ನಮ್ಮ ಮಾತನ್ನೂ ಕೇಳಿಸಿಕೊಳ್ಳಿ : ಕ್ಲೈಮೆಟ್‌ ಚೇಂಜ್‌ ಎಂಬುದು ಇಡೀ ವಿಶ್ವಕ್ಕೆ ಒಂದು ಸವಾಲೇ ಸರಿ. ಇದರ ನೇರ ಪರಿಣಾಮ ಹೆಂಗಸರ ಮೇಲಾಗುತ್ತದೆ. ಮನೆಯಲ್ಲಿ ಹಣ ಇಲ್ಲ, ಊಟಕ್ಕೆ ಇಲ್ಲ, ಕರೆಂಟ್‌ ಇಲ್ಲ, ಮಕ್ಕಳನ್ನು ಶಾಲೆಗೆ ಕಳಿಸಲಾಗದು, ಎಲ್ಲಕ್ಕಿಂತ ಕಂಟಕ ಗೃಹಿಣಿ ಎಲ್ಲರ ಕೋಪಕ್ಕೆ ತುತ್ತಾಗುತ್ತಿರುತ್ತಾಳೆ. ಕ್ಲೈಮೆಟ್‌ ಚೇಂಜ್‌ ಮೇಲೆ ಕಂಟ್ರೋಲ್ ಹೊಂದಲು ಹೆಂಗಸರಿಗೆ ಹಕ್ಕಿಲ್ಲ, ಯಾರೂ ಅವರನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಇತ್ತೀಚೆಗೆ ನಡೆದ ಕ್ಲೈಮೆಟ್‌ ಸಮ್ಮೇಳನದಲ್ಲಿ ಇಂಥ ಸಾಧಾರಣ ಗೃಹಿಣಿಯರನ್ನೂ ಇದರಲ್ಲಿ ಪಾಲ್ಗೊಳ್ಳಲು ಕರೆಸಬೇಕೆಂದು ನಿರ್ಧಾರ ಕೈಗೊಳ್ಳಲಾಯಿತು, ಏಕೆಂದರೆ ಆ್ಯಕ್ಟಿವಿಸ್ಟ್ ಹೆಂಗಸರು ಈ ಕುರಿತಾಗಿ ಬಗೆಬಗೆಯ ಘೋಷಣೆ ಕೂಗುತ್ತಿದ್ದರು.

8beac7ae-dd71-4830-a376-4574b6b4e1c6-ashley-graham-mother-daughter-swimsuit-campaign-248675-1517851535438-image750x0c

ಮಗುವಿನಂಥ ಮನಸ್ಸು : ಆ್ಯಶ್ಲೆ ಗ್ರಹಾಂ ಹಾಗೂ ಲಿಂಡಾ ಇಬ್ಬರೂ ಸ್ವಿಮ್ ಸೂಟ್‌ ನಲ್ಲಿದ್ದಾರೆ, ವಿಶೇಷ ಏನೂಂತೀರಾ? ಇವರಿಬ್ಬರೂ ತಾಯಿಮಗಳು! ಧರಿಸಿರುವುದು + ಸೈಜ್‌ ನ ಸ್ವಿಮ್ ಸೂಟ್‌. ಇತ್ತಿಚೆಗೆ ತಾಯಂದಿರು ತಮ್ಮ ಆರೈಕೆಯ ಹೊಣೆಯನ್ನು ತಾವೇ ಹೊರುತ್ತಿದ್ದಾರೆ, ತಾವು ವೃದ್ಧರು ಅಸಹಾಯಕರು ಎಂಬ ಗೊಣಗುವಿಕೆ ಇಲ್ಲವೇ ಇಲ್ಲ. ಇತ್ತೀಚೆಗೆ ಜನ ಇಂಥ ಜೋಡಿ ನೋಡಿ ತಾಯಿ ಮಗಳು ಬದಲು ಅಕ್ಕ ತಂಗಿ ಎಂದರೆ, ಮಗಳಿಗೆ ಕೋಪ ಬರುವುದಂತೂ ಗ್ಯಾರಂಟಿ. ಅಮ್ಮನ ಜೊತೆ ಹೋಗಲು ಹಿಂಜರಿದರೂ ಆಶ್ಚರ್ಯವಿಲ್ಲ.

