಿಯಬೇಡಿ. ಎಲ್ಲಾ ತರಹದ ಸವಾಲುಗಳನ್ನೂ ಸ್ವೀಕರಿಸಿ. ನಿಮ್ಮ ಕೋಣೆಯಲ್ಲಿ ಸದಾ ಅಡಗಿರುವ ಬದಲು, ಮುನ್ನುಗ್ಗಿ ನೇತೃತ್ವ ವಹಿಸಲು ರೆಡಿಯಾಗಿರಿ. ಯಾರೂ ತಾವಾಗಿ ಬಂದು ನಿಮ್ಮನ್ನು ಜೀವನದಲ್ಲಿ ಮುಂದೆ ಬನ್ನಿ ಎಂದು ಆಹ್ವಾನಿಸುವುದಿಲ್ಲ. ನಿಮ್ಮನ್ನು ಎಷ್ಟು ಸಮರ್ಥರಾಗಿಸಿಕೊಳ್ಳಬೇಕೆಂದರೆ, ಪ್ರತಿಯೊಂದು ಮಹತ್ವಪೂರ್ಣ ಕೆಲಸಕ್ಕೂ ಜನ ನಿಮ್ಮನ್ನೇ ಹುಡುಕಿಕೊಂಡು ಬರುವಂತಾಗಬೇಕು.

ಕಂಗಳನ್ನು ನೇರವಾಗಿ ದಿಟ್ಟಿಸಿ ಮಾತನಾಡಿ : ಯಾರೇ ಇರಲಿ, ಅವರನ್ನು ನೇರವಾಗಿ ದಿಟ್ಟಿಸಿ ಮಾತನಾಡಿ. ಅಲ್ಲಿ ಇಲ್ಲಿ ನೋಡುತ್ತಾ ಮಾತನಾಡುವವರನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ನೋಟ ತಗ್ಗಿಸಿ ನೆಲ ನೋಡುತ್ತಾ ಮಾತನಾಡಿದರೆ ನೀವು ಹಿಂದುಳಿಯುವುದು ಖಂಡಿತಾ. ಸದಾ ನೋಟ ಮುಂದಿರಿಸಿ ಪೂರ್ತಿ ಆತ್ಮವಿಶ್ವಾಸದಿಂದ ಮಾತನಾಡಿ.

ಬೇರೆಯರೊಂದಿಗೆ ನಿಮ್ಮನ್ನು ಹೋಲಿಸದಿರಿ : ಇತರರನ್ನು ಹೋಲಿಸಿ ನೋಡಿಕೊಳ್ಳುವ ಗುಣ ನಿಮ್ಮ ನಂಬಿಕೆಯನ್ನೇ ಅಲುಗಿಸಬಹುದು. ನೀವು ನಿಮ್ಮ ಪ್ಲಸ್‌ ಪಾಯಿಂಟ್ಸ್ ಗುರುತಿಸಿ. ಬೇರೆಯವರು ನಿಮಗಿಂತ ಬೆಟರ್‌ ಎಂಬ ಕೀಳರಿಮೆ ಬೇಡ.  ನಿಮ್ಮನ್ನು ನೀವು ದುರ್ಬಲರೆಂದು ಎಂದೂ ತಿಳಿಯಬೇಡಿ. ಖಂಡಿತಾ ಯಶಸ್ಸು ನನ್ನದೇ ಎಂಬ ಆತ್ಮವಿಶ್ವಾಸದೊಡನೆ ಮುಂದುರಿಯಿರಿ.

