ತುಳು ಚಿತ್ರರಂಗಕ್ಕೆ ಐದು ದಶಕಗಳ ಇತಿಹಾಸ ವಿದೆ. ಎಪ್ಪತ್ತರ ದಶಕದಲ್ಲಿ ಬಿಡುಗಡೆಯಾದ   ‘ಎನ್ನ ತಂಗಡಿ ‘ ‘ಕೋಟಿಚನ್ನಯ ‘ ಚಿತ್ರಗಳಿಂದ ಹಿಡಿದು ಇತ್ತೀಚಿಗೆ ಬಿಡುಗಡೆಯಾದ ‘ದಸ್ಕತ್ ‘ ಸಿನಿಮಾ ದವರೆಗೆ ನೂರಾರು  ತುಳು ಚಿತ್ರಗಳು ಬಿಡುಗಡೆಯಾಗಿವೆ.ಈ ಮುಂಚೆ ವರ್ಷಕ್ಕೆ ಒಂದು ಎರಡೋ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೆ ಈಗ ಪ್ರತೀ ತಿಂಗಳು  ಸಿನಿಮಾಗಳು ಬಿಡುಗಡೆಯಾಗುವ ಹಂತಕ್ಕೆ ಚಿತ್ರರಂಗ ಬೆಳೆದಿದೆ.

ಈ ವಾರ ಎರಡು ಪ್ರಮುಖ ವಿಷಯಗಳು ತುಳು ಚಿತ್ರ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ.ದಕ್ಷಿಣ ಕನ್ನಡದ ಮೂಲ್ಕಿಯಲ್ಲಿ ಹುಟ್ಟಿ ಬಾಲಿವುಡ್ ನಲ್ಲಿ ಯಾವುದೇ ಚಿತ್ರರಂಗದ ಹಿನ್ನಲೆ ಇಲ್ಲದೆ ಸೂಪರ್ ಸ್ಟಾರ್ ಆದಂತಹ ಸುನಿಲ್ ಶೆಟ್ಟಿ ಕೊಸ್ಟಲ್ ವುಡ್ ಪ್ರವೇಶಿಸಿದ್ದಾರೆ.ಕೆಲವು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್ ‘ ಚಿತ್ರದಲ್ಲಿ ನಟಿಸಿದ್ದ ಸುನಿಲ್ ಶೆಟ್ಟಿ ಸಮಾರಂಭವೊಂದರಲ್ಲಿ, ಉತ್ತಮ ಪಾತ್ರ ಮತ್ತು ಸ್ಕ್ರಿಪ್ಟ್ ಸಿಕ್ಕಿದರೆ ತುಳು ಚಿತ್ರದಲ್ಲಿ ಅಭಿನಯಿಸುವ ಇರಾದೆ ವ್ಯಕ್ತಪಡಿಸಿದ್ದರು.

1000395126

ಬಿಗ್ ಬಾಸ್ 9 ರ ವಿಜೇತ ರೂಪೇಶ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ‘ಜೈ ‘ಚಿತ್ರದಲ್ಲಿ ಅಭಿನಯಿಸಲು ಸೂಪರ್ ಸ್ಟಾರ್ ಒಬ್ರು ಬರ್ತಾರೆ ಅಂತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದಷ್ಟು ವಿಡಿಯೋಗಳನ್ನು ಮಾಡಿ ಕುತೂಹಲ ಕೆರಳಿಸಿದ್ದರು.           ಬಿಡುಗಡೆಗೆ ಸಿದ್ದವಾಗಿರುವ ಕನ್ನಡದ ‘ಅಧಿಪತ್ರ ‘ ಸಿನಿಮಾ ಕೆಲಸ ಮುಗಿಸಿರುವ ರೂಪೇಶ್ ಶೆಟ್ಟಿ   ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ.  ಸಿನಿಮಾ ಅದ್ದೂರಿಯಾಗಿ ಮೂಡಿ ಬರಲಿದ್ದು  ತುಳು ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ಹೆಲಿ ಕಾಫ್ಟರ್ ಬಳಸಲಾಗಿದೆ. ಕಳೆದ ವರ್ಷ ‘ಸರ್ಕಸ್ ‘ಎಂಬ ಯಶಸ್ವಿ ಚಿತ್ರದಲ್ಲಿ ನಟಿಸಿರುವ ರೂಪೇಶ್, ಸುನಿಲ್ ಶೆಟ್ಟಿ ಯವರನ್ನು ತೆರೆಯ ಮೇಲೆ ಯಾವ ರೀತಿ ವಿಜೃಂಭಿಸಲಿದ್ದಾರೆ  ಕಾದು ನೋಡ ಬೇಕು.

