ಬೇಸಿಕ್ ಸೌಲಭ್ಯ ಅತ್ಯಗತ್ಯ :
ಏರಿಕಾ ಮತ್ತು ರಿಚ್ ಸ್ಪೆಂಸರ್ ದಂಪತಿಗೆ 3ನೇ ಮಗು ಆದಾಗ ಬಹಳ ಸಂತಸಪಟ್ಟರು. ಆದರೆ 3 ವಾರಗಳಲ್ಲೇ ಅವಳು ರೀನೆಲ್ ಫೇಲ್ಯೂರ್ ರೋಗಕ್ಕೆ ಈಡಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಳು. ಆದರೆ ಸಮಸ್ಯೆ ಎಂದರೆ ಮೂರು ಮಕ್ಕಳನ್ನು ಸುಧಾರಿಸುವುದು ಹೇಗೆ? ಅವಳ ಬಳಿ 1 ಮಗು ಇರಲು ಮಾತ್ರ ಆಸ್ಪತ್ರೆ ಅನುಮತಿಸಿತು. ಹೀಗಾಗಿ ಅವರು ಫಿಲೆಡೆಲ್ಛಿಯಾದ ರಾಂಡಂ ಹೌಸ್ ಚ್ಯಾರಿಟಿಯ ನೆರವು ಪಡೆದರು. ಅಲ್ಲಿ ತಂದೆ ಮತ್ತು ಹಿರಿಯ ಮಕ್ಕಳು ನೆಲೆಸಲು ಅವಕಾಶ ಸಿಕ್ಕಿತು. ಆಸ್ಪತ್ರೆಯ ಅಕ್ಕಪಕ್ಕ ಧರ್ಮಶಾಲೆಗಳಿದ್ದರೂ ಇತ್ತೀಚೆಗೆ ಅವು ಹೋಟೆಲ್ ತರಹ ಅತಿ ದುಬಾರಿ ಆಗಿವೆ. ಮಹಾನಗರಗಳಲ್ಲಿ ಉತ್ತಮ ಆಸ್ಪತ್ರೆ ಜೊತೆ ಅಟೆಂಡೆಂಟ್ ನೆಲೆಸಲಿಕ್ಕೂ ಅವಕಾಶವಿರಬೇಕು. ಇದನ್ನು ಸರ್ಕಾರವಲ್ಲ, ಸಮಾಜವೇ ಮಾಡಬೇಕು. ಚ್ಯಾರಿಟಿ ಹೆಸರಿನಲ್ಲಿ ದೇವಮಂದಿರಗಳ ನಿರ್ಮಾಣಕ್ಕೆ ದಾನ ನೀಡುವುದಲ್ಲ, ಇಂಥ ಅಗತ್ಯದ ಮಂದಿಗೆ ಬೇಸಿಕ್ ಸೌಲಭ್ಯ ನೀಡುವುದಾಗಿದೆ.
ರೋಗದ ಕಾರಣ ಅಡಗಿರಲಾಗದು :
ಅಮೆರಿಕಾದ ರಾಜ್ಯ ವರ್ಜಿನಿಯಾದಲ್ಲಿ ಇದೀಗ ಡ್ಯಾನ್ಸ್ ಪರ್ಫಾರ್ಮೆನ್ಸ್ ಸಂಪೂರ್ಣ ಓಪನ್ ಆಗಿದೆ, ಓಮಿಕ್ರಾನ್ ಹೆಮ್ಮಾರಿ ಬುಸುಗುಡುತ್ತಿದ್ದರೂ ಅಂಜುತ್ತಿಲ್ಲ. ಜನರಿಗೂ ಈ ವೈರಸ್ ಗಳ ಹೆಸರಿನಲ್ಲಿ ಮನೆಯಲ್ಲೇ ಅಡಗಿರುವುದು ಸಾಕಾಗಿದೆ. ಹೀಗಾಗಿ ಇಲ್ಲೆಲ್ಲ ವ್ಯಾಟಿನ್ ಡ್ಯಾನ್ಸ್ ಗಳು ಜೋರಾಗಿವೆ. ನಮ್ಮಲ್ಲೂ ಮದುವೆ ಮನೆಗೆ ನುಗ್ಗುವಾಗ ಜನ ಹೀಗೆ ಧೈರ್ಯ ತೋರುತ್ತಾರಲ್ಲವೇ?
