ಪಾತ್ರೆಗಳನ್ನು ತೊಳೆಯಲು ಬಳಸುನ ಡಿಶ್‌ ಸೋಪ್‌, ಕೇವಲ ಪಾತ್ರೆ ತೊಳೆಯುವ ಕೆಲಸಕ್ಕೆ ಮಾತ್ರವಲ್ಲ, ಇದರ ಹೊರತಾಗಿ ಬಹಳಷ್ಟು ಸಹಾಯಕ್ಕೆ ಬರುತ್ತದೆ ಎಂದು ನಿಮಗೆ ಗೊತ್ತೇ? ಹೌದು, ಇದು ಬಟ್ಟೆಗಳನ್ನು ಒಗೆಯಲಿಕ್ಕೂ ನೆರವಾಗುತ್ತದೆ, ಜೊತೆಗೆ ಕಾರ್‌ ವಾಶಿಂಗ್‌, ಫೇಸ್‌ ವಾಶ್‌ ಆಗಿಯೂ ಬಳಸಿಕೊಳ್ಳಬಹುದು.

ಡಿಶ್ಸೋಪಿನ ನಾನಾ ಉಪಯೋಗ

ಗ್ಯಾಸ್ಲೀಕೇಜ್ಟೆಸ್ಟ್ ಗಾಗಿ : ಒಂದು ಸಣ್ಣ ಬಟ್ಟಲಿಗೆ 1-2 ಚಮಚ  ಲಿಕ್ವಿಡ್‌ ಡಿಶ್‌ ಸೋಪ್‌ ನ್ನು ನೀರಿನಲ್ಲಿ ಬೆರೆಸಿಕೊಂಡು, ಅದನ್ನು ಗ್ಯಾಸ್‌ ಸಿಲಿಂಡರ್‌ ನ ಮುಖ ಭಾಗ, ಹೋಲ್ಸ್ ಪೈಪ್‌ ಜಾಯಿಂಟ್ಸ್ ಮತ್ತು ರೆಗ್ಯುಲೇಟರ್‌ ಮೇಲೆ ಸ್ಪ್ರೇ ಮಾಡಿ. ಲೀಕೇಜ್‌ ಇರುವ ಜಾಗದಿಂದ ಸೋಪಿನ ನೊರೆ ತಂತಾನೇ ನುಗ್ಗಿ ಬರುತ್ತದೆ.

ನೇಲ್ ಪಾಲಿಶ್ತೊಲಗಿಸಿ : ತುಸು ಬೆಚ್ಚಗಿನ ನೀರಿಗೆ ಈ ಸೋಪ್‌ ಹನಿ ಬೆರೆಸಿ, ನೇಲ್ ‌ಪಾಲಿಶ್‌ ಹಚ್ಚಿದ್ದ ನಿಮ್ಮ ಕೈ ಬೆರಳುಗಳನ್ನು ಅದರಲ್ಲಿ ಅದ್ದಿಡಿ. ಇದರಿಂದ ನಿಮ್ಮ ಹಳೆಯ ನೇಲ್ ಪಾಲಿಶ್‌ ರಿಮೂವ್ ಆಗಿ, ನಿಮ್ಮ ಕ್ಯುಟಿಕಲ್ಸ್ ಸಹ ಎಷ್ಟೋ ಮೃದು ಆಗುತ್ತದೆ.

nails-scaled

ನಿಮ್ಮ ಪೆಟ್ಸ್ ನ್ನು ಶುಚಿಗೊಳಿಸಲು : ದುಬಾರಿ ಶ್ಯಾಂಪೂ ಬಳಸುವ ಬದಲು, ಈ ಡಿಶ್‌ ಸೋಪ್‌ ಬಳಸಿ ನಿಮ್ಮ ಸಾಕುಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ನೀಟಾಗಿ ಸ್ನಾನ ಮಾಡಿಸಿ, ಇದರಿಂದ ಅದರ ರೋಮಗಳ ನಡುವೆ ಅಡಗಿದ ಕೊಳಕು ಸಹಜ ದೂರವಾಗುತ್ತದೆ.

