ಇಂದಿನ ಆಧುನಿಕ ತರುಣಿಯರ ಮನದಲ್ಲಿ ಸೌಂದರ್ಯಕ್ಕೆ ಸಂಬಂಧಿಸಿದಂತೆ, ಹಲವಾರು ಪ್ರಶ್ನೆಗಳು ಏಳುತ್ತಿರುತ್ತವೆ. ಕೂದಲಿನ ಆರೈಕೆ ಮಾಡಿಕೊಳ್ಳುವುದು ಹೇಗೆ ಎಂಬುದೇ ಅತಿ ದೊಡ್ಡ ಪ್ರಶ್ನೆ. ಯಾವ ಕೇಶ ಶೈಲಿ ಅನುಸರಿಸಿದರೆ ಪರ್ಫೆಕ್ಟ್ ಲುಕ್‌ ಸಿಗುತ್ತದೆ, ರಫ್‌ ಕೂದಲನ್ನು ನಿಭಾಯಿಸುವುದು ಹೇಗೆ? ಇತ್ಯಾದಿ.

ಕೂದಲನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಮತ್ತು ಹೊಸ ಹೊಸ ಹೇರ್‌ ಸ್ಟೈಲ್ ‌ಗಳ ಬಗ್ಗೆ ತಜ್ಞರು ನೀಡಿರುವ ಸಲಹೆಗಳನ್ನು ಅನುಸರಿಸಿ ಈ ಪ್ರಶ್ನೆಗಳಿಗೆ ಸಮಾಧಾನ ಹುಡುಕೋಣ.

ಹೀಗಿರಲಿ ಆರೈಕೆ

ನಗರ ಜೀವನದಲ್ಲಿ ಸತತ ಹೆಚ್ಚುತ್ತಿರುವ ಮಾಲಿನ್ಯತೆಯಿಂದಾಗಿ ಕೂದಲು ದುರ್ಬಲ ಹಾಗೂ ನಿರ್ಜೀವ ಆಗುತ್ತದೆ. ಹೀಗಾಗಿ ಈ ಸಲಹೆಗಳನ್ನು ಅನುಸರಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಕೂದಲಿಗೆ ಪೋಷಣೆ ಒದಗಿಸಲು ತೆಂಗಿನ ಹಾಲು ಬಳಸಿಕೊಳ್ಳಿ. ತೆಂಗಿನ ಹಾಲು ತಲೆಗೂದಲಿಗೆ ಹೆಚ್ಚಿನ ಪೋಷಣೆ ನೀಡುವುದಲ್ಲದೆ, ಇದು ಕೂದಲನ್ನು ಉದ್ದ, ದಟ್ಟ ಹಾಗೂ ಕಡು ಕಪ್ಪಿನ ಕಾಂತಿ ತುಂಬಿಕೊಳ್ಳುವಂತೆ ಮಾಡುತ್ತದೆ. ನಿಮ್ಮ ಕೂದಲು ಹೆಚ್ಚು ಶುಷ್ಕವಾಗಿದ್ದರೆ, ಅಗತ್ಯ ತೆಂಗಿನ ಹಾಲಿನಿಂದ ತಿಕ್ಕಿ ತಲೆ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಸಾಫ್ಟ್ ಸಿಲ್ಕಿ ಆಗುತ್ತದೆ.

ಕೂದಲನ್ನು ಹೊಳೆ ಹೊಳೆಯುವಂತೆ ಮಾಡಲು ವಿನಿಗರ್‌ ಬಳಕೆ ಸಹ ಒಳ್ಳೆಯದು. ವಿನಿಗರ್‌ ನಲ್ಲಿ ಪೊಟಾಶಿಯಂ ಮತ್ತು ಗುಣಕಾರಿ ಎನ್‌ಝೈಮ್ಸ್ ತುಂಬಿದ್ದು ತಲೆಯ ತುರಿಕೆ, ಹೊಟ್ಟಿನ ಸಮಸ್ಯೆ ನಿವಾರಿಸುತ್ತದೆ.