ಭಯದ ಮೇಲೆ ವಿಜಯ ಹೊಂದಿರಿ : ಯಾವುದರಿಂದ ನಿಮಗೆ ಭಯ ಎನಿಸುತ್ತದೋ, ಅದನ್ನೇ ಮತ್ತೆ ಮತ್ತೆ ಮಾಡಿ ನೋಡಿ, ಆ ಭಯದಿಂದ ಹೊರಬನ್ನಿ. ಅದಕ್ಕಂಜಿ ಹಿಂದೆ ಉಳಿಯಬೇಡಿ. ಕೆಲವರಿಗೆ ವೇದಿಕೆ ಏರಿ ಮಾತನಾಡಲಿಕ್ಕೂ ಹೆದರಿಕೆ, ಸಭಾಕಂಪನ ಅವರನ್ನು ನಡುಗಿಸುತ್ತದೆ. ಅದೇ ತರಹ ಕೆಲವರಿಗೆ ಈಜು, ಅತಿ ಎತ್ತರ ಹೋಗಲು, ಒಬ್ಬಂಟಿ ಪ್ರಯಾಣ, ಪ್ರೆಸೆಂಟೇಶನ್‌ ನೀಡುವುದು ಇತ್ಯಾದಿ. ಹೀಗಾಗಿ ನೀವು ಈ ಭಯವನ್ನು ಗೆಲ್ಲಲೇಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆಗ ನೀವು ಹೆಚ್ಚು ಬೋಲ್ಡ್ ಕಾನ್ಛಿಡೆಂಟ್‌ ಆಗುವಿರಿ.

ನಿಮ್ಮ ಸ್ಟ್ರೆಂತ್ಮೇಲೆ ಫೋಕಸ್ಮಾಡಿ : ಜೀವನ ಪ್ರತಿಯೊಬ್ಬರಿಗೂ ಏನಾದರೊಂದು ಸ್ಟೈಲ್, ಟ್ಯಾಲೆಂಟ್‌ ಕೊಟ್ಟಿರುತ್ತದೆ. ಯಾರೋ ಬ್ಯೂಟಿಫುಲ್ ಆದರೆ, ಇನ್ನಾರೋ ಉತ್ತಮ ಗಾಯಕರು, ಕೆಲವರ ತಾರ್ಕಿಕ ಸಾಮರ್ಥ್ಯ ಉತ್ತಮವಾಗಿದ್ದರೆ, ಇನ್ನೂ ಕೆಲವರು ಉತ್ತಮ ನೃತ್ಯಪಟು, ಕೆಲವರು ಬರವಣಿಗೆಯಲ್ಲಿ ಗಟ್ಟಿಗರಾದರೆ ಹಲವರು ನಟನೆಯಲ್ಲಿ. ನಿಮ್ಮ ಬಣ್ಣ ಕಪ್ಪು ಎಂಬ ಕಾರಣಕ್ಕೆ ಹಿಂಜರಿಯುತ್ತಾ ಕೂರುವ ಬದಲು ನಿಮ್ಮ ಇಂಥ ವಿಶೇಷ ಪ್ರತಿಭೆ ಗುರುತಿಸಿಕೊಳ್ಳಿ. ನಿಮ್ಮಲ್ಲಿನ ಈ ಪ್ರತಿಭೆ ಬೇರೆಯವರಲ್ಲಿ ಇಲ್ಲದಿರಬಹುದು. ನಿಮ್ಮ ಸ್ಮಾರ್ಟ್‌ ನೆಸ್‌, ಸಾಮರ್ಥ್ಯ, ಉತ್ತಮ ವ್ಯವಹಾರಗಳಿಂದ ಬೇರೆಯವರ ಎದುರಿಗೆ ಶೈನ್ ಆಗಿ.

ಆಂತರಿಕ ಸೌಂದರ್ಯ ಗುರುತಿಸಿ : ನೀವು ಸ್ಮಾರ್ಟ್‌ಬ್ಯೂಟಿ ಎನಿಸಲು ನಿಮ್ಮ ಆಂತರಿಕ ಸೌಂದರ್ಯ ಗುರುತಿಸಿಕೊಂಡು ಇತರರಿಗಿಂತ ಬೆಟರ್‌ ಎನಿಸಿ. ಮನಸ್ಸಿನಲ್ಲಿ ಸದಾ ದುಃಖ, ಹೀನಭಾವನೆ, ಸಂತಾಪ, ಈರ್ಷ್ಯೆ, ದ್ವೇಷದ ಭಾವನೆಗಳಿದ್ದರೆ ಅದು ಮುಖದಲ್ಲಿ ತುಳುಕುವುದರಿಂದ ನಿಮ್ಮ ಇರುವ ಅಂದ ಕೆಡುತ್ತದೆ. ಮನಸ್ಸಿನ ಸ್ಥಿತಿ ಮುಖದ ಕಾಂತಿಗೆ ಪೂರಕ. ನಿಮ್ಮ ಶ್ಯಾಮಲ ಮುಖ ಆರೋಗ್ಯಕರವಾಗಿ, ಕಳೆಯಿಂದ ಕೂಡಿದ್ದರೆ, ಆ ಮುಖದ ಸೊಗಸೇ ಬೇರೆ! ಬೆಳ್ಳಗಿದ್ದರೇನು… ಮೊಡವೆ ಇದ್ದರೆ ಲಾಭವಿಲ್ಲ.

