ಇಂದಿನ ಮಹಿಳೆಯರು ಯಾವಾಗಲೂ ಫಿಟ್‌ಫೈನ್‌ ಆಗಿರಲು ಬಯಸುತ್ತಾರೆ. ಆದ್ದರಿಂದ ಹೌಸ್‌ ವೈಫ್‌ ಆಗಲಿ, ವರ್ಕಿಂಗ್‌ ವುಮನ್‌ ಆಗಲಿ, ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅತ್ಯಶ್ಯಕವೆಂದು ಭಾವಿಸುತ್ತಾರೆ. ಮೇಕಪ್‌ ಆರ್ಟಿಸ್ಟ್ ವೀಣಾರವರು ಗೃಹಶೋಭಾ ಆಯೋಜಿಸಿದ್ದ ಫೇಬ್‌ ಮೀಟಿಂಗ್‌ ಗಾಗಿ ಬಂದಿದ್ದ ಮಹಿಳೆಯರಿಗೆ ಮೇಕಪ್‌ ಗೆ ಸಂಬಂಧಿಸಿದ ಅಂಶಗಳನ್ನು ವಿವರಿಸಿದರು.

ಇವುಗಳನ್ನು ಗಮನದಲ್ಲಿಡಿ

ಮಹಿಳೆಯರು ತಮ್ಮ ಸೌಂದರ್ಯ ಸಂವರ್ಧನೆಗಾಗಿ ಮೇಕಪ್‌ ಬಳಸುತ್ತಾರೆ. ಮೇಕಪ್‌ ಮಾಡುವಾಗ ಕೆಲವು ಅಂಶಗಳ ಬಗ್ಗೆ ಗಮನವಿರಿಸಬೇಕು.

ಮೇಕಪ್‌ ಗೆ ಮೊದಲು ಮುಖವನ್ನು ಫೇಸ್‌ ವಾಶ್‌ ನಿಂದ ಸ್ವಚ್ಛಗೊಳಿಸಿ. ನಂತರ ಮಂಜುಗಡ್ಡೆಯಿಂದ 5 ನಿಮಿಷ ಕಾಲ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಚರ್ಮ ಅರಳುತ್ತದೆ. ನಿಮ್ಮ ಮುಖದಲ್ಲಿ ಊತ ಅಥವಾ ಮೊಡವೆ ಇದ್ದರೆ ಇದರಿಂದ ಅನುಕೂಲವಾಗುತ್ತದೆ. ಇದಾದ ಮೇಲೆ ಕ್ಲೆನ್ಸರ್‌ ಅಥವಾ ಟೋನರ್‌ ನ್ನು ಬಳಸಬಹುದು. ಇದರಿಂದ ಮಖಕ್ಕೆ ಗ್ಲೋ ದೊರೆಯುತ್ತದೆ.

ಹವಾಮಾನದ ಬದಲಾವಣೆಯಿಂದ ಚರ್ಮದಲ್ಲಿಯೂ ಬದಲಾವಣೆ ಆಗತೊಡಗುತ್ತದೆ. ಚರ್ಮ ಆರೋಗ್ಯವಾಗಿರಬೇಕಾದರೆ ಅದರಲ್ಲಿ ತೇವಾಂಶವಿರಬೇಕು. ಇಲ್ಲದಿದ್ದರೆ ಅದು ಶುಷ್ಕವಾಗಿ ತೋರುತ್ತದೆ. ಅದಕ್ಕಾಗಿ ಮುಖಕ್ಕೆ ಮಾಯಿಶ್ಚರೈಸರ್‌ ಹಚ್ಚಿ. ಆಗ ಮುಖದಲ್ಲಿ ತೇವಾಂಶ ಉಳಿದಿರುತ್ತದೆ. ಆಯ್ಲಿ ಸ್ಕಿನ್‌ ಗೆ ಆಯಿಲ್ ‌ಫ್ರೀ ಮಾಯಿಶ್ಚರೈಸರ್‌ ಬಳಸಬೇಕು.

ನಿಮ್ಮ ಮುಖ ಕಳೆಗುಂದಿದ್ದರೆ ಲೈಟ್‌ ಶೇಡ್‌ ನ ಲಿಪ್‌ ಸ್ಟಿಕ್‌ ಹಚ್ಚಬೇಡಿ. ಏಕೆಂದರೆ ಅದರಿಂದ ಕಾಯಿಲೆಯ ಮುಖದಂತೆ ಕಾಣುತ್ತದೆ. ನಿಮ್ಮದು ಆಯ್ಲಿ ಸ್ಕಿನ್‌ ಆದರೆ ಆಯಿಲ್ ಫ್ರೀ ಪ್ರಾಡಕ್ಟ್ಸ್ ನ್ನೇ ಬಳಸಿ.