ವಾರದಲ್ಲಿ 2 ಸಲ ಕೂದಲಿಗೆ ಬಾದಾಮಿ, ಆಲಿವ್ ‌ಅಥವಾ ಕೊಬ್ಬರಿ ಎಣ್ಣೆಯಿಂದ ಮಸಾಜ್‌ ಮಾಡುವುದರಿಂದ ಕೂದಲು ಆರೋಕ್ಯಕರವಾಗಿರುತ್ತದೆ.

ಕೂದಲಿನ ಆರೈಕೆಗಾಗಿ ಪ್ರೋಟೀನ್‌ ಟ್ರೀಟ್‌ ಮೆಂಟ್‌ ಅಗತ್ಯ ಪಡೆದುಕೊಳ್ಳಿ. ಇದಕ್ಕಾಗಿ 1 ಮೊಟ್ಟೆ ಒಡೆದುಕೊಂಡು, ಒದ್ದೆ ಕೂದಲಿಗೆ ಸಮನಾಗಿ ಹಚ್ಚಿರಿ. 15-20 ನಿಮಿಷ ಹಾಗೇ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ.

ಕೂದಲಿನ ಬುಡಭಾಗದಿಂದ ಹೊಟ್ಟು ತೊಲಗಿಸಲು 3-4 ಚಮಚ ಮೊಸರಿಗೆ, ತುಸು ಪುಡಿ ಮೆಣಸು, ಬೆರೆಸಿ ತಲೆಗೆ ತಿಕ್ಕಿರಿ. ಅರ್ಧ ಗಂಟೆ ನಂತರ ಬಿಸಿ ನೀರಿನಿಂದ ತೊಳೆಯಿರಿ. ವಾರದಲ್ಲಿ 2 ಸಲ ಹೀಗೆ ಮಾಡಿ.

ಆ್ಯಪಲ್ ವಿನಿಗರ್‌ ಸಹ ಕೂದಲಿಗೆ ಹೊಸ ಜೀವ ನೀಡಬಲ್ಲದು. ಇದನ್ನು ಕೂದಲಿಗೆ ಹಚ್ಚಿ 5-6 ನಿಮಿಷ ಬಿಡಿ. ತೊಳೆದ ನಂತರ ಗಮನಿಸಿದರೆ ಕೂದಲಲ್ಲಿ ಹೊಸ ಕಾಂತಿ ಮೂಡಿರುತ್ತದೆ.

ವಾರದಲ್ಲಿ 2 ಸಲ ಆ್ಯಲೋವೇರಾ ಜೆಲ್ ‌ನಿಂದ ಕೂದಲಿನ ಬುಡವನ್ನು ಮಸಾಜ್‌ ಮಾಡಿ. ಹೀಗೆ ಮಾಡುವುದರಿಂದ ಕೂದಲಿಗೆ ಹೊಸ ಜೀವಕಳೆ ಬರುತ್ತದೆ. ಆಗ ಕೂದಲುದುರುವಿಕೆ ಸಹಜವಾಗಿ ನಿಲ್ಲುತ್ತದೆ.

ಒದ್ದೆ ಕೂದಲನ್ನು ಎಂದೂ ಬಾಚಬೇಡಿ. ಇದರಿಂದ ಕೂದಲು ದುರ್ಬಲವಾಗುತ್ತದೆ.

ಕೂದಲನ್ನು ತುಸು ಒದ್ದೆ ಮಾಡಿಕೊಂಡು ಸೀರಮ್ ಹಚ್ಚಿರಿ. ಇದು ಕೂದಲನ್ನು ಹೆಚ್ಚು ಸ್ಮೂತ್‌ ಗೊಳಿಸುತ್ತದೆ. ಇದರಿಂದ ಕೂದಲು ಕೆದರಿದಂತೆ ಕೆಟ್ಟದಾಗಿ ಕಾಣುವುದಿಲ್ಲ. ನಿಮ್ಮದು ಡ್ರೈ ಯಾ ಕರ್ಲಿ ಹೇರ್‌ ಆಗಿದ್ದರೆ, ಆಗ ನೀವು ಹೇರ್‌ ಸೀರಮ್ ಬಳಸಲೇಬೇಕು. ಆಗ ನಿಮಗೇ ವ್ಯತ್ಯಾಸ ಗೊತ್ತಾಗುತ್ತದೆ.