ಗತಕಾಲದ ಯಶಸ್ಸು ನೆನಪಿಸಿಕೊಳ್ಳಿ : ನಿಮಗೆ ಜೀವನದಲ್ಲಿ ಹಿಂದೆ ಯಾವಾಗ ಯಶಸ್ಸು ಸಿಕ್ಕಿದ್ದರೂ, ಆ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಿ. ಇದರಿಂದ ಮನಸ್ಸಿಗೆ ಸ್ಛೂರ್ತಿ, ಸಕಾರಾತ್ಮಕತೆ, ಉತ್ಸಾಹಗಳು ತುಂಬುತ್ತವೆ. ನಿಮ್ಮ ಆಂತರ್ಯದಲ್ಲಿ ಸದಾ ಆತ್ಮವಿಶ್ವಾಸದ ಜ್ಯೋತಿ ಬೆಳಗುತ್ತಿರಲಿ.

ಸ್ಟೈಲಿಶ್ಆಗಿ ಕಾಣಿಸಿಕೊಳ್ಳಿ

IB127031-127031145550713-SM112402

ಉಡುಗೆ ತೊಡುವ ವಿಧಾನ : ವ್ಯಕ್ತಿತ್ವವನ್ನು ಆಕರ್ಷಕವಾಗಿ ತೋರಿಸುವಲ್ಲಿ ಉಡುಗೆಗೆ ತನ್ನದೇ ಆದ ಸ್ಥಾನವಿದೆ. ಉಡುಗೆಯ ಬಣ್ಣ, ಪ್ಯಾಟರ್ನ್‌, ಫ್ಯಾಬ್ರಿಕ್‌ ಮತ್ತು ಸ್ಟೈಲ್ ನಿಮಗೆ ಪರ್ಫೆಕ್ಟ್ ಸೂಟ್‌ ಆಗಿ ಸ್ಮಾರ್ಟ್‌ ಲುಕ್‌ ನೀಡುವಂತಿರಬೇಕು. ನಿಮಗಾಗಿ ಉಡುಗೆ ಆರಿಸುವಾಗ, ಕೆಲವು ವಿಶೇಷ ಅಂಶಗಳತ್ತ ಗಮನಕೊಡಿ. ಅತಿ ಹೊಳೆಯುವ ಬಣ್ಣಗಳ ಶೇಡ್‌, ಯೆಲ್ಲೋ, ಆರೆಂಜ್‌, ನಿಯಾನ್‌ ಮುಂತಾದ ಬಣ್ಣ ಬೇಡ. ಈ ಡ್ಯಾಶಿಂಗ್‌ ಬಣ್ಣಗಳು ಶ್ಯಾಮಲ ಸೌಂದರ್ಯಕ್ಕೆ ಪೂರಕವಲ್ಲ. ಲೈಟ್‌ ಆಗಿರುವ, ಚರ್ಮಕ್ಕೆ ಹೊಂದುವ ಬಣ್ಣ ನಿಮಗೆ ಹೆಚ್ಚು ಹೊಂದುತ್ತದೆ. ನೀವು ಪ್ಲಮ್, ಬ್ರೌನ್‌, ಲೈಟ್‌ ಪಿಂಕ್‌, ರೆಡ್‌ ನಂಥ ಕಲರ್ಸ್‌ ಟ್ರೈ ಮಾಡಿ. ಫಾರ್ಮಲ್ ಲುಕ್ಸ್ ಕುರಿತ ವಿಷಯವೆಂದರೆ ಬೇಜ್‌ ಬಣ್ಣದ ಸಿಂಪಲ್ ಶಾರ್ಟ್‌ ಡ್ರೆಸ್‌ ಧರಿಸಿ. ಇದರಲ್ಲಿ ಲೈಟ್‌ ಪ್ರಿಂಟ್ಸ್ ಇದ್ದರೆ ಲೇಸು. ಇಂಥ ಶಾರ್ಟ್‌ ಡ್ರೆಸೆಸ್‌ ಜೊತೆ ಹೈ ಹೀಲ್ಸ್, ಸ್ಮಾರ್ಟ್‌ ವಾಚ್‌, ಕೋಟ್‌ ಧರಿಸಿ ಆಫೀಸ್‌ ಲುಕ್‌ ಕ್ಯಾರಿ ಮಾಡಿ. ಸಾಲ್ಮನ್‌ಪಿಂಕ್‌ ಕಲರ್‌ ನ ಪ್ರಾಪರ್‌ ಫಾರ್ಮಲ್ ಔಟ್‌ ಫಿಟ್‌ ಬಲು ಸಾಲಿಡ್‌ ಎನಿಸುತ್ತದೆ.

