ರಸಿಕಾ ದುಗ್ಗಲ್

ಹಾಲಿವುಡ್ನಟಿ ರಸಿಕಾ, ತನ್ನ ಚಿತ್ರೋದ್ಯಮದ ಸಂಘರ್ಷವನ್ನು ದೊಡ್ಡ ಚಾಲೆಂಜ್ಆಗಿ ಏಕೆ ಭಾವಿಸುತ್ತಾಳೆ ಎಂಬುದನ್ನು ಆಕೆಯ ಮಾತುಗಳಲ್ಲೇ ವಿವರವಾಗಿ ತಿಳಿಯೋಣವೇ....?

`ಮಿರ್ಜಾಪುರ್‌' OTT ಯಲ್ಲಿ ಸೀರೀಸ್‌ ಆಗಿ ಅದ್ಭುತ ಯಶಸ್ಸು ಕಂಡಿದೆ. ಇದರಲ್ಲಿ ವೀಣಾ ತ್ರಿಪಾಠಿಯ ಪಾತ್ರ ನಿಭಾಯಿಸಿರುವ ಬಾಲಿವುಡ್‌ ನಟಿ ರಸಿಕಾ ದುಗ್ಗಲ್ ಳಿಗೆ ಬಾಲ್ಯದಿಂದಲೇ ಸಿನಿಮಾದಲ್ಲಿ ನಟಿಸಬೇಕೆಂಬ ದೊಡ್ಡ ಗೀಳಿತ್ತು. ಜಾರ್ಖಂಡ್‌ ರಾಜ್ಯದ ಜೆಮ್ ಶೆಡ್‌ ಪುರ್‌ ಈಕೆಯ ತವರೂರು.

ಬಾಲಿವುಡ್‌ ನಲ್ಲಿ ಅತಿ ಮೃದುಭಾಷೆಯ, ಸೌಂದರ್ಯದ ಖನಿ ಎಂದೇ ಗುರುತಿಸಲ್ಪಡುವ ರಸಿಕಾ, ದೆಹಲಿಯಲ್ಲಿ ಸೋಶಿಯಲ್ ಕಮ್ಯುನಿಕೇಶನ್‌ ಮೀಡಿಯಾದಲ್ಲಿ ಪೋಸ್ಟ್ ಗ್ರಾಜುಯೇಟ್‌ ಡಿಪ್ಲೊಮಾಗಾಗಿ ಪದವಿ ಪಡೆದಿರುತ್ತಾಳೆ. ರಸಿಕಾ ತನ್ನ ಕೆರಿಯರ್ ಆರಂಭಿಸಿದ್ದು 2007ರಲ್ಲಿ `ಅನ್ವರ್‌' ಚಿತ್ರದಿಂದ. ಇದರಲ್ಲಿ ಈಕೆಯದು ಸಣ್ಣ ಪಾತ್ರವಾದರೂ ಗಮನಾರ್ಹವಾಗಿ ಗುರುತಿಸಲ್ಪಟ್ಟಳು. ಹೀಗಾಗಿ ಮುಂದೆ ಅನೇಕ ಚಿತ್ರಗಳಲ್ಲಿ ಸಾಲು ಸಾಲಾಗಿ ಪಾತ್ರಗಳು ದೊರಕಿದವು. `ನೋ ಸ್ಮೋಕಿಂಗ್‌, ಹೈಜ್ಯಾಕ್‌, ತಹನ್‌, ಅಜ್ಞಾತ್‌, ಕ್ಷಯ್‌' ಇತ್ಯಾದಿ ಚಿತ್ರಗಳಲ್ಲಿ ಮಿಂಚಿದ್ದಲ್ಲದೆ, `ಪೌಡರ್‌, ರಿಶ್ತಾ ಡಾಟ್‌ ಕಾಮ್, ಕಿಸ್ಮತ್‌' ಮುಂತಾದವು ಕಿರುತೆರೆಯ ಧಾರಾವಾಹಿಗಳಲ್ಲೂ ಉತ್ತಮ ಹೆಸರು ಗಳಿಸಿದಳು.

