ಯಾವ ಕಾರಣಕ್ಕೇ ಗರ್ಭಪಾತ ಆಗಿರಲಿ, ಅದು ಹೆಣ್ಣಿಗೆ ಅತಿ ದುಃಖಕರ. ಇದಾದ ಮೇಲೆ ಮೊದಲಿನಂತೆ ಆರೋಗ್ಯ ಗಳಿಸಲು ಏನು ಮಾಡಬೇಕು.....?

ಎಷ್ಟೋ ಹೆಂಗಸರು, 30 ದಾಟಲಿ ಆಮೇಲೆ ಮಗು ಬಗ್ಗೆ ವಿಚಾರಿಸೋಣ, ಅಲ್ಲಿಯವರೆಗೂ ಬಸಿರುಬಾಣಂತನದ ಗೊಡವೆ ಬೇಡ ಅಂದುಕೊಳ್ಳುತ್ತಾರೆ. ಒಂದು ಸರ್ವೆ ಪ್ರಕಾರ, 4 ಹೆಂಗಸರಲ್ಲಿ ಒಬ್ಬರಿಗೆ, 45 ದಾಟಿದ ಕಾರಣದಿಂದಲೇ ಗರ್ಭಪಾತ ಆಗಿರುವುದು ಖಾತ್ರಿಯಾಗಿದೆ. ಈ ತೊಂದರೆಯಿಂದ ಬಳಲಿದವರು ಅಗತ್ಯವಾಗಿ ಇಲ್ಲಿನ ಸಲಹೆ ಅನುಸರಿಸುವುದು ಲೇಸು.

ಅದಕ್ಕೆ ಮೊದಲು ಗರ್ಭಪಾತ ಎಂದರೇನು ಎಂದು ತಿಳಿಯೋಣ. ಇದನ್ನು ಮಾಡಿಸಿಕೊಳ್ಳುವ ವಿಧಾನಗಳೇನು? ಗರ್ಭ ಪೂರ್ಣ ರೂಪದಲ್ಲಿ ವಿಕಾಸಗೊಳ್ಳುವ ಮೊದಲೇ ತಂತಾನೇ ಕರಗಿ, ಗರ್ಭಾಶಯದಿಂದ ಹೊರಬರುವುದು ಅಥವಾ ಬಲವಂತವಾಗಿ ಆಪರೇಶನ್‌ ಮೂಲಕ ಅಥವಾ ಹಾರ್ಮೋನ್‌ ಮಾತ್ರೆಗಳ ಸೇವನೆಯಿಂದ ಹಾನಿಗೊಳಿಸುವುದೇ ಗರ್ಭಪಾತ. ಇದರ ಅಂತಿಮ ಪರಿಣಾಮ ಗರ್ಭಾಶಯದಲ್ಲಿ ಬೆಳೆಯುತ್ತಿರುವ ಭ್ರೂಣ ಇನ್ನಿಲ್ಲವಾಗುತ್ತದೆ.

ಇದರಲ್ಲಿ ಹಲವಾರು ವಿಧಾನಗಳಿವೆ. ಇದಕ್ಕಾಗಿ ರೋಗಿ ತಾನಾಗಿ ವೈದ್ಯರನ್ನು ಅರಸಿ ಬಂದಾಗ, ಅವಳ ಗರ್ಭಾವಸ್ಥೆಯ ಸ್ಥಿತಿ ಗಮನಿಸಿ ಡಾಕ್ಟರ್‌ ಆಕೆಗೆ ಸೂಕ್ತ ವಿಧಾನ ಬಳಸುತ್ತಾರೆ. ಇದರ ಹಲವು ವಿಧಾನಗಳೆಂದರೆ, ಗರ್ಭಪಾತದ ಮಾತ್ರೆಗಳು, ನಿರ್ವಾತದ ಆಕಾಂಕ್ಷೆ (ವ್ಯಾಕ್ಯೂಂ ಆ್ಯಸ್ಪಿರೇಶನ್‌ ನ ಒತ್ತಡ) ಹಾಗೂ ಗರ್ಭಪಾತ ಆದ ಮೇಲೆ ಈ ಪ್ರಕ್ರಿಯೆಯ ನಂತರ ಒಬ್ಬ ಹೆಣ್ಣಿಗೆ ಸಾಮಾನ್ಯವಾಗಿ 4-8 ವಾರಗಳ ನಂತರ, ಮುಟ್ಟು ಮಾಮೂಲಿ ಆಗಬೇಕು. ಆರಂಭದಲ್ಲಿ ಅವಳಿಗೆ ಅನಿಯಮಿತ ರಕ್ತಸ್ರಾವ ಆಗಬಹುದು. ಕೆಲವು ಹೆಂಗಸರಲ್ಲಿ, ಇದಾದ ಕೆಲವು ವಾರಗಳ ನಂತರ ಮಜಬೂತಾದ ಭಾವನೆಗಳು, ಮೂಡ್‌ ನಲ್ಲಿ ಬದಲಾವಣೆ ಉಂಟಾಗುತ್ತದೆ. ಹಾರ್ಮೋನ್‌ ಗಳಲ್ಲಿ ದಿಢೀರ್‌ ಬದಲಾವಣೆ ಇದಕ್ಕೆ ಕಾರಣವಿರಬಹುದು. ಗರ್ಭಪಾತ ಎಂಬುದು ಭಾವನಾತ್ಮಕ ಮತ್ತು ಮಾನಸಿಕ ರೂಪದಲ್ಲಿ ಬಲು ಸವಾಲುಭರಿತ ಅನುಭವವೇ ಸರಿ. ಈ ಕಷ್ಟಕರ ದಿನಗಳಲ್ಲಿ ನಿಮ್ಮ ಆಪ್ತೇಷ್ಟರ ನೆರವು ಪಡೆಯಿರಿ.

