ನೀವು ಕಾನ್ಫರೆನ್ಸ್ ಒಂದರಲ್ಲಿ ಪಾಲ್ಗೊಂಡು ಪ್ರೆಸೆಂಟೇಶನ್‌ ಕೊಡುತ್ತಿದ್ದೀರಿ. ನಿಮ್ಮೆದುರು ಬಾಸ್‌, ಸೀನಿಯರ್ಸ್‌ ಮತ್ತು ಸಹೋದ್ಯೋಗಿಗಳು ಕುಳಿತಿದ್ದಾರೆ. ಮೀಟಿಂಗ್‌ ತುಂಬಾ ಮಹತ್ವದ್ದಾಗಿದೆ ಹಾಗೂ ನಿಮ್ಮ ಹೃದಯ ಬಡಿತ ಹೆಚ್ಚಾಗಿಬಿಟ್ಟಿದೆ. ನಿಮ್ಮ ಅಂಗೈ ಬೆವರಿನಿಂದ ತೊಯ್ದು ಹೋಗಿದೆಯೇ?

ನೀವು ನಿಮ್ಮ ಕೈಗಳನ್ನು ಒರೆಸಿಕೊಳ್ಳಲು ಹೇಗ್ಹೇಗೊ ಪ್ರಯತ್ನ ಮಾಡುತ್ತಿರುವಿರಿ. ಗಾಬರಿಯಲ್ಲಿ ನೋಟ್ಸ್ ಗಳು ಬಿದ್ದುಹೋಗುವುದರಿಂದ ಸ್ವಲ್ಪದರಲ್ಲೇ ಬಚಾವಾದವು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆತ್ಮವಿಶ್ವಾಸವವೊಂದೇ ಕುಗ್ಗುವುದಿಲ್ಲ.  ನಿಮ್ಮ ವ್ಯಕ್ತಿತ್ವದ ಕುರಿತು ಬೇರೆಯವರ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಅತಿಯಾದ ಒತ್ತಡ ಹಾಗೂ ಒತ್ತಡದ ಸ್ಥಿತಿಯಲ್ಲಿ ದೇಹದಿಂದ ಭಾರಿ ಪ್ರಮಾಣದಲ್ಲಿ ಬೆವರು ಹರಿದುಹೋಗುತ್ತದೆ.

ಮೊದಲ ಭೇಟಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಯಾವುದೇ ಒಂದು ನಿರ್ದಿಷ್ಟ ಕಾರ್ಯವನ್ನು ಮಾಡದೇ ಇರುವ ಕಾರಣದಿಂದ ಹೀಗೆ ಆಗುತ್ತದೆ, ಕೆಲವೊಮ್ಮೆ ತೀಕ್ಷ್ಣ ಮಸಾಲೆ, ಜಂಕ್‌ ಫುಡ್ಸ್, ಮದ್ಯಸೇವನೆ, ಧೂಮಪಾನ, ಕೆಫಿನ್‌ ನ ಅಧಿಕ ಸೇವನೆಯಿಂದಲೂ ಹೀಗಾಗಬಹುದು.

ದೇಹದ ಕೆಲವು ವಿಶಿಷ್ಟ ಭಾಗಗಳಲ್ಲಿ ಬೆವರು ಅತಿಯಾಗಿ ಬರುತ್ತದೆ. ನಮ್ಮ ಅಂಗೈಗಳು, ಹಣೆ, ಪಾದಗಳು, ಕಂಕುಳ ಭಾಗದಲ್ಲಿ ಬೆವರು ಗ್ರಂಥಿಗಳು ಅಧಿಕವಾಗಿರುವುದರಿಂದ ಬೆವರು ಹೆಚ್ಚಾಗಿ ಹೊರಬರುತ್ತದೆ.

