ಚೀನಾದಲ್ಲಿ ಶುರುವಾದ ಕೊರೋನಾ ಇಡೀ ವಿಶ್ವವನ್ನೇ ನಡುಗಿಸಿಬಿಟ್ಟಿತು. ಮತ್ತೆ ಮತ್ತೆ ಕೈಗಳ ಸ್ಯಾನಿಟೈಸೇಶನ್, ಮುಖಕ್ಕೆ ಸದಾ ಮಾಸ್ಕ್, ಕೈ ಜೋಡಿಸದೆ ಇರುವುದು, 2 ಗಜಗಳ ಅಂತರ….. ಇವೆಲ್ಲ ನಮ್ಮ ನಿತ್ಯ ಜೀವನದ ಅಂಗಗಳಾಗಿವೆ.
ಇದು ನಮ್ಮ ದೈನಂದಿನ ಜೀವನದ ಮೇಲೂ ಹೆಚ್ಚಿನ ಪರಿಣಾಮ ಬೀರಿದೆ. ಆಫೀಸ್ ಕೆಲಸ WHF ಆಗಿ, ಮಕ್ಕಳಿಗೆ ಆನ್ ಲೈನ್ ಕಲಿಕೆ ಕಡ್ಡಾಯವಾಗಿದೆ. ಕೊರೋನಾದಿಂದ ವರ್ಕಿಂಗ್ ವುಮನ್ ಲೈಫ್ ಸ್ಟೈಲ್, ಫ್ಯಾಷನ್ ಬದಲಾಗಿದೆ. ಮಾಸ್ಕ್ ಹೆಂಗಸರ ಅರ್ಧ ಮುಖ ಮುಚ್ಚಿದರೆ, ತಲೆಯನ್ನೂ ಕವರ್ ಮಾಡುವುದರಿಂದ ಹೇರ್ ಕಟ್‌ಹೇರ್ ಸ್ಟೈಲ್ ನಲ್ಲೂ ಬದಲಾವಣೆಗಳಾಗಿವೆ. ಬ್ಯೂಟಿಪಾರ್ಲರ್, ಸೆಲೂನಿಗೆ ಹೋಗುವುದು ಕಡಿಮೆ ಆಗಿರುವುದರಿಂದ, ಹೆಚ್ಚಿನ ಹೆಂಗಸರು ಹೇರ್ ಕಟ್ ಇಲ್ಲದೆ ಕೂದಲನ್ನು ಉದ್ದಕ್ಕೆ ಬೆಳೆಸುತ್ತಿದ್ದಾರೆ. ಅಣುಗಾತ್ರದ ಒಂದು ವೈರಸ್ ವಿಶ್ವದ ಹೆಂಸಗರ ಮೇಲೆಲ್ಲ ಎಂಥ ಪರಿಣಾಮ ಬೀರಿದೆ ಎಂದು ಇದರಿಂದ ತಿಳಿಯಬಹುದು. ಮಾಸ್ಕ್ ಕಾರಣ ವಿಶ್ವದೆಲ್ಲೆಡೆ ಲಿಪ್ ಸ್ಟಿಕ್‌ಕೊಳ್ಳದೆ 28% ನಷ್ಟು ನೇಲ್ಸ್ ಡೌನ್ ಆಗಿದೆ. ಮೇಕಪ್ ಕಿಟ್ ನ ಪ್ರಧಾನ ಭಾಗ ಲಿಪ್ ಸ್ಟಿಕ್‌ಕೊರೋನಾದಿಂದ ದೂರವಾಗಿದೆ.
ಹೆಂಗಸರು ಇದೀಗ ತಮ್ಮ ಕೂದಲು, ಕಂಗಳ ಮೇಕಪ್ ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಐ ಮೇಕಪ್‌ಹೇರ್ ಕಲರ್ ಇದೀಗ ಪ್ರಾಮುಖ್ಯತೆ ಗಳಿಸಿವೆ. ಇದಕ್ಕಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಆರಂಭಿಸಿದ್ದಾರೆ. ಲಿಪ್ ಸ್ಟಿಕ್‌ಸೇಲ್ಸ್ ಕೆಳಬಂದಂತೆ ಐ ಮೇಕಪ್ ಸೇಲ್ಸ್ ಮೇಲೇರಿವೆ.
