ಸಾಮಗ್ರಿ : 1 ಕಪ್‌ ಜೋಳದ ಹಿಟ್ಟು, ಅರ್ಧ ಕಪ್‌ ಮೈದಾ, 1-2 ಬೇಯಿಸಿ ಮಸೆದ ಆಲೂ, 2-3 ಹೆಚ್ಚಿದ ಈರುಳ್ಳಿ, 1-2 ಟೊಮೇಟೊ. 3-4 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಮೊಸರು, ಪುದೀನಾ ಚಟ್ನಿ, ಶುಂಠಿ ಪುಡಿ, ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ.

ವಿಧಾನ : 2 ಬಗ್ಗೆ ಹಿಟ್ಟು, ಉಪ್ಪು ಸೇರಿಸಿ ಜರಡಿಯಾಡಿ ಇದಕ್ಕೆ ನೀರು ಬೆರೆಸಿ ಮೃದುವಾಗಿ ಕಲಸಿಡಿ. ಎಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಂಡು 1-2 ಗಂಟೆ ಕಾಲ ನೆನೆಯಲು ಬಿಡಿ. ಇದನ್ನು ತೆಳುವಾಗಿ ಲಟ್ಟಿಸಿ, ತ್ರಿಕೋನಾಕಾರದಲ್ಲಿ  ಕತ್ತರಿಸಿ ಕರಿಯಿರಿ. ಇದನ್ನು ಟ್ರೇನಲ್ಲಿ ಹರಡಿಕೊಂಡು ಇದರ ಮೇಲೆ ಹೆಚ್ಚಿದ ಎಲ್ಲಾ ಪದಾರ್ಥ ಹಾಗೂ ಉಳಿದೆಲ್ಲವನ್ನೂ ಬೆರೆಸಿಕೊಂಡು ಚಿತ್ರದಲ್ಲಿರುವಂತೆ ರೆಡಿ ಮಾಡಿ, ಊಟಕ್ಕೆ ಮೊದಲು ಸವಿಯಲು ಕೊಡಿ.

AA-sabudana-fruit-bowl-(1)

ಸಾಬೂದಾಣಿ ಫ್ರೂಟ್ಬೌಲ್

ಸಾಮಗ್ರಿ : ಅರ್ಧರ್ಧ ಕಪ್‌ ಸಬ್ಬಕ್ಕಿ, ತೆಂಗಿನ ಹಾಲು, ಕಂಡೆನ್ಸ್ಡ್ ಮಿಲ್ಕ್, ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆ, ಡ್ರೈ ಫ್ರೂಟ್ಸ್ ಚೂರು (ಒಟ್ಟಾರೆ ಅರ್ಧ ಕಪ್‌), ಒಂದಷ್ಟು ಮಿಶ್ರ ಹಣ್ಣುಗಳ ತುಂಡುಗಳು.

ವಿಧಾನ : ಸಬ್ಬಕ್ಕಿಯನ್ನು ಸ್ವಲ್ಪ ಹೊತ್ತು ನೀರಲ್ಲಿ ನೆನೆಸಿ, ನಂತರ ಹಾಲಲ್ಲಿ ಬೇಯಿಸಿ. ಇದನ್ನು ಬಟ್ಟಲಿಗೆ ಹಾಕಿಟ್ಟು, ಒಂದು ಬಾಣಲೆಯಲ್ಲಿ ಕಂಡೆನ್ಸ್ಡ್ ಮಿಲ್ಕ್, ತೆಂಗಿನ ಹಾಲು ಬೆರೆಸಿ ಮಂದ ಉರಿಯಲ್ಲಿ ಕುದಿಸಿರಿ. ನಂತರ ಇದಕ್ಕೆ ಬೆಂದ ಸಬ್ಬಕ್ಕಿ, ಪುಡಿ ಮಾಡಿದ ಕಲ್ಲುಸಕ್ಕರೆ ಹಾಕಿ 2-3 ನಿಮಿಷ ಚೆನ್ನಾಗಿ ಮರಳಿಸಿ ಕೆಳಗಿಳಿಸಿ, ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್ ಹಾಗೂ ಹಣ್ಣಿನ ಹೋಳು ಬೆರೆಸಿ ತಕ್ಷಣ ಸವಿಯಲು ಕೊಡಿ.

AA-veg-poha-balls

ಅವಲಕ್ಕಿ ವೆಜ್ಬಾಲ್ಸ್

ಸಾಮಗ್ರಿ : 1 ಕಪ್‌ ಪೇಪರ್‌ ಅವಲಕ್ಕಿ, ಅರ್ಧ ಕಪ್‌ ನಷ್ಟು 3 ಬಗೆ ಕ್ಯಾಪ್ಸಿಕಂ ಹೋಳು, 1-2 ತುರಿದ ಕ್ಯಾರೆಟ್‌, 4 ಚಮಚ ತೆಂಗಿನ ತುರಿ, 1-2 ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಹುಳಿ ಮೊಸರು, ಒಗ್ಗರಣೆ ಸಾಮಗ್ರಿ, ಎಣ್ಣೆ, ಕರಿಬೇವು.

ವಿಧಾನ : ಮೊದಲು ಅವಲಕ್ಕಿಯನ್ನು ತೊಳೆದು, ಸ್ಟೀಲ್ ‌ಜರಡಿಯಲ್ಲಿ ಸೋಸಿಕೊಳ್ಳಿ. ಇದನ್ನು ಒಂದು ಬೇಸನ್ನಿಗೆ ಹರಡಿ. ಹೆಚ್ಚಿಕೊಂಡ ಮೇಲಿನ ಎಲ್ಲಾ ಪದಾರ್ಥ ಹಾಕಿ ಮಿಶ್ರಣ ಕಲಸಿ, ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ. ಇವನ್ನು ಇಡ್ಲಿ ಪಾತ್ರೆಯಲ್ಲಿ 10-12 ನಿಮಿಷ ಹಬೆಯಲ್ಲಿ ಬೇಯಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಇಂಗು, ಕರಿಬೇವಿನ ಸಮೇತ ಒಗ್ಗರಣೆ ಕೊಡಿ. ಅದರಲ್ಲಿ ಈ ಬಾಲ್ಸ್ ಹಾಕಿ 7-8 ನಿಮಿಷ ಒಡೆಯದಂತೆ ಎಚ್ಚರಿಕೆಯಿಂದ ಕೆದಕಿ ಕೆಳಗಿಳಿಸಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿಯಾಗಿ ಸವಿಯಲು ಕೊಡಿ.

AA-cauliflower-patti

ಕಾಲಿಫ್ಲವರ್ಕಟ್ಲೆಟ್

ಸಾಮಗ್ರಿ : 1-1 ಕಪ್‌ ಅನ್ನ, ತುರಿದ ಹಸಿ ಹೂಕೋಸು, ಅರ್ಧ ಕಪ್‌ ಬಾದಾಮಿ ಪೇಸ್ಟ್, 1-2 ಈರುಳ್ಳಿ, ಹೆಚ್ಚಿದ ತುಸು ಶುಂಠಿ, ಹಸಿಮೆಣಸು, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