ಮಹಾ ಕುಂಭಮೇಳಕ್ಕೆ ವಯಸ್ಸಿನ ಮಿತಿ ಇಲ್ಲದೆ, ಚಿಕ್ಕ ಮಗುವಿನಿಂದ ಹಿಡಿದು ವಯಸ್ಸಾದವರು ಆಗಮಿಸುತ್ತಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಪ್ರಯಾಗ್​ರಾಜ್​​ಗೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಿಡಿಗೇಡಿಗಳು ಕುಂಭಮೇಳದಲ್ಲಿ ಸ್ನಾನ ಮಾಡಿ ಬಟ್ಟೆ ಬದಲಿಸುವ ಮಹಿಳೆಯರ ವಿಡಿಯೋಗಳನ್ನು ಚಿತ್ರೀಕರಣ ಮಾಡಿದ್ದಾರೆ. ಆ ವಿಡಿಯೋಗಳನ್ನು ಡಾರ್ಕ್​​​ವೆಬ್​​​ಗೆ ಅಪ್​ಲೋಡ್​​ ಮಾಡುತ್ತಿದ್ದ ಭಯಾನಕ ಸತ್ಯವೊಂದು ಬೆಳಕಿಗೆ ಬಂದಿದೆ.

KUMBHMELA DARKWEB3

ಕುಂಭಮೇಳ.. ಹಿಂದೂ ಧರ್ಮದ ಅತಿ ದೊಡ್ಡ ಧಾರ್ಮಿಕ ಉತ್ಸವ.. ಧರ್ಮ ರಕ್ಷಕರು ದರ್ಶನ ನೀಡುವ ಸಂಸ್ಕೃತಿಯ ವೈಭವ.. ಇಲ್ಲಿವರೆಗೆ ಬರೋಬ್ಬರಿ 50 ಕೋಟಿಗೂ ಅಧಿಕ ಮಂದಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಮಹಿಳೆಯರು ಕೂಡ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ.

KUMBHMELA DARKWEB2

ಮಹಾಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಮಹಿಳೆಯರು ಬಟ್ಟೆ ಬದಲಿಸುವ ವಿಡಿಯೋ ಚಿತ್ರೀಕರಣಗಳನ್ನ ಡಾರ್ಕ್​​ವೆಬ್​​​ಗೆ ಅಪ್​​​ಲೋಡ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಬಯಲಾಗಿದೆ.

KUMBHMELA DARKWEB5

ಪವಿತ್ರವಾದ ಮಹಾ ಕುಂಭಮೇಳದಲ್ಲಿ ಕೆಲ ಕಿಡಿಗೇಡಿಗಳು ಅಪವಿತ್ರ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಿಸುವುದನ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ಆ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟ್ ಮಾಡಿರೋ ಕೆಲ ಫ್ರೊಫೈಲ್​​ಗಳು ಹಾಗೂ ಗ್ರೂಪ್​​ಗಳಿಗೆ ಶೇರ್ ಮಾಡಲಾಗುತ್ತಿದೆ.

KUMBHMELA DARKWEB6

ಡಾರ್ಕ್​ವೆಬ್​​​ಸೈಟ್​​ಗೆ ಅಪ್​​ಲೋಡ್ ಮಾಡುವುದರ ಜೊತೆಗೆ ವಿಡಿಯೋಗಳನ್ನ ಹಣಕ್ಕೆ ಮಾರಾಟ ಮಾಡಲಾಗ್ತಿದೆ. ಈ ಮಾಹಿತಿಯನ್ನ ಉತ್ತರಪ್ರದೇಶದ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡ ಬಯಲಿಗೆಳೆದಿದೆ.

KUMBHMELA DARKWEB (2)

ಮಹಿಳೆಯರ ಗೌಪ್ಯತೆ ಹಾಗೂ ಘನತೆ ಉಲ್ಲಂಘನೆಯಾಗಿದೆ. ಮಹಿಳೆಯರ ವಿಡಿಯೋಗಳನ್ನ ಮಾರಾಟ ಮಾಡುವವರು ಹಾಗೂ ಖರೀದಿಸುವವರು ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ. ಇನ್​​ಸ್ಟಾಗ್ರಾಂ, ಫೇಸ್​​​ಬುಕ್, ಟ್ವಿಟರ್ ಸೇರಿದಂತೆ 103 ಸೋಷಿಯಲ್ ಮೀಡಿಯಾ  ಫ್ರೊಫೈಲ್​​ಗಳನ್ನ  ಗುರುತಿಸಲಾಗಿದೆ.

KUMBHMELA DARKWEB (1)

ಒಟ್ಟು 26 ಸೋಷಿಯಲ್ ಮೀಡಿಯಾ ಅಕೌಂಟ್ ಅಡ್ಮಿನ್​​ಗಳ ಮೇಲೆ FIR ದಾಖಲಿಸಲಾಗಿದೆ. ಮಹಿಳೆಯರ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್​​, ಶೇರ್ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