ಒಳ್ಳೆಯ ಪೌಷ್ಟಿಕ ಆಹಾರದಿಂದ ದೇಹ ಹೇಗೆ ದಷ್ಟಪುಷ್ಟ ಆಗುತ್ತೊ, ಅದೇ ರೀತಿ ಒಳ್ಳೆಯ ಸುವಾಸನೆ ಮನಸ್ಸು ಹಾಗೂ ಮೆದುಳನ್ನು ಆರೋಗ್ಯಕರವಾಗಿಸುತ್ತದೆ. ಒಳ್ಳೆಯ ಸುವಾಸನೆಯಿಂದ ಯೋಚನೆ ಬದಲಾಗುತ್ತದೆ ಹಾಗೂ ಆಲೋಚನೆಯಿಂದ ಜೀವನ ಬದಲಾಗುತ್ತದೆ. ಒಳ್ಳೆಯ ಪರಿಮಳ ನಮ್ಮ ವಿಚಾರ ಹಾಗೂ ಭಾವನೆಗಳನ್ನು ಕೂಡ ಬದಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಮನಸ್ಸು ಮತ್ತು ಮೆದುಳನ್ನು ಶಾಂತಿ ಹಾಗೂ ಉತ್ಸಾಹವನ್ನು ಹೆಚ್ಚಿಸುವುದರ ಮೂಲಕ ಜೀವನದ ದೃಷ್ಟಿಕೋನವನ್ನೇ ಬದಲಿಸುತ್ತದೆ. ಇದೇ ಕಾರಣದಿಂದ ನಾವೆಲ್ಲ ಒಳ್ಳೆಯ ಸುವಾಸನೆಯನ್ನು ಆಸ್ವಾದಿಸಲು ಇಚ್ಛಿಸುತ್ತೇವೆ.
ಆದರೆ ಈ ಸುವಾಸನೆ ಕೇವಲ ನಮಗಷ್ಟೇ ಅಲ್ಲ, ನಮ್ಮ ಮನೆಯನ್ನು ಕೂಡ ಸುಗಂಧಮಯಗೊಳಿಸಬೇಕು. ಆಗಲೇ ಹಬ್ಬದ ನಿಜವಾದ ಆನಂದ ಸಿಗುತ್ತದೆ. ಸಂಶೋಧನೆಗಳ ಪ್ರಕಾರ, ಹಬ್ಬದ ಸಿದ್ಧತೆಯ ವ್ಯವಸ್ತತೆಯಲ್ಲಿ ಉಂಟಾದ ಒತ್ತಡ ಕೂಡ ಮುಂದೆ ಸುವಾಸನೆಯಿಂದ ಕಡಿಮೆಯಾಗುತ್ತದೆ.
ಬೇರೆ ಬೇರೆ ರೀತಿಯ ಸುವಾಸನೆಗಳು ನಮ್ಮ ಮೂಡ್ ನ್ನು ಹೇಗೆ ಪ್ರಭಾವಿತಗೊಳಿಸುತ್ತವೆ ಎನ್ನುವುದನ್ನು ಅರಿಯಿರಿ.
ಲ್ಯಾವೆಂಡರ್ : ಇದರ ಪರಿಮಳ ನಮ್ಮ ಮೆದುಳನ್ನು ಶಾಂತಗೊಳಿಸಲು ನೆರವಾಗುತ್ತದೆ. ಭಾವನಾತ್ಮಕ ಒತ್ತಡ ಹಾಗೂ ಖಿನ್ನತೆ ದೂರಗೊಳಿಸಿ ಮನಸ್ಸನ್ನು ಹಗುರಗೊಳಿಸುತ್ತದೆ. ಮೈಗ್ರೇನ್ ಹಾಗೂ ತಲೆನೋವಿನ ಪರಿಣಾಮವನ್ನು ಕಡಿಮೆಗೊಳಿಸುತ್ತದೆ.
