ಯಾವುದೇ ಪಾರ್ಟಿ, ಶುಭ ಸಮಾರಂಭಕ್ಕಾಗಿ ನೀವು ದಿ ಬೆಸ್ಟ್ ಡ್ರೆಸ್‌, ಮೇಕಪ್‌, ಫುಟ್‌ ವೇರ್‌ ಎಲ್ಲವನ್ನೂ ಪರ್ಫೆಕ್ಟ್ ಆಗಿ ಆರಿಸಿಕೊಂಡು, ಸ್ಕಿನ್‌ ಮಾತ್ರ ಡಲ್ ಆಗಿರಿಸಿಕೊಂಡರೆ, ನೀವು ಪಾರ್ಟಿಯಲ್ಲಿ ಬ್ಯೂಟಿ ಕ್ವೀನ್‌ ಹೇಗಾಗಲು ಸಾಧ್ಯ? ಇಂಥ ನಿರ್ಜೀವ ಚರ್ಮದ ಮೇಲೆ ಮೇಕಪ್‌ ಸಹ ಡಲ್ ಎನಿಸುತ್ತದೆ. ಅದೇ ಸಮಯದಲ್ಲಿ ಅನಗತ್ಯ ಕೂದಲು ಡ್ರೆಸ್‌ ಲುಕ್ಸ್ ನ್ನು ಹಾಳು ಮಾಡುತ್ತದೆ. ಹಾಗಿದ್ದರೆ ಈ ಸಲ ನೀವು ಪಾರ್ಟಿಗೆ ರೆಡಿ ಆಗುವ ಮುನ್ನ ಸ್ಕಿನ್‌ ಕೇರ್‌ ಕಡೆಗೂ ಅಷ್ಟೇ ಗಮನ ಕೊಡಬೇಕು.

ಹೇರ್ರಿಮೂವಿಂಗ್‌ : ಇತ್ತೀಚೆಗೆ ಟ್ರೆಡಿಷನಲ್ ಡ್ರೆಸೆಸ್‌ ಸಹ ಮಾಡರ್ನ್‌ ಟಚ್‌ ನೊಂದಿಗೆ ಬರುತ್ತವೆ. ಇದರಲ್ಲಿ ಸ್ಲೀವ್ ಲೆ‌ಸ್‌ ಮತ್ತು ಡೀಪ್‌ ನೆಕ್‌ ಚೋಲಿ ಯಾ ಬ್ಲೌಸ್‌ ಹೆಚ್ಚು ಚಾಲ್ತಿಯಲ್ಲಿವೆ. ಈ ತರಹದ ಡ್ರೆಸ್‌ ಕ್ಯಾರಿ ಮಾಡಲು ಒಂದು ಚೂರು ಕಲೆ ಇಲ್ಲದ ಹಾಗೂ ಕೂದಲು ರಹಿತ ಸ್ಕಿನ್‌ ಹೊಂದಿರಬೇಕಾದುದು ಅತ್ಯಗತ್ಯ.

ಹೇರ್‌ ರಿಮೂವ್ ‌ನ ಎಲ್ಲಾ ವಿಧಾನಗಳಲ್ಲೂ ಹೇರ್‌ ರಿಮೂವ್ ‌ಕ್ರೀಂ ಬಳಕೆ ಸುಲಭ ಹೌದು, ಕ್ರಿಯಾತ್ಮಕ ಹೌದು, ಅಷ್ಟೇ ಪರಿಣಾಮಕಾರಿ. ಇಂದಿನ ಮಾರುಕಟ್ಟೆಯಲ್ಲಿ ಇಂಥ ಎಷ್ಟೋ ಕ್ರೀಂ ಸುಲಭ ಲಭ್ಯವಿವೆ. ಇದು ಕೆಲವೇ ನಿಮಿಷಗಳಲ್ಲಿ ಅನಗತ್ಯ ಕೂದಲಿನಿಂದ ಮುಕ್ತಿ ಕೊಡಿಸುವುದಲ್ಲದೆ, ಚರ್ಮದ ಆರ್ದ್ರತೆಯನ್ನೂ ಕಾಪಾಡುತ್ತದೆ.

ಆರ್ದ್ರತೆ ಕಡಿಮೆ ಆಗದಿರಲಿ : ಈ ಚಳಿಗಾಲದ ಸೀಸನ್‌ ಋತುಮಾನದ ಬದಲಾವಣೆಗೆ ಮೂಲ. ಹಾಗಿರುವಾಗ ಡ್ರೈ ಸೆನ್ಸಿಟಿವ್ ‌ಸ್ಕಿನ್ ನವರು ತಮ್ಮನ್ನು ತಾವು ಹೈಡ್ರೇಟ್‌ ಆಗಿರಿಸಿಕೊಳ್ಳಬೇಕಾದುದು ಅನಿವಾರ್ಯ.

