ಸುಂದರ ಹಾಗೂ ಆರೋಗ್ಯವಂತ ಕೂದಲು ಇರಬೇಕೆಂದು ಎಲ್ಲರಿಗೂ ಆಸೆ ಇರುತ್ತದೆ. ಋತುವಿನ ಪ್ರಭಾವ ಮತ್ತು ತಲೆ ಹೊಟ್ಟಿನ ಸಮಸ್ಯೆಗಳಿಂದ ರಕ್ಷಿಸುವುದರಿಂದ ನಿಮ್ಮ ಆಸೆ ಪೂರೈಸುತ್ತದೆ.
ಸೌಂದರ್ಯಕ್ಕೆ ಅನೇಕ ಬಣ್ಣಗಳು. ಇವುಗಳಲ್ಲಿ ಬಣ್ಣ ರೂಪಕ್ಕೆ ಮಾತ್ರ. ಎಲ್ಲವೂ ಕಾಡಿಗೆ ಹಚ್ಚಿದ ಕಣ್ಣುಗಳು, ಹೊಳೆಯುವ ತುಟಿಗಳು, ಸೌಂದರ್ಯದ ಜೊತೆಗೆ ಕೂದಲಿಗೂ ವಿಶೇಷ ಮಹತ್ವ ಕೊಡಲಾಗುತ್ತದೆ. ಆದ್ದರಿಂದ ಕೂದಲಿನ ವಿಶೇಷ ಆರೈಕೆಯ ಅಗತ್ಯವಿದೆ. ಆದರೆ ತಲೆಯನ್ನು ಮುಚ್ಚದೇ ಇರುವುದರಿಂದ ಕೂದಲಿನ ಮೇಲೆ ಋತುವಿನ ಪ್ರಭಾವ ಆಗುತ್ತದೆ, ಧೂಳು ಮಣ್ಣುಗಳು ಮೆತ್ತಿಕೊಳ್ಳುತ್ತವೆ. ಇದರಿಂದ ಕೆರೆತ, ಕೂದಲುದುರುವುದು, ತಲೆಬುರುಡೆಯ ಚರ್ಮಕ್ಕೆ ಸೋಂಕು ತಗುಲುವುದು ಇಂತಹ ಸಮಸ್ಯೆಗಳು ಉಂಟಾಗುತ್ತವೆ.
ಈ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ನೀವು ನಿಮ್ಮ ಕೂದಲಿನ ಗುಣವನ್ನು ಅರಿತುಕೊಂಡು ಯಾವುದಾದರೂ ಒಳ್ಳೆಯ ಶ್ಯಾಂಪೂ ಉಪಯೋಗಿಸಿ. ಈ ಶ್ಯಾಂಪೂ ನಿಮ್ಮ ಕೂದಲನ್ನು ರೇಶಿಮೆಯಂಥ ಮೃದು, ಹೊಳಪು ಮತ್ತು ಆಕರ್ಷಕವಾಗಿ ಮಾಡುತ್ತದೆ. ಕೂದಲಿಗೆ ಒಂದು ವಿಶೇಷ ಸತ್ವವನ್ನು ಕೊಡುತ್ತದೆ. ಒಣ, ನಿರ್ಜೀವ ಹಾಗೂ ಜೀವಕಳೆಯಿಲ್ಲದ ಕೂದಲಿನಲ್ಲಿ ಹೊಸ ಪ್ರಾಣ ಮತ್ತು ಬಣ್ಣ ತರಲು ಶ್ಯಾಂಪೂವನ್ನು ಉಪಯೋಗಿಸಿ.
ಕೂದಲಿನ ಸಮಸ್ಯೆಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಡುವ ಸಮಸ್ಯೆ ಎಂದರೆ ತಲೆಹೊಟ್ಟು. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ. ಏಕೆಂದರೆ ವಾತಾವರಣ ಶುಷ್ಕವಾಗಿರುತ್ತದೆ. ಇದರಿಂದ ತಲೆಯ ಚರ್ಮದ ಮೇಲೆ ಬಿಳಿ ಹೊಪ್ಪಳೆಗಳು ಸೇರಿಕೊಳ್ಳುತ್ತವೆ. ಇವುಗಳು ಹೆಚ್ಚಾದಾಗ ಕೂದಲುದುರುವ ಸಮಸ್ಯೆಯೂ ಆರಂಭವಾಗುತ್ತದೆ. ಆದ್ದರಿಂದ ಕೂದಲಿನ ನರಿಶಿಂಗ್, ಕ್ಲೆನ್ಸಿಂಗ್ ಮತ್ತು ಕಂಡೀಶನಿಂಗ್ ಅಗತ್ಯವಾಗಿ ಮಾಡಿಸಬೇಕು.
