ಹೊಟ್ಟೆ ನಮ್ಮ ಆರೋಗ್ಯದ ಕೇಂದ್ರ. ಒಳ್ಳೆಯ ಆರೋಗ್ಯಕ್ಕೆ ಉತ್ತಮ ಪಚನ ವ್ಯವಸ್ಥೆ ಅವಶ್ಯಕ. ಅಷ್ಟೇ ಅಲ್ಲ, ಅನಿವಾರ್ಯ ಕೂಡ. ಯಾವ ಆಹಾರವನ್ನು ನಮ್ಮ ದೇಹ ಪಚನ ಮಾಡುವುದಿಲ್ಲವೇ, ಅದು ನಮ್ಮ ದೇಹಕ್ಕೆ ಉಪಯೋಗ ಮಾಡುವುದರ ಬದಲು ಹಾನಿ ಉಂಟು ಮಾಡುವುದು.

ಹೊಟ್ಟೆಯ ತೊಂದರೆಗಳು ಇತರೆ ವ್ಯವಸ್ಥೆಯ ಮೇಲೆ ತೊಂದರೆಯನ್ನಷ್ಟೇ ಮಾಡುವುದಿಲ್ಲ. ಇತರೆ ಅಂಗಗಳ ಮೇಲೆ ಅದರ ದುಷ್ಪರಿಣಾಮ ಕೂಡ ಉಂಟು ಮಾಡುತ್ತದೆ. ಇದರಲ್ಲಿ ನಮ್ಮ ಹೃದಯ, ಮೆದುಳು, ರೋಗನಿರೋಧಕ ವ್ಯವಸ್ಥೆ, ಚರ್ಮ, ಹಾರ್ಮೋನು ವ್ಯವಸ್ಥೆ ಸೇರಿದೆ. ಹೊಟ್ಟೆಯ ತೊಂದರೆಗಳ ಕಾರಣದಿಂದಾಗಿ ಪೋಷಕಾಂಶಗಳ ಹೀರುವಿಕೆಯ ಮೇಲೆ ಪರಿಣಾಮ ಬೀರುವುದರಿಂದ ಹಿಡಿದು ಕ್ಯಾನ್ಸರ್‌ ಬೆಳವಣಿಗೆ ಆಗುವ ಸಾಧ್ಯತೆಯೂ ಹೆಚ್ಚುತ್ತದೆ.

ಹೊಟ್ಟೆಯ ಪ್ರಮುಖ ರೋಗಗಳು

ನಮ್ಮ ಪಚನ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ, ದೇಹ ತನಗೆ ಬೇಕಾದ ರೂಪದಲ್ಲಿ ಅದನ್ನು ಪರಿವರ್ತಿಸಿಕೊಂಡು  ಗ್ರಹಿಸಿಕೊಳ್ಳಲು ಆಗುವುದಿಲ್ಲ. ದುರ್ಬಲ ಪಚನ ವ್ಯವಸ್ಥೆಯಿಂದ ದೇಹದ ರೋಗ ನಿರೋಧಕ ವ್ಯವಸ್ಥೆ ಕುಂದುತ್ತದೆ. ಅದರಿಂದಾಗಿ ದೇಹದಲ್ಲಿ ವಿಷಕಾರಿ ಘಟಕಗಳ ಪ್ರಮಾಣ ಹೆಚ್ಚುತ್ತದೆ. ಹೀಗಾಗಿ ಅಂಥವರು ಮೇಲಿಂದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

ಮಲಬದ್ಧತೆ

ಮಲಬದ್ಧತೆ ಅಂದರೆ ದೊಡ್ಡ ಕರುಳಿನಿಂದ ಮಲ ಹೊರಹೋಗಲು ಕಷ್ಟಕರ ಆಗುವುದು. ಈ ಸಮಸ್ಯೆ ಗಂಭೀರ ರೂಪ ಪಡೆದುಕೊಂಡು ದೊಡ್ಡ ಕರುಳಿಗೆ ಅಡೆತಡೆ ಉಂಟು ಮಾಡಿ ಜೀವನವನ್ನು ನರಕಮಯಗೊಳಿಸುತ್ತದೆ. ಮಲಬದ್ಧತೆ ಒಂದು ಲಕ್ಷಣವಾಗಿದ್ದು, ಚಟ ಅದಕ್ಕೆ ಹಲವು ಕಾರಣಗಳಿರಬಹುದು. ಅವೆಂದರೆ ಆಹಾರ ಸೇವನೆಯ ತಪ್ಪು ಪದ್ಧತಿಗಳು, ಹಾರ್ಮೋನಿಗೆ ಸಂಬಂಧಪಟ್ಟ ತೊಂದರೆಗಳು, ಕೆಲವು ಔಷಧಿಗಳ ಅಡ್ಡ ಪರಿಣಾಮಗಳು ಇತ್ಯಾದಿ.

