– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಯೂಟಿಫುಲ್ ಕಪಲ್ ಆಗಿದ್ದರು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಆದರೆ, ಈ ಜೋಡಿ ತಮ್ಮ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಡಿವೋರ್ಸ್ ಪಡೆದು “ನಾನೊಂದು ತೀರಾ ನೀನೊಂದು ತೀರಾ” ಆಗಿದೆ. ಆದರೆ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ವಿಚ್ಛೇದನದ ಬಳಿಕ ನಿವೇದಿತಾ ಗೌಡ  ಮತ್ತು ಚಂದನ್ ಶೆಟ್ಟಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಯಾಗಿ ಸುದ್ದಿಗೋಷ್ಠಿ ಮಾಡಿದ್ದಾರೆ. ಒಂದೇ ಸಿನಿಮಾದಲ್ಲಿ ಅವರಿಬ್ಬರು ನಟಿಸಿದ್ದಾರೆ. ‘ಮುದ್ದು ರಾಕ್ಷಸಿ’ ಸಿನಿಮಾದ ಕೊನೇ ದಿನ ಶೂಟಿಂಗ್​ನಲ್ಲಿ ಪ್ರೆಸ್ ಮೀಟ್ ನಡೆಸಲಾಗಿದೆ.

niveditha-gowda-chandan-shetty

ವಿಶೇಷ ಎಂದರೆ  ‘ಮುದ್ದು ರಾಕ್ಷಸಿ’ ಚಿತ್ರದ ದೃಶ್ಯವೊಂದರ ಚಿತ್ರೀಕರಣದಲ್ಲಿ ಅವರಿಬ್ಬರು ತಬ್ಬಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಎಮೋಷನಲ್ ಆಗಿ ನಿವೇದಿತಾ ಗೌಡ  ಅವರು ಕಣ್ಣೀರು ಹಾಕಿದರು.

ವಿಚ್ಚೇದನಕ್ಕೂ ಮೊದಲೇ ಈ ಸಿನಿಮಾ ಸೆಟ್ಟೇರಿತ್ತು. ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಆಗೋಕು ಮೊದಲೇ ವಿಚ್ಚೇದನ ಆಗಿತ್ತು. ಈ ಮೊದಲು ಸಿನಿಮಾಗೆ ಕ್ಯಾಂಡಿ ಕ್ರಶ್ ಅಂತಾ ಟೈಟಲ್ ಇಡಲಾಗಿತ್ತು. ಆದ್ರೆ ಈಗ ಇದೀಗ ಮುದ್ದು ರಾಕ್ಷಸಿ ಅಂತಾ ಟೈಟಲ್ ಚೇಂಚ್​ ಮಾಡಿದ್ದಾರೆ.
26 ಫೆಬ್ರವರಿ 2020ರಂದು ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಬೇರೆ ಬೇರೆಯಾಗಿದ್ದರು. ಈಗ ಚಂದನ್‌ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ನಿವೇದಿತಾ ಗೌಡ ಬಾಯ್ಸ್​ ವರ್ಸಸ್​ ಗರ್ಲ್ಸ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರು ಸೇರಿ ಮಾಡಿರೋ ‘ಮುದ್ದು ರಾಕ್ಷಸಿ’ ಸಿನಿಮಾದಲ್ಲಿ ಆ್ಯಕ್ಟ್​ ಕೂಡ ಮಾಡಿದ್ದಾರೆ.

ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್‌ ಬಗ್ಗೆ ನಿವಿ ಹೇಳಿದ್ದು ಹೀಗೆ

ಈ ಸಮಾಜನೇ ಹೀಗೆ ಸದಾ ಹೆಣ್ಣು ಮಕ್ಕಳನ್ನ ದೂಷಿಸುತ್ತಾರೆ. ಎಷ್ಟಾದ್ರೂ ಸೊಸೈಟಿ ಬದಲಾಗಲ್ಲ ಹುಡುಗಿಯರನ್ನೇ ಬ್ಲೇಮ್ ಮಾಡುತ್ತಾರೆ. ಮಾತನಾಡೋಕೆ ಅವಕಾಶ ಇದೆ ಅಂತ ಮಾಡ್ತೀರಾ ಮಾಡಿ ಪರವಾಗಿಲ್ಲ ಎಂದಿದ್ದಾರೆ. ನನಗೇನು ಬೇಜಾರಾಗಲ್ಲ, ನೋವು ಆಗಲ್ಲ, ನಾನು ಟ್ರೋಲ್ ಬಗ್ಗೆ ಕೇರ್ ಮಾಡಲ್ಲ. ಇನ್ನು ಟ್ರೋಲ್ ಮಾಡಿ ಸುಮ್ಮನೆ ನೋಡ್ತೀನಿ ಅಷ್ಟೇ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೋಲ್ಡ್ ಆಗಿ ನಿವೇದಿತಾ ಹೇಳಿದ್ದಾರೆ.

niveditha-gowda-2

ಈ ವೇಳೆ, ಚಂದನ್ ಜೊತೆ ಮತ್ತೆ ಒಂದಾಗ್ತಾರಾ ಎಂಬುದರ ಬಗ್ಗೆ ಮಾತನಾಡಿ, ಡಿವೋರ್ಸ್ ಆಗಿ ಒಂದಾಗಿರೋ ಕಪಲ್ಸ್ ಅಲ್ಲಿ ಅಷ್ಟು ಪ್ರೀತಿ ಇತ್ತೇನೋ ಒಂದಾಗಿದ್ದಾರೆ. ನಮ್ಮಲ್ಲಿ ಆ ತರಹ ಅನ್ಯೋನ್ಯತೆ ಇರಲಿಲ್ಲ ಎಂದು ಮತ್ತೆ ನಾವು ಒಂದಾಗಲ್ಲ ಅಂತ ನೇರವಾಗಿ ನಿವೇದಿತಾ ಗೌಡ ಮಾತನಾಡಿದ್ದಾರೆ.