ಲಿಪ್ ಸ್ಟಿಕ್ ಸೇಲ್ಸ್
ಒಂದು ಕಡೆ ಲಿಪ್ ಸ್ಟಿಕ್‌ಸೇಲ್ಸ್ 28% ತಗ್ಗಿದ್ದರೆ, ಐ ಮೇಕಪ್, ಹೇರ್ ಕಲರ್, ನೇಲ್ ಸೇಂಟ್ ನ ಸೇಲ್ಸ್ 200% ಹೆಚ್ಚಿವೆ. ಕಾಸ್ಮೆಟಿಕ್ಸ್ ತಯಾರಕರ ಪ್ರಕಾರ, ಕೊರೋನಾ ಇದೀಗ ತಗ್ಗಿದ್ದರೂ ಜನ ಮಾಸ್ಕ್ ಬಿಟ್ಟಿಲ್ಲ. ಎಲ್ಲೆಡೆ ಈಗಲೂ ಅದು ಅನಿವಾರ್ಯ. ಹೀಗಾಗಿ ಲಿಪ್ ಸ್ಟಿಕ್ ಟ್ರೆಂಡ್ ದಿನೇದಿನೇ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಹೆಂಗಸರು ಲಿಪ್ ಸ್ಟಿಕ್ ಬಳಸುವುದನ್ನೇ ಬಿಟ್ಟುಬಿಡಬಹುದು.
ಈಗ ಎಲ್ಲೆಲ್ಲೂ WHF ಪ್ರಕ್ರಿಯೆ ಹೆಚ್ಚುತ್ತಿದೆ. ಈಗಲೂ ಎಷ್ಟೋ ಕಂಪನಿಗಳು ಇದಕ್ಕೇ ಅಂಟಿಕೊಂಡಿವೆ. ಈಗಲೂ 25-30% ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಬೇಸರ ಆಗಿದ್ದರೂ, ಖಾಸಗಿ ಕಂಪನಿಗಳು ಇದಕ್ಕೇ ಅಂಟಿಕೊಂಡಿವೆ. ಇದರಿಂದ ಅವಕ್ಕೆ ಹೆಚ್ಚಿನ ಲಾಭ, ಕೆಲಸ ಹೆಚ್ಚುತ್ತಿದೆ. ಒಟ್ಟಾರೆ ಈ WHF ಸದ್ಯಕ್ಕಂತೂ ಮುಗಿಯುವ ಮಾತೇ ಇಲ್ಲ.
ಆನ್ ಲೈನ್ ಶಾಪಿಂಗ್
ಸೋಶಿಯಲ್ ಡಿಸ್ಟೆನ್ಸಿಂಗ್‌ಕಾಂಟಾಕ್ಟ್ ಲೆಸ್‌ಡೆಲಿವರಿ ಕಾರಣ ಆನ್ ಲೈನ್‌ಶಾಪಿಂಗ್ ಇದೀಗ ಹೆಚ್ಚು ಜನಪ್ರಿಯ. ಹಿಂದೆ 27% ಜನರು ಇದಕ್ಕೆ ಆದ್ಯತೆ ನೀಡುತ್ತಿದ್ದರೆ, ಇದೀಗ 51%ಗೂ ಹೆಚ್ಚು ಮಂದಿ ಇದಕ್ಕೆ ಜೋತುಬಿದ್ದಿದ್ದಾರೆ. ಕಾಸ್ಮೆಟಿಕ್ ಮಾರ್ಕೆಟಿಂಗ್ ಅಂತೂ ಹೆಚ್ಚುಕಡಿಮೆ ಇದನ್ನೇ ಅವಲಂಬಿಸಿದೆ.
