ಹೆಚ್ಚು ದುಬಾರಿಯ ಡಿಸೈನರ್‌ ಡ್ರೆಸ್‌ ಧರಿಸಿದರೆ, ಅಷ್ಟೇ ಸುಂದರವಾಗಿ ಕಾಣಬಹುದು ಎಂದು ಬಹುತೇಕ ಹುಡುಗಿಯರಿಗೆ ಬ್ರೈಡಲ್ ಲುಕ್‌ ಕುರಿತಂತೆ ತಪ್ಪುಕಲ್ಪನೆಗಳಿರುತ್ತವೆ. ಆದರೆ ಅದು ಹಾಗಲ್ಲ. ಫ್ಯಾಷನ್‌ ಡಿಸೈನರ್‌ ಹಾಗೂ ಕನ್ಸ್ಟೆಂಟ್‌ ಗಳ ಪ್ರಕಾರ, ವಧು ಸುಂದರ ಹಾಗೂ ಆಕರ್ಷಕವಾಗಿ ಕಂಡುಬರಲು ಹಣಕ್ಕಿಂತ ಹೆಚ್ಚಾಗಿ ತಮಗೆ ಯಾವುದು ಹೆಚ್ಚಾಗಿ ಶೋಭಿಸುತ್ತದೆ ಎಂದು ಕಂಡುಕೊಳ್ಳುವುದು ಮುಖ್ಯ. ಕಡಿಮೆ ಬಜೆಟ್‌ ನಲ್ಲಿಯೇ ನಮ್ಮ ದೇಹಕ್ಕೆ ಸೂಕ್ತವಾಗುವಂತಹ ಪೋಷಾಕುಗಳನ್ನು ಆಯ್ದುಕೊಂಡು ಕೂಡ ಆಕರ್ಷಕವಾಗಿ ಕಾಣಬಹುದಾಗಿದೆ. ಈಚೆಗೆ ಮಾರುಕಟ್ಟೆಯಲ್ಲಿ ವಧುವಿಗಾಗಿಯೇ ಪ್ರತಿಯೊಂದು ರೇಂಜ್‌ ನಲ್ಲೂ ಹಲವು ಆಕರ್ಷಕ ಬಗೆಯ ಡಿಸೈನ್‌ ಗಳು ಮತ್ತು ಆ್ಯಕ್ಸೆಸರೀಸ್‌ ಲಭ್ಯವಿವೆ. ಅವು ಆಕೆಯ ಸೌಂದರ್ಯಕ್ಕೆ ಮೆರುಗು ನೀಡಬಲ್ಲವು.

ಪ್ಲ್ಯಾನಿಂಗ್ಅತ್ಯಗತ್ಯ : ಫ್ಯಾಷನ್‌ ಡಿಸೈನರ್‌ ರಾಖಿ ಹೀಗೆ ಹೇಳುತ್ತಾರೆ, ``ವಧು ಮದುವೆ ದಿನದಂದು ಅತ್ಯಂತ ಸುಂದರವಾಗಿ ಕಂಡುಬರಲು ಮೊದಲಿನಿಂದಲೇ ಪ್ಲ್ಯಾನಿಂಗ್‌ ಮಾಡುವುದು ಅತ್ಯವಶ್ಯ. ಉದಾಹರಣೆಗೆ : ಬಜೆಟ್‌ ಎಷ್ಟಿದೆ ಹಾಗೂ ಆ ಬಜೆಟ್‌ ನಲ್ಲಿ ಏನೇನು ಖರೀದಿಸಬಹುದು ಎಂಬುದನ್ನು ಯೋಜನೆ ಮಾಡಬೇಕು. ಎಷ್ಟು ಹಣವನ್ನು ಸೀರೆಗಳಿಗಾಗಿ, ಆಭರಣಗಳಿಗೆ ಹಾಗೂ ಮೇಕಪ್‌ ಮುಂತಾದವುಗಳಿಗೆ ಖರ್ಚು ಮಾಡಬೇಕು ಎನ್ನುವುದನ್ನು ಅರಿತುಕೊಂಡರೆ ಒಳ್ಳೆಯದು.