71r2bZqANuL._SL1500_

ಸಿಂಕ್‌, ಶವರ್ಡ್ರೇನ್‌, ಕಮೋಡ್ಕ್ಲೀನ್ಮಾಡಲು : ನಿಮ್ಮ ಕಿಚನ್‌ ಹ್ಯಾಂಡ್‌ ವಾಶ್‌/ಸಿಂಕ್‌ ಇತ್ಯಾದಿ ಕಟ್ಟಿಕೊಂಡು ನೀರು ಹೋಗುತ್ತಿಲ್ಲವೇ, ಬಹಳ ಗಲೀಜಾಗಿದೆಯೇ? ಇವುಗಳಿಗೆ 1 ಕಪ್‌ ಡಿಶ್‌ ಸೋಪ್‌ ದ್ರಾವಣ ಹಾಕಿ ಅರ್ಧ ಗಂಟೆ ಹಾಗೇ ಬಿಡಿ. ನಂತರ ತುಸು ಎತ್ತರದಿಂದ 1 ಬಕೆಟ್‌ ಬಿಸಿ ನೀರನ್ನು ಇವಕ್ಕೆ ಸುರಿಯಿರಿ. ಶವರ್‌ ಡ್ರೇನ್‌, ಟಾಯ್ಲೆಟ್‌ ಕಮೋಡ್‌ ಸಹ ಇದೇ ರೀತಿ ಶುಚಿಗೊಳಿಸಬಹುದು.

how-to-get-rid-of-fruit-flies-1570208523

ಫ್ರೂಟ್ಫ್ಲೈ ಓಡಿಸಿ :  ಒಂದು ಚಿಕ್ಕ ಬಟ್ಟಲಿಗೆ ಬಿಳಿ ವಿನಿಗರ್‌ ಮತ್ತು ಡಿಶ್‌ ಸೋಪಿನ ಹಲವು ಹನಿ ಬೆರೆಸಿ, ಕಿಚನ್‌ ಕೌಂಟರ್‌ ಅಥವಾ ಮನೆಯ ಬೇರೆ ಕಡೆ ಇರಿಸಿ, ಅಲ್ಲೆಲ್ಲ ಓಡಾಡುವ ಫ್ರೂಟ್‌ಫ್ಲೈ ಗಳನ್ನು ಓಡಿಸಿ. ಇಂಥ ನೊಣ, ಸಣ್ಣಪುಟ್ಟ ಕೀಟಗಳು ಇದರ ವಾಸನೆಗೆ ಬಳಿ ಬಂದು ಆ ಬಟ್ಟಲಿಗೆ ಬೀಳುತ್ತವೆ, ಇದರ ಜಿಗುಟಿನಿಂದ ಅಲ್ಲೇ ಉಳಿಯುತ್ತವೆ.

ತೇವಾಂಶದ ಕೊಳಕು ನಿವಾರಿಸಿ : ಮನೆಯಲ್ಲಿ ಎಲ್ಲೇ ತೇವಾಂಶದ ಕೊಳಕು ಕಂಡುಬಂದರೂ, ಅಲ್ಲೆಲ್ಲ ಒಂದು ಮಗ್‌ ನೀರಿಗೆ 5-6 ಚಮಚ ಲಿಕ್ವಿಡ್‌ ಡಿಶ್‌ಸೋಪ್‌ ಬೆರೆಸಿಕೊಂಡು ಚಿಮುಕಿಸಿ, ಅರ್ಧ ಗಂಟೆ ಬಿಟ್ಟು ಗಟ್ಟಿ ಬಟ್ಟೆಯಿಂದ ಒರೆಸಿದರೆ, ಎಲ್ಲ ನೀಟಾಗಿ ಹೋಗಿರುತ್ತದೆ.

