ಮಳೆಗಾಲದಲ್ಲಿ ಮಳೆಯ ತುಂತುರು ಹನಿಗಳು ಮನಸ್ಸಿಗೆ ಖುಷಿ ಕೊಡುತ್ತವೆ. ಈ ಹವಾಮಾನ ಎಷ್ಟು ಆಹ್ಲಾದಕರವಾಗಿರುತ್ತದೊ, ಅದು ಅಷ್ಟೇ ರೋಗ ಹರಡುವಂಥದ್ದಾಗಿರುತ್ತದೆ. ಏಕೆಂದರೆ ಈ ಹವಾಮಾನದಲ್ಲಿ ತಂಪು ಇರುವ ಕಾರಣದಿಂದ ಬ್ಯಾಕ್ಟೀರಿಯಾ ಹಾಗೂ ವೈರಸ್‌ ಗಳು ಬಹುಬೇಗ ಹುಟ್ಟಿಕೊಳ್ಳುತ್ತವೆ. ಅವು ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸಿ ನಮ್ಮನ್ನು ಸೋಂಕಿಗೀಡು ಮಾಡುತ್ತವೆ.

ಹೀಗಾಗಿ ಈ ಹವಾಮಾನದಲ್ಲಿ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚು ಗಮನಕೊಡುವ ಅಗತ್ಯವಿರುತ್ತದೆ. ಇದರಿಂದ ನಾವು ನಮ್ಮ ಹೆಲ್ದೀ ಈಟಿಂಗ್‌ ಹ್ಯಾಬಿಟ್‌ ನಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆ ಜೊತೆಗೆ ರೋಗಗಳಿಂದಲೂ ದೂರ ಇರಲು ಸಾಧ್ಯವಾಗಬೇಕು. ಈ ಕುರಿತಂತೆ ನ್ಯೂಟ್ರಿಶಿನಿಸ್ಟ್ ಡಯೇಟಿಶಿಯನ್‌ ಶೀಲಾ ಹೀಗೆ ಹೇಳುತ್ತಾರೆ :

ಕಪ್ಆಫ್ಸೂಪ್

ಮಕ್ಕಳಿರಲಿ, ದೊಡ್ಡವರಿರಲಿ, ಒಬ್ಬರಿಗೆ ಒಂದು ತರಕಾರಿ ಇಷ್ಟವಾದರೆ, ಇನ್ನೊಬ್ಬರಿಗೆ ಅದು ಇಷ್ಟವಾಗುವುದಿಲ್ಲ. ಹೀಗಾಗಿ ಹಸಿವಾದಾಗ ಫಾಸ್ಟ್ ಫುಡ್‌ ತಯಾರಿಸಲಾಗುತ್ತದೆ. ಇಲ್ಲಿ ಹೊರಗಿನ ಆಹಾರ ತರಿಸಲಾಗುತ್ತದೆ. ಫಾಸ್ಟ್ ಫುಡ್‌ ನಲ್ಲಿ ಕ್ಯಾಲೋರಿಸ್, ಸೋಡಿಯಂ ಹಾಗೂ ಅನ್‌ ಹೆಲ್ದೀ ಫ್ಯಾಟ್ಸ್ ಇರುತ್ತದೆ. ಅದರಲ್ಲಿ ನ್ಯೂಟ್ರಿಷನ್‌ ಮತ್ತು ಫೈಬರ್‌ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ನಾವು ಒಂದು ಸಲಕ್ಕೆ ಫಾಸ್ಟ್ ಫುಡ್‌ ನಿಂದ ಎಷ್ಟು ಕ್ಯಾಲೋರಿಸ್‌ ತೆಗೆದುಕೊಳ್ಳುತ್ತೇವೆ, ಅದು ನಮಗೆ ಇಡೀ ದಿನದ ಅವಶ್ಯಕತೆಯಾಗಿ ಇರುತ್ತದೆ.