ನಾಣ್ಯದ ಮತ್ತೊಂದು ಮುಖ :
ನಮ್ಮ ದೇಶದಲ್ಲಿ ನಾವು ಸದಾ ಸರ್ಕಾರಿ ಮೆಶಿನರಿ ಕೆಲಸ ಮಾಡುವುದಿಲ್ಲ ಎಂದು ಗೊಣಗುತ್ತಿರುತ್ತೇವೆ. ಆದರೆ ಅಸಲಿ ವಿಷಯ ಅಂದ್ರೆ, ವಿಶ್ವದ ಯಾವುದೇ ದೇಶವಿರಲಿ, ಆಯಾ ಸರ್ಕಾರಗಳು ತರತರಹದ ನಿಯಮಗಳನ್ನು ಮಾಡಿ, ಸಾಮಾನ್ಯ ಜನರಿಗೆ ಕಾನೂನಿನ ಕಬ್ಬಿಣದ ಕಡಲೆ ಉಣಬಡಿಸಿ, ಹಿಂಸಿಸುತ್ತವೆ. ಅಮೆರಿಕಾದ ಮಿಸಿಸಿಪಿ ರಾಜ್ಯದ ಒಂದು ಸಮೀಕ್ಷೆಯಿಂದ ತಿಳಿದು ಬಂದದ್ದು, ಅಲ್ಲಿನ ಬಡತನಕ್ಕೆ ಮೂಲ ಕಾರಣ, ಯಂಗ್ ಬಿಸ್‌ನೆಸ್ ವುಮನ್ ಗೆ ಯಾವುದೇ ಸಹಾಯ ಸಿಗುತ್ತಿಲ್ಲ. ಒಂದು ಸಣ್ಣ ಬ್ಯೂಟಿ ಪಾರ್ಲರ್ ತೆರೆಯಲಿಕ್ಕೂ ಸಾವಿರಾರು ಕಾನೂನಿನ ಅಡ್ಡಿ ಆತಂಕಗಳಿವೆ. ಸರ್ಕಾರಗಳು ಸೇವೆ ಮಾಡಲು ಅಲ್ಲ, ಮಾಡಿಸಿಕೊಳ್ಳಲು ರೆಡಿ ಇರುತ್ತವೆ!
ಕನಸುಗಳನ್ನು ನನಸಾಗಿಸಬೇಕೇ? :
ಜೆಸ್ಸಿಕಾಳಿಗೆ ಅಮೆರಿಕಾದ ಒಂದು ಸಂಸ್ಥೆ `ಪವರ್ ವುಮನ್ ಆಫ್ ಮಂಥ್’ ಎಂದು ಘೋಷಿಸಿದೆ. ಜೆಸ್ಸಿಕಾ ತನ್ನದೇ ಆದ ಸ್ವಂತ ಸಕ್ಸೆಪ್ ಬ್ಯೂಟಿ ಲಾಂಜ್ ನ್ನು ಜಾರ್ಜಿಯಾ ನಗರದಲ್ಲಿ ನಡೆಸುತ್ತಿದ್ದಾಳೆ. ಶೂನ್ಯದಿಂದ ಆರಂಭಿಸಿ ಇದೀಗ ಹೈ ಬಿಸ್ ನೆಸ್ ಲೆವೆಲ್‌ಗೆ ಏರಿದ್ದಾಳೆ. ಅಮೆರಿಕಾ ಆದರೇನು? ಅಲ್ಲೂ ಸಹ ಹೆಂಗಸರಿಗೆ ಅತಿ ದೊಡ್ಡ ಉದ್ಯಮ, ಲಾವಣ್ಯ ವ್ಯವಹಾರಗಳಲ್ಲಿ ದೊಡ್ಡ ಹೆಜ್ಜೆ ಇರಿಸುವ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಸಣ್ಣ ಉದ್ಯಮಗಳಲ್ಲೇ ಅತಿ ದೊಡ್ಡ ಹೆಸರು ಮಾಡುವ ಅವಕಾಶ ಬಿಡಬಾರದು. ಇದಕ್ಕಾಗಿ ಅಪಾರ ಪರಿಶ್ರಮ ಬೇಕೇ ಬೇಕು. ನಮ್ಮಲ್ಲಿರುವಂತೆ ಪೂಜೆ ಪ್ರವಚನ, ಕಿಟೀ ಪಾರ್ಟಿಗಳ ಹಂಗು ತೊರೆದು ಹಗಲಿರುಳೂ ದುಡಿಯಬೇಕು. ಧರ್ಮ ಹೆಂಗಸರನ್ನು ಸದಾ ಗುಲಾಮಗಿರಿಯ ಪಂಜರದಲ್ಲಿ ಬಂಧಿಸಿಡುವುದೇ ಆಗಿದೆ.