ಬೆವರು ಬರುವುದರಿಂದ ನಮ್ಮ ದೇಹದ ತಾಪಮಾನ ತಗ್ಗುತ್ತದೆ. ನೀವು ಜಾಗಿಂಗ್‌ ಮಾಡಿ ಬಂದರೆ, ವ್ಯಾಯಾಮ ಮಾಡಿದ ಬಳಿಕ, ಶ್ರಮದಾಯಕ ಕೆಲಸದ ಸಂದರ್ಭದಲ್ಲಿ ಹಾಗೂ ಬಿಸಿಲು ಅಧಿಕವಾಗಿದ್ದರೆ ನಿಮಗೆ ಬೆವರು ಬರಲಾರಂಭಿಸುತ್ತದೆ. ಒತ್ತಡದಾಯಕ ಪರಿಸ್ಥಿತಿಯಲ್ಲೂ ನಮ್ಮ ದೇಹದ ತಾಪಮಾನ ಹೆಚ್ಚುತ್ತದೆ. ಹೀಗಾಗಿ ಬೆವರು ಬರುತ್ತದೆ.

ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟ್‌ ವೊಂದರ ತಜ್ಞ ವೈದ್ಯ ಡಾ. ಸಂದೀಪ್‌ ಹೀಗೆ ಹೇಳುತ್ತಾರೆ, “ನೀವು ನರ್ವಸ್ ಆದಾಗ ನಿಮ್ಮ ಸ್ಟ್ರೆಸ್‌ ಹಾರ್ಮೋನುಗಳು ಕ್ರಿಯಾಶೀಲವಾಗುತ್ತವೆ. ಇದರಿಂದ ನಿಮ್ಮ ದೇಹದ ತಾಪಮಾನ ಮತ್ತು ಹೃದಯ ಬಡಿತ ಹೆಚ್ಚುತ್ತದೆ. ಬೆವರನ್ನು ನಿಯಂತ್ರಣ ಮಾಡುವ ಮೆದುಳಿನಲ್ಲಿರುವ ಹೈಪೊಥಿಲ್ಯಾಮಸ್‌ ಬೆವರು ಗ್ರಂಥಿಗಳಿಗೆ ಸಂದೇಶ ರವಾನಿಸಿ, ದೇಹವನ್ನು ತಂಪುಗೊಳಿಸಲು ಸ್ವಲ್ಪ ಬೆವರು ಹೊರಹೋಗುವುದು ಅವಶ್ಯ ಎಂದು ಹೇಳುತ್ತದೆ. ಸಿಂಪಥೆಟಿಕ್‌ ನರ್ವಸ್ ಸಿಸ್ಟಮ್ ಎಮೋಶನಲ್ ಸಿಗ್ನಲ್ ಗಳನ್ನು ಬೆವರಿನ ರೂಪದಲ್ಲಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯನ್ನು ನೀವು ಬದಲಿಸಲು ಆಗುವುದಿಲ್ಲ.”

ಪರಿಸ್ಥಿತಿಗಳಿಂದ ರಕ್ಷಣೆ ಹೇಗೆ?

ಉದ್ವೇಗಕ್ಕೊಳಗಾಗಬೇಡಿ. ಗಾಬರಿ ಆಗುವುದು ಬೇಡ. ಇಲ್ಲದ್ದಿದರೆ ತೊಂದರೆ ಇನ್ನಷ್ಟು ಹೆಚ್ಚುತ್ತದೆ. ಗಾಬರಿ ಉಂಟಾದಾಗ ಉಸಿರಾಟದ ವೇಗ ಜಾಸ್ತಿಯಾಗುತ್ತದೆ. ರಕ್ತ ಪ್ರವಾಹ ಕೂಡ ಹೆಚ್ಚಾಗುತ್ತದೆ. ಅದರಿಂದಾಗಿ ಹೆಚ್ಚು ಬೆವರು ಹೊರಸೂಸುತ್ತದೆ.