ನಿಮಗೆ ಯಾವಾಗಾದರೂ ಫಾಸ್ಟ್ ಫುಡ್‌ ತಿನ್ನುವ ಬಯಕೆಯಾದರೆ, ಆಗ ನೀವು ವೆಜಿಟೆಬಲ್ ಸೂಪ್‌ ಹಾಗೂ ಚಿಕನ್‌ ಸೂಪ್‌ ನಿಂದ ನಿಮ್ಮ ಹೊಟ್ಟೆಯನ್ನು ದೀರ್ಘ ಹೊತ್ತಿನ ತನಕ ತುಂಬಿಸಿಡಬಹುದಾಗಿದೆ. ಅದು ನಿಮ್ಮನ್ನು ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ.

ತಿಳಿದಿರಬೇಕಾದ ವಿಚಾರ :

ಒಂದು ಕಪ್ಚಿಕನ್ಸೂಪ್ನಲ್ಲಿರುವ ಪೋಷಕಾಂಶಗಳು : 50 ಗ್ರಾಂ ಚಿಕನ್‌ ನಲ್ಲಿ 64-70 ಕ್ಯಾಲೋರಿಸ್‌, 7-8 ಪ್ರೋಟೀನ್‌ ಹಾಗೂ 1 ಗ್ರಾಂ ವಿಟಮಿನ್‌.

ಒಂದು ಕಪ್ಕಾರ್ನ್ಸೂಪ್ನಲ್ಲಿರುವ ಪೋಷಕಾಂಶಗಳು : ಅರ್ಧ ಕಪ್‌ ಕಾರ್ನ್‌ ನಲ್ಲಿ 70-8 ಕ್ಯಾಲೋರಿಗಳು.

1 ಕಪ್ಟೊಮೇಟೊ ಸೂಪ್ನಲ್ಲಿರುವ ಪೋಷಕಾಂಶಗಳು : 70-80 ಕ್ಯಾಲೋರಿಸ್‌.

ಸಂಗತಿ ಗೊತ್ತಿರಲಿ : ಹೊರಗಿನ ವೆಜಿಟೆಬಲ್ ಸೂಪ್‌ ನಲ್ಲಿರುವ ಕ್ಯಾಲೋರಿ ಪ್ರಮಾಣ 150-170.

ಗಮನದಲ್ಲಿಡಿ : ಸೂಪ್‌ ಯಾವಾಗಲೂ ಮನೆಯಲ್ಲಿಯೇ ತಯಾರಿಸಿದಂಥದ್ದಾಗಿರಬೇಕು. ಏಕೆಂದರೆ ಮಾರುಕಟ್ಟೆಯಲ್ಲಿರು ಸೂಪ್ ನ್ನು ರುಚಿ ಹೆಚ್ಚಿಸಲು ಹಾಗೂ ಅದನ್ನು ಇನ್ನಷ್ಟು ದಟ್ಟಗೊಳಿಸಲು ಅದರಲ್ಲಿ ತರಕಾರಿಗಳ ಪ್ರಮಾಣ ಕಡಿಮೆ ಹಾಗೂ ಬಟರ್‌ ಹಾಗೂ ಕಾರ್ನ್‌ ಫ್ಲೋರ್‌ ಸಾಕಷ್ಟು ಪ್ರಮಾಣದಲ್ಲಿ ಬೆರೆಸಲಾಗುತ್ತದೆ. ಅದು ರಕ್ತದ ಶರ್ಕರದ ಪ್ರಮಾಣವನ್ನು ಹೆಚ್ಚಿಸುವುದರ ಜೊತೆ ಜೊತೆಗೆ, ಹೃದಯದ ಆರೋಗ್ಯವನ್ನು ಹದೆಗೆಡಿಸುವ ಕೆಲಸ ಮಾಡುತ್ತದೆ.

