ಕೆಲವು ವರ್ಷಗಳ ಹಿಂದಿನ ಮಾತು. ನನ್ನ ಸೋದರ ಸೊಸೆ ಕೆಲವು ದಿನಗಳ ಮಟ್ಟಿಗೆ ತನ್ನ ಮಗನ ಜೊತೆ ಬಂದಿದ್ದಳು. ಅವಳು ಊರಿಗೆ ಹೋಗುವ ಸಮಯದಲ್ಲಿ ನಾನು ಹಾಗೂ ನನ್ನ ಪತಿ ಅವಳನ್ನು ಸ್ಟೇಷನ್‌ ತನಕ ಬಿಡಲು ಹೋಗಿದ್ದೆ. ಅವರಿಬ್ಬರನ್ನು ನನ್ನ ಪತಿ ಸೆಕೆಂಡ್‌ ಕ್ಲಾಸ್‌ ಬೋಗಿಯಲ್ಲಿ ಕೂರಿಸಿದಾಗ ನನಗೇಕೊ ಸರಿ ಎನಿಸಲಿಲ್ಲ. ಪತಿಯ ಬಗ್ಗೆ ನಾನು ಏನೇನೋ ಯೋಚಿಸಿದೆ. ಅಕ್ಕಪಕ್ಕದ ಪ್ರಯಾಣಿಕರು ನನಗೆ ಅಷ್ಟೇನೂ ಸರಿ ಎನಿಸಲಿಲ್ಲ. ಅವಳು ಯಾವಾಗ ಊರಿಗೆ ತಲುಪಿ ನನಗೆ ಫೋನ್‌ ಮಾಡುತ್ತಾಳೋ ಎಂದು ನಾನು ಕಾಯುತ್ತಿದ್ದೆ. ರಾತ್ರಿ ಅವಳ ಫೋನ್‌ ಬಂದಾಗ ನಾನೇ ಕೇಳಿದೆ, “ನಿನ್ನ ಅಂಕಲ್ ನಿನ್ನನ್ನು ಎಂಥವರ ನಡುವೆ ಕೂರಿಸಿ ಕಳಿಸಿದರೆಂದು ನಾನು ಚಿಂತಿತಳಾಗಿದ್ದೆ.” ಆಗ ಅವಳು ಹೇಳಿದಳು, “ನನ್ನ ಪಕ್ಕ ಕುಳಿತವರೆಲ್ಲ ಬಹಳ ಒಳ್ಳೆಯ ಸ್ವಭಾವದವರು. ಎಲ್ಲರೂ ನನ್ನ ಬಗ್ಗೆ ಬಹಳ ಕಾಳಜಿ ವಹಿಸಿದರು. ಟ್ರೇನ್‌ ನಿಂತಾಗ ಅವರು ನನ್ನನ್ನು ಪ್ಲ್ಯಾಟ್ ಫಾರ್ಮ್ ತನಕ ನನ್ನ ಲಗೇಜ್‌ ಎತ್ತಿಕೊಂಡು ಬಂದರು.”

ಆ ಬಳಿಕ ನನಗೆ ಪತಿ ಹೇಳಿದ ಮಾತು ನೆನಪಿಗೆ ಬಂತು, “ವ್ಯಕ್ತಿಯೊಬ್ಬನ ಗುರುತನ್ನು ಅವನ ಕ್ಲಾಸಿನಿಂದಲ್ಲ, ಆತನ ವರ್ತನೆಯಿಂದ ಹಾಗೂ ಸಂಸ್ಕಾರದಿಂದ ಗುರುತಿಸಬೇಕು.”

ಸುನೀತಾ, ಹಾಸನ.

ಮುಂಬೈ ಕರ್ನಾಟಕ ಮಹಿಳಾ ಮಂಡಳ ಸ್ಥಾಪನೆಯಾದಾಗಿನಿಂದ ನಾನು ಅದರ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದೆ. ಎಂದಿನಂತೆ ನಾವು ಒಂದು ಸಮಾರಂಭದ ನಡೆಸುವುದೆಂದು ಮೀಟಿಂಗ್‌ ಮಾಡಿ ನಿರ್ಧರಿಸಿದ್ದೆ.

