ಮುಟ್ಟು, ಹುಡುಗಿಯರು ಹಾಗೂ ಮಹಿಳೆಯರಲ್ಲಿ ಉಂಟಾಗುವ ಒಂದು ಸಾಮಾನ್ಯ ಪ್ರಕ್ರಿಯೆ. ಈ ಅವಧಿಯಲ್ಲಿ ದೇಹದಲ್ಲಿ ಅನೇಕ ಹಾರ್ಮೋನುಗಳ ಬದಲಾವಣೆ ಉಂಟಾಗುತ್ತದೆ.

ಅದು ದೈಹಿಕ ಹಾಗೂ ಮಾನಸಿಕ ರೂಪದಲ್ಲಿ ಪ್ರಭಾವ ಬೀರುವ ಕಾರಣದಿಂದ ಅದೇ ಒತ್ತಡಕ್ಕೆ ಕಾರಣವಾಗಬಹುದು. ಬೇರೆ ಕೆಲವು ಕಾರಣಗಳು ಸಹ ಅದಕ್ಕೆ ಹೊಣೆಯಾಗಿರುತ್ತವೆ.

ಅದೆಷ್ಟೋ ಮಹಿಳೆಯರು ಮುಟ್ಟು ಶುರುವಾಗುವ ಮುಂಚೆ ಅಥವಾ ಋತುಸ್ರಾವದ ಸಮಯದಲ್ಲಿ ಎಂತಹ ಸ್ಥಿತಿಯಿಂದ ಸಾಗುತ್ತಾರೆಂದರೆ, ಆಗ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಕೂಡ ಉಂಟಾಗಬಹುದು. ಒತ್ತಡ, ಚಿಂತೆ ಹಾಗೂ ಸಿಡಿಮಿಡಿತನ ಇವು ಜೀವನ ಮತ್ತು ಸಂಬಂಧಗಳ ಮೇಲೂ ಪ್ರಭಾವ ಬೀರಬಹುದು.

ಪೀರಿಯಡ್ಸ್ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಉಂಟಾದರೆ, ಅದನ್ನು ಸಾಮಾನ್ಯ ಸ್ಥಿತಿ ಎಂದು ಹೇಳಲಾಗುತ್ತದೆ. ಪ್ರಿಮೆನ್‌ ಸ್ಟ್ರುವಲ್ ‌ಸಿಂಡ್ರೋಮ್ ಗೆ ಈಸ್ಟ್ರೋಜನ್‌ ಪ್ರೊಜೆಸ್ಟರಾನ್‌ ಹಾರ್ಮೋನುಗಳ ಪ್ರಮಾಣದಲ್ಲಿ ಏರುಪೇರು ಉಂಟಾಗುವುದೇ ಮುಖ್ಯ ಕಾರಣ.

ಸಾಮಾನ್ಯವಾಗಿ ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಒತ್ತಡಗ್ರಸ್ತರಾಗುವ ಸಾಧ್ಯತೆ ಹೆಚ್ಚು. ಅದು ಮುಟ್ಟಿನ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಬಹುದು. ಏಕೆಂದರೆ ಇದೂ ಹಾರ್ಮೋನ್‌ ರೋಲರ್‌ ಕೋಸ್ಟರ್‌ ಆಗಿದ್ದು, ಅದು ಮೆದುಳಿನಲ್ಲಿರುವ ನ್ಯೂರೊಟ್ರಾನ್ಸ್  ಮೀಟರ್ಸ್ ಅದರಲ್ಲೂ ಸೆರೊಟೋನಿನ್‌ ಮತ್ತು ಡೋಪಾಮೈನ್‌ ಗಳ ಮೇಲೆ ಪ್ರಭಾವ ಬೀರುತ್ತದೆ. ಅದರಿಂದಾಗಿ ಮನಸ್ಥಿತಿ ಹದಗೆಡುತ್ತದೆ. ಇದರ ಹೊರತಾಗಿ ಯಾವ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ಮೊದಲ ಸಲ ಪೀರಿಯಡ್ಸ್ ಗೂ ಮುಂಚೆ ಹೊಟ್ಟೆಯಲ್ಲಿ ವಿಪರೀತ ನೋವು ಅಥವಾ ರಕ್ತಸ್ರಾವ ಉಂಟಾಗಿರುತ್ತದೋ, ಅವರಿಗೆ ಪ್ರತಿಸಲದ ಮುಟ್ಟಿನ ಮುಂಚೆ ನೋವು ಉಂಟಾಗಬಹುದೆಂಬ ಕಾರಣದಿಂದ ಚಿಂತಿತರಾಗುತ್ತಾರೆ. ಅದೇ ಒತ್ತಡಕ್ಕೆ ಕಾರಣವಾಗಬಹುದು.