ಗ್ಯಾಸ್ಟ್ರೊ ಎಂಟ್ರೈಟಿಸ್

ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಹಾಗೂ ವೈರಸ್‌ ನ ಸೋಂಕು ಆಗಿದೆ. ಈ ಕಾರಣದಿಂದ ಹೊಟ್ಟೆಯ ಆಂತರಿಕ ಭಾಗದಲ್ಲಿ ಉರಿ ಮತ್ತು ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೋಂಕಿಗೆ ತುತ್ತಾದ ವ್ಯಕ್ತಿಗೆ ವಾಂತಿ ಮತ್ತು ಭೇದಿ ಉಂಟಾಗುತ್ತದೆ. ಈ ಸೋಂಕು ಇಕೋಲಿ, ಎಚ್‌. ಪೈವೋರಿ, ನೊರೊ ವೈರಸ್‌, ರೋಟಾ ವೈರಸ್‌ ಮುಂತಾದ ಸೋಂಕಿನಿಂದ ಕೂಡಿದ ಆಹಾರ ಹಾಗೂ ನೀರು ಸೇವನೆಯಿಂದ ಉಂಟಾಗುತ್ತದೆ. ಇದನ್ನು `ಸ್ಟಮಕ್‌ ಪ್ಲ’ ಎಂದೂ ಕರೆಯಲಾಗುತ್ತದೆ. ಸಾಮಾನ್ಯ ಆರೋಗ್ಯವಂತ ವ್ಯಕ್ತಿ ಯಾವುದೇ ಜಟಿಲ ಸಮಸ್ಯೆ ಇಲ್ಲದೆ ಇದರಿಂದ ಕೆಲವೇ ದಿನಗಳಲ್ಲಿ ಗುಣಮುಖನಾಗಬಲ್ಲ. ಆದರೆ ಮಕ್ಕಳು, ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದರಿಗೆ ಗ್ಯಾಸ್ಟ್ರೊ ಎಂಟ್ರೈಟಿಸ್‌ ಅಪಾಯಕಾರಿಯಾಗಿ ಪರಿಣಮಿಸಬಹುದು.

ಹೊಟ್ಟೆ ಉಬ್ಬರ ಗ್ಯಾಸ್‌ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್‌ ಇಲ್ಲಿ ಹರ್ನಿಯಾದ ಕಾರಣದಿಂದಲೂ ಹೊಟ್ಟೆ ಉಬ್ಬರ ಆಗಬಹುದು. ಹೆಚ್ಚು ಕೊಬ್ಬುಯುಕ್ತ ಆಹಾರ ಸೇವನೆಯಿಂದ ಹೊಟ್ಟೆ ಬಹಳ ತಡವಾಗಿ ಖಾಲಿಯಾಗುತ್ತದೆ. ಅದರಿಂದ ಹೊಟ್ಟೆ ಉಬ್ಬರ ಹಾಗೂ ತಳಮಳ ಉಂಟಾಗುತ್ತದೆ. ಯಾವುದೇ ಒಂದು ಅಂಗ ಅತಿಯಾಗಿ ಬೆಳವಣಿಗೆ ಆಗುವುದರಿಂದ ಹೊಟ್ಟೆ ಉಬ್ಬುತ್ತದೆ.

ಕೊವೈಟಿಸ್‌

ಕೊವೈಟಿಸ್‌ ಸಮಸ್ಯೆ ಇದ್ದಾಗ ದೊಡ್ಡ ಕರುಳಿನಲ್ಲಿ ಗುಳ್ಳೆಗಳು ಉಂಟಾಗುತ್ತವೆ. ಈ ಕಾರಣದಿಂದಾಗಿ ಏನೇ ತಿಂದರೂ ಉರಿ ಆಗುತ್ತದೆ. ಈ ಉರಿಯನ್ನು ಶಾಂತಗೊಳಿಸಲು ಮೇಲಿಂದ ಮೇಲೆ ಆಹಾರ ತಿನ್ನಬೇಕಾಗಿ ಬರುತ್ತದೆ ಇಲ್ಲಿ ನೀರು ಕುಡಿಯಬೇಕಾಗಿ ಬರುತ್ತದೆ. ಒಮ್ಮೊಮ್ಮೆ ಅಲ್ಸರ್‌ ನ ಗುಳ್ಳೆಗಳು ಒಡೆದುಹೋಗುತ್ತವೆ. ಅದರಿಂದಾಗಿ ಮಲದ ಜೊತೆಗೆ ರಕ್ತ ಹೋಗುತ್ತದೆ. ಗುಳ್ಳೆಗಳು ಒಡೆಯುವುದರಿಂದ ಒಮ್ಮೊಮ್ಮೆ ಗರಣೆಗಳು ಜಮೆಗೊಳ್ಳುತ್ತವೆ. ಅದರಿಂದ ಮಲದಲ್ಲಿ ಕೆಟ್ಟ ವಾಸನೆ ಬರುತ್ತದೆ. ಕೊವೈಟಿಸ್‌ ನ ಕಾರಣದಿಂದ ದೊಡ್ಡ ಕರುಳಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ.