ಫೈಬರ್ಗೆ ಕಾಳುಗಳ ಸಾಂಗತ್ಯ

ಡಯೆಟ್‌ ನಲ್ಲಿ ಕಾಳುಗಳು ಸೇರ್ಪಡೆಯಾದರೆ, ನೀವು ರೋಗಗಳಿಂದ ದೂರ ಇರಬಹುದು ಎಂದು ಹೇಳಲಾಗುತ್ತದೆ. ಬ್ರೌನ್‌ ರೈಸ್, ನವಣೆ, ಜೋಳ, ರಾಗಿ, ಅವಲಕ್ಕಿ ಮುಂತಾದವುಗಳಲ್ಲಿ ನಾರಿನಂಶ ಹೇರಳ ಪ್ರಮಾಣದಲ್ಲಿರುತ್ತದೆ. ಅವು ದೀರ್ಘಕಾಲದ ತನಕ ಹೊಟ್ಟೆ ತುಂಬಿಸಿಡುವ ಕೆಲಸ ಮಾಡುತ್ತದೆ. ಅದರ ಜೊತೆ ಜೊತೆಗೆ ಪಚನ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಇದರಲ್ಲಿ ಪ್ರೊಬಯೋಟಿಕ್‌ ಕೂಡ ಇದ್ದು, ಅವು ಕರುಳಿನಲ್ಲಿ ಗುಡ್‌ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ.

ತಿಳಿದಿರಬೇಕಾದ ವಿಚಾರ :

ಒನ್‌ ಬೌಲ್ ವೆಜಿಟೆಬಲ್ ಕೆನೊಲಾ 250 ಕ್ಯಾಲೋರಿಸ್‌.

ಒನ್‌ ಬೌಲ್ ಬ್ರೌನ್‌ ರೈಸ್‌ 200 ಕ್ಯಾಲೋರಿಸ್‌

ರಾಗಿ ರೊಟ್ಟಿಯಲ್ಲಿರುವ ಪೋಷಕಾಂಶ 100 ಕ್ಯಾಲೋರಿ ಪ್ರತಿ ರೊಟ್ಟಿಯಲ್ಲಿ.

ಒನ್‌ ಬೌಲ್ ‌ಮಸಾಲಾ ಮತ್ತು ವೆಜಿಟೆಬ್‌ ಓಟ್ಸ್ 150 ಕ್ಯಾಲೋರಿಸ್‌

ಒನ್‌ ಬೌಲ್ ಶುಗರ್‌ ಓಟ್ಸ್ 350 ಕ್ಯಾಲೋರಿಸ್‌

ಇದರಲ್ಲಿ ಹಣ್ಣು, ಜೇನುತುಪ್ಪ ಹಾಗೂ ಹಾಲನ್ನು ಸೇರಿಸಲಾಗಿದೆ.

ಒನ್‌ ಬೌಲ್ ಬಿಳಿ ಅವಲಕ್ಕಿಯಲ್ಲಿರುವ ಪೋಷಕಾಂಶಗಳು  120 ಕ್ಯಾಲೋರಿಸ್‌.

ಗಮನಿಸಿ : 2-3 ಬೌಲ್ ‌ರೊಟ್ಟಿಯಲ್ಲಿರುವ ಪೋಷಕಾಂಶಗಳು  130 ಕ್ಯಾಲೋರಿ ಪ್ರತಿ ರೊಟ್ಟಿಯಲ್ಲಿ.

ತರಕಾರಿ ಹಾಗೂ ಬೇಳೆಗಳು

ಕುಂಬಳ, ಪಡವಲ, ಹಾಗಲ, ಹೀರೆಕಾಯಿ, ತೊಂಡೆಕಾಯಿ, ಬೀನ್ಸ್ ನಿಮ್ಮ ಆಹಾರದಲ್ಲಿ ಅವಶ್ಯವಾಗಿ ಸೇರಿಸಿಕೊಳ್ಳಿ. ಏಕೆಂದರೆ ಈ ತರಕಾರಿಗಳು ನಾರಿನಂಶ, ವಿಟಮಿನ್ಸ್, ಮಿನರಲ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್‌ ಗಳಿಂದ ಸಮೃದ್ಧವಾಗಿರುತ್ತವೆ. ಇವನ್ನು ನೀವು ಬೇರೆ ಬೇರೆ ರೀತಿಯಲ್ಲೂ ತಯಾರಿಸಿಕೊಳ್ಳಬಹುದು. ಒಮ್ಮೆ ಪಡವಲಕಾಯಿ ಪಲ್ಯ, ಪಡವಲಕಾಯಿ ಕೋಫ್ತಾ ಅಥವಾ ತೊಂಡೆಕಾಯಿಯ ಪಲ್ಯ ತಯಾರಿಸಿಕೊಳ್ಳಬಹುದು. ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಅವುಗಳ ಕಟ್ಲೆಟ್‌ ಅಥವಾ ಅವುಗಳನ್ನು ಸೇರಿಸಿ ಉಪ್ಪಿಟ್ಟು ಕೂಡ ಮಾಡಬಹುದು.