ಕೂದಲಿಗೆ ಎಂದೂ ಕುದಿ ಕುದಿಯುವ ನೀರು ಬಳಸಬಾರದು. ಉಗುರು ಬೆಚ್ಚಗೆ ಸಹಿಸುವಂತಿದ್ದರೆ ಸಾಕು.

ತಿಂಗಳಿಗೆ 2 ಸಲ ಅಗತ್ಯ ಸ್ಪಾ ಮಾಡಿಸಿ. ನೀವು ಪಾರ್ಲರ್‌ ಗೆ ಹೋಗಲು ಆಗದಿದ್ದರೆ ಮನೆಯಲ್ಲೇ  ಮಾಡಿ.

ವಾರಕ್ಕೆ ಒಮ್ಮೆ ಕೂದಲಿಗೆ ಅಗತ್ಯ ಸ್ಟೀಮ್ ಕೊಡಿ. ನಿಮ್ಮ ಬಳಿ ಸ್ಟೀಮರ್‌ ಇಲ್ಲದಿದ್ದರೆ, ಬಿಸಿ ನೀರಲ್ಲಿ ಅದ್ದಿ ಹಿಂಡಿದ ಟರ್ಕಿ ಟವೆಲ್ ‌ನ್ನು ತಲೆಗೆ ಬಿಗಿಯಾಗಿ ಸುತ್ತಿಕೊಳ್ಳಿ.

ಪರ್ಫೆಕ್ಟ್ ಹೇರ್‌ ಸ್ಟೈಲ್ ಗಾಗಿ ಮುಖಕ್ಕೆ ಮೇಕಪ್‌ ಮಾಡಿ ಹೇಗೋ ಅದನ್ನು ರೆಡಿ ಮಾಡಬಹುದು. ಆದರೆ ಪರ್ಫೆಕ್ಟ್ ಲುಕ್ಸ್ ಗಾಗಿ ಇತರರಿಗಿಂತ ವಿಭಿನ್ನವಾದ ಹೇರ್‌ ಸ್ಟೈಲ್ ನಿಮ್ಮದಾಗಿರಬೇಕು. ಇದಕ್ಕಾಗಿ ಕೆಳಗಿನ ಸಲಹೆ ಗಮನಿಸಿ :

ನೀವು ವೆಡ್ಡಿಂಗ್‌ ಪಾರ್ಟಿಗಾಗಿ ಹೇರ್‌ ಸ್ಟೈಲ್ ಮಾಡಿಕೊಳ್ಳುವಾಗ, ನಿಮ್ಮ ಕೂದಲು ನೀಟಾಗಿ ತೊಳೆದು ಒಣಗಿಸಿರಬೇಕು.

ಆಗ ಕೂದಲು ಜಿಡ್ಡು ಜಿಡ್ಡಾಗಿರಬಾರದು.

ಹೇರ್‌ ಸ್ಟೈಲ್ ‌ಮಾಡಿಕೊಳ್ಳುವ ಮೊದಲು ಡ್ರೈಯರ್‌ ಬಳಸಿರಿ.

ನೀವು ಕರ್ಲಿಂಗ್‌ ಮಾಡುವವರಿದ್ದರೆ, ಅದಕ್ಕೆ ಮೊದಲು ಹೇರ್‌ ಮೂಸ್‌ ಬಳಸಿರಿ. ಇದರಿಂದಾಗಿ ವರ್ಕ್ಸ್‌ ಬಹಳ ಹೊತ್ತು ನಿಲ್ಲುತ್ತದೆ.

ಕೂದಲು ಬಹಳ ಡ್ರೈ ಆಗಿದ್ದರೆ ಅಗತ್ಯ ಸೀರಮ್ ಹಚ್ಚಿರಿ.

