ನ್ಯಾಷನಲ್ ಕ್ರಶ್​ ನಟಿ ರಶ್ಮಿಕಾ ಮಂದಣ್ಣಗೆ ಏನಾಯ್ತು..? ಅನ್ನೋದೇ ಎಲ್ಲಾ ಕಡೆ ಸುದ್ದಿ. ಸೋಷಿಯಲ್ ಮೀಡಿಯಾದಲ್ಲಷ್ಟೇ ಅಲ್ಲ, ಸೌತ್​​ ಸಿನಿಇಂಡಸ್ಟ್ರಿ ಮತ್ತು ಬಾಲಿವುಡ್​​ನಲ್ಲೂ ರಶ್ಮಿಕಾದ್ದೇ ಮಾತು. ಅಯ್ಯೋ.. ಮೊನ್ನೆ ಮೊನ್ನೆ ಚೆನ್ನಾಗಿದ್ದ ರಶ್ಮಿಕಾ ಯಾಕ್ ಹೀಗೆ ಮಾಡ್ಕೊಂಡ್​ಬಿಟ್ರು ಅಂತೆಲ್ಲಾ ದೊಡ್ಡವರಿಂದ ಹಿಡಿದು ಚಿಕ್ಕವರವರೆಗೂ ಮಾತನಾಡಿಕೊಳ್ತಿದ್ದಾರೆ. ಅಸಲಿ ಮ್ಯಾಟರ್ ಏನಪ್ಪಾ ಅಂದ್ರೆ, ನಟಿ ರಶ್ಮಿಕಾ ಮಂದಣ್ಣಗೆ ನಡೆದಾಡೋಕೆ ಆಗ್ತಿಲ್ವಂತೆ. ಇನ್ನೂ ಒಂದೆರಡು ತಿಂಗಳು ಎಲ್ಲೂ ಹೋಗೋಕೆ ಆಗೋದೇ ಇಲ್ವಂತೆ. ಯಾವ್ ಸಿನಿಮಾ ಶೂಟಿಂಗ್​​ನಲ್ಲೂ ಭಾಗಿಯಾಗಲ್ವಂತೆ.

ಹೌದು.. ಅಭಿಮಾನಿಗಳ ಇಷ್ಟೆಲ್ಲಾ ಆತಂಕದ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಕೊನೆಗೂ ಉತ್ತರ ಕೊಟ್ಟಿದ್ದಾರೆ. ತಮ್ಮ ಇನ್​ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ತಾನು ಕಾಲಿಗೆ ಏಟು ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಬಲಗಾಲಿನ ಮುಂಗಾಲಿಗೆ ಬ್ಯಾಂಡೇಜ್ ಹಾಕಿಕೊಂಡಿರುವ 4 ಫೋಟೋಗಳನ್ನು ಹಾಕಿ ನೋಡಿ ನನ್ನ ಅವಸ್ಥೆ ಅಂತಾ ನೋವಿನ ವಿಚಾರವನ್ನು ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ತಮಗೆ ಆಗಿರುವ ಗಂಭೀರ ಗಾಯಗಳನ್ನು ಕನ್ಫರ್ಮ್‌ ಮಾಡಿದ್ದಾರೆ.

Rashmika mandanna (2)

ಆರಂಭದಲ್ಲಿ ಸಣ್ಣ ಸುದ್ದಿ ಅಂತಾ ತಿಳಿದುಕೊಂಡಿದ್ದ ಅಭಿಮಾನಿಗಳು ಇದೆಲ್ಲಾ ಕಾಮನ್​. ಅಂಥದ್ದೇನೂ ಆಗಿರಲ್ಲ, ಅಂತಾನೇ ಅಂದುಕೊಂಡಿದ್ದರು. ಆದ್ರೆ, ಅದ್ಯಾವಾಗ ರಶ್ಮಿಕಾ ತಮ್ಮ ಕಾಲಿಗೆ ಏಟಾಗಿರುವ ಫೋಟೋಸ್ ಹಾಕಿದ್ರೋ ಆಗ ಓಹೋ.. ಇಷ್ಟು ಸೀರಿಯಸ್​ ಆಗಿದೆ ಮ್ಯಾಟರ್ ಅಂತಾ ಕಮೆಂಟ್​ ಹಾಕ್ತಿದ್ದಾರೆ. ಸದ್ಯ ಬೆಡ್‌ರೆಸ್ಟ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಗಂಭೀರ ಗಾಯಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ರಶ್ಮಿಕಾ ಬೆಡ್‌ರೆಸ್ಟ್‌ನಲ್ಲೇ ಇರಲಿದ್ದು, ತಿಂಗಳುಗಳ ಕಾಲ ಅವರು ಎದ್ದು ನಡೆಯುವಂತಿಲ್ಲ.