ಈ ಲಕ್ಷಣಗಳು ನಿಮ್ಮ ದೈನಂದಿನ ಜೀವನವನ್ನು ಪ್ರಭಾವಿಗೊಳಿಸಬಹುದಾಗಿದೆ. ಅವುಗಳಲ್ಲಿ ಸಿಡಿಮಿಡಿತನ ಅಥವಾ ಕ್ರೋಧದ ಭಾವನೆ, ನಿರಾಸೆ, ಒತ್ತಡ ಅಥವಾ ಚಿಂತೆಯ ಭಾವನೆ ಮೂಡ್‌ ಸ್ವಿಂಗ್‌ ಅಥವಾ ಮೇಲಿಂದ ಮೇಲೆ ಅತ್ತುಬಿಡಬೇಕೆಂಬ ಭಾವನೆ ಬಂದುಬಿಡುವುದು, ಯೋಚಿಸಲು ಅಥವಾ ಗಮನ ಕೇಂದ್ರೀಕರಿಸಲು ಸಮಸ್ಯೆ ಉಂಟಾಗುವಿಕೆ, ದಣಿವು ಅಥವಾ ಕಡಿಮೆ ಶಕ್ತಿ, ಹೆಚ್ಚೆಚ್ಚು ತಿನ್ನಬೇಕೆಂಬ ಇಚ್ಛೆ ಉಂಟಾಗುವಿಕೆ, ಭಾವನೆಗಳನ್ನು ಕೇಂದ್ರೀಕರಿಸಲು ಸಮಸ್ಯೆ ಉಂಟಾಗುವಿಕೆ, ದೈಹಿಕ ಲಕ್ಷಣಗಳಾದ ಹೊಟ್ಟೆ ಊದಿಕೊಂಡಂತಾಗುವುದು, ಸ್ತನಗಳು ಮೃದುವಾದಂತೆ ಅನಿಸುವುದು, ತಲೆನೋವು, ಕೀಲುಗಳಲ್ಲಿ ನೋವು ಇವೆಲ್ಲ ಅದರಲ್ಲಿ ಸೇರಿವೆ.

ಹದಿಹರೆಯದವರಿಗೂ ಅತಿ ಹೆಚ್ಚಿನ ಒತ್ತಡದ ಅನುಭವ ಉಂಟಾಗಬಹುದು. ಅವರಿಗೆ ಮಾಂಸಖಂಡಗಳಲ್ಲಿ ಎಳೆತದ ಅನುಭವ, ಹೊಟ್ಟೆನೋವು, ಕೀಲುಗಳಲ್ಲಿ, ಸೊಂಟದಲ್ಲಿ ನೋವು ಹಾಗೂ ದಣಿವು ಉಂಟಾಗಬಹುದು. ಈ ಬದಲಾವಣೆ ಅವರ ಯೌವನ ಕಾಲದಲ್ಲಿ ಉಂಟಾಗುವ ಬದಲಾವಣೆಗೆ ಸಂಬಂಧಪಟ್ಟಿರುತ್ತವೆ.