MG5OSHFZTZCAXMVA2TT23ZDYN4

ಎಲ್ಲಕ್ಕೂ ಮೊದಲು ಕೆಲಸ : ಈ 6 ಮಂದಿ ಹೆಂಗಸರು ಅಮೆರಿಕಾದ ನಗರ ಮ್ಯಾಕ್‌ ಫರ್ಸನ್‌ ನ ಅಗ್ನಿಶ್ಯಾಮಕ ದಳದಲ್ಲಿ ಕೆಲಸ ಮಾಡುತ್ತಾರೆ. ವಿಡಂಬನೆ ಎಂದರೆ…. ಎಲ್ಲರೂ ಈಗ ಬಸುರಿಯರು! ಬೆಂಕಿ ನಂದಿಸುವ ತಮ್ಮ ಕರ್ತವ್ಯದಲ್ಲಿ ಗಂಡನ ಬಯಕೆ ನಿರಾಕರಿಸಲಾದೀತೇ…..? ಹಾಗೆಂದು ಇವರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಕಿಂಚಿತ್ತೂ ಹಿಂದುಳಿದಿಲ್ಲ, ಫೈರ್‌ ಮ್ಯಾನ್‌ ಆದ  ಗಂಡಂದಿರ ಖುಷಿಗೂ ಚ್ಯುತಿ ತಂದಿಲ್ಲ.

Screenshot_2022-01-19_at_2.22.55_PM

ನಾವು ಯಾರಿಗೇನೂ ಕಡಿಮೆ ಅಲ್ಲ! : ಹೆಂಗಸರನ್ನೂ ಈಗ ಕಾನ್‌ ಫ್ಲಿಕ್ಸ್ಟ್ ಏರಿಯಾದಲ್ಲಿ ಫೋಟೋ ಶೂಟ್‌ ಮಾಡಲು ಉತ್ತೇಜಿಸಲಾಗುತ್ತಿದೆ. ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಡಾಕ್ಯುಮೆಂಟರಿಗಾಗಿ ಇವರಿಗೆ ಈ ಸವಾಲನ್ನು ಒಡ್ಡಿತು! ಈ ರೀತಿ ಹೆಂಗಸರಿಗೆ ಹೊಸ ಹೊಸ ಅವಕಾಶಗಳೇನೋ ಸಿಗುತ್ತಿವೆ, ಆದರೆ ಘೋಷಣೆ ಕೂಗುವಷ್ಟು ಸುಲಭವಾಗಿ ಇವರು ಇದನ್ನು ನಿಭಾಯಿಸಬಲ್ಲರೇ? ಹೆಣ್ಣು ಗನ್‌ ಹಿಡಿದು ಕಾರ್ಗಿಲ್ ‌ಯುದ್ಧರಂಗಕ್ಕೇ ದುಮುಕಬಲ್ಲಳೆಂದರೆ, ಈ ಕ್ಯಾಮೆರಾ ಏನು ಮಹಾ?

African-American-woman-respiratory-illness_shutterstock_1520149034

ವಿಜ್ಞಾನ ಇರುವುದರಿಂದ ನಾವೂ ಇದ್ದೇವೆ : ವಿಸ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಬಯಾಲಜಿಕಲ್ ಟೆಕ್ನಾಲಜಿ ಇದೀಗ ಒಂದು ಪ್ರಚಂಡ ಟೆಸ್ಟ್ ಸಿದ್ಧಪಡಿಸಿದೆ. ಇದರಿಂದ ಮನೆಯಲ್ಲೇ ಸಾರ್ಸ್‌ಕೋವಿಡ್‌ ನಂಥ ಮಹಾಮಾರಿಗಳೊಂದಿಗೆ ಹೋರಾಡಬಲ್ಲ ಇಮ್ಯೂನಿಟಿಯ ಪರೀಕ್ಷೆ ನಡೆಸಬಹುದಾಗಿದೆ. ಇದೀಗ ಹೆಲ್ತ್ ಸರ್ವೀಸಸ್‌ ಮೇಲೆ ಹಿಂದಿನಂತೆ ಅಪಾರ ಒತ್ತಡ ಬೀಳುವುದಿಲ್ಲ. ಮೆಡಿಕಲ್ ಸೈನ್ಸ್ ಎದುರು ಇದೀಗ ದಿನದಿನ ಈ ಮಹಾಮಾರಿಗಳ ವಿರುದ್ಧ ಹೋರಾಡುವ ಛಾಲೆಂಜ್‌ ಇದ್ದೇ ಇದೆ. ಔಷಧಿ ಜೊತೆ ರೋಗಗಳೂ ಹೊಸ ಹೊಸ ರೂಪ ತಳೆಯುತ್ತಿವೆ.