ಕೂದಲಿಗೆ ಪೋಷಣೆ ದೊರೆಯಲು ಅವನ್ನು ರೇಶಿಮೆಯಂತೆ ಮಾಡಲು ನೈಸರ್ಗಿಕ ಹೊಳಪು ಮತ್ತು ಕಂಡೀಶನಿಂಗ್ ಗೆ ಕೊಬ್ಬರಿ ಎಣ್ಣೆಯಲ್ಲದೆ, ಸೀಗೆಕಾಯಿ, ನೆಲ್ಲಿಕಾಯಿ ಮತ್ತು ಚಿಗರೆಪುಡಿಗಳನ್ನು ಬಳಸಬಹುದು. ಇದರಿಂದ ಕೂದಲು ರೇಶಿಮೆಯಂತೆ ಸಹಜ ರೂಪದಲ್ಲಿ ಹೊಳೆಯುತ್ತದೆ. ಹಸಿರು ಬಾದಾಮಿ (ಗ್ರೀನ್ ಆಲ್ಮಂಡ್) ಮತ್ತು ಗೋರಂಟಿ ಕೂದಲಿಗೆ ಉಪಯುಕ್ತವಾದ ಕಂಡೀಶನಿಂಗ್ ಮಾಡುತ್ತದೆ. ಇದರಲ್ಲಿನ ಎಸೆನ್ಶಿಯಲ್ ಎಣ್ಣೆಗಳು ಕೂದಲಿಗೆ ಪೋಷಣೆ ನೀಡುವುದರ ಜೊತೆಗೆ ಶಕ್ತಿಯನ್ನೂ ಕೊಡುತ್ತದೆ. ಗೋರಂಟಿ ಕೂದಲಿಗೆ ಬಣ್ಣ ಮತ್ತು ಹೊಳಪು ಎರಡನ್ನೂ ಕೊಡುತ್ತದೆ.
ಕೆಲವು ಸಲಹೆಗಳು
ನಿಮ್ಮ ಕೂದಲು ಎಣ್ಣೆಯಾಗಿದ್ದರೆ ವಾರದಲ್ಲಿ 3 ಸಲವಾದರೂ ಶ್ಯಾಂಪೂ ಹಾಕಿ ತೊಳೆಯಿರಿ. ಒಣ ಕೂದಲಾದರೆ 2 ಸಲ ಸಾಕು. ಶ್ಯಾಂಪೂ ಹಾಕುವ ಮೊದಲು ಕೂದಲನ್ನು ಎಣ್ಣೆಯಿಂದ ಚೆನ್ನಾಗಿ ಉಜ್ಜಿ, ಆವಿಯನ್ನು ತೆಗೆದುಕೊಂಡು ನಂತರ ಕೂದಲನ್ನು ತೊಳೆಯಿರಿ.
ಕೂದಲನ್ನು ತೊಳೆದ ನಂತರ ಬಹಳ ಹೊತ್ತು ಟವೆಲ್ ನಿಂದ ಸುತ್ತಿರಬೇಡಿ.
ಕೂದಲಿಗೆ ಕಂಡೀಶನರ್ ಬಳಸಿ. ಆದರೆ ಕೂದಲಿನ ಬೇರುಗಳು ಮತ್ತು ತಲೆಬುರುಡೆ ಬದಲು ಕೂದಲಿನ ತುದಿಗಳಿಗೆ ಇದನ್ನು ಬಳಸಬೇಕು.
ಸೀಳಿರುವ ಕೂದಲನ್ನು ಸರಿಪಡಿಸಿಲು ಟ್ರಿಮ್ ಮಾಡಿಸುವುದು ಉತ್ತಮ ಉಪಾಯ. ಸ್ವಲ್ಪ ಹೊತ್ತು ಸೀಳಿರುವುದನ್ನು ಮರೆಮಾಚಲು ಅವುಗಳಿಗೆ ಸ್ಟೈಲಿಂಗ್ ಕ್ರೀಮ್ ಅಥವಾ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿಯನ್ನು ಕೈಗಳಲ್ಲಿ ತೆಗೆದುಕೊಂಡು ಕೂದಲಿನ ತುದಿಗೆ ಹಚ್ಚಿಕೊಂಡರೆ ಎಷ್ಟೋ ಉತ್ತಮ.
– ಶ್ಯಾಮಲಾ ದಾಮ್ಲ