WhatsApp-Image-2025-03-12-at-8.35.08-AM-e1741749171103-750x649

ಚಂದನ್‌ ಅಪ್ಪುಗೆಯ ಕುರಿತು ರಿಯಾಕ್ಟ್‌ ಮಾಡಿದ ನಿವೇದಿತಾ ಗೌಡ, ನಾಲ್ಕು ವರ್ಷ ನಾವು ಬಾಂಧವ್ಯ ಹೊಂದಿದ್ದೇವೆ. ನಿಜಕ್ಕೂ ಇದು ಎಮೋಷನಲ್‌ ಆಗಿತ್ತು. ಯಾವುದೇ ಪ್ರಾಜೆಕ್ಟ್‌ ಇದ್ದರೂ ಕೂಡ ಅದು ಮುಗಿಯುವಾಗ ಬೇಸರ ಆಗುತ್ತದೆ. ಹಾಗೆಯೇ ಈ ಸಿನಿಮಾ ಶೂಟಿಂಗ್‌ ಮುಗಿಯುತ್ತಿದೆ, ಹಾಗಾಗಿ ಅಳು ಬಂತು. ಈ ಸಿನಿಮಾ ಕಥೆ ತುಂಬ ಚೆನ್ನಾಗಿದೆ. ನಿರ್ದೇಶಕರು ಅಷ್ಟು ಚೆನ್ನಾಗಿ ನನಗೆ ಅರ್ಥ ಮಾಡಿಸಿದ್ರು. ಹಾಗಾಗಿ ಒಪ್ಪಿಕೊಂಡೇ. ಮುಂದೆಯೂ ಒಳ್ಳೇ ಸ್ಟೋರಿ ಬಂದ್ರೆ ಇಬ್ಬರು ಒಟ್ಟಿಗೆ ನಟಿಸುವ ಬಗ್ಗೆ ಯೋಚನೆ ಮಾಡ್ತೀವಿ ಅಂತ ಸಹ ಹೇಳಿಕೊಂಡಿದ್ದಾರೆ.

WhatsApp-Image-2025-03-12-at-8.35.08-AM-1-e1741749190234-750x518

ಚಂದನ್ ಶೆಟ್ಟಿ ಮಾತನಾಡಿ ಮನುಷ್ಯ ಅಂದಕೂಡಲೇ ಎಮೋಶನ್ಸ್‌ ಇರುತ್ತದೆ. ಹಾಗೆಯೇ ನಮಗೂ ನಾಲ್ಕು ವರ್ಷ ಜೊತೆಗಿದ್ದೆವು. ಈಗ ದೂರ ಆಗಿದ್ದೇವೆ. ನಿನ್ನೆ ರಾತ್ರಿಯಿಂದಲೇ ನಾನು ನನ್ನ ಮನಸ್ಸು ಗಟ್ಟಿಮಾಡಿಕೊಳ್ಳೋಣ ಅಂದುಕೊಂಡಿದ್ದೆ. ನಿಜಕ್ಕೂ ನಮಗೆ ಇದು ಎಮೋಷನಲ್‌ ಆಗಿರುತ್ತದೆ. ಪರ್ಸನಲ್‌, ಪ್ರೊಫೆಶನಲ್‌ ಎರಡನ್ನೂ ಒಟ್ಟಿಗೆ ತರೋದು ಒಳ್ಳೆಯದಲ್ಲ. ಆದರೆ ಇಬ್ಬರೂ ಕರಿಯರ್‌ನಲ್ಲಿ ಮುಂದುವರೆಯಲೇಬೇಕು. ಸಿನಿಮಾ ಕೆಲಸ ಆಗಿದ್ದರಿಂದ ಇಬ್ಬರೂ ಪ್ರೊಫೆಶನಲ್‌ ಆಗಿಯೇ ಇರ್ತೀವಿ. ಈ ಸಿನಿಮಾಕ್ಕೆ ನಾನು ಸಂಗೀತ ಸಂಯೋಜನೆ ಮಾಡಿಲ್ಲ. ಈ ಸಿನಿಮಾದಲ್ಲಿ ನಿವೇದಿತಾ ದೃಶ್ಯ ಜಾಸ್ತಿ ಇದೆ. ಅವರಿಗೆ ಬಾಯ್‌ಫ್ರೆಂಡ್‌ ಆಗಿ ಸಪೋರ್ಟ್‌ ಮಾಡಿರೋ ಪಾತ್ರದಲ್ಲಿ ನಾನು ನಟಿಸಿದ್ದೇನೆ ಅಂತ ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