ಇಂದಿನ ಅಧುನಿಕ ಫ್ಯಾಷನ್ ಡಿಸೈನರ್ಸ್ ಹಾಗೂ ಹಿಂದಿನವರಿಗೆ ಬಹಳ ಹೋಲಿಕೆಗಳಿವೆ, ಹಾಗೆಯೇ ಅಂತರ ಸಾಕಷ್ಟಿದೆ. ಮುಖ್ಯವಾಗಿ ಇಂದಿನ ಡಿಸೈನರ್ಸ್ ಪ್ರತಿದಿನ ಏನಾದರೊಂದು ನವನವೀನವಾದುದನ್ನು ಕ್ರಿಯೇಟ್‌ಮಾಡುತ್ತಿರುತ್ತಾರೆ.ಫ್ಯಾಷನ್ನಿನ ಅತಿ ಹೆಚ್ಚಿನ ಪ್ರಭಾವ ಯಾವ ವಯಸ್ಸಿನವರನ್ನು ಸೆಳೆಯುತ್ತದೆ?
ಫ್ಯಾಷನ್ನಿನಲ್ಲಿ ಆಗುವಂಥ ಯಾವುದೇ ಬದಲಾವಣೆಗಳ ಹೆಚ್ಚಿನ ಪ್ರಭಾವ ಮೊದಲು ಯುವ ಪೀಳಿಗೆಯ ಮೇಲೆ ಆಗುತ್ತದೆ. ಈ ಪೀಳಿಗೆಯ ಜನ ನಿರಂತರ ಪ್ರಗತಿಪಥದತ್ತ ಧಾವಿಸುತ್ತಿರುತ್ತಾರೆ. ಇವರುಗಳು ಸದಾ ಹೊಸತವನ್ನು ತಮ್ಮದಾಗಿಸಿಕೊಳ್ಳಲು ಹಾತೊರೆಯುತ್ತಾರೆ. ಉದಾಹರಣೆಗೆ ಹೇಳುವುದಾದರೆ, 20ರ ಹರೆಯದ ಹುಡುಗಿ 40ರ ಹರೆಯದ ಟ್ರೆಂಡ್‌ಟ್ರೈ ಮಾಡಲಿಕ್ಕೂ ಹಿಂಜರಿಯುವುದಿಲ್ಲ. ಹಾಗೆಂದು ಪ್ರೌಢವಯಸ್ಕರು ಕಡಿಮೆ ಫ್ಯಾಷನ್‌ಮಾಡುತ್ತಾರೆಂದು ಭಾವಿಸಬಾರದು. ಅವರುಗಳೂ ಸಹ ದಿನೇದಿನೇ ಹೊಸ ಸ್ಟೈಲ್‌ಫಾಲೋ ಮಾಡಲು ಬಯಸುತ್ತಾರೆ. ತಮ್ಮ ಲೈಫ್ ಸ್ಟೈಲ್‌ಹಾಗೂ ಬಾಡಿ ಇಮೇಜ್ ಗೆ ಧಕ್ಕೆ ತರದಂಥ ಹೊಸ ಹೊಸ ಡಿಸೈನ್ಸ್ ಇಷ್ಟಪಡುತ್ತಾರೆಂದು ಹೇಳಬಹುದು.
ಇಂದಿನ ಆಧುನಿಕ ಪೀಳಿಗೆ ಬ್ರ್ಯಾಂಡ್‌ಮೇಲೆ ಹೆಚ್ಚು ಪೇಕಸ್‌ಮಾಡುತ್ತಾರೋ ಅಥವಾ ತಮ್ಮಿಷ್ಟದ ಡಿಸೈನರ್ ಗಳ ಮೇಲೋ? ಇಂದಿನ ಪೀಳಿಗೆಯವರು ಅಂದರೆ ಅವರು ಯೌವನದಲ್ಲಿರಲಿ, ಟೀನ್‌ಏಜರ್ಸ್‌ಅಥವಾ ಪ್ರೌಢರಾಗಿರಲಿ, ಕೇವಲ ತಮ್ಮಿಷ್ಟದ ಆಯ್ಕೆಯ ಉಡುಗೆಗಳನ್ನು ಮಾತ್ರ ಧರಿಸುತ್ತಾರೆ. ಕೆಲವರು ಕಡಿಮೆ ಬೆಲೆಯ ಡ್ರೆಸೆಸ್‌ಇಷ್ಟಪಡುತ್ತಾರೆ, ಅಂದರೆ ಅವರು ರರಾ, ಮ್ಯಾಂಗೋ ಮುಂತಾದ ಬ್ರ್ಯಾಂಡ್ ಆರಿಸಿಕೊಳ್ಳುತ್ತಾರೆ. ಆದರೆ ಯಾರಿಗೆ ಸ್ಟೈಲ್ ನ ಮಾಹಿತಿ ಹೆಚ್ಚಿದೆಯೋ ಅವರು ವಿಶೇಷ ಡಿಸೈನರ್ ಗಳ ಡ್ರೆಸ್‌ಮಾತ್ರ ಧರಿಸುತ್ತಾರೆ. ಅಂದ್ರೆ ಲೂಯಿಸ್‌ವಿಟನ್, ಚ್ಯಾನೆಲ್, ಮಿಸೋನಿ ಇತ್ಯಾದಿಗಳದು. ಹೀಗೆ ಮಾಡುವುದರಿಂದ ನಾಲ್ವರಲ್ಲಿ ಎದ್ದು ಕಾಣಿಸುತ್ತಾರೆ.
