ಮಹಿಳೆಯರು ವಯಸ್ಸಿನ ಒಂದು ಹಂತದ ಬಳಿಕ ಅಥವಾ ಮದುವೆಯ ಬಳಿ ತಮ್ಮ ದೇಹದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಇದರ ಪರಿಣಾಮ ಏನಾಗುತ್ತದೆಂದರೆ, ಅವರ ದೇಹ ಅಸ್ತ್ಯವ್ಯಸ್ತಗೊಳ್ಳುತ್ತದೆ ಅಥವಾ ಅವರು ಜೀವನಶೈಲಿಗೆ ಸಂಬಂಧಪಟ್ಟ ರೋಗಗಳಗೆ ತುತ್ತಾಗುತ್ತಾರೆ.

ನಾವು ಇಲ್ಲಿ ಎಂತಹ ಕೆಲವು ವರ್ಕ್‌ ಔಟ್ಸ್ ಬಗ್ಗೆ ತಿಳಿಸುತ್ತಿದ್ದೇವೆಂದರೆ, ಅವನ್ನು ನೀವು ತಜ್ಞರ ಉಸ್ತುವಾರಿಯಲ್ಲಿ ಮಾಡಿದರೆ, ನಿಮಗೆ ತುಂಬಾ ಉಪಯುಕ್ತವಾಗಿ ಪರಿಣಮಿಸುತ್ತವೆ. ಕಾರ್ಡಿಯೋ ವರ್ಕ್‌ ಔಟ್‌ ಕಾರ್ಡಿಯೋ ಬಹಳ ಉಪಯುಕ್ತ. ಇದು ತೂಕ ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಅದರಿಂದ ಒತ್ತಡ ಕಡಿಮೆಯಾಗುತ್ತದೆ. ಈ ವರ್ಕ್‌ ಔಟ್‌ ನಿಂದ ಶ್ವಾಸಕೋಶಗಳ ತನಕ ಆಮ್ಲಜನಕ ತಲುಪಲು ಸಹಾಯವಾಗುತ್ತದೆ. ಅದರಿಂದ ಹೃದಯ ಸದೃಢ ಹಾಗೂ ರಕ್ತ ಕೂಡ ಶುದ್ಧವಾಗುತ್ತದೆ.

ಕಾರ್ಡಿಯೋ ವರ್ಕ್‌ ಔಟ್‌ ತೂಕವನ್ನು ನಿಯಂತ್ರಿಸಿ, ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆಗೊಳಿಸುತ್ತದೆ ಹಾಗೂ ರೋಗಗಳಿಂದ ರಕ್ಷಿಸುತ್ತದೆ. ಬೇರೆ ಬೇರೆ ತೆರನಾದ ಕಾರ್ಡಿಯೋ ವರ್ಕ್‌ ಔಟ್‌ ನಿಂದ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಬಹುದು.

ಏರೋಬಿಕ್ಸ್

Aerobicks

ಈ ವ್ಯಾಯಾಮವನ್ನು ನೀವು ಯಾವಾಗ ಬೇಕಾದರೂ ಎಲ್ಲಿಯಾದರೂ ಚಿಕ್ಕ ಜಾಗದಲ್ಲಿ ಕೂಡ ಮಾಡಬಹುದು. ಇದರಲ್ಲಿ ನೀವು ನಿಮ್ಮ ಮೆಚ್ಚಿನ ಸಂಗೀತಕ್ಕೆ ತಕ್ಕಂತೆ ಕೆಲವು ಹೆಜ್ಜೆಗಳನ್ನು ಹಾಕಬಹುದು. ಗ್ರೇಪ್‌ ವೈನ್‌, ಲೆಗ್‌ ವರ್ಕ್‌, ಜಂಪಿಂಗ್‌ ಜಾಕ್ಸ್ ನಂತಹ ಮೂವ್ ‌ಗಳಿಂದ ಇಡೀ ದೇಹದ ತೂಕ ಕುಗ್ಗುತ್ತದೆ. ಬೆವರಿನ ಮುಖಾಂತರ ದೇಹದಿಂದ ಬೇಡದ ಘಟಕಗಳು ಅಂದರೆ ಟಾಕ್ಸಿನ್ಸ್ ಹೊರಹೋಗುತ್ತವೆ.

