ಖ್ಯಾತ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ತವರು ಮಂಗಳೂರಿಗೆ ಬಂದಿದ್ದಾರೆ. ತಾಯಿ, ತಂಗಿ ಹಾಗೂ ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಅವರು ಮಂಗಳೂರಿನ ಖ್ಯಾತ ಕಟೀಲು ದೇವಸ್ಥಾನಕ್ಕೆ ಬಂದು ಕಟೀಲು ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದಿದ್ದಾರೆ. ತಮ್ಮಊರಿಗೆ ಬಂದಿರುವ ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ಕುಟುಂಬದೊಂದಿಗೆ ದೇವಸ್ಥಾನದ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಮಗಳು ಕೈಯಲ್ಲಿ ವಿಕ್ಟರಿ ಸಿಂಬಲ್ ತೋರಿಸಿ ಪೋಸ್ ನೀಡಿದ್ದಾರೆ. ಶಿಲ್ಪಾ ಶೆಟ್ಟಿ ಅವರ ತಂಗಿ ಹಾಗೂ ತಾಯಿ ಆಕರ್ಷಕವಾಗಿ ಮಂಗಳೂರು ಮಲ್ಲಿಗೆ ಹೂ ಮುಡಿದಿದ್ದು ಎಲ್ಲರನ್ನು ಆಕರ್ಷಸುತಿತ್ತು.
ನಟಿ ಶಿಲ್ಪಾ ಶೆಟ್ಟಿ ಅವರು ವರ್ಷದಲ್ಲಿ ಒಂದು ಬಾರಿಯಾದರೂ ಮಂಗಳೂರಿನ ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಬ್ಯಾಕ್ ಹೋಮ್ ಎಂದು ಕ್ಯಾಪ್ಶನ್ ಕೊಟ್ಟ ಶಿಲ್ಪಾ ಶೆಟ್ಟಿ ಅವರು ನಮ್ಮ ತುಳುನಾಡು ಅಂತಲೂ ಬರೆದುಕೊಂಡಿದ್ದಾರೆ.
ವಿಶೇಷ ಅಂದ್ರೆ ನಟಿ ಶಿಲ್ಪಾ ಶೆಟ್ಟಿ ಮೇಕಪ್ ಇಲ್ಲದೆ ಅತ್ಯಂತ ಸರಳವಾದ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದ ಮಲ್ಲಿಗೆ ಹೂವನ್ನು ಮುಡಿದು ಮನಸಾರೆ ನಗುತ್ತಿರುವ ಫೋಟೋ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳು ಇದನ್ನು ಮೆಚ್ಚಿಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ಗರ್ಭ ಗುಡಿಗೆ ಬಗ್ಗಿ ಕಟೀಲಮ್ಮನಿಗೆ ನಮಿಸುತ್ತಿರುವ ಫೋಟೋ ಕಾಣಿಸಿದೆ. ಅವರು ಅತ್ಯಂತ ಸರಳವಾಗಿ ಕಾಣಿಸಿದ್ದಾರೆ. ಅವರ ಫೋಟೋಗಳಿಗೆ ಫ್ಯಾನ್ಸ್ ಲೈಕ್ ಕೊಟ್ಟಿದ್ದಾರೆ.
ಫಿಟ್ನೆಸ್, ನೃತ್ಯ ಮತ್ತು ನಟನೆಯಲ್ಲಿ ಪರಿಣಿತರಾಗಿರುವ ಶಿಲ್ಪಾ ಶೆಟ್ಟಿ ಈಗಲೂ ಎಲ್ಲರೂ ನಾಚುವಂತಹ ಫಿಟ್ನೆಸ್ ಮೇಂಟೈನ್ ಮಾಡಿದ್ದಾರೆ. ನಿತ್ಯ ಯೋಗ ಸೂತ್ರ ಅಳವಡಿಸಿಕೊಂಡಿರುವ ಕರಾವಳಿ ಬೆಡಗಿ ಅಪ್ಪಟ 16ರ ಹುಡುಗಿಯಂತೆ ಕಾಣಿಸುತಿರೋದ್ರಿಂದ ಆಸಂಖ್ಯಾತ ಅಭಿಮಾನಿಗಳು ಇಷ್ಟಪಡುತಿದ್ದಾರೆ.
ಅವರು 1993 ರಲ್ಲಿ ಬಿಡುಗಡೆಯಾದ ‘ಬಾಜಿಗರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಮೊದಲ ಚಿತ್ರವೇ ಬಾಕ್ಸ್ ಆಫೀಸ್ನಲ್ಲಿ ಸೂಪರ್‌ಹಿಟ್ ಆಯಿತು. ಈ ಚಿತ್ರದಲ್ಲಿ ಕಾಜೋಲ್ ಮತ್ತು ಶಾರುಖ್ ಖಾನ್ ಅವರಂತಹ ಅನೇಕ ಪ್ರಸಿದ್ಧ ತಾರೆಯರು ಕಾಣಿಸಿಕೊಂಡರು. ಬಳಿಕ ಬಾಲಿವುಡ್ ನಲ್ಲಿ ಶಿಲ್ಪಾ ಶೆಟ್ಟಿ ನಟನೆಯಲ್ಲಿ ಭಾರೀ ಮೋಡಿ ಮಾಡಿದ್ದಾರೆ.. ಮಾಡುತ್ತಲೇ ಇದ್ದಾರೆ.
****************