ರಾಧಾ : ಏನ್ರೀ.... ನಾಳೆ ಮನೆಗೆ ಅತಿಥಿಗಳು ಬರ್ತಿದ್ದಾರೆ, ಆದರೆ ಮನೆಯಲ್ಲಿ ಏನೂ ಇಲ್ಲ.....

ಮೋಹನ್‌ : ಅಷ್ಟೇ ತಾನೇ? ಅತಿಥಿಗಳು ಬಂದು ಅರ್ಧ ಗಂಟೆ ಆಗುವಷ್ಟರಲ್ಲಿ ನೀನು ಕಿಚನ್‌ ನಲ್ಲಿ 1 ಪಾತ್ರೆ ಜೋರಾಗಿ ಬೀಳಿಸಿ, `ಅಯ್ಯೋ!' ಅನ್ನು. ಏನಾಯ್ತು ಅಂತ ನಾನು ಕೇಳಿದಾಗ, `ಛೇ.... ವೆಜಿಟೆಬಲ್ ಕುರ್ಮ ಪೂರ್ತಿ ಚೆಲ್ಲಿ ಹೋಯ್ತು,' ಅನ್ನು. ಆಮೇಲೆ ಸ್ವಲ್ಪ ಹೊತ್ತಿಗೆ ಇನ್ನೊಂದು ಪಾತ್ರೆಯನ್ನು ಮತ್ತೆ ಹಾಗೇ ಬೀಳಿಸು. ಏನಾಯ್ತು ಅಂತ ನಾನು ಕೇಳಿದಾಗ, `ಮಾಡಿದ್ದ ಘೀ ರೈಸ್‌ ಪೂರ್ತಿ ಕೆಳಗೆ ಬಿದ್ದು ಚೆಲ್ಲಿ ಹೋಯ್ತು. ಈಗೇನು ಮಾಡಲಿ....?' ಅನ್ನು. ಆಗ ನಾನು, `ಸರಿ... ಅನ್ನ ಬೇಳೆ ಸಾರು ತಗೊಂಬಾ,' ಅಂತೀನಿ. ಆಯ್ತಾ? ಹೇಗೋ ಮ್ಯಾನೇಜ್‌ ಮಾಡಿದರಾಯ್ತು.

ಮರೆಗುಳಿ ಸ್ವಭಾವದ ರಾಧಾ ಏನು ಮಾಡಿಬಿಡ್ತಾಳೋ ಎಂದು ಮೋಹನನಿಗೆ ಅಂಜಿಕೆ ಇತ್ತು. ಅತಿಥಿಗಳು ಬಂದ ನಂತರ 2-2 ಸಲ ರಾಧಾ ಪಾತ್ರೆ ಬೀಳಿಸಿ, ಮೋಹನ ಪ್ರಶ್ನಿಸಿದ್ದೂ ಆಯ್ತು. ಸ್ವಲ್ಪ ಹೊತ್ತಿನ ನಂತರ ರಾಧಾ 3ನೇ ಪಾತ್ರೆಯನ್ನೂ ಬೀಳಿಸಿಬಿಡಬೇಕೇ....?

ಮೋಹನ್‌ : ಈಗೇನು ಆಯ್ತು?

ರಾಧಾ : ಈಗ ನಿಜಾಗ್ಲೂ ಬೇಳೆ ಸಾರಿನ ಪಾತ್ರೆ ಚೆಲ್ಲಿ ಹೋಯ್ತು, ಬಂದವರಿಗೆ ನೀರು ಕೊಡಲೇ.....?

