– ರಾಘವೇಂದ್ರ ಅಡಿಗ ಎಚ್ಚೆನ್.
ಮಹಾಶಿವರಾತ್ರಿಯನ್ನು ಇಂದು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ದೇಶದ ಮೂಲೆ, ಮೂಲೆಯಲ್ಲೂ ಮಹಾದೇವನ ನಾಮ ಸ್ಮರಣೆ, ಪೂಜೆ, ಪುನಸ್ಕಾರ ಜೋರಾಗಿದೆ.
ನಾಡಿನೆಲ್ಲೆಡೆ ಶಿವರಾತ್ರಿ ಸಡಗರ ಕಳೆಕಟ್ಟಿರುವಾಗ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ವಿಶೇಷ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಶಿವರಾತ್ರಿ ಹಬ್ಬದ ಅಂಗವಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಪುತ್ರ ವಿಕ್ರಂ ರವಿಚಂದ್ರನ್ ಶಿವನ ಅವತಾರದಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಶಿವನ ಅವತಾರದಲ್ಲಿರುವ ಫೋಟೋಗಳನ್ನು ವಿಕ್ರಂ ರವಿಚಂದ್ರನ್ ಹಂಚಿಕೊಂಡಿದ್ದಾರೆ.
ಶಿವನ ಅವತಾರದಲ್ಲಿರುವ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಲಾಗಿದೆ.
ರವಿಚಂದ್ರನ್ ಹಾಗೂ ವಿಕ್ರಂ ರವಿಚಂದ್ರನ್ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಬೆಂಕಿ ಲುಕ್ ಎಂದು ಕಮೆಂಟ್‌ಗಳು ಸುರಿಮಳೆಗೈದಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