ಜಾಸ್ಮಿನ್ : ಇದರ ಸುವಾಸನೆ ದಣಿವನ್ನು ನಿವಾರಿಸಲು ನೆರವಾಗುತ್ತದೆ. ಇದು ಕೇವಲ ಉತ್ಸಾಹವನ್ನಷ್ಟೇ ಅಲ್ಲ, ದೇಹದ ಸ್ಛೂರ್ತಿಯನ್ನೂ ಹೆಚ್ಚಿಸುತ್ತದೆ.
ರೋಸ್ ಮೆರಿ : ಇದರ ಪರಿಮಳ ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆ ಜೊತೆಗೆ ದೇಹದ ಸ್ಛೂರ್ತಿಯನ್ನು ವಾಪಸ್ ತರುವ, ತಲೆನೋವು ಹಾಗೂ ಮಾನಸಿಕ ದಣಿವನ್ನು ನಿವಾರಿಸಲು ನೆರವಾಗುತ್ತದೆ.
ಪೆಪ್ಪರ್ ಮಿಂಟ್ : ಇದರ ಸುವಾಸನೆ ಎನರ್ಜಿ ಬೂಸ್ಟರ್ ಆಗಿದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಸ್ಪಷ್ಟವಾಗಿ ಯೋಚಿಸುವ ಶಕ್ತಿ ನೀಡುತ್ತದೆ. ಇದು ಮೂಡ್ ನ್ನು ಅಪ್ ಲಿಫ್ಟ್ ಮಾಡುತ್ತದೆ.
ಲೆಮನ್ : ನಿಂಬೆಯ ಸುವಾಸನೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಉಸಿರಿನಲ್ಲಿ ಸೇರಿಕೊಂಡು ತಾಜಾತನದ ಅನುಭವ ನೀಡುತ್ತದೆ.
ತಾಜಾ ಹುಲ್ಲಿನ ಸುವಾಸನೆ : ಆಸ್ಟ್ರೇಲಿಯಾದ ಸಂಶೋಧಕರ ಪ್ರಕಾರ, ಕತ್ತರಿಸಿದ ತಾಜಾ ಹುಲ್ಲಿನಲ್ಲಿ ಎಂತಹ ಕೆಲವು ರಸಾಯನಗಳು ಹೊರಹೊಮ್ಮುತ್ತವೆ ಎಂದರೆ ಅವು ವ್ಯಕ್ತಿಯನ್ನು ರಿಲ್ಯಾಕ್ಸ್ ಮಾಡಿಸುತ್ತವೆ. ಇದರ ಸುವಾಸನೆ ಮನಸ್ಸಿನೊಂದಿಗೆ ಬರುವ ಮಾನಸಿಕ ಕ್ಷೀಣತೆ ಹಾಗೂ ವೃದ್ಧಾಪ್ಯದ ಲಕ್ಷಣಗಳು ಹೆಚ್ಚುವುದನ್ನು ತಡೆಯುತ್ತದೆ. ಹಾಗೆಂದೇ ಇಂತಹ ಏರ್ ಫ್ರೆಶ್ ನರ್ ಗಳು ಕೂಡ ಬಂದಿದ್ದು, ಇಂತಹ ಸುವಾಸನೆ ನಿಮಗೆ ಎಲ್ಲಾ ಕಡೆ ಸಿಗುವ ಅನುಭವ ಮಾಡಿಕೊಡುತ್ತದೆ.
ವೆನಿಲಾ : ಒಂದು ಅಧ್ಯಯನದ ಪ್ರಕಾರ, ವೆನಿಲಾದ ಸುವಾಸನೆ ನಿಮ್ಮ ಮನಸ್ಸಿಗೆ ಖುಷಿ ನೀಡುತ್ತದೆ. ಅದರಿಂದ ಮೂಡ್ ಹಿತಕರ ಆಗುತ್ತದೆ ಮತ್ತು ಸಿಡಿಮಿಡಿತನ ಮಾಯವಾಗುತ್ತದೆ.