ಅದೇ ರೀತಿ ಪ್ರೋಟೀನ್‌, ವಿಟಮಿನ್ಸ್ ಹಾಗೂ ಮಿನರಲ್ಸ್ ಗೆ ಸಂಬಂಧಪಟ್ಟ ದೇಹದ ಅಗತ್ಯಗಳನ್ನು ಪೂರೈಸಿಕೊಳ್ಳಲು ಒಂದು ಬೌಲ್ ಬೇಳೆ, ಮೊಳಕೆ ಕಾಳುಗಳನ್ನು ಸಹ ಬಳಸಿ. ಕೇವಲ ಬೇಳೆಯೊಂದಕ್ಕೆ ಅಂಟಿಕೊಳ್ಳದೆ ಪ್ರತಿದಿನ ಬದಲಿಸಿ ಸಾಂಬಾರು ಸಿದ್ಧಪಡಿಸಿ.

ಇದರಿಂದ ದೇಹಕ್ಕೆ ಪ್ರೋಟೀನ್‌ ಕೂಡ ದೊರಕುತ್ತದೆ ಹಾಗೂ ದಿನ ಸಾಂಬಾರು ಸೇವಿಸಿ ನೀವು ಬೇಸರ ಕೂಡ ಹೊಂದುವುದಿಲ್ಲ. ಯಾರಿಗೆ ಮಧುಮೇಹ, ಪಿಸಿಓಎಸ್‌ ಸಮಸ್ಯೆ ಇರುತ್ತದೋ ಅವರು ಬೇಳೆಗಳಿಂದ ನಾರಿನಂಶದ ಕೊರತೆ ನೀಗಿಸಿಕೊಂಡು ಇನ್ಸುಲಿನ್‌ ನ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು.

ಇತ್ತೀಚಿನ ದಿನಗಳಲ್ಲಿ ಕೂದಲು ಹಾಗೂ ತ್ವಚೆಯ ಚಿಂತೆ ಕೂಡ ಕಾಡುತ್ತಿರುತ್ತದೆ. ಇಂತಹದರಲ್ಲಿ ಬೇಳೆ ಅವರಿಗೆ ಅನೇಕ ಲಾಭಗಳನ್ನು ತಂದುಕೊಡುತ್ತದೆ. ಏಕೆಂದರೆ ಈ ಬೇಳೆಯಲ್ಲಿ ಫಾಲಿಫಿನೋಲ್ಸ್ ಎಂಬ ಆ್ಯಂಟಿ ಆಕ್ಸಿಡೆಂಟ್‌ ನಿಮ್ಮನ್ನು ಆರೋಗ್ಯದಿಂದಿಡುತ್ತದೆ.

ಬೇಳೆಯ ಸೇವನೆಯಿಂದ ಮೂತ್ರದ ವೇಗ ಹೆಚ್ಚುತ್ತದೆ ಮತ್ತು ದೇಹದಿಂದ ಟಾಕ್ಸಿನ್ಸ್ ಹೊರಹಾಕುವುದರ ಜೊತೆ ಜೊತೆಗೆ ಕಿಡ್ನಿ ಸ್ಟೋನ್‌ ಗಳಿಂದ ಮುಕ್ತಿ ದೊರಕುತ್ತದೆ. ಇದರಲ್ಲಿ ಕಬ್ಬಿಣಾಂಶ, ಪ್ರೋಟೀನ್‌, ಕ್ಯಾಲ್ಶಿಯಂ ಕೂಡ ಇರುವುದರಿಂದ ಇದು ಕೂದಲಿನ ಆರೋಗ್ಯ  ಕಾಪಾಡುವುದಲ್ಲದೆ, ನಿಮ್ಮ ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ.