ಈಸ್ಟ್ರೋಜೆನ್‌ ಹಾಗೂ ಪ್ರೊಜೆಸ್ಟರಾನ್‌ ಹಾರ್ಮೋನುಗಳು ಪೀರಿಯಡ್ಸ್ ಸಂಬಂರ್ಧದಲ್ಲಿ ದುರಸ್ತಿಯ ಕೆಲಸ ಮಾಡುತ್ತವೆ. ಅವುಗಳ ಏರುಪೇರಿನಿಂದಾಗಿ ನಿಮ್ಮ ಹಸಿವು, ಪಚನ ಶಕ್ತಿ ಮತ್ತು ಶಕ್ತಿಯ ಮಟ್ಟದಲ್ಲಿ ಪ್ರಭಾವ ಬೀರಬಹುದು. ಅದರಿಂದ ಮಾನಸಿಕ ಕಾರ್ಯ ವ್ಯವಸ್ಥೆಯ ಮೇಲೂ ಪ್ರಭಾವ ಉಂಟಾಗಬಹುದು. ಪೀರಿಯಡ್ಸ್ ನ ಸಂದರ್ಭದಲ್ಲಿ ಒತ್ತಡ ಮೂಡ್‌ ಡಿಸಾರ್ಡರ್ ಆಗಿದ್ದು, ಅದರಿಂದ ಪೀರಿಯಡ್ಸ್ ಸಂದರ್ಭದಲ್ಲಿ ಶೇ.5 ರಷ್ಟು ಮಹಿಳೆಯರು ತೊಂದರೆಗೀಡಾಗುತ್ತಾರೆ.

ಕೆಳಕಂಡ ಉಪಾಯಗಳು ಪೀರಿಯಡ್ಸ್ ಸಂದರ್ಭದಲ್ಲಿ ಒತ್ತಡ ಕಡಿಮೆ ಮಾಡಲು ಸಹಾಯವಾಗುತ್ತವೆ.

ರಿಲ್ಯಾಕ್ಲೇಶನ್ಟೆಕ್ನಿಕ್‌ : ಈ ವಿಧಾನ ಅನುಸರಿಸುವುದರಿಂದ ನಿಮ್ಮ ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ. ಅದಕ್ಕಾಗಿ ನೀವು ಯೋಗ, ಧ್ಯಾನ ಹಾಗೂ ಮಸಾಜ್‌ ಥೆರಪಿಯ ಉಪಯೋಗ ಮಾಡಬಹುದು.

ಸಾಕಷ್ಟು ನಿದ್ರೆ ಪಡೆಯಿರಿ : ಸಾಕಷ್ಟು ನಿದ್ರೆ ಮಾಡುವುದು ಅಗತ್ಯ. ಕೇವಲ ಅದೊಂದೇ ಅಲ್ಲ, ನೀವು ದೈನಂದಿನ ಮಲಗುವ ಹಾಗೂ ಏಳುವ ಸಮಯವನ್ನು ನಿಗದಿ ಮಾಡಿಕೊಳ್ಳುವುದು ಅಗತ್ಯ. ಹುಡುಗಿಯರು ಈ ಶೆಡ್ಯೂಲ್ ನ್ನು ಅವಶ್ಯವಾಗಿ ಪಾಲಿಸಬೇಕು. ಏಕೆಂದರೆ ಇದರಿಂದ ಹಾರ್ಮೋನುಗಳ ಮೇಲೆ ಪ್ರಭಾವ ಉಂಟಾಗುತ್ತದೆ.

