ಡೇಟಿಂಗ್‌ಗೆ ಹೊರಡಬೇಕು, ಆದರೆ ಬಿಝಿ ಶೆಡ್ಯೂಲ್ ‌ನಿಂದಾಗಿ ಪಾರ್ಲರ್‌ ಗೆ ಹೋಗುವಷ್ಟು ಸಮಯವಿಲ್ಲ. ಆಗ ಏನು ಮಾಡುವುದು? ಟೆನ್ಶನ್‌ ಬಿಡಿ, ಹೀಗೆ ಮಾಡಿ. ನೀವು ಮನೆಯಲ್ಲಿ ಕುಳಿತೇ ನಿಮ್ಮನ್ನು ನೀವೇ ಸಿಂಗರಿಸಿಕೊಂಡು ಸಂಗಾತಿ, ಮಾತ್ರವಲ್ಲದೆ ಫ್ರೆಂಡ್ಸ್ ನಡುವೆಯೂ ಆಕರ್ಷಣೆಯ ಕೇಂದ್ರಬಿಂದು ಹೇಗಾಗುವಿರಿ ಎಂದು ಗಮನಿಸೋಣ.

ಮೇಕಪ್ಗೆ ಮೊದಲು

ನೀವು ನಿಮ್ಮ ಮುಖದ ಮೇಲೆ ಇನ್‌ ಸ್ಟೆಂಟ್‌ ಗ್ಲೋ ಬಯಸಿದರೆ, ಮೇಕಪ್‌ ಮಾಡಿಕೊಳ್ಳುವ 10 ನಿಮಿಷಕ್ಕೆ ಮೊದಲು, ನೀಟಾಗಿ ತೊಳೆದು ಒರೆಸಿದ ಮುಖಕ್ಕೆ ಗಟ್ಟಿ ಮೊಸರು ಹಚ್ಚಿರಿ. ಇದು ಬ್ಲೀಚ್‌ ನ ಕೆಲಸ ಮಾಡುತ್ತದೆ. ಇದರಿಂದ ಸ್ಕಿನ್‌ ಹೆಚ್ಚು ಗ್ಲೋ ಆಗುವುದು ಮಾತ್ರವಲ್ಲದೆ, ಮೇಕಪ್‌ ಸಹ ಅತ್ಯುತ್ತಮ ಪರಿಣಾಮ ನೀಡಬಲ್ಲದು.

ನೀವು ಗ್ಲೋಯಿಂಗ್‌ ಸ್ಕಿನ್‌ ಗಾಗಿ ವಾರದಲ್ಲಿ 3 ದಿನ ಮೊಸರಿಗೆ ನಿಂಬೆರಸ ಅಥವಾ ಟೊಮೇಟೊ ಪೇಸ್ಟ್ ಬೆರೆಸಿ ಮುಖಕ್ಕೆ ಹಚ್ಚಿರಿ. ಹೀಗೆ ಮಾಡಿದಾಗ ನೀವು ಮಾಯಿಶ್ಚರೈಸರ್‌ ಹಚ್ಚಬೇಕಾದ ಅಗತ್ಯ ಇರುವುದಿಲ್ಲ. ಇದು ಪ್ರೈಮರ್‌ ನ ಕೆಲಸ ಮಾಡುತ್ತದೆ.

ಮನೆಯಲ್ಲೇ ಕಾಸ್ಮೆಟಿಕ್ಪ್ರಾಡಕ್ಟ್ಸ್

ನೀವು ಮನೆಯಲ್ಲಿ ಮೇಕಪ್‌ ಕಿಟ್‌ ಇಟ್ಟುಕೊಳ್ಳಿ. ಇದರಲ್ಲಿ ಕ್ರಿಂ, ಕನ್ಸೀಲರ್‌, ಫೌಂಡೇಶನ್‌, ಬ್ರಶ್‌, ಕಾಂಪ್ಯಾಕ್ಟ್, ಐ ಶ್ಯಾಡೋ, ಕಾಜಲ್, ಲೈನರ್‌, ಬ್ಲಶರ್‌, ಲಿಪ್‌ ಸ್ಟಿಕ್‌, ಲಿಪ್‌ ಪೆನ್ಸಿಲ್‌, ಹೇರ್‌ ಆ್ಯಕ್ಸೆಸರೀಸ್‌, ಬಿಂದಿ, ನೇಲ್ ಪಾಲಿಶ್‌ ಇತ್ಯಾದಿ ಎಲ್ಲವನ್ನೂ ಇರಿಸಿಕೊಳ್ಳಿ. ಆಗ ಮಾತ್ರ ಕೆಲವೇ ನಿಮಿಷಗಳಲ್ಲಿ ನೀವು ಸುಲಭವಾಗಿ ಮೇಕಪ್‌ ಮಾಡಿಕೊಳ್ಳಬಹುದು.

