– ರಾಘವೇಂದ್ರ ಅಡಿಗ ಎಚ್ಚೆನ್.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ ದರ್ಶನ್.ದರ್ಶನ್ ಬಿಡುಗಡೆಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆಇನ್ನೆರಡು ತಿಂಗಳಲ್ಲಿ ಡಿಬಾಸ್ ಬಿಡುಗಡೆ ಆಗಿ ಹೊರಬರ್ತಾರೆ ಎಂದು ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಭವಿಷ್ಯ ನುಡಿದಿದ್ದಾರೆ.
ಕುಣಿಗಲ್ ಬಿದನಗೆರೆ ಪಂಚಮುಖಿ ಆಂಜನೇಯ ಶಿವರಾತ್ರಿ ಸ್ವರಾಭಿಷೇಕ ಸಮಾರಂಭದಲ್ಲಿ ರವಿಚಂದ್ರನ್ ಅತಿಥಿಯಾಗಿದ್ದರು. ರವಿಚಂದ್ರನ್ ವೇದಿಕೆಯಲ್ಲಿ ಮಾತನಾಡುವಾ ಕೆಲ ಅಭಿಮಾನಿಗಳು ಡಿಬಾಸ್ ಎಂದು ಕೂಗಲು ಆರಂಭಿಸಿದ್ದರು. ಆಗ ರವಿಚಂದ್ರನ್ ಡಿಬಾಸ್ ಹೊರ ಬರ್ತಾರೆ ಬಿಡೋ, ಇನ್ನೆರಡು ತಿಂಗಳಲ್ಲಿ ಹೊರ ಬರ್ತಾರೆ ಎಂದಿದ್ದಾರೆ. ಈಬಾಯಲ್ಲಿ ಹೇಳಿದ್ದೀನಿ. ಬರ್ತಾರೆ ನೆನಪಿಟ್ಕೊ ಎಂದಿದ್ದಾರೆ.
ನಿನಗೇನೋ ಡಿಬಾಸ್.ಆ ಡಿಬಾಸ್ ನನಗೆ ಮಗ ನೆನಪಿರಲಿ.ಒಂದು ಕೆಟ್ಟ ಘಳಿಗೆ.ಅದು ಮನುಷ್ಯನನ್ನು ಕುಗ್ಗಿಸುತ್ತೆ. ಹಾಗಾಗಿ ಎಲ್ಲರೂ ಮನಸ್ಸಿನಲ್ಲಿಟ್ಟುಕೊಂಡು ಪೂಜೆ ಮಾಡಿ, ಬರ್ತಾರೆ ಎಂದು ಹೇಳಿದ್ದಾರೆ. ರವಿಚಂದ್ರನ್ ಮಾತು ಕೇಳಿ ಅಭಿಮಾನಿಗಳು ಓಹ್ ಎಂದು ಕೂಗಿದ್ದಾರೆ.