ಡ್ರೆಸ್ಸಿಂಗ್ಸ್ಟೈಲ್ಸ್ 

ನೀವು ಡೆನಿಂ ಡ್ರೆಸೆಸ್‌ ಧರಿಸಿರಿ. ಅಂದ್ರೆ ಡೆನಿಂ ಜೀನ್ಸ್, ಪ್ಲಾಜೋ, ಡೆನಿಂ ಶರ್ಟ್‌ ಇತ್ಯಾದಿ. ಇವೆಲ್ಲದರ ಕಾಂಬೋ ಬೆಸ್ಟ್ ಎನಿಸುತ್ತವೆ.

ನೀವು ನಿಮ್ಮ ಉಡುಗೆಗಳ ಫ್ಯಾಬ್ರಿಕ್‌ ಜೊತೆ ಆಟವಾಡುತ್ತವೆ ಫ್ಯಾಬುಲಸ್‌ ಲುಕ್ಸ್ ಹೊಂದಬಹುದು. ನೀವು ಒಂದು ಬ್ಲ್ಯಾಕ್‌

ಕಲರ್‌ ನ ಶಾರ್ಟ್‌ ಡ್ರೆಸ್‌ ಧರಿಸುತ್ತಿರುವಿರಾದರೆ, ಅದರಲ್ಲಿ ನೆಟ್‌, ಶಿಫಾನ್‌ ಮುಂತಾದ ಫ್ಯಾಬ್ರಿಕ್ಸ್ ಒಳಗೊಂಡಿದ್ದರೆ, ಇದು ನಿಮ್ಮ ಲುಕ್ಸ್ ಸುಧಾರಿಸಲು ನೆರವಾಗುತ್ತದೆ.

ಬ್ಲಿಂಗಿ ಗೋಲ್ಡ್ ನಿಮಗೆ ಸಾಕಷ್ಟು ಸುಪರ್ಬ್‌ ಎನಿಸುತ್ತದೆ. ನೀವು ಗೌನ್‌ ಧರಿಸ ಬಯಸಿದರೆ, ನೀವು ರೆಡ್‌ ಕಲರ್‌ ನ ಫ್ಲೋರ್‌ ಲೆಂಥ್‌ ನ ಗೌನ್‌ ಧರಿಸಬಹುದು. ಆಫ್‌ ಶೋಲ್ಡರ್ಡ್‌, ಶೋಲ್ಡರ್‌ ಲೆಸ್‌, ಸಿಂಗಲ್ ಶೋಲ್ಡರ್ಡ್‌ ಗೌನ್‌ ನಿಮಗೆ ಚೆನ್ನಾಗಿ ಸೂಟ್ ಆಗುತ್ತದೆ.

ಫಾರ್ಮಲ್ಸ್ ಡ್ರೆಸೆಸ್‌ ವಿಷಯ ಎಂದಾಗ, ನಿಮಗಾಗಿ ಬಹಳಷ್ಟು ವೆರೈಟಿಗಳಿವೆ. ಇದನ್ನು ಧಾರಾಳವಾಗಿ ಆಫೀಸಿಗೂ ಧರಿಸಬಹುದು. ಹೈ ವೆಯ್ಸ್ಟ್ ಜೀನ್ಸ್ ನ್ನು ನೀವು ಸಾಲಿಡ್‌ ಟ್ವಿಸ್ಟ್ ಟಾಪ್‌ ಜೊತೆ ಧರಿಸಬಹುದು. ಈ ತರಹದ ಲುಕ್ಸ್ ಗಾಗಿ ನೀವು ಕೂದಲನ್ನು ಓಪನ್‌ ಬಿಡದೆ, ಕಟ್ಟಿಡುವುದೇ ಒಳ್ಳೆಯದು.

