ಮಳೆಗಾಲದಂಥ ಮಜವಾದ ಕಾಲ ಮತ್ತೊಂದಿಲ್ಲ. ಶೀತಲ ವಾತಾವರಣ, ಬಿಸಿ ಬಿಸಿ ಬೋಂಡ, ಪಕೋಡ, ಕಾಫಿ/ಟೀ ಹೀರುತ್ತಾ ಮಜವಾಗಿ ಕಾಲ ಕಳೆಯಬಹುದು. ಆದರೆ ಈ ಋತು ಸ್ಕಿನ್‌ ಅಲರ್ಜಿ ಕೊಂಡು ತರುತ್ತದೆ. ಈ ಅಲರ್ಜಿ ದೂರಗೊಳಿಸದಿದ್ದರೆ ಇದು ಚರ್ಮದ ಸೌಂದರ್ಯ ಹಾಳು ಮಾಡುತ್ತದೆ.

ಬಗೆಬಗೆಯ ಸ್ಕಿನ್ಅಲರ್ಜಿ

ಈ ಸೀಸನ್‌ ನಲ್ಲಿ ಸ್ಕಿನ್‌ ಅಲರ್ಜಿ ಮಾಮೂಲಿ ಸಮಸ್ಯೆ. ಬನ್ನಿ, ಈ ವಿವಿಧ ಸಮಸ್ಯೆಗಳ ಬಗ್ಗೆ ವಿವರವಾಗಿ ಅರಿಯೋಣ. ಇದರಿಂದ ಪಾರಾಗುವ ದಾರಿ ತಿಳಿಯೋಣ.

ಎಗ್ಸಿಮಾ

ಈ ಸಮಸ್ಯೆಯಿಂದ ಚರ್ಮದಲ್ಲಿ ಹೆಚ್ಚಿನ ಬೆವರು, ಹೆಚ್ಚು ಉಷ್ಣತೆ, ಚರ್ಮದ ರಕ್ಷಣಾಪದರ ಹಾಳಾಗುವಿಕೆ, ಆರ್ದ್ರತೆಯ ತಗ್ಗುವಿಕೆ ಇತ್ಯಾದಿ ಹೆಚ್ಚುತ್ತವೆ. ಇದರಿಂದ ಚರ್ಮದಲ್ಲಿ  ರೆಡ್‌ ನೆಸ್‌, ಉರಿ, ನವೆ, ಕಡಿತ, ಊತ, ಪದರ ಏಳುವಿಕೆ ಇತ್ಯಾದಿ ಹಿಂಸೆ ಕಾಡುತ್ತದೆ. ರಕ್ತ ಸಹ ತೊಟ್ಟಿಕ್ಕಬಹುದು.

ಇಂಥ ಸ್ಥಿತಿಯಲ್ಲಿ ಮನೆಮದ್ದು, ಸೆಲೂನ್‌ ಚಿಕಿತ್ಸೆ ಬದಲಾಗಿ ಚರ್ಮ ತಜ್ಞರ ಸಲಹೆ ಪಡೆಯಬೇಕು. ಇದರ ಅಸಹನೀಯ ನೋವು ನಿಮ್ಮ ಚರ್ಮದ ಸೌಂದರ್ಯ ಹಾಳುಗೆಡಹುತ್ತದೆ. ಈ ಮಳೆಗಾಲದಲ್ಲಿ ಸಾಮಾನ್ಯವಾಗಿ ಡೈಶಿದ್ರೋಟಿಕ್‌ ಎಗ್ಸಿಮಾ ಹೆಚ್ಚಾಗಿ ಕಾಡುತ್ತದೆ, ಇದರಿಂದ ಚರ್ಮದಲ್ಲಿ ಹೊಪ್ಪಳೆ, ಬಿರುಕು ಕಾಣಿಸಬಹುದು.

ಎಂಥ ಟೆಸ್ಟ್ ಮಾಡಿಸಬೇಕು? : ಎಗ್ಸಿಮಾ ಕುರಿತು ಪರೀಕ್ಷೆ ಮಾಡಿಸಲು ಪ್ಯಾಚ್‌ ಟೆಸ್ಟ್, ಅಲರ್ಜಿ ಟೆಸ್ಟ್, ಎಂಥ ಪಥ್ಯದ ಆಹಾರ ಇತ್ಯಾದಿ ಗಮನಿಸಬೇಕು. ಆಗ ಮಾತ್ರ ಅಲರ್ಜಿಯ ಕಾರಣವನ್ನು ಸರಿಯಾಗಿ ಗುರುತಿಸಲು ಸಾಧ್ಯ.