20,000 ರೂ.ಗಳಿಂದ 50,000 ರೂ. ಬಜೆಟ್ನಲ್ಲಿ ಲೆಹಂಗಾ/ಸೀರೆ : ಈ ಮಿತಿಯಲ್ಲಿ ನಿಮ್ಮ ಬಜೆಟ್‌ ಇದ್ದರೆ 6,000 ರೂ.ಗಳಿಂದ 30,000 ರೂ.ಗಳ ನಡುವೆ ಲೆಹಂಗಾ ಹಾಗೂ ಲೆಹಂಗಾ ಸೀರೆ ಖರೀದಿಸಬಹುದು. 6,000 ರೂ.ಗಳಿಂದ 8,000 ರೂ.ಗಳ ತನಕ ಲಾಚಾ ಸ್ಟೈಲ್ ‌ಲಹಂಗಾ ಖರೀದಿಸಬಹುದು. ಲಾಚಾ ಸ್ಟೈಲ್ ಲೆಹಂಗಾದಲ್ಲಿ ಅದರ ಮೇಲೆ ಶಾರ್ಟ್‌ ಬ್ಲೌಸ್‌ ಹಾಗೂ ಹೆವಿ ಎಂಬ್ರಾಯಿಡರಿ ಇರುವ ಉದ್ದನೆಯ ಕೋಟಿನಂತಹದನ್ನು ಧರಿಸಲಾಗುತ್ತದೆ. ಈ ರೀತಿಯ ಲಹಂಗಾಗಳ ದುಪಟ್ಟಾ ಸಾಧಾರಣವಾಗಿರುತ್ತದೆ. ಅದರ ಮೇಲೆ ಸ್ಟೋನ್‌ ಅಳವಡಿಸಿ ನೀವು ಅದನ್ನು ಹೆವಿ ಮಾಡಿಕೊಳ್ಳಬಹುದು.

ಇದು ಹೆಚ್ಚು ದುಬಾರಿಯೇನೂ ಆಗಿರುವುದಿಲ್ಲ. ನೀವು 10,000 ರೂ.ಗಳ ರೇಂಜ್‌ ನಲ್ಲಿ ಬ್ರೊಕೆಟ್‌ ಫ್ಯಾಬ್ರಿಕ್‌ ಮೇಲೆ ಡಿಸೈನ್‌ಮಾಡಲ್ಪಟ್ಟ ಲೆಹಂಗಾ ತೆಗೆದುಕೊಳ್ಳಬಹುದು. ಇದು ಹೆವಿ ಲುಕ್‌ ನೀಡುತ್ತದೆ. 3ಡಿ ಅಂದರೆ ಮೂರು ಶೇಡ್‌ ಗಳಲ್ಲಿ ಡಿಸೈನ್ ಮಾಡಲ್ಪಟ್ಟ ಲೆಹಂಗಾ ಕೂಡ ಖರೀದಿಸಬಹುದು. 3ಡಿ ಲೆಹಂಗಾಗಳು 10-20 ಸಾವಿರ ರೂ. ದರಗಳಲ್ಲಿ ಬೇರೆ ಬೇರೆ ಡಿಸೈನ್‌ ಗಳಲ್ಲಿ ಲಭ್ಯವಾಗುತ್ತವೆ. ನೀವು ನೆಟ್‌ ಫ್ಯಾಬ್ರಿಕ್‌ ನಲ್ಲಿ ಗೋಲ್ಡನ್‌ ಪರ್ಲ್ ಹಾಗೂ ಗ್ಲಾಸ್‌ ಸ್ಟೋನ್‌ ನಿಂದ ಎಂಬ್ರಾಯಿಡರಿ ಮಾಡಲ್ಪಟ್ಟ ಲೆಹಂಗಾವನ್ನು ತೆಗೆದುಕೊಳ್ಳಬಹುದು.

ಮೇಕಪ್‌ : ನೀವು ಯಾವ ನಗರದ ಯಾವ ಭಾಗದಲ್ಲಿ ಮೇಕಪ್‌ ಮಾಡಿಸಿಕೊಳ್ಳುತ್ತಿದ್ದೀರಿ ಎನ್ನುವುದರ ಮೇಲೆ ಮೇಕಪ್‌ ದರಗಳು ಅನ್ವಯಿಸುತ್ತವ. 6,000 ರೂ.ಗಳಿಂದ 7,000 ರೂ.ಗಳ ರೇಂಜ್‌ ನಲ್ಲಿ ಕಲರ್‌ ಎಸೆನ್ಸ್, ಲ್ಯಾಕ್ಮೆ, ರೆವಲಾನ್‌, ಕ್ರೈಲಾನ್‌ ನಂತಹ ಬ್ರ್ಯಾಂಡ್‌ ನ ಮೇಕಪ್‌ ಮಾಡಿಸಿಕೊಳ್ಳಬಹುದು.

ಜ್ಯೂವೆಲರಿ : ವಧುವಿಗೆ ಅತ್ಯಂತ ಹೆವಿಯಾಗಿರುವ ಆಭರಣಗಳು ಹೆಚ್ಚು ಒಪ್ಪುತ್ತವೆ. ಆದರೆ ಅವು ಅತ್ಯಂತ ದುಬಾರಿಯಾಗಿರುತ್ತವೆ. ಇವನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. 1,000 ರೂ.ಗಳಿಂದ 3,000 ರೂ.ಗಳಲ್ಲಿ ಕುಂದನ್‌, ಲೈಟ್‌ ಗೋಲ್ಡ್, ರೇಡಿಯಂ ಪಾಲಿಶ್‌ ನ ಆಭರಣಗಳು ಕೆಲವು ನಗರಗಳಲ್ಲಿ ಬಾಡಿಗೆ ಆಧಾರದ ಮೇಲೆಯೂ ದೊರೆಯುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