ಸಿಂಪಲ್ ಜಡೆಯನ್ನು ಹೀಗೆ ಸ್ಟೈಲಿಶ್‌ ಆಗಿಸಿ: ಫ್ಯಾಷನೆಬಲ್ ಡ್ರೆಸ್‌ ಜೊತೆ ಬಾಲಿವುಡ್‌ ಸೆಲೆಬ್ರಿಟೀಸ್‌ ಸಹ ಜಡೆ ಹೆಣೆದುಕೊಳ್ಳಲು ಬಯಸುತ್ತಾರೆ. ನೀವು ಸಹ ಹೈ ಪೋನಿಟೇಲ್‌, ಫಿಶ್‌ ಟೇಲ್‌, ಸಾಗರ್‌ ಚೋಟಿ ಇತ್ಯಾದಿ ಟ್ರೈ ಮಾಡಬಹುದು. ಇದರಿಂದಾಗಿ ನಿಮ್ಮ ಕೂದಲು ಹರಡಿದಂತೆ ಕಾಣುವುದಿಲ್ಲ, ಜೊತೆಗೆ ನೀವು ಆಕರ್ಷಕವಾಗಿ ಕಾಣುವಿರಿ.

ಹಾಫ್ಬನ್‌ : ಸೆಲೆಬ್ಸ್ ನಿಂದ ಹಿಡಿದು ಸಾಮಾನ್ಯರವರೆಗೂ ಪ್ರತಿಯೊಬ್ಬರಿಗೂ ಹಾಫ್‌ ಬನ್‌ ಇಷ್ಟವಾಗುತ್ತದೆ. ಈ ತರಹದ ಹೇರ್‌ ಸ್ಟೈಲ್‌ ಮಾಡಿಕೊಳ್ಳಲು ನಿಮ್ಮ ಮುಂಭಾಗದ ಕೂದಲನ್ನು ಬನ್‌ ತರಹ ಕಟ್ಟಿ ಹಿಂಭಾಗದ ಕೂದಲನ್ನು ಹಾಗೇ ಬಿಡಿ. ಈ ಹೇರ್‌ ಸ್ಟೈಲ್ ‌ನ್ನು ವೆಸ್ಟರ್ನ್‌ ಲುಕ್ಸ್ ನಲ್ಲಿ ಟ್ರೈ ಮಾಡಿ. ಬನ್‌ ಹೆಚ್ಚು ಹೊತ್ತು ಸ್ಥಿರವಾಗಿ ಉಳಿಯಲು ನೀವು ಹೇರ್‌ ಸ್ಪ್ರೇ ಮತ್ತು ಸೀರಮ್ ಸಹ ಬಳಸಬಹುದು.

ಮೆಸ್ಸಿ ಲುಕ್ಹೇರ್ಸ್ಟೈಲ್ ‌: ಮೆಸ್ಸಿ ಲುಕ್ಸ್ ಗಾಗಿ ನೀವು ಕೂದಲನ್ನು 6-7 ಭಾಗಗಳಲ್ಲಿ ಉಲ್ಟಾ ಕಟ್ಟಿ ಜಡೆ ಹೆಣೆದು ಇಡೀ ರಾತ್ರಿ ಹಾಗೇ ಬಿಡಿ, ಮಾರನೇ ಬೆಳಗ್ಗೆ ಸೆಟ್‌ ಮಾಡಿ. ಕರ್ಲ್ ನಂತರ ಬೆರಳ ಸಹಾಯದಿಂದ ಇದನ್ನು ಸರಿಪಡಿಸಿ ಸೀದಾ ಆಗಿಸಿ. ಇದೀಗ ನೀವು ಪರ್ಫೆಕ್ಟ್ ಮೆಸ್ಸಿ ಲುಕ್‌ ಪಡೆಯುವಿರಿ. ನಿಮಗೆ ಇನ್‌ ಸ್ಟೆಂಟ್‌ ಮೆಸ್ಸಿ ಲುಕ್‌ ಬೇಕಿದ್ದರೆ, ತಕ್ಷಣ ಕರ್ಲ್ ಮಾಡಿಸಿ.

