ಸಾಮಾನ್ಯವಾಗಿ ಗೌರವರ್ಣದವರೇ ಎಲ್ಲೆಡೆ ಸೌಂದರ್ಯವತಿ, ಬ್ಯೂಟಿ ಎಂದು ಖ್ಯಾತಿ ಪಡೆಯುತ್ತಾರೆ. ಆದರೆ ಇಂದಿನ ಆಧುನಿಕ ಕಾಲದಲ್ಲಿ ಬಣ್ಣಕ್ಕಿಂತಲೂ ಮುಖ್ಯವಾದುದು ಫ್ಯಾಷನ್ ಸೆನ್ಸ್, ಸ್ಮಾರ್ಟ್ ನೆಸ್, ಕಾನ್ಛಿಡೆನ್ಸ್ ಹಾಗೂ ಮೇಕಪ್ ಸ್ಟೈಲ್. ನಿಮ್ಮದು ಡಸ್ಕಿ ಸ್ಕಿನ್ ಆಗಿದ್ದರೆ, ನಿಮ್ಮಲ್ಲಿನ ಇತರ ವಿಶೇಷ ಟ್ಯಾಲೆಂಟ್ಸ್ ಕಡೆ ಗಮನಹರಿಸಿ. ಇದೀಗ ವ್ಯಾಲೆಂಟೈನ್ ಬಂದಿದೆ, ನಿಮ್ಮದು ಡಸ್ಕಿ ಸ್ಕಿನ್ ಎಂದು ಬೇಸರಿಸಿಕೊಳ್ಳದೆ ಈ ಪಾರ್ಟಿಯನ್ನು ಸಂಭ್ರಮಿಸಲು ಹೀಗೆ ಸಿದ್ಧರಾಗಿ.
ಸ್ಮಾರ್ಟ್ ಕಾನ್ಛಿಡೆಂಟ್ ಬೋಲ್ಡ್ ಆಗಿರಿ : ನಿಮ್ಮ ವ್ಯಕ್ತಿತ್ವದಲ್ಲಿ ಬೋಲ್ಡ್ ನೆಸ್‌ಸ್ಮಾರ್ಟ್ ನೆಸ್ ಬರುವಂತೆ ಮಾಡಿ. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿ ಮುನ್ನುಗ್ಗಲು ಹಿಂಜರಿಯಬೇಡಿ. ಎಲ್ಲಾ ತರಹದ ಸವಾಲುಗಳನ್ನೂ ಸ್ವೀಕರಿಸಿ. ನಿಮ್ಮ ಕೋಣೆಯಲ್ಲಿ ಸದಾ ಅಡಗಿರುವ ಬದಲು, ಮುನ್ನುಗ್ಗಿ ನೇತೃತ್ವ ವಹಿಸಲು ರೆಡಿಯಾಗಿರಿ. ಯಾರೂ ತಾವಾಗಿ ಬಂದು ನಿಮ್ಮನ್ನು ಜೀವನದಲ್ಲಿ ಮುಂದೆ ಬನ್ನಿ ಎಂದು ಆಹ್ವಾನಿಸುವುದಿಲ್ಲ. ನಿಮ್ಮನ್ನು ಎಷ್ಟು ಸಮರ್ಥರಾಗಿಸಿಕೊಳ್ಳಬೇಕೆಂದರೆ, ಪ್ರತಿಯೊಂದು ಮಹತ್ವಪೂರ್ಣ ಕೆಲಸಕ್ಕೂ ಜನ ನಿಮ್ಮನ್ನೇ ಹುಡುಕಿಕೊಂಡು ಬರುವಂತಾಗಬೇಕು.
ಕಂಗಳನ್ನು ನೇರವಾಗಿ ದಿಟ್ಟಿಸಿ ಮಾತನಾಡಿ : ಯಾರೇ ಇರಲಿ, ಅವರನ್ನು ನೇರವಾಗಿ ದಿಟ್ಟಿಸಿ ಮಾತನಾಡಿ. ಅಲ್ಲಿ ಇಲ್ಲಿ ನೋಡುತ್ತಾ ಮಾತನಾಡುವವರನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ನೋಟ ತಗ್ಗಿಸಿ ನೆಲ ನೋಡುತ್ತಾ ಮಾತನಾಡಿದರೆ ನೀವು ಹಿಂದುಳಿಯುವುದು ಖಂಡಿತಾ. ಸದಾ ನೋಟ ಮುಂದಿರಿಸಿ ಪೂರ್ತಿ ಆತ್ಮವಿಶ್ವಾಸದಿಂದ ಮಾತನಾಡಿ.