ಹಸಿರು ಸೊಪ್ಪುಗಳನ್ನು ಸೇವಿಸಬೇಡಿ

ಹಸಿರು ಸೊಪ್ಪುಗಳನ್ನು ಹೆಚ್ಚೆಚ್ಚು ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಮಳೆಗಾಲದಲ್ಲಿ ಇವುಗಳನ್ನು ಸೇವಿಸಬೇಡಿ. ಏಕೆಂದರೆ ಈ ಹವಾಮಾನದಲ್ಲಿ ತೇವಾಂಶ ಅಧಿಕವಾಗಿರುತ್ತದೆ ಹಾಗೂ ಸೊಪ್ಪುಗಳು ನೈಸರ್ಗಿಕ ತೇವಾಂಶ ರೋಗಾಣುಗಳನ್ನು ಹೆಚ್ಚಿಸಲು ಅನುಕೂಲ ವಾತಾವರಣ ಕಲ್ಪಿಸುತ್ತದೆ. ಪಾಲಕ್‌, ಎಲೆಕೋಸು ಮುಂತಾದ ಸೊಪ್ಪುಗಳ ಸೇವನೆಯಿಂದ ರೋಗಾಣುಗಳು ನಮ್ಮ ದೇಹದಲ್ಲಿ ಪ್ರವೇಶಿಸುತ್ತವೆ. ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ ನಮ್ಮನ್ನು ರೋಗಪೀಡಿತರಾಗಿಸುತ್ತದೆ.

ಅದೇ ರೀತಿ ಅಣಬೆಯನ್ನು ತೇವವಿರುವ ಜಾಗದಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ ಇದರಿಂದ ಬ್ಯಾಕ್ಟೀರಿಯಲ್ ಇನ್‌ ಫೆಕ್ಷನ್‌ ಆಗುವ ಅಪಾಯ ಹೆಚ್ಚಿಗೆ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಈ ಪದಾರ್ಥಗಳಿಂದ ದೂರವಿರಿ. ಏಕೆಂದರೆ ಇವುಗಳ ನಿಕಟತೆ ನಿಮ್ಮನ್ನು ಅನಾರೋಗ್ಯಪೀಡಿತರಾಗಿಸಬಹುದು.

ತಂಪು ಪದಾರ್ಥಗಳಿಂದ ದೂರುವಿರಿ

ಆಹಾರ ಪದಾರ್ಥಗಳನ್ನು ಸೂಕ್ತ ಪ್ರಮಾಣದಲ್ಲಿ ಸರಿಯಾಗಿ ಸೇವಿಸಿದರೆ, ದೇಹಕ್ಕೆ ಬಹಳಷ್ಟು ಅನುಕೂಲಗಳು ಆಗುತ್ತವೆ. ಇಲ್ಲದಿದ್ದರೆ ಅವು ದೇಹಕ್ಕೆ ಹಾನಿಯುಂಟು ಮಾಡುತ್ತವೆ. ಉದಾಹರಣೆಗೆ ಮೊಸರು, ಮಜ್ಜಿಗೆ, ಜೂಸ್‌ ಕೇವಲ ದೇಹದ ಪೋಷಕಾಂಶಕ್ಕೆ ಸಂಬಂಧಿಸಿದ ಅವಶ್ಯಕತೆಗಳನ್ನಷ್ಟೇ ಈಡೇರಿಸುವುದಿಲ್ಲ. ಅವುಗಳಿಂದ ದೇಹ ಹೈಡ್ರೇಟ್‌ ಆಗಿರುತ್ತದೆ.