ಹೀಗೆ ಪರಿಮಳ ಬರಿಸಿ ಒಳ್ಳೆಯ ಸುವಾಸನೆಯನ್ನು ನೀವು ಯಾವ ರೀತಿಯಲ್ಲಿ ಮನೆಯ ಮೂಲೆ ಮೂಲೆಗೂ ಪಸರಿಸಬಹುದು ಎನ್ನುವುದನ್ನು ತಿಳಿದುಕೊಳ್ಳಿ :
ಮನೆಯ ಪರದೆಗಳನ್ನು, ಹೊದಿಕೆಗಳನ್ನು, ಕಾರ್ಪೆಟ್ ಗಳನ್ನು ಒಗೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.
ಡಸ್ಟ್ ಬಿನ್ ನ್ನು ಡಿಟರ್ಜೆಂಟ್ ನಿಂದ ಸ್ವಚ್ಛಗೊಳಿಸಿ. ಏಕೆಂದರೆ ಡಸ್ಟ್ ಬಿನ್ ನಿಂದ ಬರುವ ದುರ್ವಾಸನೆ ಅತಿಥಿಗಳ ಮೂಡ್ ನ್ನು ಹಾಳುಗೆಡಬಹುದು. ಮೆಟಲ್ ನ ಡಸ್ಟ್ ಬಿನ್ ನಿಂದ ಬರುವ ದುರ್ವಾಸನೆ ನಿವಾರಿಸಲು ಅದರಲ್ಲಿ ಹಳೆಯ ದಿನಪತ್ರಿಕೆ ಹಾಕಿ ಸುಡಿ. ದುರ್ಗಂಧ ನಿವಾರಣೆಯಾಗುತ್ತದೆ.
ಫ್ರಿಜ್ ನಲ್ಲಿ ವ್ಯರ್ಥವಾಗಿ ಬಿದ್ದ ಎಕ್ಸ್ ಪೈರ್ ಆದ ಸಾಮಗ್ರಿಗಳನ್ನು ತೆಗೆದುಹಾಕಿ.
ಬಾಥ್ ರೂಮ್ ಹಾಗೂ ಟಾಯ್ಲೆಟ್ ಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಏರ್ ಫ್ರೆಶ್ ನರ್ ನಿಂದ ಸುವಾಸನೆ ಬರುವಂತೆ ಮಾಡಿ.
ಹೊಸ ಪೇಂಟ್ ನಿಂದ ಮನೆಗೆ ಹೊಸ ಲುಕ್ ಕೊಡಿ. ಹೊಸ ಪೇಂಟ್ ಮನೆಯಲ್ಲಿ ಪರಿಮಳ ಪಸರಿಸುವ ಕೆಲಸ ಮಾಡುತ್ತದೆ.
ಮನೆಯ ಮೂಲೆಗಳಲ್ಲಿ ಹಾಗೂ ಕಿರಿದಾದ ಜಾಗಗಳಲ್ಲಿ ಫ್ರಾಗ್ರೆಂಟ್ ಆಯಿಲ್ ಸ್ಪ್ರೇ ಮಾಡಿ. ಮನೆಯಲ್ಲಿ ಪರಿಮಳ ಬರಿಸುವುದರ ಜೊತೆ ಜೊತೆಗೆ ಅದು ಸೊಳ್ಳೆಗಳನ್ನೂ ಓಡಿಸುವ ಕೆಲಸ ಮಾಡುತ್ತದೆ.
ಸ್ಟ್ರಾಬೆರಿ, ಲ್ಯಾವೆಂಡರ್, ಲೆಮನ್, ಆರೆಂಜ್ ನಂತಹ ಬಗೆಬಗೆಯ ಸುವಾಸನೆ ಹಾಗೂ ಡಿಸೈನ್ ಇರುವ ಮೇಣದ ಬತ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳ ಪ್ರಯೋಗ ಬೆಳಕಿನ ಜೊತೆ ಜೊತೆಗೆ ಮನಸ್ಸಿಗೆ ಮುದ ನೀಡುವ ಸುವಾಸನೆಗಾಗಿಯೂ ಬಳಸಲಾಗುತ್ತದೆ.