ಡಸ್ಕಿ ಸ್ಕಿನ್ಗಾಗಿ ಮೇಕಪ್

ಬ್ಯೂಟಿಫುಲ್ ಆಗಿ ಕಂಡುಬರಲು ಎಲ್ಲಕ್ಕೂ ಮುಖ್ಯವೆಂದರೆ ಸ್ವಸ್ಥ, ಹೊಳೆಯುವ ಚರ್ಮವೇ ಹೊರತು ಗೌರವರ್ಣವಲ್ಲ. ಹೊಳೆಯುವ ಚರ್ಮಕ್ಕಾಗಿ ಸ್ವಸ್ಥ ಜೀವನಶೈಲಿ, ಊಟ ತಿಂಡಿ, ಉತ್ತಮ ಆರೋಗ್ಯ, ಪೂರ್ತಿ ನಿದ್ದೆ, ಮನಶ್ಶಾಂತಿ ಅತ್ಯಗತ್ಯ. ಚರ್ಮ ಪ್ರಾಕೃತಿಕವಾಗಿಯೇ ಹೊಳೆಯುತ್ತಿದ್ದರೆ, ಕನಿಷ್ಠ ಮೇಕಪ್‌ ನಲ್ಲಿ ನೀವು ಇನ್ನೂ ಆಕರ್ಷಕವಾಗಿ ಕಂಡುಬರುವಿರಿ.

ಎಲ್ಲಕ್ಕೂ ಮೊದಲು ನಿಮ್ಮ ಮುಖದಲ್ಲಿ ಅನಗತ್ಯ ಕೂದಲು ಇರಬಾರದು ಎಂಬುದನ್ನು ಗಮನಿಸಿ. ಐಬ್ರೋಸ್‌, ಅಪ್ಪರ್‌ ಲಿಪ್ಸ್, ಲೋಯರ್‌ ಲಿಪ್ಸ್, ಫೋರ್‌ ಹೆಡ್‌, ಚೀಕ್‌ ಬೋನ್‌ ಮುಂತಾದೆಡೆ ಅನಗತ್ಯ ಕೂದಲು ಮೂಡದಂತೆ ನೋಡಿಕೊಳ್ಳಿ. ಅಗತ್ಯವೆನಿಸಿದರೆ ಅವನ್ನು ಕನ್ಸೀಲ್ ‌ಮಾಡಿಡಿ. ಆಗ ನಿಮ್ಮ ಲುಕ್ಸ್ ಎದ್ದು ಕಾಣುತ್ತವೆ.

ಈಗ ಮೇಕಪ್‌ ಶುರು ಮಾಡಿ. ಸ್ಕಿನ್‌ ಟೋನ್‌ ಜೊತೆ ಸ್ಕಿನ್‌ ಟೆಕ್ಸ್ ಚರ್‌ ಸಹ ಗಮನಿಸಿಕೊಳ್ಳಿ. ಒಂದು ಉತ್ತಮ ಪ್ರೈಮರ್‌ ನಿಂದ ಆರಂಭಿಸಿ. ಚರ್ಮದಲ್ಲಿ ಡ್ರೈನೆಸ್‌, ಪ್ಯಾಚಿನೆಸ್‌, ಅನ್‌ ಈವೆನ್‌ ನೆಸ್‌ ಇದ್ದರೆ ಉತ್ತಮ ಬ್ಯೂಟಿ ಬಾಮ್ ಬಳಸಿರಿ.