ಸೆಲೆಬ್ರಿಟಿ ಲುಕ್ಹೇರ್ಸ್ಟೈಲ್ ‌: ಈ ಹೇರ್‌ ಸ್ಟೈಲ್ ವೆಸ್ಟರ್ನ್‌ ಡ್ರೆಸ್‌ ಅಥವಾ ಫಾರ್ಮಲ್ ಎರಡಕ್ಕೂ ಹೊಂದುತ್ತದೆ. ಈ ಲುಕ್ಸ್ ಗಾಗಿ ನೀವು ಬೈತಲೆ ತೆಗೆದು ಕೂದಲನ್ನು 2 ಭಾಗ ಮಾಡಿ. ಕೂದಲನ್ನು ಕೆಳಗಿನ ಭಾಗದಿಂದ ಕರ್ಲ್ ಮಾಡಿ ಹಾಗೂ ಹಿಂಭಾಗದ ಕೂದಲನ್ನು ಪೋನಿ ಮಾಡಿ. ಹೈ ಪೋನಿ ಮಾಡಬಾರದು ಎಂಬುದನ್ನು ನೆನಪಿಡಿ. ಹೇರ್‌ ಸ್ಪ್ರೇ ಯೂಸ್‌ ಮಾಡಿ ಕೂದಲನ್ನು ಸೆಟ್ ಮಾಡಿ.

ವೆಸ್ಟರ್ನ್ಬನ್‌ : ಪಾರ್ಟಿ ಲುಕ್‌ ಹೇರ್‌ ಸ್ಟೈಲ್ ಗಾಗಿ ಬನ್‌ ಮಾಡಿಕೊಳ್ಳುವುದು ಅತಿ ಜನಪ್ರಿಯ. ಬನ್‌ ವಿಶೇಷತೆ ಎಂದರೆ, ಇದು ವೆಸ್ಟರ್ನ್‌ ಇಂಡಿಯನ್‌ ಎರಡೂ ಬಗೆ ಡ್ರೆಸೆಸ್‌ ಗೂ ಹೊಂದುತ್ತದೆ. ನೀವು ಹೇರ್‌ ಸ್ಟೈಲ್ ಮಾಡಿಕೊಳ್ಳಲು ಹೆಚ್ಚು ಕನ್‌ ಫ್ಯೂಸ್ ಆಗಿದ್ದರೆ, ವೆಸ್ಟರ್ನ್‌ ಬನ್‌ ಮಾಡಿಕೊಳ್ಳಿ.

ಅದನ್ನು ಈ ರೀತಿ ಮಾಡಿ :

ವೆಸ್ಟರ್ನ್‌ ಬನ್‌ ಹೇರ್‌ ಸ್ಟೈಲ್ ‌ಗಾಗಿ ಕೂದಲನ್ನು ಬ್ಲಾಸ್ಟ್ ಬ್ಲೋ ಡ್ರೈ ಮಾಡಿ.

ನಿಮ್ಮ ಕೂದಲಿನ ಟೆಕ್ಸ್ ಚರ್‌ ಗೆ ತಕ್ಕಂತೆ ಕ್ರಂಪಿಂಗ್‌ ನ್ನು ಬಳಸಿಕೊಳ್ಳಿ.

ಕೂದಲನ್ನು 2 ಭಾಗ ಮಾಡಿ, ಬ್ಯಾಕ್‌ ಸೈಡ್‌ ನಿಂದ ಸೆಂಟರ್‌ ನ ಕೂದಲನ್ನು ತೆಗೆದುಕೊಂಡು ಬನ್‌ ಮಾಡಿ.

ಬನ್‌ ಗಾಗಿ ಟಾಂಗ್‌ ರಾಡ್‌ ಬಳಸಿಕೊಳ್ಳಿ.

ಬ್ಯಾಕ್‌ ಸೈಡ್‌ ನಲ್ಲಿ ಉಳಿದಿರುವ ಕೂದಲನ್ನು ಕರ್ಲ್ ಮಾಡಿ.

ಈಗ ಬನ್‌ ಸೈಜ್‌ ಗೆ ತಕ್ಕಂತೆ ಹೇರ್‌ ಪಿನ್‌ ನೆರವಿನಿಂದ ಸ್ಟಫಿಂಗ್‌ ಮಾಡಿ.

ವೆಸ್ಟರ್ನ್‌ ಬನ್‌ ರೆಡಿ ಆದಾಗ, ಹೇರ್‌ ಸ್ಪ್ರೇ ಬಳಸಿಕೊಳ್ಳಿ. ಆಗ ಬನ್‌ ಕೆಡುವುದಿಲ್ಲ.

ಮೋನಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