ನಯನಾ ನೋಡಲು ಬಹಳ ಸುಂದರವಾಗಿದ್ದಳು. ಎತ್ತರದ ಕಾಯ, ಆಕರ್ಷಕ ಕಣ್ಣುಗಳು, ಉದ್ದನೆಯ ಕೂದಲು. ಯಾರೇ ಆಗಲಿ ಅವಳನ್ನು ಹೊಗಳದೇ ಇರುವುದಿಲ್ಲ. ಎಂಬಿಎ ಮುಗಿಸಿದ ಬಳಿಕ ಅವಳು ತನ್ನ ಮೊದಲ ಜಾಬ್‌ ಗಾಗಿ ಸಂದರ್ಶನ ಕೊಡಲೆಂದು ಹೊರಟು ನಿಂತಾಗ ಅವಳು ಯಶಸ್ವಿಯಾಗುತ್ತಾಳೆಂದೇ ಎಲ್ಲರ ಅನಿಸಿಕೆಯಾಗಿತ್ತು. ಇಂದು ನಾನು ಯಶಸ್ವಿಯಾಗಿಯೇ ಆಗುತ್ತೇನೆಂಬುದು ಅವಳ ಅಂತರಾಳದ ಅಪೇಕ್ಷೆಯಾಗಿತ್ತು. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಅವಳು ಸಮರ್ಪಕವಾಗಿಯೇ ಉತ್ತರ ಕೊಟ್ಟಿದ್ದಳು.

ನಯನಾಗೆ ಸಂದರ್ಶನ ಸಮಯದಲ್ಲಿ ದೀಪಾಳ ಭೇಟಿಯಾಯಿತು. ಅವಳು ಕೂಡ ನಯನಾಳ ಹಾಗೆಯೇ ಇದ್ದಳು. ಆದರೂ ನಯನಾಳಿಗೆ ದೀಪಾಳೇ ಸೆಕ್ರೆಟರಿ ಪೋಸ್ಟ್ ಗೆ ಆಯ್ಕೆಯಾಗಬಹುದು ಎಂದು ಅನಿಸಲಾರಂಭಿಸಿತು. ನಯನಾಳ ನಿರೀಕ್ಷೆ ಸುಳ್ಳಾಗಲಿಲ್ಲ. ದೀಪಾಳೇ ಸೆಕ್ರೆಟರಿ ಹುದ್ದೆಗೆ ಆಯ್ಕೆಯಾದಳು.

ನಯನಾಳ ನಿಕಟವರ್ತಿಗಳಿಗೆ ಈ ವಿಷಯ ಗೊತ್ತಾದಾಗ ಸಂದರ್ಶಕರು ದೀಪಾಳ ಪರ ವಹಿಸಿದ್ದಾರೆಂದು ಮಾತನಾಡಿಕೊಂಡರು. ಆ ಮಾತಿಗೆ ಸ್ವತಃ ನಯನಾಳೇ ಅವರಿಗೆ ಉತ್ತರ ಕೊಟ್ಟುಕೊಂಡಳು. ಹಾಗೇನೂ ಇಲ್ಲ. ದೀಪಾಳಲ್ಲಿ ಅಂತಹ ವಿಶ್ವಾಸ ಇತ್ತು. ಹಾಗಾಗಿ ಅವಳು ಆ ಪೋಸ್ಟ್ ಗೆ ಆಯ್ಕೆಯಾದಳು. ನಾನು ಅದರಲ್ಲಿ ಹಿಂದೆಬಿದ್ದೆ, ಎಂದು ಒಪ್ಪಿಕೊಂಡಳು.

ನಯನಾ ಆ ಬಳಿಕ ಕೆರಿಯರ್‌ ಕೌನ್ಸಿಲರ್‌ ಜೊತೆಗೆ ಚರ್ಚಿಸಿದಳು. ಆಗ ಅವರು ಹೇಳಿದ್ದಿಷ್ಟು, ``ನಿಮ್ಮ ಪರ್ಸನಾಲಿಟಿ ಚೆನ್ನಾಗಿದೆ. ಆದರೆ ಅದಕ್ಕೆ ಗ್ರೂಮಿಂಗ್‌ ನ ಅವಶ್ಯಕತೆ ಇದೆ.''

ಪರ್ಸನಾಲಿಟಿ ಗ್ರೂಮಿಂಗ್‌ನ ಟಿಪ್ಸ್ ಹಾಗೂ ಮಹತ್ವವನ್ನು ನೀವು ತಿಳಿದುಕೊಳ್ಳಿ......