paint_s1

ಪೇಂಟ್ತೆಗೆಯಲು : ಪೇಂಟಿಂಗ್‌ ಮಾಡುವಾಗ, ನೆಲದ ಮೇಲೆ, ಮೊಸಾಯಿಕ್‌ ಗೋಡೆ ಬಳಿ ಅಲ್ಲಲ್ಲಿ ಪೇಂಟ್‌ ಬಿದ್ದಿದ್ದರೆ, ಈ ಸೋಪಿನ ಮಿಶ್ರಣದಿಂದ ನೀಟಾಗಿ ಶುಚಿ ಮಾಡಬಹುದು. ನಿಮ್ಮ ಮೈ ಮೇಲೆ ಪೇಂಟ್‌ ಬಿದ್ದಿದ್ದರೂ, ಇದರಿಂದ ಅದನ್ನು ಸುಲಭವಾಗಿ ತೆಗೆಯಬಹುದು. ಪೇಂಟಿಂಗ್‌ ಮಾಡುವ ಮೊದಲು, ಈ ಮಿಶ್ರಣವನ್ನು ಲೋಶನ್‌ ತರಹ ಬಳಿದುಕೊಂಡು ಕೆಲಸ ಮಾಡಿ. ಅಕಸ್ಮಾತ್‌ ಅದರ ಮೇಲೆ ಪೇಂಟ್‌ ಬಿದ್ದರೂ, ಸುಲಭವಾಗಿ ಅದನ್ನು ನಿವಾರಿಸಿಕೊಳ್ಳಬಹುದು.

Woman-sprays-plants-in-flower-pots.-Housewife-taking-care-of-home-plants-at-her-home-spraying-house-plants-with-pure-water-from-a-spray-bottle-scaled

ಗಿಡಗಳ ಮೇಲಿನ ಕ್ರಿಮಿ ಕೀಟ ನಿವಾರಿಸಿ : ಒಂದು ಸ್ಪ್ರೇ ಬಾಟಲ್ ಗೆ ಅರ್ಧ ಭಾಗ ನೀರು ತುಂಬಿಸಿ. ಇದಕ್ಕೆ 3-4 ಹನಿ ಲಿಕ್ವಿಡ್ ಸೋಪ್‌ ಬೆರೆಸಿ, ನಿಮ್ಮ ಎಲ್ಲಾ ಗಿಡಗಳ ಮೇಲೂ ಸ್ಪ್ರೇ ಮಾಡಿ. ಆಗ ಅಲ್ಲಿನ ಕ್ರಿಮಿಕೀಟ ಮಂಗಮಾಯ ಆಗುತ್ತವೆ.

ಕೂದಲಿನ ಗಾಢ ಬಣ್ಣ ಲೈಟ್ಆಗಿಸಿ : ನೀವು ಹೇರ್‌ ಡೈ ಮಾಡುವಾಗ, ನೀವು ಬಳಸುತ್ತಿರುವ ಡೈ ಅಕಸ್ಮಾತ್‌ ಅಗತ್ಯಕ್ಕಿಂತ ಹೆಚ್ಚು ಗಾಢವಾಗಿದ್ದರೆ, ಈ ಮಿಶ್ರಣ ಬಳಸಿ ಅದರ ಗಾಢ ಬಣ್ಣವನ್ನು ತುಸು ಲೈಟ್‌ ಆಗಿಸಬಹುದು.

ಪಾಚಿಯ ನಿವಾರಣೆಗಾಗಿ : ಸುಮಾರು 1 ಲೀ. ಬಿಳಿಯ ವಿನಿಗರ್‌ ಗೆ, 1-2 ದೊಡ್ಡ ಚಮಚ ಲಿಕ್ವಿಡ್‌ ಡಿಶ್‌ ಸೋಪ್‌, 1 ಕಪ್‌ ಉಪ್ಪು ಬೆರೆಸಿ ಮಿಶ್ರಣಗೊಳಿಸಿರಿ. ನಿಮ್ಮ ಮನೆಯಂಗಳ, ಬಚ್ಚಲು, ಹಿತ್ತಲ ಕಡೆ ಎಲ್ಲೆಲ್ಲಿ ಪಾಚಿ ಬೆಳೆದಿರುತ್ತದೋ ಅಲ್ಲೆಲ್ಲ ಇವನ್ನು ಸಿಂಪಡಿಸಿ. ಬಹಳ ಬೇಗ ಪಾಚಿಯ ಸಮಸ್ಯೆ ನಿವಾರಣೆ ಆಗುತ್ತದೆ.