ಶಿಲ್ಪಾ ಗಣೇಶ್ ಸಿನಿಮಾಕ್ಕೆ ಪತಿ ಗೋಲ್ಡನ್ ಸಾರ್ ಸಾಥ್.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಮೂಲತಃ ಉಡುಪಿ ಮೂಲದವರಾಗಿದ್ದು,ಈಗಾಗಲೇ ಕನ್ನಡದಲ್ಲಿ  ‘ಮಳೆಯಲಿ ಜೊತೆಯಲಿ ‘ ‘ಕೂಲ್’ ‘ಮುಗುಳು ನಗೆ ‘ ಚಿತ್ರಗಳನ್ನು  ನಿರ್ಮಿಸಿದ್ದಾರೆ  ಶಿಲ್ಪಾ ಅವರಿಗೆ ಮಾತೃ ಭಾಷೆ ತುಳುವಿನಲ್ಲಿ ಸಿನಿಮಾ ನಿರ್ಮಿಸುವ ಆಸೆ ಮೊದಲಿನಿಂದಲೂ ಇತ್ತಂತೆ. ಇತ್ತೀಚಿಗೆ     ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇನ್ನೂ ಹೆಸರಿಡಿದ ತುಳು ಚಿತ್ರದ ಮುಹೂರ್ತ ಕಾರ್ಯಕ್ರಮ‌ ನಡೆದಿದ್ದು, ಪತ್ನಿ ಶಿಲ್ಪಾ ರ ಹೊಸ ಸಿನಿಮಾಗೆ ಸಾಥ್ ನೀಡಲು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಬಂದಿದ್ದರು. ಪತ್ನಿಯಿಂದ ಒಂದಷ್ಟು ತುಳು ಮಾತಾಡಲು ಕಲಿತಿರುವ ಗಣೇಶ್ ಮಾಧ್ಯಮದವರೊಂದಿಗೆ ಆರಂಭದಲ್ಲಿ ತುಳುವಲ್ಲಿ ಮಾತಾಡಿ ಚಿತ್ರ ತಂಡಕ್ಕೆ ಶುಭ  ಹಾರೈಸಿದ್ದಾರೆ.

1000395122

ಈ ಮುಂಚೆ ತುಳು ಚಿತ್ರಗಳು     ಉಡುಪಿ, ದಕ್ಷಿಣ ಕನ್ನಡ ಮತ್ತು ಗಲ್ಫ್ ದೇಶಗಳಿಗಷ್ಟೇ ಸೀಮಿತವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾಗರದಾಚೆ ಕೂಡ ತನ್ನ ಮಾರುಕಟ್ಟೆ ವಿಸ್ತರಿಸಿರುವ ತುಳು ಸಿನಿಮಾಕ್ಕೆ ಇನ್ನಷ್ಟು ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ಕಲಾವಿದರು, ನಿರ್ಮಾಪಕರು ತಂತ್ರಜ್ಞರು ಕಾಲಿಡುವ ಸಾಧ್ಯತೆ ಇದೆ.

-ಶರತ್ ಚಂದ್ರ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