ಯಾವ ಹೆಣ್ಣಿಗೆ ಮುಟ್ಟು ರೆಗ್ಯುಲರ್‌ ಆಗಿರುತ್ತದೋ, ಅವಳು ಸುಲಭವಾಗಿ ಗರ್ಭವತಿ ಆಗಬಲ್ಲಳು. ಹುಡುಗಿ ಮೈ ನೆರೆತಾಗಲಿಂದ ಹಿಡಿದು, ಗರ್ಭಪಾತದ ನಂತರ ಮುಟ್ಟು ಮರಳಿದ ಮೇಲೂ ಹೀಗಾಗಬಹುದು. ಯಾವ ಹೆಣ್ಣು ಗರ್ಭಧಾರಣೆ ಬೇಡ ಎಂದುಕೊಳ್ಳುತ್ತಾಳೋ, ಗರ್ಭ ನಿರೋಧಕಗಳ ಬಳಕೆ ಅಥವಾ ಸೆಕ್ಸ್ ಬೇಡ ಎಂದು ದೂರ ಸರಿಯುತ್ತಾಳೆ.

ಗರ್ಭಪಾತದ ನಂತರ ಕಾಣಿಸುವ ಲಕ್ಷಣಗಳು ಹೀಗಿರುತ್ತವೆ :

ರಕ್ತ ಸ್ರಾವ

ಕೆಲವು ಹೆಂಗಸರಿಗೆ ಗರ್ಭಪಾತದ ನಂತರ ತಕ್ಷಣ ರಕ್ತ ಸ್ರಾವ ಆಗಲಿಕ್ಕಿಲ್ಲ. ಕೆಲವರಿಗೆ ಮುಂದಿನ 2-6 ವಾರಗಳಲ್ಲಿ ಯೋನಿಯಿಂದ ರಕ್ತ ಜಿನುಗುವ ತೊಂದರೆ ತಪ್ಪಿದ್ದಲ್ಲ. ಹೆದರುವ ಅಗತ್ಯವಿಲ್ಲ, ಇದು ಗರ್ಭಪಾತದ ಮಾಮೂಲಿ ಲಕ್ಷಣ.

ಯೋನಿಯಿಂದ ಜಿನುಗುವ ರಕ್ತ ತುಸು ಸ್ಪಾಟಿ, ಬೂದು ಬಣ್ಣದ ಮಿಶ್ರಿತ ಸಹ ಆಗಬಹುದು, ಇದರಲ್ಲಿ ನಿಮಗೆ ಕ್ಲಾಟ್ಸ್ (ಗಂಟು) ಕಾಣಿಸಿದರೆ ಗಾಬರಿ ಬೇಡ, ಏಕೆಂದರೆ ಇದು ಬಿಲ್ ಕುಲ್ ‌ಮಾಮೂಲಿ.

ಗರ್ಭಪಾತದ ನಂತರ ಮೊದಲ ಕೆಲವು ದಿನಗಳಲ್ಲಿ ರಕ್ತ ಬರದಿದ್ದರೂ, ನಂತರ ಹಾರ್ಮ್ನ್‌ ಬದಲಾವಣೆಗಳಿಂದಾಗಿ ತುಸು ಅಧಿಕ ರಕ್ತ ಒಸರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