ಲಾನಿನ ಹಸಿರು ಹುಲ್ಲನ್ನು ಉತ್ತಮಗೊಳಿಸಲು : ನಿಮ್ಮ ಲಾನಿನ ಹುಲ್ಲು ಅತಿ ತೆಳು ಅಥವಾ ಪ್ಯಾಚಿ ಆಗಿದ್ದರೆ, ಕೋಕೋ ಕೋಲಾದ ಒಂದು ಬಾಟಲಿಗೆ ತುಸು ಡಿಶ್‌ ಸೋಪ್‌, ಕಾರ್ನ್‌ ಸಿರಪ್‌ ಹಾಕಿರಿಸಿ, ಇಡೀ ಲಾನ್‌ ತುಂಬಾ ಸಿಂಪಡಿಸಿರಿ. ಅದಾದ ಮೇಲೆ ಲಾನ್ ಮೇಲೆ ಮಾಮೂಲಿ ನೀರು ಚಿಮುಕಿಸಿ. ಕ್ರಮೇಣ ಲಾನಿನ ಗ್ರಾಸ್‌ ಒತ್ತಾಗಿ, ದಟ್ಟವಾಗಿ ಹಸಿರಾಗುತ್ತದೆ.

camicia-300x225

ಬಟ್ಟೆಗಳ ಮೇಲಿನ ಕಲೆ ತೆಗೆಯಲು : ಡಿಶ್‌ ಸೋಪ್‌ ನಿಮ್ಮ ಬಟ್ಟೆಯ ಕಾಲರ್‌, ಕಫ್ಸ್ ಕೊಳೆ ತೆಗೆಯಲು ಬಹಳ ಸಹಕಾರಿ. ಇದು ಎಲ್ಲಾ ಬಗೆಯ ಫ್ಯಾಬ್ರಿಕ್ಸ್ ನ ಬಟ್ಟೆಗಳ ಕಲೆ ನಿವಾರಿಸುವಲ್ಲಿಯೂ ಪೂರಕ. ನಾರ್ಮಲ್ ಡಿಟರ್ಜೆಂಟ್‌ ಬದಲಿಗೆ 1 ದೊಡ್ಡ ಚಮಚ ಡಿಶ್‌ ಸೋಪ್‌ ನಿಂದ 1 ಬಕೆಟ್‌ ನಷ್ಟು ಎಲ್ಲಾ ಬಟ್ಟೆಗಳ ಕಲೆಯನ್ನೂ ನಿವಾರಿಸಬಹುದು.

how-to-keep-your-tile-floors-sparkling-clean

ನಿರ್ಮಲ ಸ್ವಚ್ಛ ಶುಭ್ರ ನೆಲಕ್ಕಾಗಿ :  1 ಬಕೆಟ್‌ ಬಿಸಿ ನೀರಿಗೆ 2 ಚಮಚ ಡಿಶ್‌ ಸೋಪ್‌ ಬೆರೆಸಿ ನಿಮ್ಮ ಮನೆಯ ನೆಲ ನೀಟಾಗಿ ಒರೆಸಿ ನೋಡಿ. ಅದರ ಕೊಳೆ, ಕ್ರಿಮಿಗಳು ಕಣ್ಮರೆಯಾಗಿ ನೆಲ ಫಳಫಳ ಹೊಳೆಯುತ್ತದೆ. ವುಡನ್‌ ಫ್ಲೋರ್‌ ಹೊರತುಪಡಿಸಿ ಬೇರೆಲ್ಲ ಬಗೆಯ ಫ್ಲೋರಿಂಗ್‌ ಗೂ ಇದನ್ನು ಬಳಸಬಹುದು.

ಬಾಚಣಿಗೆ ಬ್ರಶ್ಶಿನ ಸ್ವಚ್ಛತೆ ಶುಭ್ರತೆ : ಒಂದು ದೊಡ್ಡ ಬಟ್ಟಲು ಬಿಸಿ ನೀರಿಗೆ (ಇವು ಮುಳುಗುವಷ್ಟು) ಕೆಲವು ಹನಿ ಡಿಶ್‌ ಸೋಪ್‌ ಬೆರೆಸಿ ಮಿಶ್ರಣ ಕದಡಿಕೊಂಡು, ಇವನ್ನು ಅದರಲ್ಲಿ 1-2 ಗಂಟೆ ಕಾಲ ಅದ್ದಿಡಿ. ಅವು ಬಲು ನೀಟಾಗುತ್ತವೆ.

ಎಸ್‌. ಲತಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