ಬೆವರಿನ ಮುಖಾಂತರ ದೇಹದಿಂದ ಟಾಕ್ಸಿನ್‌ ಗಳು ಹೊರಹೋಗುವುದೇ ಫ್ಯಾಟ್‌ ಮತ್ತು ರೋಗಗಳಿಂದ ನಮ್ಮನ್ನು ದೂರಗೊಳಿಸುತ್ತದೆ. ಕೇವಲ ಬೆವರು ಹರಿಸಿದರಷ್ಟೇ ಸಾಲದು, ಕಡಿಮೆ ಪರಿಶ್ರಮ ಕೂಡ ಅತ್ಯವಶ್ಯ. ಏರೋಬಿಕ್ಸ್ ವರ್ಕ್‌ ಔಟ್‌ ನಲ್ಲಿ ನಿಮ್ಮ ಹೃದಯ ಗತಿಯನ್ನು ಲೋನಿಂದ ಹೈ ತನಕ ಕೊಂಡೊಯ್ದು ಒಂದು ಮಟ್ಟದಲ್ಲಿ ಮೇಂಟೇನ್‌ ಮಾಡಬಹುದು. ಅದು ಕೂಡ ತೂಕ ಕಡಿಮೆ ಮಾಡುವುದರಲ್ಲಿ ನೆರವಾಗುತ್ತದೆ.

ಸ್ಟ್ರೆಂಥ್‌ ವರ್ಕ್‌ ಔಟ್‌

ಮಹಿಳೆಯರಿಗೆ ಸ್ಟ್ರೆಂಥ್‌ ವರ್ಕ್‌ ಔಟ್‌ ಅತ್ಯವಶ್ಯ ಮತ್ತು ಅದು ಟ್ರೆಂಡ್‌ ಕೂಡ ಆಗಿದೆ. ಇದರಿಂದ ಮಹಿಳೆಯರಲ್ಲಿ ಆಸ್ಟ್ರಿಯೊಪೊರೊಸಿಸ್‌ ನ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ. ಮೂಳೆಗಳ ಸಾಂಧ್ರತೆ ಅಂದರೆ ಬೋನ್‌ ಡೆನ್ಸಿಟಿ ಹೆಚ್ಚುತ್ತದೆ. ಇದರಲ್ಲಿ ಬೈಸೆಪ್‌ ವರ್ಕ್‌, ಟ್ರೈಸೆಪ್‌ ಎಕ್ಸ್ ಟೆನ್ಶನ್‌, ಹ್ಯಾಮರ್‌ ವರ್ಕ್‌, ಶೋಲ್ಡರ್‌ ಪ್ರೆಸ್‌, ಪುಷಪ್ಸ್, ಟ್ರೈಸೆಪ್‌ ಡ್ರಿಪ್ಸ್ ಮುಂತಾದ ಮಹಿಳೆಯರಿಗೆ ಅತ್ಯಂತ ಉಪಯುಕ್ತ.

ಡ್ಯಾನ್ಸ್ ಫಿಟ್‌ ನೆಸ್

7-workout-se-4‌

ಫಿಟ್‌ ನೆಸ್‌ ಡ್ಯಾನ್ಸ್ ಮಹಿಳೆಯರಿಗೆ ಅತ್ಯುಪಯುಕ್ತ ಹಾಗೂ ಇತ್ತೀಚೆಗೆ ಇದು ಹೆಚ್ಚು ಟ್ರೆಂಡ್‌ ಆಗುತ್ತಾ ಹೊರಟಿದೆ. ಇದರಲ್ಲಿ ನೀವು ಬಾಂಗ್ರಾ, ಬೆಲ್ಲಿ ಡ್ಯಾನ್ಸ್ ನ್ನು ಬೇರೆ ಬೇರೆ ರೀತಿಯಲ್ಲಿ ತಿರುಗುವುದರ ಮೂಲಕ 30-35 ನಿಮಿಷಗಳ ಕಾಲ ವರ್ಕ್‌ ಔಟ್ ಮಾಡಬಹುದು. ಈ ಡ್ಯಾನ್ಸ್ ಮೋಜಿನ ಜೊತೆಗೆ ತೂಕವನ್ನೂ ಕಡಿಮೆಗೊಳಿಸುತ್ತದೆ.