‘ಇದು ನನಗೆ ಹೊಸ ವರ್ಷದ ಶುಭಾಶಯಗಳು ಎಂದು ನಾನು ಊಹಿಸುತ್ತೇನೆ. ನೋವಿನಿಂದಲೇ ನನ್ನ ಹೊಸ ವರ್ಷ ಆರಂಭವಾದಂತಿದೆ. ನನ್ನ ಪವಿತ್ರ ಜಿಮ್ ದೇಗುಲದಲ್ಲಿ ನಾನು ಗಾಯಗೊಂಡಿದ್ದೇನೆ. ಈಗ ನಾನು ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳ ಕಾಲ ಬೆಡ್‌ರೆಸ್ಟ್‌ನಲ್ಲಿದ್ದೇನೆ. ಇದು ದೇವರಿಗೆ ಮಾತ್ರ ತಿಳಿದಿದೆ. ಹಾಗಾಗಿ ನಾನು ಥಾಮ, ಸಿಕಂದರ್ ಮತ್ತು ಕುಬೇರನ ಸೆಟ್‌ಗಳಿಗೆ ಶೀಘ್ರದಲ್ಲೇ ಹಿಂತಿರುಗುತ್ತಿದ್ದೇನೆ ಎಂದು ಭಾವಿಸಿದ್ದೇನೆ. ನನ್ನ ನಿರ್ದೇಶಕರಿಗೆ ವಿಳಂಬಕ್ಕೆ ಕ್ಷಮೆಯಿರಲಿ, ನನ್ನ ಕಾಲುಗಳು ಆಕ್ಷನ್‌ ಸಜ್ಜಾದ ಕೂಡಲೇ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆಎಂದು ತಮ್ಮ ಪರಿಸ್ಥಿತಿಯನ್ನು ಭಾವುಕವಾಗಿ ವಿವರಿಸಿದ್ದಾರೆ.

Rashmika mandanna (3)

ಅಸಲಿಗೆ ರಶ್ಮಿಕಾ ಮಂದಣ್ಣ ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಸ್ಲಿಪ್ ಆಗಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದಾರೆ. ಸದ್ಯ ವೈದ್ಯರು ಎಕ್ಸ್​ರೇ ತೆಗೆದು ನೋಡಿದ್ದಾರೆ. ಮೂಳೆಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದು, ಒಂದೆರಡು ತಿಂಗಳು ಎದ್ದು ಓಡಾಡದಂತೆ, ಕಾಲಿನ ಮೇಲೆ ಭಾರ ಬಿಡದಂತೆ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಸದ್ಯ ರಶ್ಮಿಕಾ ಬೆಡ್​ರೆಸ್ಟ್​ನಲ್ಲಿದ್ದು ಅತ್ತ ಸಲ್ಮಾನ್​ಖಾನ್ ಜೊತೆ ರಶ್ಮಿಕಾ ಅಭಿನಯದ ಸಿಕಂದರ್ ಸಿನಿಮಾ ಶೂಟಿಂಗ್​ನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

Rashmika mandanna (4)

ಸ್ಯಾಂಡಲ್​ವುಡ್​​ನಲ್ಲಿ ಸಾನ್ವಿ ಅಂತಾ ಫೇಮಸ್ ಆಗಿ, ಟಾಲಿವುಡ್​ನಲ್ಲಿ ಶ್ರೀವಲ್ಲಿ ಅಂತಾ ಪಟ್ಟ ಗಿಟ್ಟಿಸಿಕೊಂಡು ನ್ಯಾಷನಲ್ ಕ್ರಶ್ ಅನ್ನೋ ಕಿರೀಟ ತೊಟ್ಟು ಬಾಲಿವುಡ್​​ನಲ್ಲಿ ನಟ ಸಲ್ಮಾನ್ ಖಾನ್ ಜೊತೆಗೆ ಸಿಕಂದರ್​​​​​​ನಲ್ಲಿ ಜೊತೆಯಾಗಿ ನಟಿಸುತ್ತಿರುವ ರಶ್ಮಿಕಾ ಆದಷ್ಟು ಬೇಗ ಗುಣಮುಖರಾಗಲಿ ಅಂತಾ ಅಭಿಮಾನಿಗಳು ಹಾರೈಸುತ್ತಿದ್ದಾರೆ.

 

 

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