ಆದರೆ ಮಳೆಗಾಲದ ಸಮಯದಲ್ಲಿ ಇವುಗಳ ಸೇವನೆ ಮಾಡಿದರೆ, ಬಹುಬೇಗ ಶೀತ, ನೆಗಡಿಯ ಬಾಧೆ ಉಂಟಾಗಬಹುದು. ಏಕೆಂದರೆ ಬೇಸಿಗೆಯ ಬಳಿಕ ತಾಪಮಾನದಲ್ಲಿ ಒಮ್ಮೆಲೆ ಇಳಿಕೆ ಉಂಟಾಗುತ್ತದೆ. ಅದರಿಂದ ಫ್ಲೂ ಉಂಟಾಗುವ ಸಾಧ್ಯತೆ ಇರುತ್ತದೆ.

ನಮ್ಮ ಪಚನ ವ್ಯವಸ್ಥೆ ಕೂಡ ಮಳೆಗಾಲದಲ್ಲಿ ಮಂದವಾಗುತ್ತದೆ. ಅದರಿಂದ ಹವಾಮಾನಕ್ಕೆ ಸಂಬಂಧಪಟ್ಟ ರೋಗಗಳು ನಮ್ಮನ್ನು ಕಪಿಮುಷ್ಟಿಗೆ ಸಿಲುಕಿಸುತ್ತವೆ. ಕತ್ತರಿಸಿ ಇಟ್ಟ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಏಕೆಂದರೆ ಗಾಳಿಯಲ್ಲಿ ಸೋಂಕು ಇರುವ ಕಾರಣದಿಂದ ಅನಾರೋಗ್ಯಪೀಡಿತರಾಗುವ ಸಾಧ್ಯತೆ ಹೆಚ್ಚುತ್ತದೆ.

ಹರ್ಬಲ್ ಟೀ ಉತ್ತಮ ಪರ್ಯಾಯ

ಬೇಸಿಗೆಯ ಬಳಿಕ ವಾತಾವರಣದಲ್ಲಿ ತಂಪು ಪಸರಿಸುತ್ತಿದ್ದಂತೆ ಚಹಾ ಕುಡಿಯುವ ಮಜವೇ ಬೇರೆ ಆಗಿರುತ್ತದೆ. ಏಕೆಂದರೆ ಇದು ದೇಹಕ್ಕೆ ತಂಪು ನೀಡುವ ಕೆಲಸ ಮಾಡುತ್ತದೆ. ಹರ್ಬಲ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಪ್ರಾಪರ್ಟೀಸ್‌ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹಲವು ಬಗೆಯ ಬ್ಯಾಕ್ಟೀರಿಯಾ ಸೋಂಕುಗಳಿಂದ ರಕ್ಷಿಸಿ, ಶೀತ ಹಾಗೂ ಫ್ಲೂನಿಂದ ರಕ್ಷಿಸಲು ನೆರವಾಗುತ್ತದೆ.

ಇದರ ಜೊತೆಗೆ ದೇಹದಿಂದ ಟಾಕ್ಸಿನ್‌ ಗಳನ್ನು ಹೊರಹಾಕಲು ಕೂಡ ಸಹಾಯ ಮಾಡುತ್ತದೆ. ನಿಮಗೆ ಗ್ರೀನ್‌ ಟೀ ಕುಡಿಯಲು ಇಷ್ಟವಾಗುತ್ತದೆ ಎಂದಾದರೆ ನೀವು ಅದರ ರುಚಿ ಹೆಚ್ಚಿಸಲು ಸಕ್ಕರೆಯ ಬದಲಿಗೆ ಬೆಲ್ಲ ಅಥವಾ ಜೇನುತುಪ್ಪ ಬೆರೆಸಬಹುದು. ಏಕೆಂದರೆ ಸಕ್ಕರೆ ಬೆರೆಸುವುದರಿಂದ ಅದರ ಕ್ಯಾಲೋರಿಸ್‌ ಹೆಚ್ಚಾಗುತ್ತದೆ. ಅದರಿಂದ ರಕ್ಷಿಸಿಕೊಳ್ಳುವುದು ಅತ್ಯವಶ್ಯ.ಲೆಮನ್‌ ಟೀ ಕೂಡ ಲೋ ಶುಗರ್‌ ಹಾಗೂ ಲೋ ಕ್ಯಾಲೋರಿ ಆಗಿರುವುದರ ಜೊತೆ ಜೊತೆಗೆ ವಿಟಮಿನ್ಸ್ ಹಾಗೂ ಮಿನರಲ್ಸ್ ನಿಂದ ಸಮೃದ್ಧಿಯಾಗಿರುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆ ಜೊತೆಗೆ ನಿಮ್ಮನ್ನು ಋತುಮಾನದ ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ.