maggie-gyllenhal-the-deuce-e1533736570625

ನಾವಲ್ಲ…. ಗ್ರಾಹಕರೇ ದೋಷಿಗಳು! : ಸೂಳೆಗಾರಿಕೆಯನ್ನು ನಿಲ್ಲಿಸಿ ಬಿಡಬೇಕು ಎಂದು ಬೊಬ್ಬಿಡುವವರು, ಹೆಣ್ಣು ಎಂದೂ ತಾನಾಗಿ ಸೂಳೆ ಆಗಲು ಬಯಸುವುದಿಲ್ಲ ಎಂಬುದನ್ನು ಮರೆತೇ ಬಿಡುತ್ತಾರೆ. ಲಕ್ಷಾಂತರ ವರ್ಷಗಳ ಧಾರ್ಮಿಕ, ರಾಜಮನೆತನಗಳ ದಬ್ಬಾಳಿಕೆ ಅವಳನ್ನು ಈ ವೇಶ್ಯಾವೃತ್ತಿಗೆ ದೂಡಿದೆ. ಹೆಣ್ಣಿಗೆ ಬಾಳಿ ಬದುಕಲು ಎಲ್ಲಾ ಮಾರ್ಗಗಳನ್ನೂ ಬೇಕೆಂದೇ ಮುಚ್ಚಿಬಿಡಲಾಗುತ್ತದೆ, ಒಂದೋ….. ಪತಿಯ ಅಡಿಯಾಳಾಗಿರು ಅಥವಾ ಬಹುಮಂದಿಯ ಉಪಪತ್ನಿ ಆಗಿರು! ಭಾರತೀಯ ಚಿತ್ರಗಳಲ್ಲಿ ಈ ಕುರಿತು ಸಾವಿರಾರು ವಿಷಯ ಚರ್ಚಿಸಲ್ಪಟ್ಟಿವೆ, ಆದರೆ ಪಾರ್ಲಿಮೆಂಟ್‌ ನಲ್ಲಲ್ಲ! `ದಿ ಡ್ಯೂಸ್‌’ ಚಿತ್ರ ಇಂಥ ವೇಶ್ಯಾವಾಟಿಕೆ ಕುರಿತದ್ದಾಗಿದೆ. ಇಲ್ಲಿ ಓಪನ್‌ ಮೈಂಡೆಡ್‌ ಆಗಿ ಚರ್ಚಿಸಲಾಗಿದೆ, ಬೈಗುಳಾಗಿ `ಸೂಳೆ’ ಶಬ್ದ ಬಳಸಬಾರದು ಎನ್ನುತ್ತದೆ. ಅದರ ಬದಲು ಇಂಥವರನ್ನು ಅರಸಿ ಬರುವ ಗ್ರಾಹಕ(ವಿಟ)ರಿಗೆ ಅಂಥ ಬೈಗುಳ ಮೀಸಲಿಡಿ ಎನ್ನುತ್ತದೆ, ಇದಂತೂ ಯಾವ ಭಾಷೆಯಲ್ಲೂ ಇಲ್ಲ!

2k8sy50tpskqomq1jhlzwjrlsc-ai_yprcg_zwf9foiiykk6bh

ನಮ್ಮಿಂದಲೇ ಝಮಾನಾ! : ಫ್ಯಾಷನ್‌ ಇದೀಗ ಬಿಳಿಯ ಕರಿಯರೆನ್ನದೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ, ಆಧುನಿಕತೆಯ ಬೆಡಗಿನೆದುರು ಭೇದಭಾವದ ಪ್ರಶ್ನೆಯೇ ಇಲ್ಲ. ಏಕೆಂದರೆ ಈಗ ಎಂಥ ಬಣ್ಣದ ಹುಡುಗಿಯೇ ಇರಲಿ, ಧಾರಾಳ ಹಣ ಹೊಂದಿರುತ್ತಾಳೆ. ಹಾಗಾಗಿ ಮಾಡ್‌ ಡ್ರೆಸ್‌ ನಲ್ಲಿ ಮಿಂಚ ಬಯಸುತ್ತಾಳೆ. ಈಗಂತೂ ಈ ನಿಟ್ಟಿನಲ್ಲಿ ಬಿಳಿಯರೇ ಮುಂದು ಎಂಬ ವಾದವಿಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