ಕಂಪ್ಲೀಟ್ಕ್ಲೀನಿಂಗ್‌ : ಹೇರ್‌ ರಿಮೂವ್ ಕ್ರೀಂ ಬಳಕೆಯಿಂದ ಅನಗತ್ಯ ಕೂದಲಿನಿಂದೇನೋ ಮುಕ್ತಿ ಪಡೆದದ್ದಾಯಿತು, ಆದರೆ ಮೊಣಕೈ ಹಾಗೂ ಪಾದಗಳ ಹಿಂಭಾಗ ಮ್ಯಾನೇಜ್‌ ಮಾಡುವುದು ಹೇಗೆ? ಹೇರ್‌ ರಿಮೂವಿಂಗ್‌ ನಂತರ ಸ್ಕಿನ್‌ ರಿಲ್ಯಾಕ್ಸಿಂಗ್ ಟೈಂನ್ನು ಬಳಸಿಕೊಂಡು, ಈ ಮನೆಮದ್ದಿನ ಸಲಹೆ ಅನುಸರಿಸಿ ಪಾದಗಳ ಮೇಲ್ಭಾಗ ಹಾಗೂ ಹಸ್ತದ ಹಿಂಭಾಗವನ್ನೂ ಹೊಳೆಯುವಂತೆ ಮಾಡಿ :

ಬ್ಯಾಲೀಜ್‌ ಯಾ ಓಪನ್‌ ಫುಟ್‌ ವೇರ್‌ ಧರಿಸುವ ಕಾರಣದಿಂದ ಪಾದಗಳ ಹಿಂಭಾಗದ ಮೇಲೆ ಐ ಟ್ಯಾನಿಂಗ್‌ ದೂರಗೊಳಿಸಲೆಂದೇ, ಗಟ್ಟಿ ಕೆನೆ ಮೊಸರಿಗೆ ಚಿಟಕಿ ಅರಿಶಿನ ಬೆರೆಸಿ ಮಾಸ್ಕ್ ಸಿದ್ಧಪಡಿಸಿ ಇದರ ಮೇಲೆ ಹೆಚ್ಚಿರಿ. ಇದನ್ನು ಹಸ್ತದ ಹಿಂಭಾಗಕ್ಕೂ ಹಚ್ಚಿಕೊಳ್ಳಬಹುದು.

ಒಡೆದ ಹಿಮ್ಮಡಿಗಳಿಂದ ಮುಕ್ತಿ ಪಡೆಯಲು ಮಾಯಿಶ್ಚರೈಸಿಂಗ್‌ ಬಾಡಿ ಲೋಶನ್‌ ನ್ನು ತುಸು ಬಿಸಿ ನೀರಿನಲ್ಲಿ ಕದಡಿಕೊಂಡು, ಅದರಲ್ಲಿ  ಪಾದಗಳನ್ನು ಮುಳುಗಿಸಿಡಿ. 15 ನಿಮಿಷಗಳ ನಂತರ ಸಾಫ್ಟ್ ಸ್ಕ್ರಬರ್‌ ನಿಂದ ಉಜ್ಜಿ ಉಜ್ಜಿ ಹಿಮ್ಮಡಿಗಳ ಡೆಡ್‌ ಸ್ಕಿನ್ ತೊಲಗಿಸಿಬಿಡಿ.

ಈ ಉಪಾಯಗಳನ್ನು ಅನುಸರಿಸಿ, ನೀವು ಕೆಲವೇ ನಿಮಿಷಗಳಲ್ಲಿ ಒಂದಿಷ್ಟೂ ಕಲೆ ಇಲ್ಲದ, ಸುಧಾರಿತ ಸ್ಕಿನ್‌ ಪಡೆದು, ಮೇಕಪ್ ನಂತರ ಗಾರ್ಜಿಯಸ್‌ ಲುಕ್ಸ್ ಪಡೆಯುವಿರಿ.

ಪಿ. ಅನಿತಾ

ಹೇರ್ರಿಮೂವ್ ಕ್ರೀಮಿನ ಲಾಭಗಳು

ಸಮಯಾಭಾವ ಇದ್ದಾಗ ಅನಗತ್ಯ ಕೂದಲ ನಿವಾರಣೆ ಮಾಡುವುದು ಸುಲಭವಲ್ಲ. ಹಾಗಾಗಿ ಇದಕ್ಕೆ ಬೆಸ್ಟ್ ಆಪ್ಶನ್‌ ಎಂದರೆ ಹೇರ್‌ ರಿಮೂವಿಂಗ್‌ ಕ್ರೀಂ. ಮಾರುಕಟ್ಟೆಯಲ್ಲಿ ಇವು ಹಲವು ಬ್ರಾಂಡ್‌ ಗಳಲ್ಲಿ ಲಭ್ಯ. ವಿಟಮಿನ್ಸ್‌, ಲೈಕೊರೈಸ್‌ ಎಕ್ಸ್ ಟ್ರಾ, ಜೋಜೋಬಾ ಆಯಿಲ್‌, ಪೆಕ್ವಿಟನ್‌ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇದರ ಆ್ಯಂಟಿ ಡಾರ್ಕ್‌ ನಿಂಗ್‌ ಮಾಯಿಶ್ಚರೈಸರ್‌, ಅನಗತ್ಯ ಕೂದಲ ನಿವಾರಣೆ ನಂತರ, ಸ್ಕಿನ್‌ ಟೋನ್‌ ಸಹ ಹೊಳೆಯುವಂತೆ ಮಾಡಬಲ್ಲದು. ಹೀಗಾಗಿ ಹೇರ್‌ ರಿಮೂವ್ ‌ಕ್ರೀಂ ಬಳಕೆಯಿಂದ ಕೆಲವೇ ನಿಮಿಷಗಳಲ್ಲಿ ಮೃದು, ಕೋಮಲ ಚರ್ಮ ಪಡೆಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