ವಿಚಾರ ತಿಳಿದಿರಲಿ :

ಒಂದು ಕಪ್‌ ಗ್ರೀನ್‌ಟೀಯಲ್ಲಿರುವ ಪೋಷಕಾಂಶಗಳು ಪ್ರತಿ ಟೀ ಬ್ಯಾಗ್‌ ನಲ್ಲಿ 5 ಕ್ಯಾಲೋರಿ. ಒಂದು ವೇಳೆ ನೀವು ಅದರಲ್ಲಿ ಜೇನುತುಪ್ಪ ಹಾಗೂ ಬೆಲ್ಲ ಸೇರಿಸುತ್ತೀರಿ ಎಂದಾದರೆ, ಅದರಲ್ಲಿರುವ ಕ್ಯಾಲೋರಿ ಪ್ರಮಾಣ 70-80 ಆಗುತ್ತದೆ.

ಒಂದು ಕಪ್ಲೆಮನ್ಟೀಯಲ್ಲಿರುವ ಕ್ಯಾಲೋರಿ ಪ್ರಮಾಣ : 3-4 ಕ್ಯಾಲೋರಿ.

ಡೇರಿ ಪ್ರಾಡಕ್ಟ್ ಗಳ ಸ್ನೇಹ ಅವಶ್ಯ

ಅಂದಹಾಗೆ ಮಳೆಗಾಲದಲ್ಲಿ ಡೇರಿ ಉತ್ಪನ್ನಗಳ ಸೇವನೆಯನ್ನು ಕಡಿಮೆ ಪ್ರಮಾಣದಲ್ಲಿ ಮಾಡಲು ತಿಳಿಸಲಾಗುತ್ತದೆ. ಏಕೆಂದರೆ ಪಚನ ವ್ಯವಸ್ಥೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಈ ಉತ್ಪನ್ನಗಳನ್ನು ಹೆಚ್ಚು ಸೇವಿಸಿದರೆ ಭೇದಿ ಹಾಗೂ ಪಚನಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆದರೆ ನೀವು ತಂಪು ಹಾಲಿನ ಬದಲು ಅರಿಶಿಣ ಮಿಶ್ರಿತ ಹಾಲನ್ನು ಕುಡಿಯುವುದು ಒಳ್ಳೆಯದು.

ಚೀಸ್‌ ನ್ನು ಕೂಡ ನಿಮ್ಮ ಡಯೆಟ್‌ ನಲ್ಲಿ ಸೇರ್ಪಡೆಗೊಳಿಸಿದರೆ, ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾರಿಗೆ ಶೀತ ನೆಗಡಿ ಬೇಗ ಆಗುತ್ತದೋ ಅವರಿಗೂ ಕೂಡ ಇದು ಒಳ್ಳೆಯದು. ಏಕೆಂದರೆ ಇದರಲ್ಲಿ ಆ್ಯಂಟಿ ವೈರಸ್‌, ಆ್ಯಂಟಿ ಫಂಗಸ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟೀಸ್‌ ಇರುತ್ತವೆ.

ವಿಚಾರ ಗೊತ್ತಿರಲಿ : ಒಂದು ಕಪ್‌ ಅರಿಶಿಣ ಮಿಶ್ರಿತ ಹಾಲಿನಲ್ಲಿರುವ ಪೋಷಕಾಂಶ 100-120 ಕ್ಯಾಲೋರಿಗಳು.

ಪ್ರಾರ್ಥನಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