ಸಾಮಾನ್ಯವಾಗಿ ತುಸು ಪ್ರೌಢ ಮಹಿಳೆಯರಲ್ಲಿ ಫ್ಯಾಷನ್ನಿನ ಅಭಿರುಚಿ ಕಡಿಮೆ ಇರುತ್ತದೆಯೇ ಅಥವಾ ಅವರೂ ಸಹ ಕಾಲಕ್ಕೆ ತಕ್ಕಂತೆ ಇರಲು ಬಯಸುತ್ತಾರೆಯೇ?
ಸಾಮಾನ್ಯವಾಗಿ ತುಸು ಪ್ರೌಢ ಮಹಿಳೆಯರಲ್ಲಿ ಫ್ಯಾಷನ್‌ಅಭಿರುಚಿ 10-20 ವರ್ಷಗಳಷ್ಟು ಅಥವಾ ಅದಕ್ಕಿಂತ ಹಳೆಯದಾಗಿರುತ್ತದೆ. ಆದರೆ ಅವರ ಇಷ್ಟದ ಆಯ್ಕೆಗಳಲ್ಲಿ ಏನೋ ಕೊರತೆ ಇರಬಹುದು ಎಂದು ಖಂಡಿತಾ ಅನಿಸುವುದಿಲ್ಲ. ಹೌದು, ವಯಸ್ಸಿಗೆ ತಕ್ಕಂತೆ ಅವರು ಸಮಾಜ ಗುರುತಿಸಿರುವಂಥ ಗಂಭೀರ ಸ್ವರೂಪದ ಉಡುಗೆಗಳನ್ನೇ ಆರಿಸ ಬಯಸುತ್ತಾರೆ. ಆದರೆ ಇಂದಿನ ಓಪನ್‌ಮೈಂಡೆಡ್‌ಯುಗದಲ್ಲಿ ಇಂಥ ವಿಚಾರಗಳು ಈಗಲೂ ಅನ್ವಯಿಸುತ್ತಿಯೇ….. ಹೇಳಲಾಗದು, ಆಯ್ಕೆ ಅವರವರದು. ಅಂದರೆ 40+ ಜನ ಸಹ ತಮ್ಮ ಉಡುಪಿನ ಕುರಿತು ಧಾರಾಳವಾಗಿ ಖರ್ಚು ಮಾಡಲು ಬಯಸುತ್ತಾರೆ, ಆದರೆ ಅವರುಗಳು ಬ್ರ್ಯಾಂಡ್‌ಮೇಲೂ ಹೆಚ್ಚಿನ ಗಮನವಿಡಬೇಕು.
ಈಗ ಫ್ಯಾಷನ್‌ಕುರಿತಾದ ನಿಮ್ಮ ಎಲ್ಲಾ ಸಮಸ್ಯೆ, ಸಂದೇಹಗಳಿಗೂ ಬಲು ಸಹಜವಾಗಿ ಪರಿಹಾರ ಪಡೆಯಬಹುದು. ಬಟ್ಟೆಗಳ ಸಂರಕ್ಷಣೆ, ಬಾಳಿಕೆಯಿಂದ ಹಿಡಿದು ಅವುಗಳ ಫ್ಯಾಬ್ರಿಕ್, ಕಲರ್, ಲೇಟೆಸ್ಟ್ ಸ್ಟೈಲ್‌ಮತ್ತು ಫ್ಯಾಷನ್‌ಕುರಿತಾದ ಯಾವುದೇ ಪ್ರಶ್ನೆಗಳನ್ನು ನಮಗೆ ಇಮೇಲ್‌ಮೂಲಕ ಕಳುಹಿಸಿಕೊಡಿ. ನಿಮ್ಮ ಈ ಪ್ರಶ್ನೆಗಳಿಗೆ ನಮ್ಮ ಫ್ಯಾಷನ್‌ಎಕ್ಸ್ ಪರ್ಟ್ಸ್ ಹಾಗೂ ಡಿಸೈನರ್ಸ್‌ಪರಿಹಾರ ಒದಗಿಸುತ್ತಾರೆ.