ಕಿಕ್‌ ಬಾಕ್ಸಿಂಗ್‌

ಇದು ಒಂದು ಬಗೆಯ ಕಾರ್ಡಿಯೊ ವರ್ಕ್‌ ಔಟ್‌ ಆಗಿದೆ. ಇದರಲ್ಲಿ ಬಹಳಷ್ಟು ಸ್ನಾಯುಗಳು ಏಕಕಾಲಕ್ಕೆ ಬಳಕೆಯಾಗುತ್ತವೆ. ಮಹಿಳೆಯರಲ್ಲಿ ಹೆಚ್ಚಾಗಿ ತಮ್ಮ ತೋಳುಗಳು ಹಾಗೂ ಕಾಲುಗಳನ್ನು ಟೋನ್‌ ಮಾಡುವುದೇ ಮುಖ್ಯವಾಗಿರುತ್ತದೆ. ಹಾಗೆ ನೋಡಿದರೆ ಕಿಕ್‌ ಬಾಕ್ಸಿಂಗ್‌ ಇಡೀ ದೇಹಕ್ಕೆ ಒಳ್ಳೆಯದು. ಆದರೆ ಇದು ಯಾವ ಭಾಗವನ್ನು ಬೇಗ ಟೋನ್‌ ಮಾಡುತ್ತದೆ ಎಂದರೆ, ಮನಮೆಚ್ಚಿನ ಕಟ್‌ ಸ್ಲೀವ್ಸ್ ಅಥವಾ ಒನ್‌ ಪೀಸ್‌ ಡ್ರೆಸ್‌ ತೊಡಲು ಇಷ್ಟಪಡುತ್ತೀರೊ, ಆ ಭಾಗನ್ನು ಟೋನ್‌ ಮಾಡುತ್ತದೆ. ಇದರಿಂದ ದೇಹದ ಮೇಲ್ಭಾಗದ ಮೂವ್ ‌ಮೆಂಟ್‌ ಜಾಬ್ಸ್, ಕ್ರಾಸ್‌, ಹುಕ್‌ ಹಾಗೂ ಅಪ್ಪರ್‌ ಕಟ್ಸ್ ಇದ್ದರೆ, ದೇಹದ ಕೆಳಭಾಗದ ಮೂವ್ ಮೆಂಟ್‌ ನಲ್ಲಿ ನೀವು ಸ್ಟ್ರೋಕ್‌ ಫ್ರಂಟ್‌ ಕಿಕ್‌, ರೌಂಡ್‌ ಹೌಸ್‌ ಕಿಕ್‌, ಸೈಡ್‌ ಕಿಕ್‌, ಬ್ಯಾಕ್‌ ಕಿಕ್‌ ಮುಂತಾದವು ಸೇರಿವೆ.

ಹೈ ಇಂಟೆನ್ಸಿಟಿ ವರ್ಕ್‌ ಔಟ್

7-workout-se-2‌

ಕೆಲವು ಮಹಿಳೆಯರಿಗೆ ತಮಗಾಗಿ ಸಮಯ ಮೀಸಲು ಇಟ್ಟುಕೊಳ್ಳಲು ಆಗುವುದಿಲ್ಲ. ಈ ಕಾರಣದಿಂದ ಅವರು ಜಿಮ್ ಅಥವಾ ಪಾರ್ಕಿಗೆ ಹೋಗಿ ವರ್ಕ್‌ ಔಟ್‌ ಮಾಡಲು ಆಗುವುದಿಲ್ಲ. ಅವರಿಗಾಗಿ ಹೈ ಇಂಟೆನ್ಸಿಟಿ ವರ್ಕ್‌ ಔಟ್‌ ಅತ್ಯಂತ ಉಪಯುಕ್ತ ಪರ್ಯಾಯವಾಗಿದೆ.