ರಿಲ್ಯಾಕ್ಸೇಶನ್ಮತ್ತು ಮಡಿಟೇಶನ್

ಒಂದು ವೇಳೆ ನಿಮ್ಮ ಹೃದಯದ ಮಿಡಿತ ಜೋರಾದಾಗ ಸ್ವಲ್ಪ ರಿಲ್ಯಾಕ್ಸ್ ಆಗಲು ಪ್ರಯತ್ನಿಸಿ. ನಿಮ್ಮ ಉಸಿರಾಟದ ಗತಿಯ ಮೇಲೆ ಗಮನ ಕೇಂದ್ರೀಕರಿಸಿ. ಗಾಢ ಉಸಿರು ತೆಗೆದುಕೊಳ್ಳಿ. 5-6 ಸೆಕೆಂಡುಗಳ ಕಾಲ ಉಸಿರು ಬಿಗಿ ಹಿಡಿದ ನಂತರ ಬಿಡಿ, ಇದರಿಂದ ನಿಮ್ಮ ಮನಸ್ಸು ಶಾಂತಗೊಳ್ಳುತ್ತದೆ. ಒತ್ತಡ ಸಾಕಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ

ನಿಯಮಿತ ವ್ಯಾಯಾಮ ಮಾಡಿ

ಯಾರು ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೊ, ಆವರಿಗೆ ಒತ್ತಡ ಉಂಟಾಗುವ ಸಾಧ್ಯತೆ ಕಡಿಮೆ. ಅದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ನೀವೆಷ್ಟು ಆತ್ಮವಿಶ್ವಾಸಿಗಳಾಗುತ್ತೀರೊ, ಒತ್ತಡಮಯ ಸ್ಥಿತಿಗಳನ್ನು ಚೆನ್ನಾಗಿ ನಿರ್ವಹಣೆ ಮಾಡುವಿರಿ.

ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳಿ

ನಿಮ್ಮ ದೇಹದ ತಾಪಮಾನವನ್ನು ಕಡಿಮೆಗೊಳಿಸಲು ಹೆಚ್ಚೆಚ್ಚು ನೀರು ಕುಡಿಯಿರಿ. ಏಕೆಂದರೆ ಹೆಚ್ಚುವರಿ ಸೆಕೆಯನ್ನು ದೇಹ ಚರ್ಮದ ಮೂಲಕ ಬೆವರಿನ ರೂಪದಲ್ಲಿ ಹೊರಹಾಕುತ್ತದೆ.

ಆ್ಯಂಟಿಪರ್ಸ್ಪಿರೆಂಟ್ಬಳಸಿ

ಆ್ಯಂಟಿಪರ್ಸ್‌ ಪಿರೆಂಟ್‌ ನಲ್ಲಿ ಬೆವರನ್ನು ಬ್ಲಾಕ್‌ ಮಾಡುವ ಶಕ್ತಿ ಇರುತ್ತದೆ. ಒಂದು ವೇಳೆ ನಿಮಗೆ ನರ್ವಸ್, ಸ್ಟ್ರೆಸ್‌ ಅಥವಾ ಆ್ಯಂಗ್ಸೈಟಿ ಸ್ವೆಟ್‌ನ ಸಮಸ್ಯೆ ಇದ್ದರೆ ಅಂಗೈಯಲ್ಲಿ ಹೆಚ್ಚು ಬೆವರು ಬರುತ್ತದೆ. ಅಲ್ಲಿ ಆ್ಯಂಟಿಪರ್ಸ್‌ ಪಿರೆಂಟ್‌ ಲೇಪಿಸಿ. ನಿಮ್ಮ ಬಳಿ ಸ್ವಲ್ಪ ಬೇಕಿಂಗ್‌ ಪೌಡರ್‌, ಕಾರ್ನ್‌ ಸ್ಟಾರ್ಚ್‌ ಇಟ್ಟುಕೊಳ್ಳಿ. ಯಾವುದಾದರೂ ಒತ್ತಡಮಯ ಸ್ಥಿತಿಯನ್ನು ಎದುರಿಸುವ ಮುನ್ನ ಅದನ್ನು ಅಂಗೈ ಮೇಲೆ ಹಚ್ಚಿಕೊಳ್ಳಿ.

ಕೆ. ಜ್ಯೋತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