ಸೆಕೆಂಡ್‌ ಶಿಫ್ಟ್ ಕೆಲಸ ಮುಗಿಸಿಕೊಂಡು ಪ್ರಸನ್ನ ಸೈಕಲ್ ಏರಿ ಮನೆಗೆ ಹೊರಟಿದ್ದ. ಆ ದಿನ ಸಂಬಳ ಬಂದಿತ್ತು. ಖುಷಿಯಲ್ಲಿ ಹಾಡುತ್ತಾ ಹೊರಟವನನ್ನು ರಾತ್ರಿ 11 ಗಂಟೆಯಲ್ಲಿ ಚೂರಿ ಹಿಡಿದಿದ್ದ ಕಳ್ಳನೊಬ್ಬ ಅಡ್ಡಗಟ್ಟಿದ. ಇವನಿಗೆ ಆ ಭಾರಿ ಚೂರಿಯನ್ನು ಝಳಪಿಸುತ್ತಾ, ``ಮರ್ಯಾದೆಯಾಗಿ ನಿನ್ನ ಜೇಬಿನಲ್ಲಿರುವ ಎಲ್ಲಾ ಹಣ ಕೊಟ್ಟು ಬಿಡು.... ಇಲ್ಲದಿದ್ದರೆ.....''

``ಅಯ್ಯೋ.... ಹಾಗೇ ಮಾಡಬೇಡ ಕಳ್ಳಣ್ಣ... ಹಣ ಇಲ್ಲದೆ ಮನೆಗೆ ಹೋದರೆ ನನ್ನ ಹೆಂಡತಿ ನನ್ನನ್ನು ಹಾಗೇ ಉದ್ದುದ್ದಕ್ಕೆ ನುಂಗಿಬಿಡುತ್ತಾಳೆ...'' ಎಂದ ಪ್ರಸನ್ನ.

``ಈಗ ನಾನು ನಿನ್ನ ಬಳಿ ಏನೂ ಸಂಪಾದಿಸದೆ ಮನೆಗೆ ಹೋದರೆ, ನನ್ನ ಹೆಂಡತಿ ನನ್ನನ್ನು ಅಡ್ಡಡ್ಡ ನುಂಗಿಬಿಡುತ್ತಾಳೆ. ನಾನೇನು ಮಾಡಲಿ.....?''

ನೀತಿ : ಒಟ್ಟಾರೆ ಎಲ್ಲಾ ಗಂಡಂದಿರ ಪಾಡೂ ಒಂದೇ!

ವರುಣ್‌ : ನಾನು ಯಾವ ಕೆಲಸ ಮಾಡಲು ಹೋದರೂ ನನ್ನ ಹೆಂಡತಿ ಮಧ್ಯದಲ್ಲಿ ಅಡ್ಡ ಬರ್ತಾಳೆ. ನೆಟ್ಟಗೆ ಒಂದು ಕೆಲಸವನ್ನೂ ಪೂರ್ತಿ ಮಾಡ್ಲಿಕ್ಕೆ ಬಿಡಲ್ಲ...

ಕಿರಣ್‌ : ಯಾವುದಕ್ಕೂ ಒಂದು ಸಲ ಬುಲ್ಡೋಝರ್‌ ಓಡಿಸಿ ನೋಡು, ಆಗ ಅವಳ ಈ ದುರಭ್ಯಾಸ ತಂತಾನೇ ನಿಂತುಹೋಗಬಹುದು.

ಪತ್ನಿ : ಕಳೆದ ವರ್ಷ ನಮ್ಮ ಮದುವೆಯ ವಾರ್ಷಿಕೋತ್ಸಕ್ಕೆ ಕಬ್ಬಿಣದ ಮಂಚವನ್ನು ಉಡುಗೊರೆಯಾಗಿ ಕೊಡಿಸಿದ್ದಿರಿ. ಈ ಸಲ ಏನು ಉಡುಗೊರೆ ಕೊಡ್ತೀರಿ?

ಪತಿ : ಈ ಸಲ ಅದಕ್ಕೆ 2 ದಿಂಬು ಕೊಂಡರಾಯ್ತು ಬಿಡು.

ಸುರೇಶ್‌ : ಯಾರಿಗಾದರೂ ಕೆಟ್ಟ ಕಾಲ ಬಂದಾಗ, ಅವರ ಮನೆಯವರೆಲ್ಲ ಖಂಡಿತಾ ಅವರ ಹಿಂದೆ ನಿಂತೇ ನಿಲ್ಲುತ್ತಾರೆ.

ಸತೀಶ್‌ : ಯಾವುದನ್ನು ಆಧರಿಸಿ ಹೀಗೆ ಹೇಳ್ತಿದ್ದೀಯಾ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