ಮನೆಯಲ್ಲಿ ಮಲ್ಲಿಗೆ, ಲಿಲ್ಲಿ, ಸೇವಂತಿಗೆ, ಡೇರೆ, ಸುಗಂಧರಾಜ, ನಂದಿಬಟ್ಟಲು, ಗುಲಾಬಿ, ದಾಸವಾಳ ಮುಂತಾದ ಹೂಗಿಡಗಳನ್ನು ಮನೆಯ ಅಂಗಳದಲ್ಲಿ ಇಲ್ಲವೇ ಕುಂಡದಲ್ಲಿ ಬೆಳೆಸಿ. ಮನೆಯ ಅಂದಕ್ಕೆ ಇನ್ನಷ್ಟು ಮೆರುಗು ಕೊಡಬಹುದು.
ಚಕ್ಕೆ ಲವಂಗವನ್ನು ಕಿತ್ತಳೆಯ ಸಿಪ್ಪೆಯ ಜೊತೆ ಮಂದ ಉರಿಯಲ್ಲಿ ಸ್ವಲ್ಪವೇ ಹುರಿದು ಹಾಗೆಯೇ ಬಿಟ್ಟುಬಿಡಿ. ಮನೆಯಲ್ಲಿ ವಿಶಿಷ್ಟ ಪರಿಮಳ ಪಸರಿಸುತ್ತದೆ.
ರೂಮ್ ಫ್ರೆಶ್ ನರ್, ಕಾರ್ಪೆಟ್ ಪೌಡರ್ ನಿಂದ ನೀವು ಮನೆಯಲ್ಲಿ ಹಾಸಿದ ಕಾರ್ಪೆಟ್ ಮುಖಾಂತರ ಇಡೀ ಕೋಣೆಯನ್ನು ಪರಿಮಳ ಬೀರುವಂತೆ ಮಾಡಬಹುದು. ನೀವು ಲ್ಯಾವೆಂಡರ್ ಹಾಗೂ ರೋಸ್ ಮೆರಿ ಪೌಡರ್ ನ್ನು ಕೂಡ ಉಪಯೋಗಿಸಬಹುದು. ಅದಕ್ಕಾಗಿ ಬೇಕಿಂಗ್ ಸೋಡಾ, ಡ್ರೈ ರೋಸ್ ಮೆರಿ ಹಾಗೂ ಲ್ಯಾವೆಂಡರ್ ಆಯಿಲ್ ನ ಅವಶ್ಯಕತೆ ಬೀಳುತ್ತದೆ.
ಮಾರ್ಕೆಟ್ ನಲ್ಲಿ ಪ್ಲೇರ್ ಸೆಂಟೆಡ್ ವ್ಯಾಕ್ಸ್ ಬಾರ್ಸ್ ಕೂಡ ಲಭ್ಯವಿದೆ.
ಶುಷ್ಕ ಪುಷ್ಪಗಳು ಹಾಗೂ ಎಸೆನ್ಶಿಯಲ್ ಆಯಿಲ್ ನಿಂದ ಪರಿಮಳ ಬೀರುವ ಈ ವ್ಯಾಕ್ಸ್ ಬಾರ್ಸ್ ನ್ನು ನೀವು ಯಾವ ಸ್ಥಳದಲ್ಲಿ ಪರಿಮಳ ಬಯಸುತ್ತೀರೋ, ಅಲ್ಲಿಯೇ ನೇತು ಹಾಕಬೇಕು. ಅವನ್ನು ನೀವು ಡ್ರಾಯರ್ ನಲ್ಲೂ ಕೂಡ ಇರಿಸಬಹುದು.
– ಪರಿಮಳಾ