ಅಂದ ಮಾತ್ರಕ್ಕೆ ಇವಳ ಫಿಲ್ಮಿ ಜರ್ನಿ ಅತ್ಯಂತ ಯಶಸ್ವಿ ಅಂತೇನೂ ಅಲ್ಲ. ಮುಂದೆ OTTಯಲ್ಲಿ ನಟಿಸತೊಡಗಿದಂತೆ ಅನೇಕ ಅವಕಾಶಗಳು ಕೈ ಬೀಸಿ ಕರೆದವು. ಆ ರೀತಿ ಆಕೆ ಪ್ರಸಿದ್ಧಿ ಪಡೆದಳು. ಈಕೆಗೆ ಗೋಳಾಡುವ ಪಾತ್ರಗಳೆಂದರೆ ಅಲರ್ಜಿ. ಆದರೆ ಭಾರತೀಯ ಚಿತ್ರೋದ್ಯಮದಲ್ಲಿ ಹೆಣ್ಣುಮಕ್ಕಳು ಬಿಕ್ಕಿ ಬಿಕ್ಕಿ ಅಳದಿದ್ದರೆ ಹೇಗೆ? ಹೀಗೆ ಕಣ್ಣೀರುಗರೆಯುವ ಕನಿಷ್ಠ 2-3 ದೃಶ್ಯಗಳುಳ್ಳ ಚಿತ್ರಗಳು ಈಕೆಗೆ ಸತತ ಸಿಗತೊಡಗಿದವು. ಹೀಗೆ ಕೇವಲ ತಾನು ಅಳುಮೂಂಜಿ ಪಾತ್ರಕ್ಕೆ ಅಂಟಿಕೊಳ್ಳಬಾರದು, ವೈವಿಧ್ಯಮಯ ಪಾತ್ರ ಇರಬೇಕೆಂದು ಬಹಳ ಪ್ರಯತ್ನಪಟ್ಟು, ಹಲವು ನಿರ್ಮಾಪಕ, ನಿರ್ದೇಶಕರ ಕದ ತಟ್ಟಿ ಹೋರಾಡಿದಳು. ಅಂತೂ ಇಂತೂ OTT ಇವಳಿಗೆ ಅಂಥ ಅವಕಾಶ ನೀಡಿತು.

ಇತ್ತೀಚೆಗಷ್ಟೇ ರಸಿಕಾಳ `ಶೇಖರ್‌ ಹೋಮ್' ವೆಬ್‌ ಸೀರೀಸ್‌ ರಿಲೀಸ್‌ ಆಗಿದೆ. ಇದೊಂದು. ಪತ್ತೇದಾರಿ ಸರಣಿಯ ಧಾರಾವಾಹಿ ಆಗಿದ್ದು, ಇದರಲ್ಲಿ ಈಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಸಿಕಾ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಳೆ. ಆಕೆ ತನ್ನ ಫಿಲ್ಮಿ ಕೆರಿಯರ್‌ ಬಗ್ಗೆ ಏನು ಹೇಳ ಬಯಸುತ್ತಾಳೆ? ಇಲ್ಲಿವೆ ರಸಿಕಾ ಜೊತೆ ನಡೆಸಿದ ಸಂದರ್ಶನದ ಮುಖ್ಯಾಂಶಗಳು : ಉತ್ತಮ ಸ್ಕ್ರಿಪ್ಟ್ ಸಿಗಬೇಕು

MV5BNjZhNGQxOGQtYTdlMS00NjQxLTlhY2EtM2Q4NTdiYWY3Yzg3XkEyXkFqcGc@._V1_

ಈ ವೆಬ್‌ ಸೀರೀಸ್‌ ರಸಿಕಾಳಿಗೆ ನಿಜಕ್ಕೂ ದೊಡ್ಡ ಚಾಲೆಂಜ್‌ ಆಗಿತ್ತು. ಈ ಪಾತ್ರದಲ್ಲಿ ಮಿಂಚುತ್ತಿರುವ ರಸಿಕಾಳಿಗೆ ಅದು ಬಹಳ ಹಿಡಿಸಿದೆಯಂತೆ. ``ಇದಕ್ಕೆ ಮುಂಚೆ ನಾನು ಡಿಟೆಕ್ಟಿವ್ ‌ಡ್ರಾಮಾ ಬಗ್ಗೆ ಇಷ್ಟು ಡೀಟೈಲ್ ‌ಆಗಿ ಎಕ್ಸ್ ಪ್ಲೋರ್‌ ಮಾಡಿರಲಿಲ್ಲ. ಇಂಥ ಸುವರ್ಣಾವಕಾಶ ನನಗೆ ಈ ವೆಬ್‌ ಸೀರೀಸ್‌ ನಿಂದ ಸಿಕ್ಕಿದೆ. ಮೆನನ್‌ ರ ನಿರ್ದೇಶನದಲ್ಲಿ ನಟಿಸಬೇಕೆಂದು ನನಗೆ ಅನೇಕ ದಿನಗಳಿಂದಲೂ ಬಹಳ ಆಸೆ ಇತ್ತು. ``ಏಕೆಂದರೆ ಇವರ `ಹಜಾರೋ ಖ್ವಾಯಿಶೇ ಐಸಿ' ಚಿತ್ರ ಬಾಲಿವುಡ್‌ ನಲ್ಲಿ ಅತಿ ಪ್ರಶಂಸೆ ಪಡೆದಿತ್ತು, ನನ್ನ ಅಚ್ಚುಮೆಚ್ಚಿನ ಚಿತ್ರವದು! `ಶೇಖರ್‌ ಹೋಮ್' ಇವರದೇ ನಿರ್ದೇಶನದಲ್ಲಿ ಮೂಡಿಬರಲಿದೆ ಎಂದು ತಿಳಿದಾಗ, ನನಗಂತೂ ಇದರಲ್ಲಿ ಒಂದು ಪಾತ್ರ ಸಿಗಬಾರದಿತ್ತೇ ಎಂದು ಬಹಳ ಹಪಹಪಿಸಿದ್ದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