ಬೇರೆಯರೊಂದಿಗೆ ನಿಮ್ಮನ್ನು ಹೋಲಿಸದಿರಿ : ಇತರರನ್ನು ಹೋಲಿಸಿ ನೋಡಿಕೊಳ್ಳುವ ಗುಣ ನಿಮ್ಮ ನಂಬಿಕೆಯನ್ನೇ ಅಲುಗಿಸಬಹುದು. ನೀವು ನಿಮ್ಮ ಪ್ಲಸ್ ಪಾಯಿಂಟ್ಸ್ ಗುರುತಿಸಿ. ಬೇರೆಯವರು ನಿಮಗಿಂತ ಬೆಟರ್ ಎಂಬ ಕೀಳರಿಮೆ ಬೇಡ. ನಿಮ್ಮನ್ನು ನೀವು ದುರ್ಬಲರೆಂದು ಎಂದೂ ತಿಳಿಯಬೇಡಿ. ಖಂಡಿತಾ ಯಶಸ್ಸು ನನ್ನದೇ ಎಂಬ ಆತ್ಮವಿಶ್ವಾಸದೊಡನೆ ಮುಂದುರಿಯಿರಿ.
ಭಯದ ಮೇಲೆ ವಿಜಯ ಹೊಂದಿರಿ : ಯಾವುದರಿಂದ ನಿಮಗೆ ಭಯ ಎನಿಸುತ್ತದೋ, ಅದನ್ನೇ ಮತ್ತೆ ಮತ್ತೆ ಮಾಡಿ ನೋಡಿ, ಆ ಭಯದಿಂದ ಹೊರಬನ್ನಿ. ಅದಕ್ಕಂಜಿ ಹಿಂದೆ ಉಳಿಯಬೇಡಿ. ಕೆಲವರಿಗೆ ವೇದಿಕೆ ಏರಿ ಮಾತನಾಡಲಿಕ್ಕೂ ಹೆದರಿಕೆ, ಸಭಾಕಂಪನ ಅವರನ್ನು ನಡುಗಿಸುತ್ತದೆ. ಅದೇ ತರಹ ಕೆಲವರಿಗೆ ಈಜು, ಅತಿ ಎತ್ತರ ಹೋಗಲು, ಒಬ್ಬಂಟಿ ಪ್ರಯಾಣ, ಪ್ರೆಸೆಂಟೇಶನ್ ನೀಡುವುದು ಇತ್ಯಾದಿ. ಹೀಗಾಗಿ ನೀವು ಈ ಭಯವನ್ನು ಗೆಲ್ಲಲೇಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆಗ ನೀವು ಹೆಚ್ಚು ಬೋಲ್ಡ್ ಕಾನ್ಛಿಡೆಂಟ್ ಆಗುವಿರಿ.
ನಿಮ್ಮ ಸ್ಟ್ರೆಂತ್ ಮೇಲೆ ಫೋಕಸ್ ಮಾಡಿ : ಜೀವನ ಪ್ರತಿಯೊಬ್ಬರಿಗೂ ಏನಾದರೊಂದು ಸ್ಟೈಲ್, ಟ್ಯಾಲೆಂಟ್ ಕೊಟ್ಟಿರುತ್ತದೆ. ಯಾರೋ ಬ್ಯೂಟಿಫುಲ್ ಆದರೆ, ಇನ್ನಾರೋ ಉತ್ತಮ ಗಾಯಕರು, ಕೆಲವರ ತಾರ್ಕಿಕ ಸಾಮರ್ಥ್ಯ ಉತ್ತಮವಾಗಿದ್ದರೆ, ಇನ್ನೂ ಕೆಲವರು ಉತ್ತಮ ನೃತ್ಯಪಟು, ಕೆಲವರು ಬರವಣಿಗೆಯಲ್ಲಿ ಗಟ್ಟಿಗರಾದರೆ ಹಲವರು ನಟನೆಯಲ್ಲಿ. ನಿಮ್ಮ ಬಣ್ಣ ಕಪ್ಪು ಎಂಬ ಕಾರಣಕ್ಕೆ ಹಿಂಜರಿಯುತ್ತಾ ಕೂರುವ ಬದಲು ನಿಮ್ಮ ಇಂಥ ವಿಶೇಷ ಪ್ರತಿಭೆ ಗುರುತಿಸಿಕೊಳ್ಳಿ. ನಿಮ್ಮಲ್ಲಿನ ಈ ಪ್ರತಿಭೆ ಬೇರೆಯವರಲ್ಲಿ ಇಲ್ಲದಿರಬಹುದು. ನಿಮ್ಮ ಸ್ಮಾರ್ಟ್ ನೆಸ್, ಸಾಮರ್ಥ್ಯ, ಉತ್ತಮ ವ್ಯವಹಾರಗಳಿಂದ ಬೇರೆಯವರ ಎದುರಿಗೆ ಶೈನ್ ಆಗಿ.