ಮೇಕಪ್‌ ಮಾಡುವಾಗ ಕೆಲವು ಮಹಿಳೆಯರು ಪ್ರೈಮರ್‌ ಹಚ್ಚುವುದೇ ಇಲ್ಲ. ಈ ಬಗ್ಗೆ ಮೇಕಪ್‌ ಆರ್ಟಿಸ್ಟ್ ವೀಣಾ ಹೇಳುವುದೇನೆಂದರೆ, ಮಾಯಿಶ್ಚರೈಸರ್‌ ಅಥವಾ ಫೌಂಡೇಶನ್‌ ದಿನ ಪೂರ್ತಿ ಉಳಿಯಲು ಪ್ರೈಮರ್‌ ಒಂದು ಆಧಾರ ಒದಗಿಸಿಕೊಡುತ್ತದೆ. ನಿಮ್ಮದು ಆಯ್ಲಿ ಸ್ಕಿನ್‌ ಆದರೆ ಜೆಲ್ ‌ಬೇಸ್ಡ್ ಪ್ರೈಮರ್‌ ನ್ನೇ ಬಳಸಿ. ಡ್ರೈಸ್ಕಿನ್‌ ಗೆ ಆಯಿಲ್ ಬೇಸ್ಡ್ ಪ್ರೈಮರ್‌ ನ್ನು ಬಳಸಬಹುದು.

ಮೇಕಪ್‌ ಮಾಡುವಾಗ ಮುಖದ ಮೇಲಿನ ಕಲೆ ಮತ್ತು ಡಾರ್ಕ್‌ ಸರ್ಕಲ್ಸ್ ನ್ನು ಮರೆಮಾಡಲು ಫೌಂಡೇಶನ್‌ ಬಳಸಲಾಗುತ್ತದೆ. ನಿಮ್ಮ ಸ್ಕಿನ್‌ ಟೋನ್‌ ಗಿಂತ ಒಂದು ಶೇಡ್‌ ತಿಳಿಯಾದ ಫೌಂಡೇಶನ್‌ ಕೊಳ್ಳಿರಿ. ಮುಖದ ಬಣ್ಣಕ್ಕೆ ಫೌಂಡೇಶನ್‌ ಹೊಂದದಿದ್ದರೆ ಮುಖ ಕೃತಕವಾಗಿ ಕಾಣುತ್ತದೆ.

ನಿಮ್ಮದು ಆಯ್ಲಿ ಸ್ಕಿನ್‌ ಆದರೆ ಮ್ಯಾಟ್‌ ಫಿನಿಶ್‌ ಫೌಂಡೇಶನ್‌ ಬಳಸಬೇಕು. ಆಗ ಚರ್ಮ ಆಯ್ಲಿ ಆಗಿ ಕಾಣುವುದಿಲ್ಲ. ಹಾಗೆಯೇ ಡ್ರೈ ಸ್ಕಿನ್‌ ನವರು ಅದನ್ನು ಬಳಸಿದರೆ ಚರ್ಮದ ಮೇಲೆ ಪ್ಯಾಚೆಸ್‌ ಕಾಣುತ್ತವೆ.

ಮೇಕಪ್‌ ಚರ್ಮಕ್ಕೆ ಹೊಂದಿಕೊಳ್ಳಲು ಬ್ಯೂಟಿ ಬ್ಲೆಂಡರ್‌ ನ್ನೇ ಬಳಸಬೇಕು. ಕೈಯಿಂದ ಬ್ಲೆಂಡ್‌ ಮಾಡಿದರೆ ಸರಿಯಾದ ಫಿನಿಶ್ ಬರುವುದಿಲ್ಲ. ಮುಖದ ಮೇಲೆ ಕಪ್ಪು ಬಿಳುಪು ಪ್ಯಾಚೆಸ್‌ ಕಾಣಿಸಿಕೊಳ್ಳುತ್ತವೆ.

ಡಾರ್ಕ್‌ ಸರ್ಕಲ್ಸ್ ಮತ್ತು ಪಿಂಪಲ್ಸ್ ನ್ನು ಮರೆ ಮಾಡಲು ಕನ್ಸೀಲರ್‌ ನ್ನು ಬಳಸಲಾಗುತ್ತದೆ. ಫೌಂಡೇಶನ್‌ ಗೆ ಮೊದಲೇ ಅದನ್ನು ಹಚ್ಚಬಹುದು. ಆದರೆ ಆಮೇಲೆ ಹಚ್ಚುವುದರಿಂದ ಕಡಿಮೆ ಪ್ರಮಾಣದಲ್ಲಿ ಕನ್ಸೀಲರ್‌ ಬಳಕೆಯಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