ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ. ಮುಂದಿನ ಭಾನುವಾರ ಯಾರು ಬಿಗ್ ಬಾಸ್ ಅನ್ನೋದು ಹೊರಬೀಳಲಿದೆ. ನಟ ಕಿಚ್ಚ ಸುದೀಪ್ ಅವರ ಕೊನೆಯ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮ ಇದಾಗಿದ್ದು, ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿಯ ಬಿಗ್ಬಾಸ್ ಸೀಸನ್ 11ರ ವಿನ್ನರ್ ಯಾರಾಗಲಿದ್ದಾರೆ ಎಂದು ಚರ್ಚೆ ಜೋರಾಗಿದೆ.
ಕೊನೇ ಎರಡು ವಾರಗಳಲ್ಲಿ ರಜತ್, ಉಗ್ರಂ ಮಂಜು, ಧನರಾಜ್, ಭವ್ಯಾ ಗೌಡ ಮತ್ತು ಗೌತಮಿ ಅಖಾಡದಲ್ಲಿದ್ದರು. ಆದರೆ, ಕೊನೇ ವಾರದ ಎಲಿಮಿನೇಷನ್ನಲ್ಲಿ ಈ ಐವರ ಪೈಕಿ ಗೌತಮಿ ಹಾಗೂ ಧನರಾಜ್ ಹೊರಬಿದ್ದಿದ್ದಾರೆ. ಆದರೀಗ ಕುತೂಹಲವೆಂದರೆ 112 ದಿನ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಗೌತಮಿಗೆ ಸಿಕ್ಕ ಹಣವೆಷ್ಟು ಅನ್ನೋದೇ ಎಲ್ಲಾ ಕಡೆ ಚರ್ಚೆಯಾಗುತ್ತಿದೆ.
ಸತ್ಯ ಸೀರಿಯಲ್ನಿಂದಲೇ ಕನ್ನಡ ಕಿರುತೆರೆಯಲ್ಲಿ ಸಖತ್ ಫೇಮಸ್ ಆಗಿದ್ದ ಗೌತಮಿ ಜಾದವ್ ಬಿಗ್ಬಾಸ್ ಕನ್ನಡ ಸೀಸನ್ 11ಗೆ ತುಂಬಾ ಅಂಜಿಕೆಯಿಂದಲೇ ಎಂಟ್ರಿ ಕೊಟ್ಟಿದ್ದರು. ಆದರೂ, ಕೊನೆಯ ವಾರದವರೆಗೆ ಇದ್ದು ಎಲ್ಲರನ್ನೂ ರಂಜಿಸಿದರು.
ತಮಗೆ ಕೊಟ್ಟ ಟಾಸ್ಕ್ಗಳನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದರು. ಆದರೆ, ಫಿನಾಲೆಗೆ ಒಂದು ವಾರ ಬಾಕಿ ಇರುವಾಗಲೇ ಹೊರಬಿದ್ದಿದ್ದು ಗೌತಮಿಗೆ ಬೇಸರ ತರಿಸಿದೆ. ಆದರೂ ಗೌತಮಿ ಕುಟುಂಬದವರು ಮಾತ್ರ, ಇಷ್ಟು ದಿನ ಪ್ರಾಮಾಣಿಕತೆಯಿಂದ ಇದ್ದು, ಆಡಿಕೊಂಡು ಬಂದಿದ್ದಾಳೆ ಅಂತಾ ಹೊಗಳುತ್ತಿದ್ದಾರೆ.
112 ದಿನ ಮನೆಯಲ್ಲಿದ್ದ ಗೌತಮಿಯನ್ನು ಬಿಗ್ಬಾಸ್ ಸುಮ್ಮನೇ ಬರಿಗೈಲಿ ವಾಪಸ್ ಕಳಿಸಿಲ್ಲ. ಗೌತಮಿಗೆ ಒಂದಷ್ಟು ಹಣ ಮತ್ತು ಬಹುಮಾನವನ್ನೂ ಕೊಟ್ಟು ಕಳುಹಿಸಿದೆ. ಬಿಗ್ಬಾಸ್ ಮನೆಯಲ್ಲಿ ಇಷ್ಟು ದಿನ ಇದ್ದ ಗೌತಮಿಗೆ ಬರೋಬ್ಬರಿ 1 ಲಕ್ಷದ 50 ಸಾವಿರ ರೂಪಾಯಿಯನ್ನು ಎರಡು ಕಂಪನಿಗಳ ಕಡೆಯಿಂದ ನಗದು ಬಹುಮಾನ ನೀಡಿದೆ. ಅಷ್ಟೇ ಅಲ್ಲ, ಮೊಬೈಲ್ ಶೋರೂಂನ 50 ಸಾವಿರ ಗಿಫ್ಟ್ ವೋಚರ್ ಕೂಡ ನೀಡಲಾಗಿದೆ.
ಗೌತಮಿ ಪ್ರಕಾರ ಯಾರು ಗೆಲ್ತಾರೆ..? :
ಈ ಬಾರಿಯ ಬಿಗ್ಬಾಸ್ ವಿನ್ನರ್ ಯಾರಾಗಬಹುದು ಅಥವಾ ಯಾರು ಆಗಬೇಕು ಅಂತ ಗೌತಮಿ ಹೇಳಿದ್ದಾರೆ. ‘ನನಗೆ ಹನುಮಂತ ಗೆಲ್ಲಬೇಕು ಅನ್ನೋದು ಇದೆ. ಒಳ್ಳೆಯ ವ್ಯಕ್ತಿತ್ವ ಗೆದ್ದರೇ ಫುಲ್ ಖುಷ್ ಆಗುತ್ತೆ. ಫಿನಾಲೆ ಟು ಟಿಕೆಟ್ ಟಾಸ್ಕ್ಗೆ ನನ್ನ ಏಕೆ ಆಯ್ಕೆ ಮಾಡಿದ್ರು ಅಂತ ಗೊತ್ತಾಗಲಿಲ್ಲ. ಆದ್ರೆ ಆಗ ನಾನು ಮನಸ್ಸಿನಿಂದ ದೇವರಿಗೆ ಬೇಡಿಕೊಂಡೆ. ಒಳ್ಳೆಯ ವ್ಯಕ್ತಿತ್ವ ಇರೋ ಹನುಮಂತ ಗೆಲ್ಲಬೇಕು’ ಅಂತಾ ಅಭಿಪ್ರಾಯ ತಿಳಿಸಿದ್ದಾರೆ.
—