ಪ್ರೈಮರ್‌ ನಂತರ ಫೌಂಡೇಶನ್‌ ಹಚ್ಚಿರಿ. ಸ್ಕಿನ್‌ ಟೈಪ್‌ ಮತ್ತು ಅಗತ್ಯಕ್ಕೆ ತಕ್ಕಂತೆ ಫೌಂಡೇಶನ್‌ ಗ್ಲಾಸಿ, ಜೆಲ್ ‌ಬೇಸ್ಡ್ ಯಾ ಸಿಲಿಕಾನ್‌ ಬೇಸ್ಡ್ ತೆಗೆದುಕೊಳ್ಳಿ. ಫೌಂಡೇಶನ್‌ ಸೇಮ್ ಸ್ಕಿನ್‌ ಟೋನ್‌ ದೇ ಆಗಿರಲಿ. ಡಸ್ಕಿ ಸ್ಕಿನ್‌ ಮೇಲೆ ಸ್ವಲ್ಪ ಫೇರ್‌ ಟೋನ್‌ ನ ಫೌಂಡೇಶನ್‌ ಬಳಸಿದರೂ ಸ್ಕಿನ್‌ ಚೋಕ್ಡ್  ಲೈಟ್‌ ಎಂದೆನಿಸುತ್ತದೆ.

ಡಸ್ಕಿ ಸ್ಕಿನ್‌ ಮೇಕಪ್‌ ನಲ್ಲಿ ಕಂಟೂರಿಂಗ್‌ ಸಹ ಎಲ್ಲಕ್ಕೂ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ನಿಮ್ಮ ಮುಖದ ಉಬ್ಬಿದ ಭಾಗಗಳನ್ನು ಹೈಲೈಟ್‌ ಮಾಡಿ, ಅಲ್ಲಲ್ಲಿ ಹಳ್ಳವಾಗಿದ್ದರೆ ತುಂಬಿಸಿ. ಇದರಿಂದ ಚರ್ಮ ಈವೆನ್‌ಅಟ್ರಾಕ್ಟಿವ್ ‌ಆಗಿರುತ್ತದೆ.

ಬೇಸ್‌, ಫೌಂಡೇಶನ್‌, ಕಂಟೂರಿಂಗ್‌ ಮತ್ತು ಬ್ಲಶ್‌ ಆನ್‌ ನಂತರ ಲಿಪ್‌ ಮೇಕಪ್‌ ಮಾಡಿ. ಡಸ್ಕಿ ಸ್ಕಿನ್‌ ನಲ್ಲಿ ಲಿಪ್‌ ಮೇಕಪ್‌ ಗಾಗಿ ಬ್ರೌನ್‌, ಮೆರೂನ್‌, ರೆಡ್‌ ಮತ್ತು ಚೆರ್ರಿ ರೆಡ್‌ ನಂಥ ಅರ್ಥಿ ಕಲರ್ಸ್‌ ಯಾ ಕೋರ್‌ ಕಲರ್ಸ್‌ ಬಳಸಿರಿ.

ನಿಮ್ಮ ಕಂಗಳ ಮೇಕಪ್‌ ಕಡೆ ವಿಶೇಷ ಗಮನ ಕೊಡಿ. ಏಕೆಂದರೆ ಅಂದದ ಕಂಗಳು ಶ್ಯಾಮಲ ತರುಣಿಯ ಮುಖಕ್ಕೆ ವಿಭಿನ್ನ ಆಕರ್ಷಣೆ ಒದಗಿಸುತ್ತದೆ. ಸ್ಮೋಕಿ ಐಸ್‌ ಗಾಗಿ ಬ್ಲ್ಯಾಕ್‌ ಬಳಸಬೇಡಿ. ಬದಲಿಗೆ ವೈನ್‌ ಸ್ಮೋಕ್‌, ಬ್ರೌನ್‌ ಸ್ಮೋಕ್‌, ಗ್ರೇ ಸ್ಮೋಕ್ ನಂಥ ಆಪ್ಶನ್ಸ್ ಹಾಗೂ ಕೋರಲ್ ಕಲರ್ಸ್‌ ಟ್ರೈ ಮಾಡಿ ನೋಡಿ. ಫೇಕ್‌ ಐ ಲ್ಯಾಶೆಸ್‌ ಸಹ ಬ್ಯೂಟಿಫುಲ್ ಇಂಡಿಯನ್‌ ಲುಕ್ಸ್ ಗಾಗಿ ಟ್ರೈ ಮಾಡಿ ನೋಡಿ….

ಹ್ಯಾಪಿ ವ್ಯಾಲೆಂಟೈನ್‌ ಡೇ!

ಜಿ. ರಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