ಹೀಗೆ ಮೇಕಪ್ಮಾಡಿ

ನಿಮ್ಮ ಚರ್ಮ ಹೆಚ್ಚು ಡ್ರೈ ಆಗಿದ್ದರೆ, ಮೇಕಪ್‌ ಅಷ್ಟು ಪರಿಣಾಮಕಾರಿ ಅನಿಸುವುದಿಲ್ಲ. ಹೀಗಾಗಿ ಮೊದಲಿಗೆ ಚರ್ಮದ ಡ್ರೈನೆಸ್ ದೂರ ಮಾಡಬೇಕು. ಇದಕ್ಕಾಗಿ ಮುಖಕ್ಕೆ ಕೋಲ್ಡ್ ಕ್ರೀಂ ಹಚ್ಚಿರಿ. ಇದರಿಂದಾಗಿ ಚರ್ಮದ ಡ್ರೈನೆಸ್‌ ದೂರಾಗುತ್ತದೆ. ನಂತರ ಕಂಗಳ ಕೆಳಗೆ ಕನ್ಸೀಲರ್‌ ಹಚ್ಚಿರಿ. ಇದು ಡಾರ್ಕ್‌ ಸರ್ಕಲ್ಸ್ ಅಡಗಿಸುವ ಕೆಲಸ ಮಾಡುತ್ತದೆ. ಇದಾದ ಮೇಲೆ ಮುಖಕ್ಕೆ ಉತ್ತಮ ಫೌಂಡೇಶನ್‌ ಉಪಯೋಗಿಸಿ. ಕುತ್ತಿಗೆಗೂ ಫೌಂಡೇಶನ್‌ ಬಳಸಲು ಮರೆಯದಿರಿ. ಇದರಿಂದಾಗಿ ನ್ಯಾಚುರಲ್ ಸ್ಕಿನ್‌ ಟೋನ್‌ಜೊತೆಗೆ ಸ್ಕಿನ್‌ ಕ್ಲಿಯರ್‌ ಆಗಿಯೂ ಕಾಣಿಸುತ್ತದೆ. ಈ ರೀತಿ ಬೇಸ್‌ ತಯಾರಾದ ನಂತರ, ಬ್ರಶ್‌ ನೆರವಿನಿಂದ ಕಾಂಪ್ಯಾಕ್ಟ್ ಹಚ್ಚಿರಿ. ಇದು ನಿಮಗೆ ಪರ್ಫೆಕ್ಟ್ ಲುಕ್‌ ನೀಡುವ ಕೆಲಸ ಮಾಡುತ್ತದೆ. ಕಾಂಪ್ಯಾಕ್ಟ್ ಸದಾ ಆ್ಯಂಟಿ ಕ್ಲಾಕ್‌ ವೈಸ್‌ ಹಚ್ಚಬೇಕು ಎಂಬುದನ್ನು ಗಮನದಲ್ಲಿಡಿ. ಇದರಿಂದಾಗಿ ಮೇಕಪ್‌ ಹೆಚ್ಚು ಹೊತ್ತು ಬಾಳಿಕೆ ಬರುತ್ತದೆ. ನಂತರ ಐ ಶ್ಯಾಡೋದಿಂದ ಐ ಮೇಕಪ್‌ ಮಾಡಿ.

