T-20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡಕ್ಕೆ ಐಸಿಸಿ (ICC) ಬರೋಬ್ಬರಿ ₹27.48 ಕೋಟಿ (30 ಲಕ್ಷ ಡಾಲರ್) ನಗದು ಬಹುಮಾನ ಘೋಷಿಸಿದೆ.

ಅಹಮದಾಬಾದ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 255 ರನ್ ಸಿಡಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 159 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಯಾರಿಗೆ ಎಷ್ಟು ಕೋಟಿ ?

ಐಸಿಸಿ ಈ ಬಾರಿ ಬಹುಮಾನದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ್ದು, ಕೇವಲ ವಿಜೇತ ತಂಡಕ್ಕೆ ಮಾತ್ರವಲ್ಲದೆ ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಬಂಪರ್ ಮೊತ್ತ ದೊರೆತಿದೆ.

ವಿಜೇತ ತಂಡ ಭಾರತಕ್ಕೆ 30,00,000 ಡಾಲರ್  (₹27.48 ಕೋಟಿ) , ರನ್ನರ್ ಅಪ್ ನ್ಯೂಜಿಲೆಂಡ್​ಗೆ 16,00,000 ಡಾಲರ್ (₹14.65 ಕೋಟಿ), ಸೆಮಿಫೈನಲಿಸ್ಟ್‌ಗಳು 7,90,000 ಡಾಲರ್ (₹7.24 ಕೋಟಿ), ಸೂಪರ್ 8 ತಂಡಗಳು 3,80,000 ಡಾಲರ್ (₹3.48 ಕೋಟಿ), ಗ್ರೂಪ್ ಹಂತದ ತಂಡಗಳು 2,50,000 ಡಾಲರ್ (₹2.29 ಕೋಟಿ) ಬಹುಮಾನದ ಮೊತ್ತ ನೀಡಲಾಗುತ್ತದೆ.

ಸಂಘಟಿತ ಪ್ರದರ್ಶನ: ಭಾರತ ತಂಡವು ಈ ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದು ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ದಾಖಲೆಯ 255 ರನ್ ಕಲೆಹಾಕಿತ್ತು. ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ಅವರ ಮಾರಕ ದಾಳಿಗೆ ಕಿವಿ ಪಡೆ ಶರಣಾಯಿತು.

ಸತತ ಎರಡು ಬಾರಿ T-20 ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ, ಈಗ ಹಣಕಾಸಿನ ವಿಷಯದಲ್ಲೂ ವಿಶ್ವ ಕ್ರಿಕೆಟ್‌ನ ಶ್ರೀಮಂತ ತಂಡವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