ಸೂಕ್ತ ಚಿಕಿತ್ಸೆ : ಚರ್ಮವನ್ನು ಸದಾ ಮಾಯಿಶ್ಚರೈಸ್ಡ್ ಆಗಿಟ್ಟುಕೊಳ್ಳಿ. ಸದಾ ಕೆಮಿಕಲ್ಸ್ ರಹಿತ ಮೈಲ್ಡ್ ಸೋಪ್‌, ಹರ್ಬಲ್ ಕ್ರೀಂ ಆರಿಸಿ. ಇದರಲ್ಲಿ ಡ್ರೈನೆಸ್‌ ಘಟಕ ಪರ್ಫ್ಯೂಮ್ ಇರಬಾರದು. ಅದು ಚರ್ಮದ ತಜ್ಞರಿಂದ ಪಾಸ್‌ ಆಗಿರಬೇಕು. ಸ್ಥಿತಿ ಗಂಭೀರವಾದರೆ ವೈದ್ಯರು ಆ್ಯಂಟಿಬಯೋಟಿಕ್ಸ್ ಸಹ ನೀಡಬಹುದು.

ಇವುಗಳಿಂದ ದೂರವಿರಿ : ಈ ಸ್ಥಿತಿಯಲ್ಲಿ ಕುದಿವ ನೀರಿನಿಂದ ಸ್ನಾನ ಬೇಡ. ಜೊತೆಗೆ ಗಾಢ ಕೆಮಿಕಲ್ಸ್ ನಿಂದ ಕೂಡಿದ ಸೋಪ್‌, ಕ್ರೀಂ, ಮಾಯಿಶ್ಚರೈಸರ್ಸ್‌ ಬೇಡ. ಏಕೆಂದರೆ ಇದು ಚರ್ಮದ ಆರ್ದ್ರತೆಯನ್ನು ನಾಶಪಡಿಸಿ, ಚರ್ಮವನ್ನು ಮತ್ತಷ್ಟು ಡ್ರೈಗೊಳಿಸುತ್ತದೆ.

ಹೀಗಾಗಿ ಚರ್ಮವನ್ನು ಸದಾ ಕ್ಲೀನ್‌ಮಾಯಿಶ್ಚರೈಸ್ಡ್ ಆಗಿಟ್ಟುಕೊಳ್ಳಿ, ಅದರ ಮೇಲೆ ಬೆವರು ಜಮೆಗಟ್ಟದಂತೆ ಮಾಡಿ. ನೈಲಾನ್ ಉಡುಗೆ ಬದಲು ಸಡಿಲವಾದ ಕಾಟನ್‌ ಡ್ರೆಸ್‌ ಧರಿಸಿರಿ. ಸೋಂಕು ತಗುಲಿದ ಭಾಗವನ್ನು ಗೀರಿ ಚಿವುಟಿ ಮಾಡಬೇಡಿ.

ರಿಂಗ್ವರ್ಮ್

ಈ ಮಳೆಗಾಲದಲ್ಲಿ ಚರ್ಮದ ಮೇಲೆ ರಿಂಗ್‌ ವರ್ಮ್ ಆಕ್ರಮಿಸುವುದು ಮಾಮೂಲಿ. ಅದರಲ್ಲೂ ಸೆನ್ಸಿಟಿವ್‌ಸ್ಕಿನ್‌ ಇದಕ್ಕೆ ಬೇಗ ಈಡಾಗುತ್ತದೆ. ಏಕೆಂದರೆ ಮಳೆಯಿಂದಾಗಿ ವಾತಾವರಣದಲ್ಲಿ ಹೆಚ್ಚು ಹ್ಯುಮಿಡಿಟಿ, ಅಂಟಂಟು ಫಂಗಸ್‌ಹೆಚ್ಚಾಗುವಂತೆ ಮಾಡುತ್ತವೆ. ಇದರಲ್ಲಿ ಮೊದಲಿನಿಂದಲೇ ಚರ್ಮದಲ್ಲಿ ಸಣ್ಣ ಸಣ್ಣ ಕೆಂಪು ಗಂಧೆ, ಗುಳ್ಳೆ ಕಾಣಿಸಿಕೊಳ್ಳುತ್ತದೆ. ಉಡುಪಿನ ಘರ್ಷಣೆಯಿಂದ ಇದರ ಸೋಂಕು ಹರಡುತ್ತದೆ.

ಸೂಕ್ತ ಚಿಕಿತ್ಸೆ : ಲೂಸ್‌ ಕಾಟನ್‌ ಡ್ರೆಸ್‌ ಮಾತ್ರ ಧರಿಸಿ. ಮಳೆಯಲ್ಲಿ ನೆಂದು ಬಂದಾಗ ಅಗತ್ಯ ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ. ಇದರಿಂದ ಚರ್ಮದ ಮೇಲಿನ ಬೆವರು, ಕೊಳಕು ತಾನಾಗಿ ದೂರವಾಗುತ್ತದೆ. ಚರ್ಮ ಸದಾ ಮಾಯಿಶ್ಚರೈಸ್ಡ್ ಆಗಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