ಒಳ್ಳೆಯ ಪೌಷ್ಟಿಕ ಆಹಾರದಿಂದ ದೇಹ ಹೇಗೆ ದಷ್ಟಪುಷ್ಟ ಆಗುತ್ತೊ, ಅದೇ ರೀತಿ ಒಳ್ಳೆಯ ಸುವಾಸನೆ ಮನಸ್ಸು ಹಾಗೂ ಮೆದುಳನ್ನು ಆರೋಗ್ಯಕರವಾಗಿಸುತ್ತದೆ. ಒಳ್ಳೆಯ ಸುವಾಸನೆಯಿಂದ ಯೋಚನೆ ಬದಲಾಗುತ್ತದೆ ಹಾಗೂ ಆಲೋಚನೆಯಿಂದ ಜೀವನ ಬದಲಾಗುತ್ತದೆ. ಒಳ್ಳೆಯ ಪರಿಮಳ ನಮ್ಮ ವಿಚಾರ ಹಾಗೂ ಭಾವನೆಗಳನ್ನು ಕೂಡ ಬದಲಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದು ಮನಸ್ಸು ಮತ್ತು ಮೆದುಳನ್ನು ಶಾಂತಿ ಹಾಗೂ ಉತ್ಸಾಹವನ್ನು ಹೆಚ್ಚಿಸುವುದರ ಮೂಲಕ ಜೀವನದ ದೃಷ್ಟಿಕೋನವನ್ನೇ ಬದಲಿಸುತ್ತದೆ. ಇದೇ ಕಾರಣದಿಂದ ನಾವೆಲ್ಲ ಒಳ್ಳೆಯ ಸುವಾಸನೆಯನ್ನು ಆಸ್ವಾದಿಸಲು ಇಚ್ಛಿಸುತ್ತೇವೆ.
ಆದರೆ ಈ ಸುವಾಸನೆ ಕೇವಲ ನಮಗಷ್ಟೇ ಅಲ್ಲ, ನಮ್ಮ ಮನೆಯನ್ನು ಕೂಡ ಸುಗಂಧಮಯಗೊಳಿಸಬೇಕು. ಆಗಲೇ ಹಬ್ಬದ ನಿಜವಾದ ಆನಂದ ಸಿಗುತ್ತದೆ. ಸಂಶೋಧನೆಗಳ ಪ್ರಕಾರ, ಹಬ್ಬದ ಸಿದ್ಧತೆಯ ವ್ಯವಸ್ತತೆಯಲ್ಲಿ ಉಂಟಾದ ಒತ್ತಡ ಕೂಡ ಮುಂದೆ ಸುವಾಸನೆಯಿಂದ ಕಡಿಮೆಯಾಗುತ್ತದೆ.
ಬೇರೆ ಬೇರೆ ರೀತಿಯ ಸುವಾಸನೆಗಳು ನಮ್ಮ ಮೂಡ್ ನ್ನು ಹೇಗೆ ಪ್ರಭಾವಿತಗೊಳಿಸುತ್ತವೆ ಎನ್ನುವುದನ್ನು ಅರಿಯಿರಿ.
ಲ್ಯಾವೆಂಡರ್ : ಇದರ ಪರಿಮಳ ನಮ್ಮ ಮೆದುಳನ್ನು ಶಾಂತಗೊಳಿಸಲು ನೆರವಾಗುತ್ತದೆ. ಭಾವನಾತ್ಮಕ ಒತ್ತಡ ಹಾಗೂ ಖಿನ್ನತೆ ದೂರಗೊಳಿಸಿ ಮನಸ್ಸನ್ನು ಹಗುರಗೊಳಿಸುತ್ತದೆ. ಮೈಗ್ರೇನ್ ಹಾಗೂ ತಲೆನೋವಿನ ಪರಿಣಾಮವನ್ನು ಕಡಿಮೆಗೊಳಿಸುತ್ತದೆ.
ಜಾಸ್ಮಿನ್ : ಇದರ ಸುವಾಸನೆ ದಣಿವನ್ನು ನಿವಾರಿಸಲು ನೆರವಾಗುತ್ತದೆ. ಇದು ಕೇವಲ ಉತ್ಸಾಹವನ್ನಷ್ಟೇ ಅಲ್ಲ, ದೇಹದ ಸ್ಛೂರ್ತಿಯನ್ನೂ ಹೆಚ್ಚಿಸುತ್ತದೆ.