ಇತ್ತೀಚೆಗೆ ಸ್ಮೋಕಿ ಕಂಗಳಿಗೆ ಹೆಚ್ಚಿನ ಕ್ರೇಝ್ ಇದೆ. ಹೀಗಾಗಿ ನೀವು ಡಾರ್ಕ್‌ ಕಲರ್‌ ನಿಂದ ಸ್ಮೋಕಿ ಕಂಗಳ ಜೊತೆಗೆ ಐ ಬ್ರೋಗೂ ಸಹ ಅದರಿಂದಲೇ ಡಿಫೈನ್‌ ಮಾಡಿ, ಅದರ ಮೇಲೆ ತುಸು ಗ್ಲಿಟರ್‌ ಉದುರಿಸಿ. ಇದಾದ ಮೇಲೆ ಕಂಗಳ ಮೇಲೆ ನಿಮ್ಮ ಆಯ್ಕೆಯ ಪ್ರಕಾರ ತೆಳು ಅಥವಾ ದಪ್ಪ ಲೈನರ್‌ ಅಪ್ಲೈ ಮಾಡಿ. ನಂತರ ಮಸ್ಕರಾದ 3-4 ಕೋಟ್‌ ಹಚ್ಚಿರಿ. ಈ ಮಸ್ಕರಾ ಐ ಲ್ಯಾಶೆಸ್‌ ನ್ನು ದಟ್ಟಾಗಿ ತೋರಿಸುತ್ತದೆ. ನಂತರ  ಕಾಜಲ್ ತೀಡಿರಿ. ಇದರಿಂದಾಗಿ ನಿಮ್ಮ ಕಂಗಳು ಇನ್ನಷ್ಟು ಬ್ಯೂಟಿಫುಲ್ ಆಗುತ್ತದೆ.

ಇದಾದ ನಂತರ ಬ್ಲಶರ್‌ ನ್ನು ಮೂಗಿನಿಂದ ಐ ಬ್ರೋಸ್‌ ವರೆಗೆ ಎಳೆಯಿರಿ ಹಾಗೂ ಬೆರಳಿನಿಂದ ನೀಟಾಗಿ ಸರಿಪಡಿಸಿ. ಬ್ಲಶರ್ ನಂತರ ಹೈಲೈಟರ್‌ ಹಚ್ಚಿರಿ. ಇದರಿಂದ ಸ್ವಲ್ಪ ಹೊತ್ತಿನ ನಂತರ ಮೇಕಪ್‌ ಗ್ಲೋ ಆಗತೊಡಗುತ್ತದೆ. ಇದೀಗ ಪೆನ್ಸಿಲ್ ನಿಂದ ಲಿಪ್ ಲೈನ್‌ ಎಳೆಯಿರಿ ಹಾಗೂ ಅದರಲ್ಲಿ ಲಿಪ್‌ ಸ್ಟಿಕ್‌ತೀಡಿರಿ. ಇದರಿಂದಾಗಿ ಲಿಪ್‌ ಸ್ಟಿಕ್‌ ಹರಡಿಕೊಳ್ಳುವುದಿಲ್ಲ.

ಕೊನೆಯಲ್ಲಿ ಕೂದಲನ್ನು ನಿಮ್ಮ ಆಯ್ಕೆಯಂತೆ ಸ್ಟೈಲಿಶ್‌ ಆಗಿ ರೆಡಿ ಮಾಡಿ. ಓಪನ್‌ ಆಗಿ ಇರಿಸಿ ಅಥವಾ ಕೂದಲು ಗಿಡ್ಡದಾಗಿದ್ದರೆ, ಮೊದಲು ತುಸು ಬ್ಯಾಕ್‌ ಕೋಂಬಿಂಗ್‌ ಮಾಡಿ. ಇದನ್ನು ಬನ್‌ ಆಗಿಸಿ, ಪಿನ್‌ಡೋನಟ್ಸ್ ನಿಂದ ಸಿಂಗರಿಸಿ. ಮುಂಭಾಗದ ಕೂದಲನ್ನು ಪ್ರೆಸ್ಸಿಂಗ್‌ ನಿಂದ ಚೆನ್ನಾಗಿ ಸೆಟ್‌ ಮಾಡಿ. ಈ ಲುಕ್‌ ನಿಮ್ಮ ಮೇಕಪ್‌ಔಟ್‌ ಫಿಟ್‌ ಗೆ ತುಂಬಾ ಚೆನ್ನಾಗಿ ಹೊಂದುತ್ತದೆ. ಈ ರೀತಿ ಕೆಲವೇ ನಿಮಿಷಗಳಲ್ಲಿ ನೀವು ವ್ಯಾಲೆಂಟೈನ್‌ ಡೇ ದಿನ ಡೇಟಿಂಗ್‌ ಹೊರಡಲು ಸಿದ್ಧರಾಗಿ. ಹ್ಯಾಪಿ ವ್ಯಾಲೆಂಟೈನ್‌ ಡೇ!

ಪಾರ್ವತಿ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