ಕಾರ್ಯಕ್ರಮಕ್ಕಿಂತ ಕೆಲವು ದಿನಗಳ ಮೊದಲು ನನ್ನ ಅಣ್ಣ ತೀರಿಹೋಗಿದ್ದಾರೆಂದು ತಿಳಿದುಬಂತು. ಕಾರ್ಯಕ್ರಮ ನಡೆಯುವ  ಒಂದು ದಿನ ಮುಂಚೆ ಕಾರ್ಯದರ್ಶಿಗಳಿಂದ ನನಗೆ ಫೋನ್‌ ಬಂತು. ನಾನು ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ? ಎಂದು ಹೇಳಿದೆ. ಆದರೆ ಅವರು ಖೇದ ವ್ಯಕ್ತಪಡಿಸುತ್ತಾ, ಕಾರ್ಯಕ್ರಮವನ್ನೇ ಮುಂದೂಡುವ ಬಗ್ಗೆ ಹೇಳಿದರು. ನಾನು ದುಃಖದ ಸ್ವರದಲ್ಲಿ ಅವರಿಗೆ ತಿಳಿಸಿ ಹೇಳಿದೆ, “ನೀವು ದಯಮಾಡಿ ಕ್ಯಾನ್ಸಲ್ ಮಾಡಬೇಡಿ.”

ಸ್ವಲ್ಪ ಹೊತ್ತಿನ ಬಳಿಕ ಅಧ್ಯಕ್ಷರ ಫೋನ್‌ ಬಂತು. ಅವರೂ ಸಹ ಕಾರ್ಯಕ್ರಮ ನಡೆಸದೇ ಇರುವ ಬಗ್ಗೆ ಹೇಳಿದರು. ನಾನು ಅವರಿಗೂ ಕೂಡ ಹೇಳಿದೆ, “ನಾನು ಒಬ್ಬಳೇ ಬರದೇ ಇರುವುದರಿಂದ ಏನಾಗುತ್ತದೆ? ಅಷ್ಟೊಂದು ದೊಡ್ಡ ಸಂಘ. ನೀವು ಕಾರ್ಯಕ್ರಮ ನಡೆಸಬೇಕು.”

2-3 ದಿನಗಳ ಬಳಿಕ ನನ್ನ ಗೆಳತಿಯಿಂದ ತಿಳಿದುಬಂದ ವಿಷಯವೆಂದರೆ, ಆ ಕಾರ್ಯಕ್ರಮ ನಡೆಸಲಿಲ್ಲವೆಂದು ಹೇಳಿದಳು. ನಾನು ಅವರಿಗೆ ಕೇಳಿದೆ, “ಏಕೆ?” ಅದಕ್ಕೆ ಅವರು, “ನೀನು ದುಃಖದಲ್ಲಿರುವಾಗ ನಾವು ಸಮಾರಂಭ ಹೇಗೆ ತಾನೇ ನಡೆಸಲು ಸಾಧ್ಯ?”

ಅವರ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ಎಲ್ಲ ಆರ್ಡರ್‌ ಗಳನ್ನು ರದ್ದು ಮಾಡಲು ಅವರು ಅದೆಷ್ಟು ಕಷ್ಟ ಪಟ್ಟಿರಬೇಕು ಎನಿಸಿತು. ನಾನು ನಮ್ಮ ಮಹಿಳಾ ಸಂಘದ ಬಗ್ಗೆ ಹೆಮ್ಮೆಪಟ್ಟೆ. ಪ್ರೀತಿ ಹಾಗೂ ಏಕತೆಯ ಬಗ್ಗೆ ಸಂಘದವರು ನನಗೆ ಕಲಿಸಿದ ಪಾಠವನ್ನು ನಾನೆಂದು ಮರೆಯೆನು. ಆದರೆ ಮನಸ್ಸಿನ ಮೂಲೆಯಲ್ಲಿ ಮಾತ್ರ ನನಗೆ ಒಂದು ಮಾತು ಕುಟುಕುತ್ತಾ ಇರುತ್ತದೆ. `ಸಮಾಜ ನಮಗೆ ಇಷ್ಟೆಲ್ಲ ಕೊಡುತ್ತೆ ಆದರೆ ನಾವು ಸಮಾಜಕ್ಕೆ ಏನು ಕೊಡುತ್ತೇಿ?’ ಎಂಬುದೇ ಆ ವಿಚಾರ.

ಡಾ. ಅನುರಾಧಾ, ಮುಂಬೈ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