ಎಷ್ಟೋ ಹೆಂಗಸರು ಪರ್ಸನ್ ಟು ಪರ್ಸನ್ ನೆಟ್ ವರ್ಕ್ ಕ್ರಿಯೇಟ್ ಮಾಡಿಕೊಂಡು, ಆನ್ ಲೈನ್ ಮೂಲಕ ಕಾಸ್ಮೆಟಿಕ್ಸ್ ಧಾರಾಳ ಮಾರುತ್ತಿದ್ದಾರೆ. ವಾಟ್ಸ್ ಆ್ಯಪ್, FB, ಇನ್ ಸ್ಟಾಗ್ರಾಂ ಇವರ ನೆರವಿಗಿದೆ. ಇಲ್ಲಿ ಹೆಚ್ಚಾಗಿ ಐಶ್ಯಾಡೋ, ಮಸ್ಕರಾ, ಐ ಲೈನರ್, ಕಾಜಲ್, ಕೃತಕ ಐ ಲ್ಯಾಶೆಸ್ ಖರೀದಿಸುತ್ತಾರೆ. ಬಾಡಿಲೋಶನ್, ಮಾಯಿಶ್ಚರೈಸರ್, ಸನ್ ಸ್ಕ್ರೀನ್ ಇತ್ಯಾದಿಗಳಿಗೂ ಬಹಳ ಡಿಮ್ಯಾಂಡ್ ಹೆಚ್ಚು. ಫೇಸ್ ಕ್ರೀಂ, ಲಿಪ್ ಸ್ಟಿಕ್, ಲಿಪ್ ಬಾವ್, ಲಿಪ್ ಗ್ಲಾಸ್ ಪೌಡರ್ ಗಳನ್ನು ಕೊಳ್ಳುವವರೇ ಇಲ್ಲ. ಆನ್ ಲೈನ್ ನಲ್ಲಿ ಐ ಮೇಕಪ್ ಕ್ಲಾಸಸ್ ಹೆಚ್ಚುತ್ತಲಿವೆ.
ಮಾಸ್ಕ್ ಕಾರಣ ಇಡೀ ಮುಖ ಚೆನ್ನಾಗಿ ಕಾಣದಿರುವಾಗ, ಕಂಗಳನ್ನು ಮತ್ತಷ್ಟು ಬ್ಯೂಟಿಫುಲ್ ಮಾಡುವುದಾದರೂ ಹೇಗೆ? ಕಂಗಳ ಚೆಲುವು ಮುಸ್ಲಿಂ ದೇಶಗಳಲ್ಲಿ ಬುರ್ಖಾ ಅನಿವಾರ್ಯ ಆಗಿರುವುದರಿಂದ, ಅಲ್ಲಿನ ಹೆಂಗಸರು ಕಂಗಳ ಮೇಕಪ್ ಗೇ ಹೆಚ್ಚು ಒತ್ತುಕೊಡುತ್ತಾರೆ. ಅವರು ದಟ್ಟ ಹುಬ್ಬು, ಉದ್ದನೆ ಹುಬ್ಬು, ನಕಲಿ ಐ ಲ್ಯಾಶೆಸ್ ಹೆಚ್ಚಾಗಿ ಬಳಸುತ್ತಾರೆ. ಕಂಗಳ ಮೇಕಪ್ ನಲ್ಲಿ ಗ್ಲಿಟರ್ ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಕಾಜಲ್, ಐ ಲೈನರ್ ನಂಥ 5-6 ಬಗೆಯ ಉತ್ಪನ್ನಗಳು ಕಂಗಳ ಚೆಲುವು ಹೆಚ್ಚಿಸಲು ಪೂರಕ. ಹೀಗಾಗಿ ಇಡೀ ವಿಶ್ವ ಮಾಸ್ಕ್ ಕಾರಣ ಕಂಗಳಲ್ಲೇ ಚೆಲುವು ಅರಸುತ್ತದೆ. ಸ್ಮೋಕಿ ಐಸ್, ಗಾರ್ಜಿಯಸ್ ಐಸ್, ಮಾದಕ ಮೊಹಕ ಬೆಡಗಿನ ಕಂಗಳ ಚೆಲುವು ಟ್ರೆಂಡ್ ಹೆಚ್ಚುತ್ತಿವೆ.
ಗಾರ್ಜಿಯಸ್ ಲುಕ್ಸ್ ಗಾಗಿ ಐ ಮೇಕಪ್‌ನಲ್ಲಿ ಮೆಟಾಲಿಕ್ ಗ್ರೀನ್, ಗೋಲ್ಡ್, ಪಿಂಕ್ ನಂಥ ವೈಬ್ರೆಂಟ್ ಕಲರ್ಸ್ ಬಳಕೆ ಹೆಚ್ಚುತ್ತಿವೆ. ಪಾರ್ಟಿ ಮೇಕಪ್ ನಲ್ಲಿ ಈಗ ಈ ಬಣ್ಣಗಳದ್ದೇ ಮೇಲುಗೈ. ಫೇಶಿಯಲ್, ಮೆನಿಕ್ಯೂರ್ ಸಹ ಕಡಿಮೆ ಆಗಿವೆ. ಕಂಗಳ ಮೇಕಪ್ ನಿಂದ ಇತರ ಮೇಕಪ್ ನ ಕೊರತೆ ನೀಗಿಸುವ ಕೆಲಸ ನಡೆಯುತ್ತಿದೆ!
– ನಿರ್ಮಲಾ