ಹೆಚ್ಚು ಆತ್ಮವಿಶ್ವಾಸ ಪರ್ಸನಾಲಿಟಿಯ ಮೋಹಕ ರೂಪ ಕೆಲಸದ ಪ್ರಕಾರ ನಿರ್ಧರಿಸಲ್ಪಡುತ್ತದೆ. ಕೆರಿಯರ್‌ ಕೌನ್ಸೆಲರ್‌ ಸೌಮ್ಯಾ ಚತುರ್ವೇದಿ ಹೀಗೆ ಹೇಳುತ್ತಾರೆ, ``ನೀವು ಯಾವ ಪ್ರೊಫೆಷನ್‌ ನಲ್ಲಿದ್ದೀರೊ ಅದಕ್ಕೆ ತಕ್ಕಂತೆಯೇ ಪೋಷಾಕು ಧರಿಸಿ. ನಿಮ್ಮ ಮಾತಿನ ಧಾಟಿ ಹೇಗಿರಬೇಕೆಂದರೆ, ಒಂದು ಸಲ ಮಾತನಾಡಿಸಿದ ವ್ಯಕ್ತಿ ನಿಮ್ಮ ಜೊತೆ ಮತ್ತೆ ಮಾತನಾಡಲು ತವಕಿಸಬೇಕು. ಗ್ಲಾಮರ್‌ ನಿಂದ ತುಂಬಿಕೊಂಡಿರುವ ಜಾಬ್‌ ಗಳಲ್ಲಿ ಪರ್ಸನಾಲಿಟಿ ತುಂಬಾ ಮುಖ್ಯ.''

ವ್ಯಕ್ತಿತ್ವಕ್ಕೆ ತಕ್ಕ ಪೋಷಾಕು

ಫ್ಯಾಷನ್‌ ಡಿಸೈನರ್‌ ಸ್ನೇಹಾ ಹೇಳುವುದೇನೆಂದರೆ, ``ಪರ್ಸನಾಲಿಟಿ ಗ್ರೂಮಿಂಗ್‌ ನಲ್ಲಿ ಎಲ್ಲಕ್ಕೂ ಮುಖ್ಯವಾದುದೆಂದರೆ, ಡ್ರೆಸ್ ಸೆನ್ಸ್, ನಿಮ್ಮ ಡ್ರೆಸ್‌ ಸೆನ್ಸ್ ಎಷ್ಟು ಚೆನ್ನಾಗಿರುತ್ತದೊ, ಎದುರುಗಿನ ವ್ಯಕ್ತಿಯ ಮೇಲೆ ಅದು ಅಷ್ಟೇ ಒಳ್ಳೆಯ ಪರಿಣಾಮ ಬೀರುತ್ತದೆ. ಒಳ್ಳೆಯ ಪರ್ಸನಾಲಿಟಿಗೆ ಅವಶ್ಯವಾದುದೆಂದರೆ, ಯಾವ ಸಂದರ್ಭಕ್ಕೆ ಎಂತಹ ಡ್ರೆಸ್‌ ಧರಿಸಬೇಕೆಂದು ನಿಮಗೆ ಚೆನ್ನಾಗಿ ಗೊತ್ತಿರಬೇಕು.''

ಮೇಕಪ್ಸರಳಾಗಿರಲಿ

ಬ್ಯೂಟಿ ಎಕ್ಸ್ ಪರ್ಟ್‌ ಅಶ್ವಿನಿ ಹೇಳುವುದೇನೆಂದರೆ, ``ಪರ್ಸನಾಲಿಟಿ ಗ್ರೂಮಿಂಗ್‌ ನಲ್ಲಿ ಮೇಕಪ್‌ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮೇಕಪ್‌ ಮಾಡುವ ಮುಂಚೆ ನಾನು ಯಾವ ಸ್ಥಳಕ್ಕೆ ಹೋಗಬೇಕಿದೆ ಎಂಬುದರ ಅರಿವು ನಿಮಗಿರಬೇಕು. ನೀವು ಒಂದು ಪಾರ್ಟಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ, ನಿಮ್ಮ ಮೇಕಪ್‌ ಕಲರ್‌ ಫುಲ್ ಆಗಿರಲಿ. ಆಫೀಸ್‌ ಗಾಗಿ ಮೇಕಪ್‌ ಬೇರೆ ರೀತಿಯದ್ದೇ ಆಗಿರಬೇಕು. ಅತ್ಯಂತ ಪ್ರಖರ ಮೇಕಪ್‌ ಆಫೀಸಿಗೆ ತಕ್ಕುದಲ್ಲ. ಸಾಧಾರಣ ಮೇಕಪ್‌ ನಿಮಗೆ ಹೆಚ್ಚು ಆಕರ್ಷಕವಾಗಿ ಕಂಡುಬರುತ್ತದೆ. ನೀವು ಯಾವ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವಿರೋ, ನಿಮ್ಮ ಮೇಕಪ್‌ ಕೂಡ ಅದಕ್ಕೆ ತಕ್ಕಂತೆಯೇ ಇರಲಿ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