ಆಟವಂತೂ ಬಲು ಮುಖ್ಯ :
ಅಮೆರಿಕಾದ ಹೆಂಗಸರಿಗೆ ಪೋಲೋ ಆಟವೆಂದರೆ ಪ್ರಾಣ. ಅದರ ಅಸೋಸಿಯೇಶನ್ ಗಳಲ್ಲಿ ಹೆಂಗಸರು ಬಲು ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಓಡುವ ಕುದುರೆಯನ್ನು ಸಂಭಾಳಿಸುತ್ತಾ, ಸ್ಟಿಕ್ ಬೀಸಿ ಗೋಲ್ ಮಾಡುವುದು ಬಲು ರೋಮಾಂಚಕಾರಿ ಆಟ ಎನಿಸಿದೆ, ಇದಂತೂ ಸದ್ಯಕ್ಕೆ ಕೇವಲ ಶ್ರೀಮಂತರ ಆಟ ಎನಿಸಿದೆ. ಅವರನ್ನು ಸಿಕ್ಕಿ ಹಾಕಿಸಲು ನಾನಾ ನಾಟಕ ಆಡುತ್ತಾರೆ, ಅದರಲ್ಲಿ ಮುಖ್ಯವಾದುದು ವಿಶೇಷ ಡ್ರೆಸ್ ಉಡುಗೊರೆ, ಅದರ ಮೇಲೆ ವಿಶಿಷ್ಟ ಎಂಬ್ಲೆಂ ಇರಬೇಕಾಗುತ್ತದೆ. ಈ ಕ್ರೀಡಾಪಟುಗಳ ಮುಗುಳ್ನಗು ಇವರು ಅದರಲ್ಲಿ ಎಷ್ಟು ತಲ್ಲೀನರು ಎಂದು ತೋರಿಸುತ್ತದೆ.
ಹಕೀಕತ್ತೇ ಬೇರೆ :
ನಾವು ಬಾಂಗ್ಲಾದೇಶವನ್ನು ಎಷ್ಟೇ ಹಿಂದುಳಿದದ್ದು ಎಂದು ಭಾವಿಸಿದರೂ, ಅಲ್ಲಿನ ವಾಸ್ತವತೆಯೇ ಬೇರೆ. ಅಲ್ಲಿನ ಆರ್ಥಿಕ ಪ್ರಗತಿ ಬಲು ಜೋರಾಗಿದೆ, ಹಾಗೆಯೇ ಸಾಂಸ್ಕೃತಿಕ ಪ್ರಗತಿ ಸಹ! 1947ರಲ್ಲಿ ಬಂಗಾಳದ ವಿಭಜನೆಯ ಕುರಿತಾದ ಕೃತಿ, `ಖ್ವಾಬ್ ನಾಮಾ’ದ ಡ್ಯಾನ್ಸ್ ಡ್ರಾಮಾ, ಇತ್ತೀಚೆಗೆ ಢಾಕಾದ ನ್ಯಾಷನಲ್ ಥಿಯೇಟರ್ ನಲ್ಲಿ ನಡೆಯಿತು. ನಮ್ಮಲ್ಲಿ ಇನ್ನೂ ಕೇವಲ ಧಾರ್ಮಿಕ ಪುರಾಣಗಳನ್ನೇ ವೇದಿಕೆ ಮೇಲೆ ಪ್ರದರ್ಶಿಸುತ್ತಿದ್ದರೆ, ಬಾಂಗ್ಲಾದಲ್ಲಿ ಮಾತ್ರ ಅದ್ಭುತ ಕ್ರಿಯೇಟಿವಿಟಿ ತೋರಿಸಲು ಅತಿ ಹೆಚ್ಚಿನ ಸ್ವಾತಂತ್ರ್ಯವಿದೆ.
ಆಪತ್ತಿನಲ್ಲಿ ಪ್ರಾಣ :
ನಜೀಬ್ ಫೈಜಿ ಕೇವಲ 21 ವರ್ಷದವನು. ಆದರೆ ಮುಂದೊಂದು ದಿನ ಅವನ ರುಂಡ ಚೆಂಡಾಡಲಾಗುತ್ತದೆ, ಏಕೆಂದರೆ ಅವನು ತಾಲಿಬಾನಿಗಳ ತವರೂರಾದ ಆಫ್ಘಾನಿಸ್ತಾನದಲ್ಲಿ ಸಲಿಂಗಿಗಳ ಸಮಾನತೆ ಬಯಸುತ್ತಿದ್ದಾನೆ. ಯಾವುದು ಪರದೆ ಹಿಂದೆ ಕದ್ದುಮುಚ್ಚಿ ಜೋರಾಗಿ ನಡೆಯುತ್ತಿದೆಯೋ, ಅದನ್ನು ತಾಲಿಬಾನಿ ಸರ್ಕಾರ ಖಂಡಿತಾ ಮಾನ್ಯಗೊಳಿಸದು, ಏಕೆಂದರೆ ಅವರಿಗೆ ತಮ್ಮ ಢೋಂಗಿ ಕಂದಾಚಾರದ ಧಾರ್ಮಿಕತೆ ಮೆರೆಸಬೇಕಿದೆ. ಕಾಬೂಲ್ ನಲ್ಲಿ ಧ್ವಜ ಹಾರಿಸುವ ಅವಕಾಶ ಕೇವಲ ತಲೆ ಕೆಟ್ಟವರ ಹಕ್ಕಾಗಿದೆ.