ಡಯೇರಿಯಾ`ಡಯೇರಿಯಾ’ ಇದು ಪಚನ ಮಾರ್ಗದ ಸೋಂಕು ಅಥವಾ ಕರುಳಿನ ರೋಗಗಳ ಒಂದು ಲಕ್ಷಣವಾಗಿದೆ. ಇದರಲ್ಲಿ ದೊಡ್ಡ ಕರುಳಿನಲ್ಲಿರುವ ದ್ರವ ಪದಾರ್ಥ ಹೀರಲ್ಪಡುವುದಿಲ್ಲ ಅಥವಾ ಹೆಚ್ಚುವರಿ ದ್ರವ ಪದಾರ್ಥ ದೊಡ್ಡ ಕರುಳಿಗೆ ತಲುಪುತ್ತದೆ. ಈ ಕಾರಣದಿಂದ ಮಲ ಹೆಚ್ಚು ದ್ರವಮಯವಾಗುತ್ತದೆ. ಗಂಭೀರ ಡಯೇರಿಯಾದ ಕಾರಣದಿಂದ ದೇಹದಲ್ಲಿ ನೀರಿನಾಂಶದ ಕೊರತೆ ಉಂಟಾಗುತ್ತದೆ. ಇದು ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಅದರಲ್ಲೂ ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುವರು ಹಾಗೂ ರೋಗ ನಿರೋಧಕ ಶಕ್ತಿ ಕೊರತೆ ಇರುವವರಿಗೆ ಇದು ಅಪಾಯಕಾರಿ.

ಡಾ. ಬಿ.ಕೆ. ಉಷಾ 

ಗಮನದಲ್ಲಿರಲಿ

ಕರಿದ ಮತ್ತು ಮಸಾಲೆಯುಕ್ತ ಪದಾರ್ಥಗಳ ಸೇವನೆ ಕಡಿಮೆ ಮಾಡಿ.

ಒತ್ತಡ ಕೂಡ ಮಲಬದ್ಧತೆಯ ಒಂದು ಮುಖ್ಯ ಕಾರಣವಾಗಿದೆ. ಸಾಧ್ಯವಾದಷ್ಟು ಒತ್ತಡಮುಕ್ತರಾಗಿರಲು ಪ್ರಯತ್ನಿಸಿ.

ದೈಹಿಕವಾಗಿ ಸಕ್ರಿಯರಾಗಿರಿ. ನಿಯಮಿತವಾಗಿ ವ್ಯಾಯಾಮ ಯೋಗ ಮಾಡಿ.

ಹೊಟ್ಟೆಯಲ್ಲಿ ಗ್ಯಾಸ್‌ ಉಂಟಾಗುವ ಒಂದು ಮುಖ್ಯ ಕಾರಣವೆಂದರೆ ಮಲಬದ್ಧತೆ. ಎಷ್ಟು ಹೆಚ್ಚು ಹೊತ್ತು ಆಹಾರ ದೊಡ್ಡ ಕರುಳಿನಲ್ಲಿ ಇರುತ್ತದೋ ಅಲ್ಲಿಯವರೆಗೆ ಗ್ಯಾಸ್‌ ಉತ್ಪತ್ತಿಯಾಗುತ್ತಲೇ ಇರುತ್ತದೆ.

ಆಹಾರವನ್ನು ಚೆನ್ನಾಗಿ ಅಗಿದು ತಿನ್ನಿ. ದಿನಕ್ಕೆ 3 ಬಾರಿ ಅತಿಯಾಗಿ ಆಹಾರ ಸೇವನೆ ಮಾಡುವ ಬದಲು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ.

ಊಟವಾದ ತಕ್ಷಣ ಒಮ್ಮೆಲೆ ಮಲಗಬೇಡಿ. ಸ್ವಲ್ಪ ಹೊತ್ತು ಸುತ್ತಾಡಿ ಬನ್ನಿ. ಇದರಿಂದಾಗಿ ಪಚನಕ್ರಿಯೆ ಸುಲಭವಾಗುತ್ತದೆ ಹಾಗೂ ಹೊಟ್ಟೆ ಉಬ್ಬರ ಕೂಡ ಆಗುವುದಿಲ್ಲ.

ನಿಮ್ಮ ಜೈವಿಕ ಗಡಿಯಾರನ್ನು ಸರಿಯಾಗಿ ಇಟ್ಟುಕೊಳ್ಳಲು, ಪ್ರತಿದಿನ ನಿಗದಿತ ಸಮಯಕ್ಕೇ ಆಹಾರ ಸೇವಿಸಿ.

ಋತುಮಾನದ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಿ.

ಆಹಾರದಲ್ಲಿ ನಾರಿನಂಶ ಅಧಿಕವಾಗಿರಲಿ.

ಪ್ರತಿದಿನ ಮುಂಜಾನೆ 1-2 ಗ್ಲಾಸ್‌ ಸಾಧಾರಣ ಬೆಚ್ಚಗಿನ ನೀರನ್ನು ಸೇವಿಸಿ.

ಧೂಮಪಾನ ಹಾಗೂ ಮದ್ಯಪಾನದಿಂದ ದೂರ ಇರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