ರೋಸ್ ಮೆರಿ : ಇದರ ಪರಿಮಳ ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆ ಜೊತೆಗೆ ದೇಹದ ಸ್ಛೂರ್ತಿಯನ್ನು ವಾಪಸ್ ತರುವ, ತಲೆನೋವು ಹಾಗೂ ಮಾನಸಿಕ ದಣಿವನ್ನು ನಿವಾರಿಸಲು ನೆರವಾಗುತ್ತದೆ.
ಪೆಪ್ಪರ್ ಮಿಂಟ್ : ಇದರ ಸುವಾಸನೆ ಎನರ್ಜಿ ಬೂಸ್ಟರ್ ಆಗಿದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಹಾಗೂ ಸ್ಪಷ್ಟವಾಗಿ ಯೋಚಿಸುವ ಶಕ್ತಿ ನೀಡುತ್ತದೆ. ಇದು ಮೂಡ್ ನ್ನು ಅಪ್ ಲಿಫ್ಟ್ ಮಾಡುತ್ತದೆ.
ಲೆಮನ್ : ನಿಂಬೆಯ ಸುವಾಸನೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಉಸಿರಿನಲ್ಲಿ ಸೇರಿಕೊಂಡು ತಾಜಾತನದ ಅನುಭವ ನೀಡುತ್ತದೆ.
ತಾಜಾ ಹುಲ್ಲಿನ ಸುವಾಸನೆ : ಆಸ್ಟ್ರೇಲಿಯಾದ ಸಂಶೋಧಕರ ಪ್ರಕಾರ, ಕತ್ತರಿಸಿದ ತಾಜಾ ಹುಲ್ಲಿನಲ್ಲಿ ಎಂತಹ ಕೆಲವು ರಸಾಯನಗಳು ಹೊರಹೊಮ್ಮುತ್ತವೆ ಎಂದರೆ ಅವು ವ್ಯಕ್ತಿಯನ್ನು ರಿಲ್ಯಾಕ್ಸ್ ಮಾಡಿಸುತ್ತವೆ. ಇದರ ಸುವಾಸನೆ ಮನಸ್ಸಿನೊಂದಿಗೆ ಬರುವ ಮಾನಸಿಕ ಕ್ಷೀಣತೆ ಹಾಗೂ ವೃದ್ಧಾಪ್ಯದ ಲಕ್ಷಣಗಳು ಹೆಚ್ಚುವುದನ್ನು ತಡೆಯುತ್ತದೆ. ಹಾಗೆಂದೇ ಇಂತಹ ಏರ್ ಫ್ರೆಶ್ ನರ್ ಗಳು ಕೂಡ ಬಂದಿದ್ದು, ಇಂತಹ ಸುವಾಸನೆ ನಿಮಗೆ ಎಲ್ಲಾ ಕಡೆ ಸಿಗುವ ಅನುಭವ ಮಾಡಿಕೊಡುತ್ತದೆ.
ವೆನಿಲಾ : ಒಂದು ಅಧ್ಯಯನದ ಪ್ರಕಾರ, ವೆನಿಲಾದ ಸುವಾಸನೆ ನಿಮ್ಮ ಮನಸ್ಸಿಗೆ ಖುಷಿ ನೀಡುತ್ತದೆ. ಅದರಿಂದ ಮೂಡ್ ಹಿತಕರ ಆಗುತ್ತದೆ ಮತ್ತು ಸಿಡಿಮಿಡಿತನ ಮಾಯವಾಗುತ್ತದೆ.
ಹೀಗೆ ಪರಿಮಳ ಬರಿಸಿ ಒಳ್ಳೆಯ ಸುವಾಸನೆಯನ್ನು ನೀವು ಯಾವ ರೀತಿಯಲ್ಲಿ ಮನೆಯ ಮೂಲೆ ಮೂಲೆಗೂ ಪಸರಿಸಬಹುದು ಎನ್ನುವುದನ್ನು ತಿಳಿದುಕೊಳ್ಳಿ :
ಮನೆಯ ಪರದೆಗಳನ್ನು, ಹೊದಿಕೆಗಳನ್ನು, ಕಾರ್ಪೆಟ್ ಗಳನ್ನು ಒಗೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.