ಇದು ಇತರೆ ವರ್ಕ್‌ ಔಟ್‌ ಗಳಿಂದ ಸ್ವಲ್ಪ ಕಷ್ಟಕರ. ಆದರೆ ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ತೂಕ ಕಳೆದುಕೊಳ್ಳಬಹುದಾಗಿದೆ. ಇದು ಚಯಾಪಚಾಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ವರ್ಕ್‌ ಔಟ್‌ ನಲ್ಲಿ ಕೆಲವು ಹೈ ಇಂಟೆನ್ಸಿಟಿ ಎಕ್ಸರ್‌ ಸೈಜ್‌ ಗಳನ್ನು ಆಯ್ಕೆ ಮಾಡಿಕೊಂಡು, ಅವನ್ನು ಕ್ರಮಬದ್ಧ ರೀತಿಯಲ್ಲಿ ಸೆಟ್ಸ್ ನಲ್ಲಿ ಮಾಡಬಹುದು. ಉದಾಹರಣೆಗೆ ಜಂಪ್‌, ಸ್ವಿಂಗ್‌ ಏರ್‌ ಪುಶ್‌ ಅಪ್ಸ್, ರಾಕ್‌ ಕ್ಲೈಂಬಿಂಗ್‌ ಸ್ಟಾರ್‌ ಜಂಪ್‌, ಜಂಪ್‌ ಹೈಸ್‌ ನ್ನು ಸೇರಿಸಿಕೊಂಡು ಸೆಟ್ ಮಾಡಿಕೊಂಡ ಬಳಿಕ ಇವೆಲ್ಲವುಗಳ 3 ಸೆಟ್‌ ಅಥವಾ 5 ಸೆಟ್‌ ಮಾಡಬಹುದು. ಪ್ರತಿಯೊಂದು ಎಕ್ಸರ್‌ ಸೈಜ್‌ ನ್ನು ನಿಮಿಷಗಳಲ್ಲಿ ಅಥವಾ ಸೆಕೆಂಡುಗಳ ಲೆಕ್ಕಾಚಾರದಲ್ಲಿ ಮಾಡಲಾಗುತ್ತದೆ. ವೆಯ್ಟ್ ಲಾಸ್‌ ಅಥವಾ ಬಾಡಿ ಟೋನಿಂಗ್‌ ದೃಷ್ಟಿಯಿಂದ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಹೆಚ್ಚು ತೂಕ ಕಳೆದುಕೊಳ್ಳಲು ಇದು ತುಂಬಾ ಒಳ್ಳೆಯ ವರ್ಕ್‌ ಔಟ್‌ ಆಗಿದೆ.

ಸ್ಟೆಪರ್‌ ವರ್ಕ್‌ ಔಟ್‌

ಇದು ಕೂಡ ಒಂದು ಒಳ್ಳೆಯ ಪರ್ಯಾಯವಾಗಿದೆ. ಒಂದು ಬಾಕ್ಸ್ ಅಥವಾ ಏಣಿಯನ್ನು ಬಳಸಿಕೊಂಡು ಈ ವರ್ಕ್‌ ಔಟ್ ಮಾಡಬಹುದು. ಸ್ಟೆಮಿನಾ ಹೆಚ್ಚಿಸಲು ಇದು ಉಪಯುಕ್ತವಾಗಿದೆ.

ಆ್ಯಬ್ಸ್ ವರ್ಕ್‌ ಔಟ್

7-workout-se-3‌

ಇದರಲ್ಲಿ ನೀವು ಲೆಗ್‌ ರೇಂಜ್‌, ಸ್ಕ್ವಾಟ್ಸ್, ಕ್ರಂಚೆಸ್‌ ಮುಂತಾದವುಗಳನ್ನು ಮಾಡಬಹುದು. ಇದರಿಂದ ಹೊಟ್ಟೆ, ಸೊಂಟ ಹಾಗೂ ತೊಡೆ ಭಾಗಗಳ ಕೊಬ್ಬು ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಹೊಟ್ಟೆ, ಸೊಂಟ ಮತ್ತು ಕಾಲಿನ ಭಾಗದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿಗೆ ಇರುತ್ತದೆ.

ಮಹಿಳೆಯರಿಗೆ ಪ್ಲಾಕ್‌, ಸುಮೊ, ಸ್ಕ್ವಾಟ್ಸ್, ಬ್ಯಾಕ್‌ ಲೆಗ್‌ ಕಿಕ್ಕಿಂಗ್‌, ಡಲ್ ಚಾಪರ್‌, ರಶಿಯನ್‌ ಕ್ರಂಚ್‌, ಪ್ಲಾಂಕ್‌ ಲೆಗ್‌ ಫ್ಲಟರ್‌ಮುಂತಾದವು ವ್ಯಾಯಾಮಗಳು ಹೆಚ್ಚು ಸೂಕ್ತವಾಗಿರುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