ಡಯೆಟ್ಬಗ್ಗೆ ಗಮನವಿರಲಿ : ನೀವು ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ ಇರುವ ಡಯೆಟ್‌ ಸೇವನೆ ಮಾಡಿ. ನಿಮ್ಮ ಡಯೆಟ್‌ ನಲ್ಲಿ ಕಾಳುಗಳು, ತರಕಾರಿಗಳು ಇರಲಿ. ಅವು ಪೀರಿಯಡ್ಸ್ ಸಂದರ್ಭದಲ್ಲಿ ಉಂಟಾಗುವ ಭಾವನೆಗಳ ಏರುಪೇರು ಹಾಗೂ ಒತ್ತಡ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಕ್ಯಾಲ್ಶಿಯಂನಿಂದ ತುಂಬಿ ತುಳುಕುವ ಹಾಲು, ಮೊಸರು ಸೇವನೆ ಮಾಡಿ. ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿರಲಿ. ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ತಿನ್ನಿ. ಏಕೆಂದರೆ ಹೊಟ್ಟೆ ಉಬ್ಬರದ ಸಮಸ್ಯೆ ಉಂಟಾಗದಿರಲಿ. ಆಲ್ಕೋಹಾಲ್ ‌ಹಾಗೂ ಕೆಫಿನ್‌ ನಿಂದ ದೂರ ಇರಿ.

ಧಾರಾಳ ವಿಟಮಿನ್ಸ್ ಇರಲಿ : ಅನೇಕ ಅಧ್ಯಯನಗಳಿಂದ ಖಚಿತಪಟ್ಟ ಸಂಗತಿಯೆಂದರೆ ಕ್ಯಾಲ್ಶಿಯಂ ಹಾಗೂ ವಿಟಮಿನ್‌ ಬಿ6 ಇವೆರಡೂ ಒತ್ತಡ ಹಾಗೂ ದೈಹಿಕ, ಮಾನಸಿಕ ಲಕ್ಷಣಗಳನ್ನು ಕಡಿಮೆಗೊಳಿಸುವ ಕೆಲಸ ಮಾಡುತ್ತವೆ.

ವ್ಯಾಯಾಮ ಅತ್ಯವಶ್ಯ : ಓಡುವುದರಿಂದ ಹಾಗೂ ಸೈಕ್ಲಿಂಗ್‌ ಮಾಡುವುದರಿಂದ ಮೂಡ್‌ ಸರಿಯಾಗುತ್ತದೆ.

ಕಾಗ್ನಿಸೆಟಿವ್ ಬಿಹೇವಿಯರ್ಥೆರಪಿ

ಈ ಥೆರಪಿ ಅನುಸರಿಸುವುದರಿಂದ ನೀವು ಒತ್ತಡದ ಮೇಲೆ ವಿಭಿನ್ನ ರೀತಿಯಲ್ಲಿ ನಿಯಂತ್ರಣ ಹೊಂದಬಹುದಾಗಿದೆ. ಕಾಲಕ್ಕೆ ತಕ್ಕಂತೆ ನಿಮ್ಮ ಮೆದುಳಿನ ನರಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಅವು ಭಾವನೆಗಳ ಏರಿಳಿತ ಉಂಟು ಮಾಡುವ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಅದೆಷ್ಟೋ ಮಹಿಳೆಯರಲ್ಲಿ ಒತ್ತಡ ಪ್ರಿಮೆನ್‌ ಸ್ಟ್ರುವಲ್ ‌ಸಿಂಡ್ರೋಮ್ ನ ಸಾಮಾನ್ಯ ಲಕ್ಷಣವಾಗಿರುತ್ತದೆ. ಆದರೆ ಹೊಟ್ಟೆಯಲ್ಲಿ ಹಿಡಿದುಕೊಂಡತಾಗುವಿಕೆ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯ ಹಾಗೂ ಒತ್ತಡವನ್ನು ಕೂಡ ನಿಯಂತ್ರಣದಲ್ಲಿ ಇಡಬಹುದಾಗಿದೆ. ಈ ಕುರಿತಂತೆ ಗಾಬರಿ ಆಗಬೇಡಿ. ಇದರ ಬಗ್ಗೆ ವೈದ್ಯರ ಬಳಿ ಮುಕ್ತವಾಗಿ ಮಾತನಾಡಿ. ಔಷಧಿಯಿಂದಲೂ ಅದನ್ನು ನಿಯಂತ್ರಿಸಬಹುದಾಗಿದೆ.

ಜಾಸ್ಮಿನ್ವಾಸುದೇವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